ದೇಶ
MISS South Africa ಮಿಯಾ ಲೆ ರೌಕ್ಸ್: ಈಕೆ ದ.ಆಫ್ರಿಕಾದ ಮೊದಲ ಕಿವುಡ ಸುಂದರಿ!

28 ವರ್ಷದ ಮಿಯಾ ಲೆ ರೌಕ್ಸ್ ಅವರು ಮಿಸ್ ಸೌತ್ ಆಫ್ರಿಕಾ ಕಿರೀಟವನ್ನು ಅಲಂಕರಿಸಿದ ಮೊದಲು ಕಿವುಡ ಮಹಿಳೆ ಎಂಬ ಹೆಗ್ಗೆಳಿಕೆಗೆ ಪಾತ್ರರಾಗಿದ್ದಾರೆ,
ಸ್ಪರ್ಧೆಯಲ್ಲಿ ಮಿಯಾ ವಿಜೇತ ಎಂದು ಘೋಷಿಸಿದ ನಂತರ ಪ್ರತಿಕ್ರಿಯಿಸಿದ ಅವರ ನಾನು ಹೆಮ್ಮೆಯ ದಕ್ಷಿಣ ಆಫ್ರಿಕಾದ ಕಿವುಡ ಮಹಿಳೆಯಾಗಿದ್ದೇನೆ, ಮಿಸ್ ಸೌತ್ ಆಫ್ರಿಕಾ ಸಂಸ್ಧೆಗೆ ಧನ್ಯವಾದಗಳು, ತಮ್ಮ ಕಂಡ ಕನಸುಗಳನ್ನು ನನ್ನಂತೆಯೇ ಸಾಧಿಸಬಹುದೆಂದು ಆಶಿಸುತ್ತಾ ಹೊರಗುಳಿದಿರುವವಗಿಗೆ ತನ್ನ ಗೆಲವು ಸಹಾಯ ಮಾಡುತ್ತದೆ ಎಂದು ಆಶಿಸಿದರು,
ದಕ್ಷಿಣ ಆಫ್ರಿಕಾದಲ್ಲಿ ನೈಜೇರಿಯಾದ ತಂದೆ ಮತ್ತು ಮೊಜಾಂಬಿಕನ್ ಮೂಲದ ತಾಯಿಗೆ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಚಿದಿಮ್ಮಾ ಅಡೆಟ್ಯಿನಾ, ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವ ಅರ್ಹತೆಯ ಬಗ್ಗೆ ಕಳೆದ ಕೆಲವು ವಾರಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೀಡಾಗಿದ್ದರು,
ವರದಿಗಳ ಪ್ರಕಾರ ಮಾರ್ಕೆಟಿಂಗ್ ಮ್ಯಾನೇಜರ್ ಆಗಿರುವ 28 ವರ್ಷ ವಯಸ್ಸಿನ ಮಿಯಾ ಸಣ್ಣ ವಯಸ್ಸಿನಲ್ಲಿ ಶ್ರವಣದೋಷ ಹೊಂದಿದ್ದರು, ಅಲ್ಲದೇ ಧ್ವನಿಯನ್ನು ಗ್ರಹಿಸಲು ಸಹಾಯ ಮಾಡಲು ಕಾಕ್ಲಿಯರ್ ಇಂಪ್ಲಾಂಟ್ ಅನ್ನು ಹೊಂದಿದ್ದರು, ಇದಲ್ಲದೆ ಚಿಕ್ಕಂದಿನಲ್ಲೇ ಎರಡು ವರ್ಷ ವಾಕ್ ಚಿಕಿತ್ಸೆಯನ್ನು ಕೂಡ ಪಡೆದಿದ್ದರು,