Connect with us

Blog

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ: ದುಬಾರಿ ಬೆಲೆಯ ಪ್ರೀಮಿಯಂ ಬ್ರಾಂಡ್ ಮದ್ಯದ ದರ ಇಳಿಸಿ ಸರ್ಕಾರದ ಆದೇಶ – Liquor Price

Published

on

ಬೆಂಗಳೂರು: ಪ್ರೀಮಿಯಂ ಮದ್ಯದ ಬೆಲೆ ಇಂದಿನಿಂದ ಅಗ್ಗವಾಗಲಿದೆ. ದುಬಾರಿ ಬ್ರಾಂಡ್​​ಗಳ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಜೆಟ್​ನಲ್ಲಿ ಘೋಷಿಸಿದಂತೆ ಜುಲೈ 1ರಿಂದ ರಾಜ್ಯದಲ್ಲಿ ಮದ್ಯದ ದರ ಇಳಿಕೆಯಾಗಬೇಕಿತ್ತು. ಜುಲೈನಿಂದ ಮದ್ಯದ ದರದಲ್ಲಿ ಪರಿಷ್ಕರಣೆ ಮಾಡುವ ಮೂಲಕ ಒಂದೆಡೆ ಮದ್ಯ ಪ್ರಿಯರಿಗೆ ಖುಷಿ ಪಡಿಸುವುದಷ್ಟೇ ಅಲ್ಲ ತನ್ನ ಅಬಕಾರಿ ಆದಾಯವನ್ನೂ ಹೆಚ್ಚಿಸುವ ಲೆಕ್ಕಾಚಾರ ರಾಜ್ಯ ಸರ್ಕಾರದ್ದಾಗಿತ್ತು.‌ ಈ ಸಂಬಂಧ ಜುಲೈ 1ಕ್ಕೆ ಪರಿಷ್ಕೃತ ದರಗಳ ಅಧಿಸೂಚನೆ ಹೊರಡಿಸಿತ್ತು. ಆದರೆ, ಸಿಎಂ ಸೂಚನೆ ಮೇರೆಗೆ ದರ ಪರಿಷ್ಕರಣೆ ಆದೇಶ ಜಾರಿಯನ್ನು ತಡೆ ಹಿಡಿಯಲಾಗಿತ್ತು. ಇದೀಗ ಮತ್ತೆ ಕೆಲ ಪರಿಷ್ಕರಣೆ ಮಾಡಿ ದುಬಾರಿ ಬ್ರಾಂಡ್​ಗಳ ಮದ್ಯದ ಮೇಲಿನ ದರವನ್ನು 15-20% ವರೆಗೆ ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಪರಿಷ್ಕೃತ ದರದಂತೆ ಮದ್ಯದ ಸ್ಲ್ಯಾಬ್ ವಾರು ದರವನ್ನು ಪರಿಷ್ಕರಿಸಿರುವ ಸರ್ಕಾರ ಪ್ರಸ್ತುತ ಇದ್ದ 18 ಸ್ಲ್ಯಾಬ್​ಗಳಲ್ಲಿ ವಿಧಿಸಲಾಗುತ್ತಿದ್ದ ಅಬಕಾರಿ ಸುಂಕವನ್ನು 16 ಸ್ಲ್ಯಾಬ್​ಗಳಿಗೆ ಇಳಿಕೆ ಮಾಡಿದೆ. ಅದಕ್ಕನುಗಣವಾಗಿ ಅಬಕಾರಿ ಸುಂಕವನ್ನು ಪರಿಷ್ಕರಿಸಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಪರಿಷ್ಕೃತ ದರ ಹೇಗಿರಲಿದೆ?: ಅಬಕಾರಿ ಇಲಾಖೆ ಪ್ರತಿ ಬಾಕ್ಸ್ (8.64/9/12 ಬಲ್ಕ್ ಲೀಟರ್ ಮದ್ಯದ ಬಾಕ್ಸ್)ನ ಘೋಷಿತ ಉತ್ಪಾದನಾ ಬೆಲೆಯ ಆಧಾರದಲ್ಲಿ ಸ್ಲ್ಯಾಬ್ ವೈಸ್ ಅಬಕಾರಿ ಸುಂಕ ವಿಧಿಸುತ್ತದೆ. ಪ್ರಸ್ತುತ ಅಬಕಾರಿ ಸುಂಕವನ್ನು 18 ಸ್ಲ್ಯಾಬ್​ಗಳಲ್ಲಿ ವಿಧಿಸಲಾಗುತ್ತಿತ್ತು. ಇದೀಗ ಪರಿಷ್ಕೃತ ಅಬಕಾರಿ ಸುಂಕದಲ್ಲಿ ಪ್ರಸ್ತುತ ಇರುವ 18 ಸ್ಲ್ಯಾಬ್​ಗಳನ್ನು 16ಕ್ಕೆ ಕಡಿತಗೊಳಿಸಲಾಗಿದೆ. ಹಳೆಯ ಸ್ಲ್ಯಾಬ್​ಗೆ ಹೋಲಿಸಿದರೆ 5ನೇ ಸ್ಲ್ಯಾಬ್​ನಿಂದ 16 ಸ್ಲ್ಯಾಬ್ ವರೆಗಿನ‌ ಮದ್ಯದ ದರದಲ್ಲಿ ಇಳಿಕೆ ಮಾಡಲಾಗಿದೆ.

ಪರಿಷ್ಕೃತ 16 ಸ್ಲ್ಯಾಬ್ ವೈಸ್ ಘೋಷಿತ ಉತ್ಪಾದನಾ ಬೆಲೆಯ ಪ್ರಕಾರ 0-450 ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಅಬಕಾರಿ ಸುಂಕ 215 ರೂ. ಇರಲಿದೆ. 451-500 ದರ ಸ್ಲ್ಯಾಬ್​ಗೆ ಸುಂಕ 294 ರೂ. ಪರಿಷ್ಕರಣೆ ಆಗಲಿದೆ. ಇನ್ನು 501-550 ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 386 ರೂ., 551-650 ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಸುಂಕ 523 ರೂ., 651-750 ವರೆಗಿನ ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 620 ರೂ., 751-900 ದರ ಸ್ಲ್ಯಾಬ್​ಗೆ ಸುಂಕ 770 ರೂ., 901-1050 ದರ ಸ್ಲ್ಯಾಬ್​ಗೆ ಸುಂಕ 870 ರೂ., 1051-1300 ದರ ಸ್ಲ್ಯಾಬ್​ಗೆ ಸುಂಕ 970 ರೂ., 1301-1800 ದರ ಸ್ಲ್ಯಾಬ್​ಗೆ ಸುಂಕ 1200 ರೂ., 1801-2500 ದರ ಸ್ಲ್ಯಾಬ್​ಗೆ ಸುಂಕ 1400 ರೂ., 2501-5000 ದರ ಸ್ಲ್ಯಾಬ್​ಗೆ ಸುಂಕ 1600 ರೂ., 5001-8000 ದರ ಸ್ಲ್ಯಾಬ್​ಗೆ ಸುಂಕ 2000 ರೂ., 8001-12,500 ದರ ಸ್ಲ್ಯಾಬ್​ಗೆ ಸುಂಕ 2400 ರೂ., 12501-15000 ದರ ಸ್ಲ್ಯಾಬ್​ಗೆ ಸುಂಕ 2600 ರೂ., 15001-20000 ದರ ಸ್ಲ್ಯಾಬ್​ಗೆ ಸುಂಕ 2800 ರೂ. ಮತ್ತು 20000 ಮೇಲ್ಪಟ್ಟ ದರ ಸ್ಲ್ಯಾಬ್​ಗೆ ಹೆಚ್ಚುವರಿ ಅಬಕಾರಿ ಸುಂಕ 3000 ರೂ. ವಿಧಿಸಲಾಗುತ್ತದೆ.

ಈವರೆಗಿನ ಮದ್ಯದ ದರ ಹೇಗಿತ್ತು?: ಈ ಮುಂಚೆ 18 ಸ್ಲ್ಯಾಬ್ ವೈಸ್ ಘೋಷಿತ ಉತ್ಪಾದನಾ ಬೆಲೆ (ಪ್ರತಿ ಬಾಕ್ಸ್) ಪ್ರಕಾರ 0-449ವರೆಗಿನ ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 215 ರೂ. ವಿಧಿಸಲಾಗುತ್ತಿತ್ತು. 451- 499 ರೂ. ವರೆಗಿನ ಘೋಷಿತ ಉತ್ದಾದನಾ ದರದ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 294 ರೂ. ಇತ್ತು. ಇನ್ನು 500- 549 ದರ ಸ್ಲ್ಯಾಬ್​ಗೆ ಸುಂಕ 386 ರೂ., 550- 599 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 497 ರೂ., 600-699 ದರ ಸ್ಲ್ಯಾಬ್​ಗೆ ಸುಂಕ 668 ರೂ., 700-799 ದರ ಸ್ಲ್ಯಾಬ್​ಗೆ ಸುಂಕ 816 ರೂ., 800-899 ದರ ಸ್ಲ್ಯಾಬ್​ಗೆ ಸುಂಕ 870 ರೂ., 900-999 ದರ ಸ್ಲ್ಯಾಬ್​ಗೆ ಸುಂಕ 938 ರೂ., 1000-1099 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 982 ರೂ., 1100-1199 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 1102 ರೂ., 1200-1299 ದರ ಸ್ಲ್ಯಾಬ್​ಗೆ ಸುಂಕ 1325 ರೂ., 1300-1399 ದರ ಸ್ಲ್ಯಾಬ್​ಗೆ ಸುಂಕ 1541ರೂ., 1400-1799 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 1667 ರೂ., 1800-2199 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 1860 ರೂ., 2200-4924 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 2124 ರೂ., 4925-7650 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 2483 ರೂ., 7651-15000 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 3571 ರೂ., 15,001 ಮೇಲ್ಪಟ್ಟ ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಅಬಕಾರಿ ಸುಂಕ 5358 ರೂ. ವಿಧಿಸಲಾಗುತ್ತಿತ್ತು.

Blog

ಗೋಡಂಬಿ ತಿನ್ನಿದರೆ ತೂಕ ಹೆಚ್ಚುತ್ತದಾ? ನಿಜ-ಸುಳ್ಳು ಬಹಿರಂಗ!

Published

on

ಬೆಂಗಳೂರು, ಏ. 4: ಇದೀಗ ಗೋಡಂಬಿ ಅಥವಾ Cashew (ಗೇರುಬೀಜ)ಗಳ ಋತು ಆರಂಭವಾಗಿದ್ದು, ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಗೇರುಹಣ್ಣಿನ ಮರಗಳು ಸಮೃದ್ಧವಾಗಿ ಕಾಣಿಸುತ್ತಿವೆ. ಭಾರತೀಯ ಅಡುಗೆಗಳಲ್ಲಿ ಸಿಹಿ-ಖಾರದ ತಿನಿಸುಗಳಿಗೆ ವಿಶೇಷ ರುಚಿ ನೀಡುವ ಗೋಡಂಬಿ ಬಗ್ಗೆ ಹಲವಾರು ಗೊಂದಲಗಳು ಹಾಗೂ ತಪ್ಪು ಕಲ್ಪನೆಗಳು ಹರಿದಾಡುತ್ತಿವೆ.

ಕೆಲವರು ಗೋಡಂಬಿ ತಿನ್ನುವುದರಿಂದ ತೂಕ ಹೆಚ್ಚುತ್ತದೆ ಎಂದು ನಂಬಿದರೂ, ತಜ್ಞರ ಪ್ರಕಾರ ಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಲಾಭಕಾರಿ. 100 ಗ್ರಾಂ ಗೋಡಂಬಿಯಲ್ಲಿ ಸುಮಾರು 550 ಕ್ಯಾಲರಿಗಳು ಇದ್ದರೂ, ಇದರಲ್ಲಿರುವ ಮೊನೊಅನ್‌ಸ್ಯಾಚುರೇಟೆಡ್ ಕೊಬ್ಬು ದೇಹದ ಒಳ್ಳೆಯ ಕೊಲೆಸ್ಟ್ರಾಲ್ (HDL) ಹೆಚ್ಚಿಸಲು ಸಹಕಾರಿಯಾಗಿದೆ.

ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂಬ ಮತ್ತೊಂದು ಭೀತಿ ಕೂಡ ಸಂಪೂರ್ಣ ಸತ್ಯವಲ್ಲ. ಗೋಡಂಬಿಯಲ್ಲಿ ಇರುವ ಫೈಟೊಸ್ಟೆರಾಲ್ ಅಂಶಗಳು ದೇಹದ ಕೆಟ್ಟ ಕೊಲೆಸ್ಟ್ರಾಲ್ (LDL) ನಿಯಂತ್ರಿಸಲು ಸಹಾಯ ಮಾಡಬಹುದು. ದಿನಕ್ಕೆ ಸುಮಾರು 25 ಗ್ರಾಂ ಮಿತಿಯಲ್ಲಿ ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಧುಮೇಹದ ಬಗ್ಗೆ ಆತಂಕವಿರುವವರಿಗೂ ಗೋಡಂಬಿ ಸಂಪೂರ್ಣ ಹಾನಿಕಾರಕವಲ್ಲ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಧಾನವಾಗಿ ಏರಿಸುತ್ತದೆ. ಆದರೆ ಮಿತಿಮೀರಿದ ಸೇವನೆ ತಪ್ಪಿಸಬೇಕು.

ಇನ್ನು ಮೊಡವೆ ಹೆಚ್ಚುತ್ತದೆ ಎಂಬ ಮಾತಿಗೂ ವೈಜ್ಞಾನಿಕ ಆಧಾರವಿಲ್ಲ. ಗೋಡಂಬಿಯಲ್ಲಿರುವ ಸೆಲೆನಿಯಂ ಹಾಗೂ ವಿಟಮಿನ್ C ಚರ್ಮದ ಆರೋಗ್ಯಕ್ಕೆ ಸಹಾಯಕ.

ಆದಾಗ್ಯೂ, ಕೆಲವು ಮಂದಿಗೆ ಬೀಜಗಳ ಅಲರ್ಜಿ ಇರುವ ಸಾಧ್ಯತೆ ಇದ್ದು, ಇಂತಹವರು ಎಚ್ಚರಿಕೆಯಿಂದ ಇರಬೇಕು. ಒಟ್ಟಿನಲ್ಲಿ, ಗೋಡಂಬಿ ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಲಾಭಕಾರಿ ಆಹಾರವಾಗಿದ್ದು, ಅತಿಯಾದ ಸೇವನೆ ಮಾತ್ರ ಸಮಸ್ಯೆಗೆ ಕಾರಣವಾಗಬಹುದು.

Continue Reading

Blog

Bengaluru : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ: ಜನತೆಗೆ ಫೆಡರೇಷನ್ ಸ್ಪಷ್ಟನೆ

Published

on

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗಬಹುದು ಎಂಬ ಆತಂಕದ ನಡುವೆ ಮಹತ್ವದ ಸ್ಪಷ್ಟನೆ ಹೊರಬಂದಿದೆ. Akhila Karnataka Federation of Petroleum Traders (ಎಕೆಎಫ್‌ಪಿಟಿ) ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಯಾವುದೇ ರೀತಿಯ ಕೊರತೆಯಿಲ್ಲ ಎಂದು ತಿಳಿಸಿದೆ.

ಇತ್ತೀಚೆಗೆ United States, Israel ಮತ್ತು Iran ನಡುವೆ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಇಂಧನ ಪೂರೈಕೆ ಬಗ್ಗೆ ಕೆಲ ಆತಂಕಕಾರಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ. ಆದರೆ ಈ ರೀತಿಯ ಸುದ್ದಿಗಳಿಗೆ ಜನರು ಕಿವಿಗೊಡಬಾರದು ಎಂದು ಫೆಡರೇಷನ್ ಮನವಿ ಮಾಡಿದೆ.

ಪ್ರಕಟಣೆಯಲ್ಲಿ ತಿಳಿಸಿರುವಂತೆ, ರಾಜ್ಯದಲ್ಲಿ ತೈಲ ಪೂರೈಕೆ ಸರಾಗವಾಗಿ ನಡೆಯುತ್ತಿದೆ. Indian Oil Corporation, Bharat Petroleum Corporation Limited, Hindustan Petroleum Corporation Limited ಹಾಗೂ Mangalore Refinery and Petrochemicals Limited ಕಂಪನಿಗಳು ರಾಜ್ಯದ ವಿವಿಧ ಟರ್ಮಿನಲ್‌ಗಳಿಂದ ನಿರಂತರವಾಗಿ ಇಂಧನ ಪೂರೈಕೆ ಮಾಡುತ್ತಿವೆ.

ಈ ಎಲ್ಲಾ ಕಂಪನಿಗಳಿಂದ ರಾಜ್ಯಾದ್ಯಂತ ಇರುವ ಪೆಟ್ರೋಲ್ ಬಂಕ್‌ಗಳಿಗೆ ಸುಗಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಸಾಗಣೆ ನಡೆಯುತ್ತಿದೆ. ಹೀಗಾಗಿ ಜನರು ಭಯಪಡದೆ ಸಾಮಾನ್ಯ ರೀತಿಯಲ್ಲಿ ಇಂಧನ ಖರೀದಿ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹಿಸುವುದರಿಂದ ಮಾತ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ವದಂತಿಗಳಿಗೆ ಒಳಗಾಗದೇ ಸರ್ಕಾರ ಮತ್ತು ತೈಲ ಕಂಪನಿಗಳ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಫೆಡರೇಷನ್ ಮನವಿ ಮಾಡಿದೆ.

Continue Reading

Blog

ಬೆಂಗಳೂರು ದಂಪತಿಯ ಆರ್ಥಿಕ ಸಂಕಷ್ಟ ಪೋಸ್ಟ್ ವೈರಲ್: ಮೆಟ್ರೋ ಜೀವನದ ಖರ್ಚು ಚರ್ಚೆಗೆ

Published

on

ಬೆಂಗಳೂರು: ಬೆಂಗಳೂರುನಲ್ಲಿ ಹೊಸದಾಗಿ ಮದುವೆಯಾದ ದಂಪತಿಯ ಆರ್ಥಿಕ ಒತ್ತಡಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ದೊಡ್ಡ ಚರ್ಚೆಗೆ ಕಾರಣವಾಗಿದೆ.

Xನಲ್ಲಿ ಅಭಿಷೇಕ್ ಸಿಂಗ್ ಎಂಬ ಬಳಕೆದಾರರು ತಮ್ಮ ಸ್ನೇಹಿತನ ಕಥೆಯನ್ನು ಹಂಚಿಕೊಂಡಿದ್ದಾರೆ. ಮದುವೆಯಾದ ತಕ್ಷಣ ಪತ್ನಿ “ಪೂರ್ಣ ಸಮಯ ಸರ್ಕಾರಿ ಪರೀಕ್ಷೆ ತಯಾರಿ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ ಬಗ್ಗೆ ಅವರು ವಿವರಿಸಿದ್ದಾರೆ.


ಮದುವೆಗೆ ಮೊದಲು – ಉತ್ತಮ ಉಳಿತಾಯ

ಅವರ ಪ್ರಕಾರ, ಸ್ನೇಹಿತನ ವಾರ್ಷಿಕ ವೇತನ ₹18 ಲಕ್ಷ (CTC), ತಿಂಗಳಿಗೆ ಸುಮಾರು ₹1.15 ಲಕ್ಷ ಕೈಗೆ ಸಿಗುತ್ತಿತ್ತು.

ಮದುವೆಗೆ ಮೊದಲು ಖರ್ಚುಗಳು (ಅಂದಾಜು):

  • ಬಾಡಿಗೆ/ಪಿಜಿ – ₹16,000
  • ಆಹಾರ – ₹7,000
  • ಪ್ರಯಾಣ – ₹3,000
  • ಇಂಟರ್ನೆಟ್/ಫೋನ್ – ₹1,500
  • ಜಿಮ್ – ₹1,500
  • ಹೊರಗೆ ಊಟ – ₹4,000
  • ಶಾಪಿಂಗ್ – ₹2,000

ಒಟ್ಟು ಖರ್ಚು: ₹35,000
ಉಳಿತಾಯ: ಸುಮಾರು ₹80,000 ತಿಂಗಳಿಗೆ


ಮದುವೆಯ ನಂತರ – ಖರ್ಚು ಏರಿಕೆ

1BHK ಮನೆಗೆ ಸ್ಥಳಾಂತರವಾದ ಬಳಿಕ ಖರ್ಚುಗಳು ದ್ವಿಗುಣಗೊಂಡವು:

  • ಬಾಡಿಗೆ – ₹40,000
  • ತರಕಾರಿ/ಕಿಚನ್ – ₹18,000
  • ಅಡುಗೆ/ಮೈಡ್ – ₹7,000
  • ವಿದ್ಯುತ್/ವೈಫೈ/ಗ್ಯಾಸ್ – ₹6,000
  • ಇಬ್ಬರ ಪ್ರಯಾಣ – ₹10,000
  • ವೀಕೆಂಡ್/ಔಟಿಂಗ್ – ₹12,000
  • ಸಣ್ಣ ಶಾಪಿಂಗ್ – ₹8,000
  • ಆರೋಗ್ಯ/ಔಷಧಿ – ₹5,000
  • ಫರ್ನಿಚರ್/EMI – ₹15,000

ಒಟ್ಟು: ₹1,21,000 (ತಿಂಗಳಿಗೆ)

ಇದರಿಂದ ತಿಂಗಳ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆರ್ಥಿಕ ಒತ್ತಡ ಶುರುವಾಯಿತು.


ಆಚರಣಾತ್ಮಕ ನಿರ್ಧಾರ

ನಂತರ ಪತ್ನಿ ₹7 ಲಕ್ಷ CTC (ಸುಮಾರು ₹45,000 ತಿಂಗಳಿಗೆ) ವೇತನದ ಉದ್ಯೋಗ ಸ್ವೀಕರಿಸಿದರು. ಇದರಿಂದ ದಿನನಿತ್ಯದ ಖರ್ಚುಗಳು ಸಮತೋಲನಗೊಂಡು ಕುಟುಂಬದ ಹಣಕಾಸು ಸ್ಥಿತಿ ಸ್ಥಿರವಾಯಿತು.

ಪೋಸ್ಟ್‌ನಲ್ಲಿ “ಮೆಟ್ರೋ ನಗರದಲ್ಲಿ ಮದುವೆಯಾದ ಬಳಿಕ ಸರ್ಕಾರಿ ಪರೀಕ್ಷೆ ತಯಾರಿ ಮಾಡಿಕೊಳ್ಳುವುದು ಆರ್ಥಿಕವಾಗಿ ದುಬಾರಿ” ಎಂದು ಅಭಿಪ್ರಾಯ ವ್ಯಕ್ತವಾಗಿದೆ.


ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ

ಈ ಪೋಸ್ಟ್‌ಗೆ 1.97 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಲಭಿಸಿದ್ದು, ಹಲವರು ಮೆಟ್ರೋ ನಗರ ಜೀವನದ ಖರ್ಚು ಹಾಗೂ ಹಣಕಾಸು ಯೋಜನೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ವರದಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಂಡ ಮಾಹಿತಿಯನ್ನು ಆಧರಿಸಿದೆ. ಇಲ್ಲಿ ಉಲ್ಲೇಖಿಸಿದ ಘಟನೆ, ಹಣಕಾಸು ವಿವರಗಳು ಹಾಗೂ ಹೇಳಿಕೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಈ ವಿಷಯದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸಂಬಂಧಿತ ಬಳಕೆದಾರರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ನಮ್ಮ ವೇದಿಕೆಯ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ.

Continue Reading

Trending