ಬೆಂಗಳೂರು
ಸಿಎಂ ರಾಜೀನಾಮೆ ನಿಶ್ಚಿತ, ಮಾಡಿದ ಕರ್ಮ ಅನುಭವಿಸಲೇಬೇಕು: ಬಿ.ವೈ. ವಿಜಯೇಂದ್ರ – BYV on CM resignation
ಬೆಂಗಳೂರು: “ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ, ನೂರಕ್ಕೆ ನೂರು ಅವರು ರಾಜೀನಾಮೆ ಕೊಟ್ಟೆ ಕೊಡುತ್ತಾರೆ. ಅವರು ಮಾಡಿದ ಕರ್ಮವನ್ನು ಅನುಭವಿಸಲೇಬೇಕು. ಅವರ ರಾಜೀನಾಮೆ ಬಗ್ಗೆ ಸಂದೇಹ ಬೇಡ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಬಿಜೆಪಿ ಮಹಿಳಾ ಘಟಕದ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು “ಮುಡಾ ಹಗರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಜೊತಗೂಡಿ ನಾವು ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ನಡೆಸಿದೆವು. ಪಾದಯಾತ್ರೆ ಯಶಸ್ವಿ ಆಗಿದೆ. ಆಟೋ ಡ್ರೈವರ್ಸ್ ಎಲ್ಲಾ ಬಂದು ನಮ್ಮ ವಿಜಿಯಣ್ಣ ಎಂದು ಮಾತಾನಾಡಿಸಿದರು. ಇಷ್ಟು ಯಶಸ್ವಿ ಆಗತ್ತದೆ ಎಂದು ನಾನು ಭಾವಿಸಿರಲಿಲ್ಲ. ಪಾದಯಾತ್ರೆ ಕೊನೆ ದಿನ 80 ಸಾವಿರ ಜನ ಸೇರಿದ್ದರು. ಕೇಂದ್ರ ನಾಯಕರು ಅಮಿತ್ ಶಾ, ನಡ್ಡಾ, ಸಂತೋಷ್ ಎಲ್ಲರೂ ಸಂತಸ ವ್ಯಕ್ತಪಡಿಸಿದರು. ಅತ್ಯಂತ ಯಶಸ್ವಿ ಪಾದಯಾತ್ರೆ ಎಂದು ಹೇಳಿದರು” ಎಂದು ಪಾದಯಾತ್ರೆಯ ಸಕ್ಸಸ್ಗೆ ಹರ್ಷ ವ್ಯಕ್ತಪಡಿಸಿದರು.
ಸಿಎಂ ರಾಜೀನಾಮೆ ಸಂದೇಹ ಬೇಡ-ವಿಜಯೇಂದ್ರ: “ಪಾದಯಾತ್ರೆಯಲ್ಲಿ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಪಾದಯಾತ್ರೆ ಎಂದರೆ ಯಡಿಯೂರಪ್ಪ ನೆನಪಾಗತ್ತದೆ. ಈ ಸರ್ಕಾರದ ವಿರುದ್ಧ ಪಾದಯಾತ್ರೆಗೆ ಇಳಿದಾಗ ಆತಂಕ ಇತ್ತು. ನಮ್ಮಲ್ಲೂ ಗೊಂದಲ ಇತ್ತು, ಸಮಯಾವಕಾಶ ಕೂಡ ಕಡಿಮೆ ಇತ್ತು. ಆದರೂ ಕೇಂದ್ರ ನಾಯಕರಿಗೆ ಭರವಸೆ ನೀಡಿದ್ದೆ. ಯಶಸ್ವಿ ಪಾದಯಾತ್ರೆ ಆಗಲಿದೆ ಎಂದು ಹೇಳಿದ್ದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ದಿನನಿತ್ಯ ಬಂದರು. ಸರ್ಕಾರ ಆತಂಕಕ್ಕೆ ಒಳಗಾಗಿ ಜನಾಂದೋಲನ ಮಾಡಿತ್ತು. ಆದರೂ ನಮ್ಮ ಪಾದಯಾತ್ರೆ ಯಶಸ್ವಿಯಾಗಿದೆ. ನೂರಕ್ಕೆ ನೂರು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೆ ಕೊಡುತ್ತಾರೆ. ಅವರ ರಾಜೀನಾಮೆ ಬಗ್ಗೆ ಸಂದೇಹ ಬೇಡ” ಎಂದರು.
“ರಾಜ್ಯದಲ್ಲಿ ದುಷ್ಟ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡಿಯುತ್ತಿದೆ. ಇದೆ ಬಿಜೆಪಿ ಸರ್ಕಾರ ಇದ್ದಾಗಲು ಮಹಿಳೆಯರ ಮೇಲೆ ದೌರ್ಜನ್ಯ ಆಗಿದೆ. ಆದರೆ, ದೌರ್ಜನ್ಯ ನಡೆದಾಗ ಸರ್ಕಾರ ನಡವಳಿಕೆ ಹೇಗಿದೆ ಅನ್ನೋದು ಮುಖ್ಯ. ಬೇಜವಾಬ್ದಾರಿ ನಡೆ ಕಾಂಗ್ರೆಸ್ ಸರ್ಕಾರದ್ದು. ಅಭಿವೃದ್ಧಿ ಕುಂಠಿತ ಅಲ್ಲ, ಅಭಿವೃದ್ದಿ ಆರಂಭವೇ ಆಗಿಲ್ಲ. ಲೋಕಸಭೆ ಚುನಾವಣೆಗೂ ಮುನ್ನ ಗೃಹಲಕ್ಷ್ಮಿ ಹಣ ಬಿಡುಗಡೆ
ಈಗ ಗ್ಯಾರಂಟಿ ಹಣೆಬರಹ ಏನಾಗಿದೆ. ಮತ್ತೆ ಸ್ಥಳೀಯ ಸಂಸ್ಥೆ ಚುನಾವಣೆ ಬಂದಾಗ ಹಣ ಹಾಕುತ್ತಾರೆ. ಮಹಿಳೆಯರ ಮೂಗಿಗೆ ತುಪ್ಪ ಹಚ್ಚಿದ್ದಾರೆ ಅಷ್ಟೆ. ಇಂತಹ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು ಎಂದು ಜನ ಹೇಳುತ್ತಿದ್ದಾರೆ”.
“ಮಹಿಳಾ ಮೋರ್ಚಾ ಬಲಪಡಿಸಲು ಸಭೆ ಮಾಡುತ್ತೇನೆ. ಮೂರೂವರೆ ವರ್ಷ ಹೋರಾಟದ ಜೀವನ ಸಿಎಂ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಅನುಮಾನ ಬೇಡ, ಮುಂದೆ ಬಿಜೆಪಿಯೆ ಅಧಿಕಾರಕ್ಕೆ ಬರತ್ತದೆ” ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷೆ .ಸಿ. ಮಂಜುಳಾ ಹೇಳಿಕೆ: “ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಖಂಡನೀಯ. ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಪಶ್ಚಿಮ ಬಂಗಾಳದಲ್ಲೂ ನಿರ್ಭಯಾ ರೀತಿ ಘಟನೆ ನಡೆದಿದೆ. ಅಲ್ಲಿ ಸಿಎಂ ಮಹಿಳೆಯಾಗಿ ಘಟನೆಯನ್ನು ಮುಚ್ಚಿಡುವ ಕೆಲಸ ಮಾಡಿದರು. ‘ಮಮತಾ ದೀದಿಕಾ ಮನ್ ಮೇ ಮಮಕಾರ್ ನಹಿಹೇ’. ಸಿಬಿಐ ಬರದಿದ್ದರೆ ಸತ್ಯಾಸತ್ಯತೆ ಗೊತ್ತಾಗುತ್ತಿರಲಿಲ್ಲ. ಅದೇ ರೀತಿಯಲ್ಲೇ ಕರ್ನಾಟಕದಲ್ಲೂ ಆಗುತ್ತಿದೆ. ಕುಡಿಯುವ ನೀರಿನ್ನೂ ಕೊಡದೇ ಕರ್ನಾಟಕ ಸರ್ಕಾರ ಮಹಿಳೆಯರಿಗೆ ಕಣ್ಣೀರು ಹಾಕಿಸಿದೆ. ಡಿಸಿಎಂ, ಗೃಹ ಸಹಚಿವರು ಎಲ್ಲ ಘಟನೆಯನ್ನು ತೇಲಿಸಿ ಬಿಡುತ್ತಾರೆ ಎಂದು ಮಹಿಳಾ ಘಟಕದ ರಾಜ್ಯಾಧ್ಯಕ್ಷೆ .ಸಿ. ಮಂಜುಳಾ ಟೀಕಿಸಿದರು.
ದೇಶ
K. Govindraj ಸೇರಿ ಗಣ್ಯರಿಗೆ ಗೌರವ ಡಾಕ್ಟರೇಟ್ – ಬಿಸಿಯು ಘಟಿಕೋತ್ಸವ ಸಂಭ್ರಮ
ಬೆಂಗಳೂರು: Bengaluru City University (ಬಿಸಿಯು) 5ನೇ ಘಟಿಕೋತ್ಸವ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಕುಲಾಧಿಪತಿಗಳಾದ Thawar Chand Gehlot ಚಾಲನೆ ನೀಡಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ Dr. Binay Kumar Das, Defence Research and Development Organisation (ಡಿಆರ್‌ಡಿಒ) ಮಹಾ ನಿರ್ದೇಶಕರು (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಸಿಸ್ಟಮ್ಸ್) ಭಾಗವಹಿಸಿದ್ದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸಂಗೀತ ನಿರ್ದೇಶಕ Arjun Janya, ಕ್ರಿಕೆಟರ್ Venkatesh Prasad, ಶಿಕ್ಷಣ ತಜ್ಞ T. K. Narayanappa, ಎಂಎಲ್ಸಿ K. Govindaraj, ಶಿಕ್ಷಣ ಕ್ಷೇತ್ರದ Mohan Alva ಹಾಗೂ ಕೈಗಾರಿಕೋದ್ಯಮಿ Bava Mohammed Farooq ಅವರಿಗೆ ರಾಜ್ಯಪಾಲರು ಗೌರವಿಸಿದರು.
ಉಪ ಚುನಾವಣೆ ಪ್ರಚಾರದ ಹಿನ್ನೆಲೆ, ಉನ್ನತ ಶಿಕ್ಷಣ ಸಚಿವ Dr. C. N. Ashwath Narayan ಗೈರಾಗಿದ್ದರು.
ಘಟಿಕೋತ್ಸವದಲ್ಲಿ 73 ಪ್ರಥಮ ರ‍್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪ್ರಮಾಣಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು. ಒಟ್ಟು 37,370 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರದಾನವಾಗಿದ್ದು, 23 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ನೀಡಲಾಯಿತು.
ವಿಶೇಷವಾಗಿ, ಸ್ನೇಹಾ ಟಿ (ಎಂಎಸ್‌ಸಿ ರಸಾಯನಶಾಸ್ತ್ರ) 4 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದು, ಅಭಿಷೇಕ್ ಶ್ರೀರಾಮ್ (ಬಿಕಾಂ) 3 ಚಿನ್ನದ ಪದಕ, ದಿವ್ಯಶ್ರೀ ಎಸ್ (ಬಿಬಿಎ) 3 ಚಿನ್ನದ ಪದಕ ಪಡೆದು ಗಮನಸೆಳೆದಿದ್ದಾರೆ.
ಗೌರವ ಡಾಕ್ಟರೇಟ್ ಪಡೆದ ಬಳಿಕ Arjun Janya ಅವರು ಮಾತನಾಡಿ, ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು.
ದೇಶ
ಹಳೆಯ ವಾಹನಗಳಿಗೆ HSRP ಕಡ್ಡಾಯವೇ? ಸಾರಿಗೆ ಇಲಾಖೆಯ ಸ್ಪಷ್ಟನೆ ಏನು ಗೊತ್ತಾ?
ಬೆಂಗಳೂರು: ಹಳೆಯ ವಾಹನಗಳಿಗೆ ಹೈ ಸಿಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಕೆ ಕಡ್ಡಾಯವಲ್ಲ ಎಂಬ ಸುದ್ದಿಗಳು ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ, ಇದಕ್ಕೆ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಇಂತಹ ಸುದ್ದಿಗಳು ಸುಳ್ಳು ಎಂದು ಹೇಳಿ ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದೆ.
ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 50ರಡಿ, ಕೇಂದ್ರ ಸರ್ಕಾರವು 2018 ಡಿಸೆಂಬರ್ 4ರಂದು ಅಧಿಸೂಚನೆ ಹೊರಡಿಸಿದ್ದು, 2019 ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಈ ನಿಯಮವನ್ನು ಅನುಸರಿಸಿ, ಕರ್ನಾಟಕ ಸರ್ಕಾರವು 2023 ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿ ರಾಜ್ಯದಲ್ಲಿಯೂ ಇದೇ ನಿಯಮವನ್ನು ಜಾರಿಗೆ ತಂದಿದೆ.
ಇದಕ್ಕೂ ನಡುವೆ, HSRP ಅಳವಡಿಕೆ ಸಂಬಂಧ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸರ್ಕಾರವು ಯಾವುದೇ ತರಾತುರಿ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದೆ. ಆದರೆ, ಈ ಆದೇಶವು HSRP ಕಡ್ಡಾಯ ಆದೇಶವನ್ನು ರದ್ದುಪಡಿಸುವುದಿಲ್ಲ ಎಂಬುದು ಮುಖ್ಯ.
ಸಾರಿಗೆ ಇಲಾಖೆಯ ಪ್ರಕಾರ, ಹೈಕೋರ್ಟ್ ಆದೇಶದಿಂದ ಹೊಸ ಕ್ರಮಗಳನ್ನು ಕೈಗೊಳ್ಳಲು ಅಡ್ಡಿಯಿದ್ದರೂ, HSRP ಅಳವಡಿಕೆ ಕುರಿತ ಅಧಿಸೂಚನೆ ಇನ್ನೂ ಜಾರಿಯಲ್ಲಿಯೇ ಇದೆ. ಆದ್ದರಿಂದ, ಸಾರ್ವಜನಿಕರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ವದಂತಿಗಳಿಂದ ಗೊಂದಲಕ್ಕೀಡಾಗಬಾರದು ಎಂದು ಸಾರಿಗೆ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಕ್ರೀಡೆ
ಗ್ಯಾಸ್‌ಗಾಗಿ ಜನ ಸಾಲು, ಟಿಕೆಟ್‌ಗಾಗಿ ಪಿಎ ಸಾಲು: ಶಾಸಕರಿಗೆ ಟೀಕೆ!
ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆ, ಜನಪ್ರತಿನಿಧಿಗಳ ವರ್ತನೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಆಟೋ ಚಾಲಕರು ಗ್ಯಾಸ್‌ಗಾಗಿ ರಾತ್ರಿಯಿಡೀ ಸಾಲಿನಲ್ಲಿ ನಿಲ್ಲುತ್ತಿರುವಾಗ, ಇನ್ನೊಂದು ಕಡೆ ಶಾಸಕರು IPL 2026 ಟಿಕೆಟ್ ಪಡೆಯಲು ತಮ್ಮ ಪಿಎಗಳನ್ನು ಕ್ಯೂನಲ್ಲಿ ನಿಲ್ಲಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಾಹಿತಿಯ ಪ್ರಕಾರ, ಸರ್ಕಾರ ಮತ್ತು Karnataka State Cricket Association (KSCA) ನಡುವೆ ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ನೀಡುವ ಕುರಿತು ಒಪ್ಪಂದವಾಗಿದೆ. ಇದರ ಹಿನ್ನೆಲೆಯಲ್ಲಿ, Royal Challengers Bengaluru ಮತ್ತು Chennai Super Kings ನಡುವಿನ ಪಂದ್ಯಕ್ಕೆ ಟಿಕೆಟ್ ಪಡೆಯಲು ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಗಮನ ಸೆಳೆದಿವೆ.
ಸ್ಪೀಕರ್ ಕಚೇರಿಯಲ್ಲೇ ಟಿಕೆಟ್ ವಿತರಣೆ ನಡೆಯುತ್ತಿರುವುದರಿಂದ, ಶಾಸಕರ ಸೂಚನೆ ಮೇರೆಗೆ ಪಿಎಗಳು ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಗ್ಯಾಸ್ ಕೊರತೆ, ದೈನಂದಿನ ಸಮಸ್ಯೆಗಳ ನಡುವೆ ಈ ರೀತಿಯ ಘಟನೆಗಳು ಸಾರ್ವಜನಿಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿವೆ.
ರಾಜಕೀಯ ವಲಯದಲ್ಲಿಯೂ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
-
ದೇಶ15 hours agoಹಳೆಯ ವಾಹನಗಳಿಗೆ HSRP ಕಡ್ಡಾಯವೇ? ಸಾರಿಗೆ ಇಲಾಖೆಯ ಸ್ಪಷ್ಟನೆ ಏನು ಗೊತ್ತಾ?
-
ದೇಶ22 hours agoಪ್ರಚಾರ ವೇಳೆ ಕಾರು ತಡೆದು ಹಲ್ಲೆ: ತರೂರ್ ಬೆಂಗಾವಲು ಮೇಲೆ ದಾಂಧಲೆ
-
ಆರೋಗ್ಯ20 hours agoಮೂತ್ರಪಿಂಡದ ಕಲ್ಲು: ಮೂತ್ರಕೋಶದಲ್ಲಿ ಸಿಲುಕಿದರೆ ಏನಾಗುತ್ತದೆ?
-
ದೇಶ21 hours agoಜಮೀರ್ ಅಹ್ಮದ್ಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ!
-
ದೇಶ17 hours agoಕಾಂಗ್ರೆಸ್ ಒಳಜಗಳ ಬಯಲು: ರಾಹುಲ್ ನಿಲುವಿಗೆ ಹಿರಿಯರ ವಿರೋಧ
-
ಚುನಾವಣೆ15 hours agoTN 2026 ಟೀಸರ್ಗೆ ರಾಜಕೀಯ ಕಿಚ್ಚು! ವಿಜಯ್ ಟಾರ್ಗೆಟ್ ಆರೋಪ – ತಮಿಳುನಾಡಿನಲ್ಲಿ ಬಿಗುವಿನ ವಾತಾವರಣ
-
ದೇಶ17 hours agoಇರಾನ್-ಅಮೆರಿಕಾ ಮಾತುಕತೆ ವಿಫಲ: ಪಾಕಿಸ್ತಾನಕ್ಕೆ ಮುಖಭಂಗ!
-
ಅಪರಾಧ17 hours agoಐಪಿಎಲ್ ಟಿಕೆಟ್ ಕ್ರೇಜ್ ನಡುವೆ ದೊಡ್ಡ ಮೋಸ: ಟೆಕ್ಕಿಗೆ ₹1.46 ಲಕ್ಷ ನಷ್ಟ!
