Connect with us

ದೇಶ

70 ವರ್ಷ ಮೇಲ್ಪಟ್ಟವರಿಗೂ ₹5 ಲಕ್ಷದ ಆಯುಷ್ಮಾನ್ ಭಾರತ್ ವಿಮೆ: ಕೇಂದ್ರದ ಮಹತ್ವದ ನಿರ್ಧಾರ – Ayushman Bharat Yojana

Published

on

ನವದೆಹಲಿ: 70 ವರ್ಷ ಮೇಲ್ಪಟ್ಟವರಿಗೂ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ’ಯನ್ನು ಯಾವುದೇ ಆದಾಯದ ಮಿತಿಯಿಲ್ಲದೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಮಹತ್ವದ ನಿರ್ಧಾರ ಕೈಗೊಂಡಿತು. ಇದರಿಂದಾಗಿ ದೇಶದ 6 ಕೋಟಿ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

5 ಲಕ್ಷ ರೂಪಾಯಿಯ ಉಚಿತ ವಿಮಾ ಯೋಜನೆಯ ವಿಸ್ತರಣೆ 4.5 ಕೋಟಿ ಹಿರಿಯ ನಾಗರಿಕರ ಕುಟುಂಬಗಳಿಗೆ ನೆರವಾಗಲಿದೆ. ಈ ಯೋಜನೆಯ ಅರ್ಹ ಫಲಾನುಭವಿಗಳಿಗೆ ಹೊಸದಾಗಿ ವಿಭಿನ್ನ ಕಾರ್ಡ್‌ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

70 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರ ಕುಟುಂಬಗಳು ಈಗಾಗಲೇ ಈ ಯೋಜನೆಯ ಭಾಗವಾಗಿದ್ದರೂ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ವಿಮಾ ಯೋಜನೆಯನ್ನು ಟಾಪ್‌ ಅಪ್‌ ಮೂಲಕ ಪಡೆಯಲಿದ್ದಾರೆ. (ಇದನ್ನು ಅವರು ತಮ್ಮ 70 ವರ್ಷದೊಳಗಿನ ಇತರೆ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವ ಅವಶ್ಯಕತೆ ಇಲ್ಲ). ಉಳಿದಂತೆ, ಎಲ್ಲ 70 ಮತ್ತು ಮೇಲ್ಪಟ್ಟ ಹಿರಿಯರು ಕುಟುಂಬದ ಆಧಾರದಲ್ಲಿ ಪ್ರತಿ ವರ್ಷ 5 ಲಕ್ಷ ರೂಪಾಯಿಯ ಉಚಿತ ವಿಮಾ ಯೋಜನೆಯ ಲಾಭ ಪಡೆಯಬಹುದು.

ಎಪ್ಪತ್ತು ವರ್ಷ ಮತ್ತು ಮೇಲ್ಪಟ್ಟವರು ಖಾಸಗಿ ಆರೋಗ್ಯ ವಿಮೆ ಮಾಡಿಸಿದ್ದರೆ ಅಥವಾ ESI ಯೋಜನೆಯ ಭಾಗವಾಗಿದ್ದರೂ ಕೂಡಾ ಆಯುಷ್ಮಾನ್ ವಿಮಾ ಯೋಜನೆಯ ಅನುಕೂಲಗಳನ್ನು ಪಡೆಯಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದಲ್ಲದೇ, ಸಾರ್ವಜನಿಕ ಆರೋಗ್ಯ ಯೋಜನೆಗಳಾದ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಹೆಚ್‌ಎಸ್), ಮಾಜಿ ಸೈನಿಕರ ಆರೋಗ್ಯ ಯೋಜನೆ (ಇಸಿಹೆಚ್‌ಎಸ್‌) ಮತ್ತು ಆಯುಷ್ಮಾನ್ ಸಶಸ್ತ್ರ ಪೊಲೀಸ್ ದಳ (ಸಿಎಪಿಎಫ್)ದವರು ತಮ್ಮ ಹಾಲಿ ಯೋಜನೆಗಳನ್ನು ಮುಂದುವರೆಸಬಹುದು ಇಲ್ಲವೇ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯನ್ನು ಹೊಂದಬಹುದು. ಇಲ್ಲಿ ಸರ್ಕಾರ, ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಪ್ರತಿ ನಾಗರಿಕನಿಗೂ ಕೈಗೆಟುಕುವ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲು ನಾವು ಬದ್ಧವಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯನ್ನು 70 ವರ್ಷ ಮೇಲ್ಪಟ್ಟವರಿಗೂ ಒದಗಿಸಲು ಕ್ರಮ ಕೈಗೊಂಡಿದೆ. ಈ ಯೋಜನೆಯು 6 ಕೋಟಿ ನಾಗರಿಕರಿಗೆ ಘನತೆ, ಕಾಳಜಿ ಮತ್ತು ಭದ್ರತೆಯನ್ನು ಖಚಿತಪಡಿಸುತ್ತದೆ’ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರಕಾರ, ಎಬಿ ಪಿಎಂ-ಜೆಎವೈ ವಿಶ್ವದ ಅತಿದೊಡ್ಡ ಸಾರ್ವಜನಿಕ ನಿಧಿಯ ಆರೋಗ್ಯ ಭರವಸೆ ಯೋಜನೆ. ಇದು ವಾರ್ಷಿಕ 5 ಲಕ್ಷ ರೂಪಾಯಿ ವೆಚ್ಚದಲ್ಲಿ 12.34 ಕೋಟಿ ಕುಟುಂಬಗಳ 55 ಕೋಟಿ ಜನರಿಗೆ ದ್ವಿತೀಯ ಮತ್ತು ತೃತೀಯ ಆಸ್ಪತ್ರೆ ಸೇವೆ ಒದಗಿಸುತ್ತದೆ. ಅರ್ಹ ಕುಟುಂಬದ ಪ್ರತಿ ಸದಸ್ಯ ಯಾವುದೇ ಪ್ರಾಯದ ನಿರ್ಬಂಧವಿಲ್ಲದೆ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತಾರೆ.

ಈ ಯೋಜನೆ 7.37 ಆಸ್ಪತ್ರೆ ದಾಖಲಾತಿಗಳನ್ನು ಹೊಂದಿದೆ. ಈ ಪೈಕಿ ಶೇ.49ರಷ್ಟು ಮಹಿಳಾ ಫಲಾನುಭವಿಗಳು ಎಂಬುದು ವಿಶೇಷ. ಈ ಯೋಜನೆಯಿಂದ 1 ಲಕ್ಷ ಕೋಟಿ ರೂಪಾಯಿ ಮೊತ್ತದಷ್ಟು ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ದೇಶ

ಇರಾನ್ ಶಾಕ್: ಹೊಸ ಸರ್ವೋಚ್ಚ ನಾಯಕ ಗಂಭೀರ ಸ್ಥಿತಿ!

Published

on

By

ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಇರಾನ್ ರಾಜಕೀಯ ವಲಯದಲ್ಲಿ ಸಂಚಲನಕಾರಿ ಮಾಹಿತಿ ಹೊರಬಂದಿದೆ. ಹೊಸದಾಗಿ ಸರ್ವೋಚ್ಚ ನಾಯಕರಾಗಿ ಆಯ್ಕೆಯಾಗಿರುವ Mojtaba Khamenei ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ, Qom ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಡಳಿತಾತ್ಮಕ ನಿರ್ಧಾರಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಗುಪ್ತಚರ ಮೂಲಗಳು ಸೂಚಿಸಿವೆ.

ಈ ದಾಳಿಯಲ್ಲೇ ಅವರ ತಂದೆ, ಇರಾನ್‌ನ ಹಿಂದಿನ ಸರ್ವೋಚ್ಚ ನಾಯಕ Ali Khamenei ಮೃತಪಟ್ಟಿರುವುದಾಗಿ ಹೇಳಲಾಗಿದೆ. ಶಿಯಾ ಧರ್ಮಗುರುಗಳ ಕೇಂದ್ರವಾಗಿರುವ ಕೋಮ್‌ನಲ್ಲಿ ಅವರ ಅಂತ್ಯಕ್ರಿಯೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.

ಯುದ್ಧದ ಆರಂಭದಿಂದಲೇ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಹೆಸರಿನಲ್ಲಿ ಪ್ರಕಟವಾಗಿರುವ ಹೇಳಿಕೆಗಳನ್ನು ರಾಜ್ಯ ಮಾಧ್ಯಮಗಳು ಓದುತ್ತಿದ್ದರೂ, ಅವರ ಧ್ವನಿ ದಾಖಲೆ ಇಲ್ಲದಿರುವುದು ಅವರ ಆರೋಗ್ಯದ ಬಗ್ಗೆ ಅನುಮಾನ ಮೂಡಿಸಿದೆ.

ಇದಲ್ಲದೆ, Iran ಸರ್ಕಾರ ಕೃತಕ ಬುದ್ಧಿಮತ್ತೆ ಬಳಸಿ ಬಿಡುಗಡೆ ಮಾಡಿದ ವಿಡಿಯೋವೂ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಖಮೇನಿ ಯುದ್ಧ ತಂತ್ರಗಳನ್ನು ಪರಿಶೀಲಿಸುತ್ತಿರುವಂತೆ ತೋರಿಸಲಾಗಿದೆ.

ಒಟ್ಟಿನಲ್ಲಿ, ಇರಾನ್‌ನಲ್ಲಿ ನಾಯಕತ್ವದ ಅನಿಶ್ಚಿತತೆ ಹಾಗೂ ಯುದ್ಧದ ಪರಿಣಾಮ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟಿಸಿದೆ.

Continue Reading

ದೇಶ

Bengaluru : ₹180ಗೆ ತೆಂಗಿನ ನೀರು? ಬೆಂಗಳೂರಲ್ಲಿ ಏನಾಗ್ತಿದೆ ನೋಡಿ!

Published

on

By

ಬೆಂಗಳೂರು: ಬೇಸಿಗೆ ತಾಪಮಾನ ಏರಿಕೆಯಾಗುತ್ತಿದ್ದಂತೆ ತಂಪು ಪಾನೀಯಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ನೈಸರ್ಗಿಕ ಪಾನೀಯವಾದ ತೆಂಗಿನ ನೀರಿಗೆ ಸಿಕ್ಕಿರುವ ಬೇಡಿಕೆ ಈಗ ಅಚ್ಚರಿಯ ಮಟ್ಟ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ತೆಂಗಿನ ನೀರನ್ನು ಲೀಟರ್‌ಗೆ ಮಾರಾಟ ಮಾಡಲಾಗುತ್ತಿದ್ದು, ಅದರ ಬೆಲೆ ಕೇಳಿದವರು ಬೆಚ್ಚಿಬಿದ್ದಿದ್ದಾರೆ.

ನಗರದ ಕೆಲವು ಭಾಗಗಳಲ್ಲಿ ಒಂದು ಲೀಟರ್ ತೆಂಗಿನ ನೀರಿಗೆ ₹180 ವರೆಗೆ ದರ ನಿಗದಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಒಂದೇ ತೆಂಗಿನಕಾಯಿ ₹70ರಿಂದ ₹80ರೊಳಗೆ ಮಾರಾಟವಾಗುತ್ತಿದ್ದರೂ, ಬೇಡಿಕೆ ಹೆಚ್ಚಾದ ಕಾರಣ ವ್ಯಾಪಾರಿಗಳು ಹೊಸ ರೀತಿಯಲ್ಲಿ ಲೀಟರ್ ಲೆಕ್ಕದಲ್ಲಿ ಮಾರಾಟ ಆರಂಭಿಸಿದ್ದಾರೆ.

ಬೆಂಗಳೂರಿನ ನವನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ “1 ಲೀಟರ್ ತೆಂಗಿನ ನೀರು – ₹180” ಎಂಬ ಬೋರ್ಡ್‌ಗಳು ಕಾಣಿಸಿಕೊಂಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೇಸಿಗೆ ಉಷ್ಣತೆ ಹೆಚ್ಚಾಗುತ್ತಿದ್ದಂತೆ ಜನರು ಹೆಚ್ಚು ತಂಪು ಮತ್ತು ಆರೋಗ್ಯಕರ ಪಾನೀಯಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೆಂಗಿನ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ವ್ಯಾಪಾರಿಗಳ ಪ್ರಕಾರ, ಪೂರೈಕೆ ಕಡಿಮೆ ಹಾಗೂ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ಆದರೆ ಸಾಮಾನ್ಯ ಜನರು ಮಾತ್ರ ಈ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಇಷ್ಟು ದುಬಾರಿ ದರದಲ್ಲಿ ತೆಂಗಿನ ನೀರು ಖರೀದಿಸಲು ಸಾಧ್ಯವೇ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಸಮತೋಲನದಿಂದ ಬೆಂಗಳೂರಿನಲ್ಲಿ ತೆಂಗಿನ ನೀರಿನ ಬೆಲೆ ಗಗನಕ್ಕೇರಿದೆ.

Continue Reading

ದೇಶ

12 ವರ್ಷದ ಗೊಂದಲಕ್ಕೆ ತೆರೆ: ಅಮರಾವತಿ ರಾಜಧಾನಿ ಘೋಷಣೆ

Published

on

By

ಅಮರಾವತಿ: ಆಂಧ್ರ ಪ್ರದೇಶದ ರಾಜಧಾನಿ ಕುರಿತಾಗಿ ಹನ್ನೆರಡು ವರ್ಷಗಳ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯದ ಏಕೈಕ ರಾಜಧಾನಿಯಾಗಿ Amaravati ನಗರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ನಿರ್ಧಾರದಿಂದ ದೀರ್ಘಕಾಲದ ರಾಜಕೀಯ ಚರ್ಚೆಗಳಿಗೆ ಅಂತ್ಯ ಕಂಡಿದೆ.

2014ರಲ್ಲಿ ಆಂಧ್ರ ಪ್ರದೇಶ ವಿಭಜನೆಯಾಗಿ Telangana ಹುಟ್ಟಿಕೊಂಡ ನಂತರ, Hyderabad ಅನ್ನು ತಾತ್ಕಾಲಿಕ ಜಂಟಿ ರಾಜಧಾನಿಯಾಗಿ ಘೋಷಿಸಲಾಗಿತ್ತು. ಆ ಅವಧಿ ಮುಗಿದರೂ ಹೊಸ ರಾಜಧಾನಿ ಕುರಿತು ಸ್ಪಷ್ಟತೆ ಬರದೇ ಹನ್ನೆರಡು ವರ್ಷಗಳ ಕಾಲ ಗೊಂದಲ ಮುಂದುವರಿದಿತ್ತು.

ಹಿಂದಿನ ಮುಖ್ಯಮಂತ್ರಿ Y. S. Jagan Mohan Reddy ಮೂರು ರಾಜಧಾನಿಗಳ ಯೋಜನೆ (ಅಮರಾವತಿ – ಶಾಸನ, ಕರುನೂಲ್ – ನ್ಯಾಯಾಂಗ, ವಿಶಾಖಪಟ್ಟಣಂ – ಆಡಳಿತ) ಮುಂದಿಟ್ಟಿದ್ದು ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಯಿತು. ಈ ಪ್ರಸ್ತಾವನೆಗೆ ಕೇಂದ್ರದ ಅನುಮೋದನೆ ಸಿಗದೇ ಯೋಜನೆ ಮುಂದುವರಿಯಲಿಲ್ಲ.

ಇದಾದ ಬಳಿಕ 2024ರಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ N. Chandrababu Naidu ಅಮರಾವತಿಯನ್ನು ಏಕೈಕ ರಾಜಧಾನಿಯಾಗಿ ಘೋಷಿಸಿ, ಸಂಬಂಧಿಸಿದ ಕಾನೂನು ಕ್ರಮಗಳನ್ನು ಕೈಗೊಂಡರು. ಜೊತೆಗೆ, ಭವಿಷ್ಯದಲ್ಲಿ ರಾಜಧಾನಿ ಬದಲಾವಣೆಗೆ ಅವಕಾಶವಿಲ್ಲದಂತೆ ಸಂಸತ್ತಿನಲ್ಲಿ ತಿದ್ದುಪಡಿ ಕಾಯಿದೆ ಅಂಗೀಕರಿಸಲಾಗಿದೆ.

ಈ ಕ್ರಮದೊಂದಿಗೆ ಆಂಧ್ರ ಪ್ರದೇಶ ಪುನರ್‌ವಿಂಗಡಣೆ (ತಿದ್ದುಪಡಿ) ಕಾಯಿದೆ–2026 ಅಂಗೀಕಾರಗೊಂಡಿದ್ದು, ರಾಜ್ಯದ ರಾಜಧಾನಿ ಪ್ರಶ್ನೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ರಾಜಕೀಯ ಪಕ್ಷಗಳ ನಡುವಿನ ಹಗ್ಗಜಗ್ಗಾಟ ಮತ್ತು ವಿಭಿನ್ನ ಪ್ರಸ್ತಾವನೆಗಳೇ ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದ್ದವು.

ಒಟ್ಟಿನಲ್ಲಿ, ಅಮರಾವತಿ ಈಗ ಆಂಧ್ರ ಪ್ರದೇಶದ ಕಾನೂನಾತ್ಮಕ ಹಾಗೂ ಶಾಶ್ವತ ರಾಜಧಾನಿಯಾಗಿ ಘೋಷಣೆಗೊಂಡಿದೆ.

Continue Reading

Trending