Connect with us

ಬೆಂಗಳೂರು

ಎಂಎಲ್‍ಎ ಅನ್ನುವ ಅಹಂಕಾರ ಇರಬರುದು – ಶಾಸಕ ಎಸ್ ಟಿ ಸೋಮಶೇಖರ್

Published

on

ಬೆಂಗಳೂರು: ಬಿಜೆಪಿ ಪಕ್ಷ ರಾಜರಾಜೇಶ್ವರಿನಗರದ ಶಾಸಕರಾದ ಮುನಿರತ್ನಗೆ ಬೆಂಬಲ ನೀಡುತ್ತಿದ್ದಾರೆ ಎಂದು ಯಶವಂತಪುರ ಶಾಸಕರಾದ ಎಸ್ ಟಿ ಸೋಮಶೇಖರ್ ಹೇಳಿದರು, ಕೆಂಗೇರಿ ಉಪನಗರದ ಹೊಯ್ಸಳಾ ಸರ್ಕಲ್‍ನಲ್ಲಿ ಕೆಂಗೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಜಾತಿ ನಿಂದನೆ ಹಾಗೂ ಅವಹೇಳನಕಾರಿ ಮಾತುಗಳು ಆಡಿರುವ ಶಾಸಕ ಮುನಿರತ್ನ ವಿರುದ್ಧ ಮೌನ ಮೆರವಣಿಗೆ ಹಮ್ಮಿಕೊಂಡಿದ್ದರು

ಈ ಮೌನ ಮೆರವಣಿಗೆಯಲ್ಲಿ ಶಾಸಕ ಎಸ್ ಟಿ ಸೋಮಶೇಖರ್ ಅವರು ಭಾಗವಹಿಸಿ ಮಾತನಾಡುತ್ತ ಶಾಸಕ ಮುನಿರತ್ನ ಅವರಿಗೆ ಬಿಜೆಪಿ ಪಕ್ಷದ ಹಿರಿಂiÀi ನಾಯಕರುಗಳ ಬೆಂಬಲ ಇದೇ ಎಂದು ಆರೋಪಿಸಿದರು, ದಲಿತ ಹಣ್ಣು ಮಕ್ಕಳ ವಿರುದ್ದ ಕೀಳಾಗಿ ಮಾತನಾಡಿರುವ ಅವರಿಗೆ ಬಿಜೆಪಿ ಪಕ್ಷದ ನಾಯಕರು ಏಕೆ ಇಷ್ಟು ಬೆಂಬಲ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು, ನಾನು ಈ ಭಾಗದ ಶಾಸಕನಾಗಿ ಈ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಅದರೆ ಒಕ್ಕಲಿಗ ಹಾಗೂ ದಲಿತ ಸಮುದಾಯದ ವಿರುದ್ಧ ಅವರು ಮಾತನಾಡಿರುವ ಕಾರಣ ನನ್ನ ಕ್ಷೇತ್ರದಲ್ಲಿ ದಲಿತ ಹಾಗೂ ಒಕ್ಕಲಿಗರ ಸಂಘಟನೆಗಳು ನಮ್ಮ ಮೌನ ಪ್ರತಿಭಟನೆಯಲ್ಲಿ ತಾವು ಭಾಗಿಯಾಗಬೇಕು ಹಾಗೂ ನಮ್ಮ ಧ್ವನಿಗೆ ನೀವು ಬೆಂಬಲ ನೀಡಬೇಕು ಎಂದ ಕಾರಣ ನಾನು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನೆ,

ಯಶವಂತಪುರ ಕ್ಷೇತ್ರದಲ್ಲಿ ಇರುವ ದಲಿತ ಸಮುದಾಯಗಳು ಕ್ಷೇತ್ರದಲ್ಲಿ ಇರುವ ಪೊಲೀಸ್ ಠಾಣೆಗೆ ಶಾಸಕ ಮುನಿರತ್ನ ವಿರುದ್ಧ ದೂರುಗಳನ್ನು ನೀಡಿದ್ದಾರೆ, ಇದುವರೆಗೆ ಯಾವ ರಾಜಕಾರಣಿ ಕೂಡ ಮಹಿಳೆಯರ ವಿರುದ್ಧ ಕೀಳಾಗಿ ಮಾತನಾಡಿಲ್ಲ ಎಂದರು, ಈ ಪ್ರತಿಭಟನೆಯಲ್ಲಿ ಯಶವಂತಪುರ ಕ್ಷೇತ್ರದ ಎಲ್ಲಾ ಸಮುದಾಯದ ಪ್ರಮುಖ ಸಂಘಟನೆಗಳು ಭಾಗವಹಿಸಿದ್ದಾರೆ ಎಂದರು,

ಪ್ರತಿಭಟನೆಯಲ್ಲಿ ಪೊಲೀಸರು ಮೌನ ಪ್ರತಿಭಟನೆ ಮಾಡಲು ಅನುಮತಿ ಇಲ್ಲ ನೀವು ಈ ಪ್ರತಿಭಟನೆ ಮಾಡುವಾಗೆ ಇಲ್ಲ ಎಂದರು ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ವಿರುದ್ಧ ಘೋಷಣೆಗಳನ್ನು ಕೂಗಿದರು, ಘೋಷಣೆ ಕೂಗಿದ ಕಾರ್ಯಕರ್ತರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದರು, ಅದರೂ ಕೆಲ ಕಾರ್ಯಕರ್ತರು ಶಾಸಕ ಮುನಿರತ್ನ ಅವರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು,

ಈ ಮೌನ ಮೆರವಣಿಗೆಯಲ್ಲಿ ಶಾಸಕ ಎಸ್ ಟಿ ಸೋಮಶೇಖರ್ ಅವರು ಕೂಡ ಈ ಹೊಯ್ಸಳಾ ಸರ್ಕಲ್‍ನಿಂದ ಗಣೇಶ ಮೈದಾನದ ವರೆಗೆ ಪ್ರತಿಭಟನಾಕರರ ಜೊತೆಗೆ ನಡೆಯಲು ಮುಂದಾದರು ಅದರೆ ಪೊಲೀಸ್ ಅಧಿಕಾರಿಗಳು ಅವರನ್ನು ಕೂಡ ಬಂಧಿಸಲು ಮುಂದಾದರು ಕಾನೂನಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಗೌರವ ನೀಡಿದ ಶಾಸಕರು ನಂತರ ಗಣೇಶ ಮೈದಾನದ ವರೆಗೆ ಎಸ್ ಟಿ ಸೋಮಶೇಖರ್ ಅವರು ತಮ್ಮ ಕಾರ್ ನಲ್ಲಿ ಹೊರಟರು.

ದೇಶ

ಬೆಂಗಳೂರು ಜೀವನ ವೆಚ್ಚಕ್ಕೆ ಸವಾಲು: ಮಹಿಳೆಯ ಬಜೆಟ್ ಟ್ರಾವೆಲ್ ಸ್ಟೋರಿ

Published

on

By

ಬೆಂಗಳೂರು: ಐಷಾರಾಮಿ ಜೀವನಶೈಲಿ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಗೆ ಹೆಸರಾದ Bengaluru ನಗರದಲ್ಲಿ ಕೇವಲ 500 ರೂ.ಗಳಲ್ಲಿ ದಿನ ಕಳೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಯುವತಿ ನೀಡಿದ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕಾ ಮಂಡಲ್ ಎಂಬ ಮಹಿಳೆ, ಸೀಮಿತ ಬಜೆಟ್‌ನಲ್ಲಿ ನಗರ ಜೀವನ ಹೇಗಿರುತ್ತದೆ ಎಂಬುದನ್ನು ಪರೀಕ್ಷಿಸಲು ಮುಂದಾಗಿದ್ದರು. ದಿನವನ್ನು ಇಡ್ಲಿ ಉಪಹಾರದಿಂದ ಆರಂಭಿಸಿದ ಅವರು, ಕ್ಯಾಬ್ ಬದಲು ಮೆಟ್ರೋ ಪ್ರಯಾಣವನ್ನು ಆಯ್ಕೆ ಮಾಡಿಕೊಂಡರು. ಇದರಿಂದ ಖರ್ಚನ್ನು ಕಡಿಮೆ ಮಾಡಲು ಸಹಾಯವಾಯಿತು.

ಹಗಲಿನಲ್ಲಿ ಚಹಾ ತೆಗೆದುಕೊಂಡು ಸಣ್ಣ ವಿರಾಮ ಮಾಡಿಕೊಂಡ ಅವರು, ಮಧ್ಯಾಹ್ನ ಊಟದ ವೇಳೆಗೆ ಸವಾಲು ಎದುರಿಸಿದರು. ಆಹಾರದ ಬೆಲೆಗಳು ಹೆಚ್ಚಿರುವುದರಿಂದ, 120 ರೂ. ಒಳಗೆ ಊಟ ಮುಗಿಸುವ ಗುರಿ ಇಟ್ಟುಕೊಂಡು ಖರ್ಚನ್ನು ನಿಯಂತ್ರಿಸಿದರು.

ಸಂಜೆ ವೇಳೆ ವಡಾ ಪಾವ್ ಮತ್ತು ಚಹಾ ಸೇವಿಸಿ ದಿನವನ್ನು ಮುಗಿಸಿದ ಪ್ರಿಯಾಂಕಾ, ಅಚ್ಚರಿಯ ರೀತಿಯಲ್ಲಿ ತಮ್ಮ ಬಜೆಟ್‌ನಿಂದ ಸುಮಾರು 200 ರೂ. ಉಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಕಡಿಮೆ ಹಣದಲ್ಲೂ ಸರಿಯಾದ ಯೋಜನೆ ಇದ್ದರೆ ದಿನವನ್ನು ನಿರ್ವಹಿಸಬಹುದು ಎಂಬುದನ್ನು ಅವರು ತೋರಿಸಿದ್ದಾರೆ.

ಈ ವಿಡಿಯೋ ವೈರಲ್ ಆದ ಬಳಿಕ, ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು Indira Canteen ನಲ್ಲಿ ಕಡಿಮೆ ದರದಲ್ಲಿ ಊಟ ಸಿಗುತ್ತದೆ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಇದು ಒಬ್ಬರಿಗೆ ಮಾತ್ರ ಸಾಧ್ಯ, ಕುಟುಂಬದೊಂದಿಗೆ ಬದುಕುವುದು ಬೆಂಗಳೂರಿನಲ್ಲಿ ಕಷ್ಟಕರ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಈ ಪ್ರಯೋಗ ನಗರ ಜೀವನದ ಖರ್ಚು ಹಾಗೂ ಬಜೆಟ್ ನಿರ್ವಹಣೆ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

Continue Reading

ಅಪರಾಧ

ಶಕ್ತಿ ಯೋಜನೆ ಹೆಸರಿನಲ್ಲಿ ಲೂಟಿ: BMTC ಸಿಬ್ಬಂದಿ ವಿರುದ್ಧ ಕಠಿಣ ಕ್ರಮ

Published

on

By

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುತ್ತಿದ್ದರೆ, Bangalore Metropolitan Transport Corporation ನಲ್ಲಿ ಕೆಲವು ನೌಕರರು ಇದನ್ನು ದುರುಪಯೋಗ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೆಲವು ನಿರ್ವಾಹಕರು ಪುರುಷ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದರೆಂಬ ಆಘಾತಕಾರಿ ವಿಚಾರ ಪತ್ತೆಯಾಗಿದೆ. ಕನ್ನಡದಲ್ಲಿ ಮಾತ್ರ ಮುದ್ರಿತವಾಗಿರುವ ಟಿಕೆಟ್ ಮಾಹಿತಿಯನ್ನು ಬಳಸಿಕೊಂಡು, ಕನ್ನಡ ಓದಲು ಬಾರದ ಹೊರರಾಜ್ಯದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಈ ದಂಧೆ ನಡೆಸಲಾಗುತ್ತಿತ್ತು.

ಇನ್ನಷ್ಟು ಗಂಭೀರವಾಗಿ, ಅಧಿಕೃತ ಯುಪಿಐ ಕ್ಯೂಆರ್ ಕೋಡ್‌ಗಳನ್ನು ತೆಗೆದುಹಾಕಿ, ತಮ್ಮ ವೈಯಕ್ತಿಕ ಖಾತೆಗಳ ಕ್ಯೂಆರ್ ಕೋಡ್ ಮೂಲಕ ಹಣವನ್ನು ನೇರವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಲಾಗುತ್ತಿತ್ತು. ಈ ಮೂಲಕ ಸಾರಿಗೆ ನಿಗಮದ ಆದಾಯಕ್ಕೂ ನಷ್ಟ ಉಂಟಾಗಿದೆ.

ದೂರುಗಳ ಆಧಾರದ ಮೇಲೆ ನಡೆಸಿದ ತನಿಖೆಯಲ್ಲಿ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಇದರಲ್ಲಿ ನಾಲ್ವರು ಪ್ರಮುಖ ನಿರ್ವಾಹಕರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಅವರ ಖಾತೆಗಳಲ್ಲಿ ಸಾವಿರಾರು ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ನಡೆದಿರುವುದು ದೃಢಪಟ್ಟಿದೆ.

ಈ ಘಟನೆ ಹಿನ್ನೆಲೆ, ಬಿಎಂಟಿಸಿ ಅಧಿಕಾರಿಗಳು ಉಳಿದ ಸಿಬ್ಬಂದಿಗಳ ಮೇಲೂ ನಿಗಾ ವಹಿಸಿದ್ದು, ಇಂತಹ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ, ಸಾರ್ವಜನಿಕರಿಗೆ ನೀಡಲಾಗುತ್ತಿರುವ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ಘಟನೆಗಳು ಸಾರಿಗೆ ವ್ಯವಸ್ಥೆಯ ಮೇಲ್ವಿಚಾರಣೆ ಬಲಪಡಿಸುವ ಅಗತ್ಯವಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

Continue Reading

ದೇಶ

ಜಮೀರ್ ವಿರುದ್ಧ ಮುಸ್ಲಿಂ ನಾಯಕರ ಅಸಮಾಧಾನ: ಕಾಂಗ್ರೆಸ್‌ಗೆ ಹೊಸ ತಲೆನೋವು

Published

on

By

ಬೆಂಗಳೂರು: ದಾವಣಗೆರೆ ಉಪಚುನಾವಣೆ ಮುಗಿದರೂ ಕಾಂಗ್ರೆಸ್ ಪಕ್ಷದ ಒಳಜಗಳ ಮಾತ್ರ ಇನ್ನೂ ಶಮನವಾಗಿಲ್ಲ. Indian National Congress ಒಳಗೆ ಬಂಡಾಯ, ಅಸಮಾಧಾನ ಮತ್ತಷ್ಟು ತೀವ್ರವಾಗುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದ ವಿಚಾರವಾಗಿ ಆರಂಭವಾದ ಅಸಮಾಧಾನ ಈಗ ಚುನಾವಣೆಯ ಬಳಿಕವೂ ಮುಂದುವರಿದಿದೆ.

ಸಚಿವ Zameer Ahmed Khan ವಿರುದ್ಧ ಸ್ವಪಕ್ಷದವರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡದಿರುವುದು ಹಾಗೂ ಮುಸ್ಲಿಂ ನಾಯಕರನ್ನು ಮನವೊಲಿಸಲು ವಿಫಲವಾದ ಕಾರಣ, ಅವರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬರುತ್ತಿದೆ. ಈ ವಿಚಾರವಾಗಿ ಹೈಕಮಾಂಡ್‌ಗೆ ವರದಿ ಕೂಡ ಸಲ್ಲಿಕೆಯಾಗಿದೆ ಎನ್ನಲಾಗಿದೆ.

ಇನ್ನೊಂದೆಡೆ, ಡಿಸಿಎಂ D. K. Shivakumar ಪ್ರತಿಕ್ರಿಯಿಸಿ, ಈ ಸಂಬಂಧ ವರದಿಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳು ಸಹಜವಾದರೂ, ಪಕ್ಷವು ಎಲ್ಲವನ್ನೂ ಗಮನಿಸುತ್ತಿದೆ ಎಂದಿದ್ದಾರೆ.

ಈ ನಡುವೆ ಸಂಪುಟ ಪುನಾರಚನೆ ವಿಚಾರವೂ ಕಾಂಗ್ರೆಸ್‌ನಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಸುಮಾರು 40ಕ್ಕೂ ಹೆಚ್ಚು ಹಿರಿಯ ಶಾಸಕರು ದೆಹಲಿಗೆ ತೆರಳಿ, Mallikarjun Kharge ಹಾಗೂ Rahul Gandhi ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಒತ್ತಾಯ ಮಂಡಿಸಲು ತಯಾರಾಗಿದ್ದಾರೆ.

ಇದರ ಜೊತೆಗೆ, ಮುಖ್ಯಮಂತ್ರಿ Siddaramaiah ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಒಟ್ಟಿನಲ್ಲಿ ದಾವಣಗೆರೆ ಉಪಚುನಾವಣೆ ಕಾಂಗ್ರೆಸ್‌ಗೆ ಒಳಜಗಳದ ಬಾಗಿಲು ತೆರೆದಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಗಳ ಸಾಧ್ಯತೆ ಹೆಚ್ಚಾಗಿದೆ.

Continue Reading

Trending