ಬೆಂಗಳೂರು
ಭ್ರಷ್ಟಾಚಾರ ನಿಗ್ರಹಿಸಲು ಯುವ ಪೀಳಿಗೆಯಲ್ಲಿ ಕಾನೂನಿನ ಅರಿವು ಬೇಕು: ನಿವೃತ್ತ ನ್ಯಾಯಮೂರ್ತಿ ಶ್ರೀಯುತ ಸಂತೋಷ್ ಹೆಗ್ಡೆ
ಬೆಂಗಳೂರು : ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ದಿನಾಚರಣೆ ಹಾಗೂ ಸಂಘಟನೆಯ 5ನೆ ವಾರ್ಷಿಕೋತ್ಸವದ ಅಂಗವಾಗಿ ಆಗಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಶ್ರೀಯುತ ಸಂತೋಷ್ ಹೆಗ್ಡೆ ಯವರು ಮಾತನಾಡಿ ಸಮಾಜದಲ್ಲಿ ನಡೆಯುತ್ತಿರುವ ಲಂಚ ಕೊರತನ ಮತ್ತು ಭ್ರಷ್ಟಾಚಾರ ನಿಗ್ರಹಿಸಲು ಯುವ ಪೀಳಿಗೆಯಲ್ಲಿ ಕಾನೂನಿನ ಅರಿವು ಬೇಕು ಹಾಕು ಯುವಕರು ಈ ಭ್ರಷ್ಟ ವ್ಯವಸ್ಥೆ ವಿರುದ್ದು ಪ್ರಶ್ನೆ ಮಾಡುವ ಅರಿವನ್ನು ಯುವಕರು ಬೆಳೆಸಿಕೊಳ್ಳ ಬೇಕು. ರಾಜಕಾರಣಿ ಮಕ್ಕಳು ರಾಜಕಾರಣಿ ಗಳು ಆಗುವುದು ನಿಲ್ಲಬೇಕು. ಸಮಾಜದ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳು ಮಾತ್ರ ರಾಜಕಾರಣದಲ್ಲಿ ಉಳಿಯಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಮಾಜ ಕಟ್ಟುವಲ್ಲಿ ಯುವಕರು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಬೆಟ್ಟಲ್ಲಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ಸಮಾಜದಲ್ಲಿನ ಭ್ರಷ್ಟಚಾರ ತಡೆಗಟ್ಟಲು ಗ್ರಾಮ ಪಂಚಾಯತಿ ಯಿಂದ ಪ್ರಾರಂಭ ಮಾಡಿ ವಿಧಾನ ಸೌದ ವರೆಗೆ ಭ್ರಷ್ಟ ಚಾರ ನಿರ್ಮೂಲನೆ ಅಭಿಯಾನ ಶುರು ಆಗಬೇಕು. ಹಾಗೂ ಸಾಮಾಜಿಕ ಹೋರಾಟಗಾರರಿಗೆ, ಮಾಹಿತಿ ಹಕ್ಕು ಕಾರ್ಯಕರ್ತರು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕ ಹೋರಾಟ ಮಾಡುವುದರ ಮುಕಾಂತರ ಭ್ರಷ್ಟಚಾರದ ವಿರುದ್ದ ದ್ವನಿ ಆಗಬೇಕು ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಮಾಹಿತಿ ಹಕ್ಕು ಆಯೋಗದ ವತಿಯಿಂದ ಸರ್ಕಾರದ ಖಜಾನೆಗೆ ಅಧಿಕಾರಿಗಳಿಂದ ದಂಡ ತುಂಬಿಸಿದ ಸಾಮಾಜಿಕ ಕಾರ್ಯಕರ್ತರಿಗೆ ‘ವಿಚಾರಕ್ರಾಂತಿ ರತ್ನ ‘ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಾಹಿತಿ ಹಕ್ಕು ಅಧ್ಯಾಯನ ಕೇಂದ್ರದ ವೀರೇಶ್ ಬೆಳ್ಳೂರ್, ಸಂಸ್ಥಾಪಕರಾದ ಹೆಚ್ ಜಿ ರಮೇಶ್ ಕುಣಿಗಲ್, ರಾಜ್ಯಾಧ್ಯಕ್ಷರಾದ ಚೆನ್ನಯ್ಯ ಎಂ ವಸ್ತ್ರದ್, ಸಂಘಟನೆಯ ಓಂಕಾರಪ್ಪ, ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಉಪಸ್ಥಿತರಿದ್ದರು.
ದೇಶ
Bengaluru: ಸಚಿವ ಮುನಿಯಪ್ಪ ಮನೆ ಮುತ್ತಿಗೆ: ಆಟೋ ಚಾಲಕರ ಪ್ರತಿಭಟನೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಸಾವಿರಾರು ಆಟೋ ಚಾಲಕರ ಬದುಕು ಸಂಕಷ್ಟಕ್ಕೀಡಾಗಿದೆ. ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಿಗದೆ ಚಾಲಕರು ಬಂಕ್‌ಗಳ ಮುಂದೆ ಕಿಲೋಮೀಟರ್‌ಗಳಷ್ಟು ಉದ್ದದ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆಗೆ ವಿರೋಧವಾಗಿ ಚಾಲಕರು ಇಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ K. H. Muniyappa ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. “ಗ್ಯಾಸ್ ಸಿಗುತ್ತಿಲ್ಲ, ಸಿಕ್ಕರೂ ಲೀಟರ್‌ಗೆ ₹90 ಬದಲು ₹135 ವರೆಗೆ ವಸೂಲಿ ಮಾಡುತ್ತಿದ್ದಾರೆ” ಎಂದು ಚಾಲಕರು ಆರೋಪಿಸಿದ್ದಾರೆ.
ಮಹಿಳಾ ಆಟೋ ಚಾಲಕರ ಸ್ಥಿತಿ ಮತ್ತಷ್ಟು ದುಃಖಕರವಾಗಿದೆ. “ಮಕ್ಕಳನ್ನು ಮನೆಯಲ್ಲಿ ಬಿಟ್ಟು ಗಂಟೆಗಳ ಕಾಲ ಗ್ಯಾಸ್‌ಗಾಗಿ ಕಾಯಬೇಕು” ಎಂದು ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ. ಈ ನಡುವೆ ಬಂಕ್‌ಗಳಲ್ಲಿ ದಾಸ್ತಾನು ಕೊರತೆಯೇ ಪ್ರಮುಖ ಕಾರಣವಾಗಿದ್ದು, ಹಗಲು-ರಾತ್ರಿ ಎನ್ನದೆ ಚಾಲಕರು ರಸ್ತೆಯಲ್ಲೇ ಕಾಯುವಂತಾಗಿದೆ.
ಪ್ರತಿಭಟನೆಯ ಬಳಿಕ ಪ್ರತಿಕ್ರಿಯಿಸಿದ ಸಚಿವ ಕೆ.ಎಚ್. ಮುನಿಯಪ್ಪ, “ಈ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ. ಎಲ್‌ಪಿಜಿ, ಸಿಎನ್‌ಜಿ ಸೇರಿದಂತೆ ಇಂಧನ ವಿತರಣೆ ಕೇಂದ್ರದ ನಿಯಂತ್ರಣದಲ್ಲಿ ಇದೆ. ಕರ್ನಾಟಕಕ್ಕೆ ಸಮರ್ಪಕ ಪೂರೈಕೆ ಆಗುತ್ತಿಲ್ಲ” ಎಂದು ಆರೋಪಿಸಿದರು. ಈ ಕುರಿತು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿ, ಏಪ್ರಿಲ್ 10 ನಂತರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
ಆದರೆ ಸಚಿವರ ಉತ್ತರದಿಂದ ಅಸಮಾಧಾನಗೊಂಡ ಚಾಲಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. “ನಾವು ರಸ್ತೆಯಲ್ಲೇ ಮಲಗುತ್ತಿದ್ದರೂ ನಮ್ಮ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಇಂಧನ ಅಸ್ಥಿರತೆಯ ನಡುವೆ ಸ್ಥಳೀಯ ಮಟ್ಟದಲ್ಲಿ ಉಂಟಾದ ಈ ಎಲ್‌ಪಿಜಿ ಕೊರತೆ ಆಟೋ ಚಾಲಕರ ಆದಾಯಕ್ಕೆ ದೊಡ್ಡ ಹೊಡೆತ ನೀಡಿದೆ.
ದೇಶ
ವೀರಕುಮಾರರ ತಪಸ್ಸು, ಭಕ್ತಿಯ ತೇಜಸ್ಸು: ಕೆಂಗೇರಿ ಕರಗದ ವೈಶಿಷ್ಟ್ಯ
ಬೆಂಗಳೂರು: ನಗರದ ಕೆಂಗೇರಿಯಲ್ಲಿ ಕ್ಷತ್ರಿಯ (ತಿಗಳ ಕ್ಷತ್ರಿಯ) ಸಮುದಾಯದವರಿಂದ ಆಚರಿಸಲ್ಪಡುವ ದ್ರೌಪದಿ ಅಮ್ಮನವರ ಭವ್ಯ ಕರಗ ಶಕ್ತಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಅನಾದಿಕಾಲದಿಂದಲೂ ನಡೆಯುತ್ತಿರುವ ಈ ಸಂಪ್ರದಾಯಿಕ ಹಬ್ಬದಲ್ಲಿ ಭಕ್ತಿ, ಶಕ್ತಿ ಮತ್ತು ಸಂಸ್ಕೃತಿಯ ಸಮ್ಮಿಳನ ಕಂಡುಬರುತ್ತದೆ.
ಈ ಮಹೋತ್ಸವದ ಅಂಗವಾಗಿ ಹಸಿ ಕರಗವನ್ನು ಮುನ್ನಡೆಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಸಮುದಾಯದವರು Draupadi Amman ಅವರನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ಕರಗ ಪೂಜೆಯಲ್ಲಿ ಕುಲಪುರೋಹಿತರು, ವೀರಕುಮಾರರು ಮತ್ತು ಭಕ್ತರು ಭಾಗವಹಿಸಿ ವಿಶೇಷ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.
ಹಬ್ಬದ ವಿಶೇಷವೆಂದರೆ ವೀರಕುಮಾರರು ಕೈಯಲ್ಲಿ ಖಡ್ಗಗಳನ್ನು ಹಿಡಿದು ಭಕ್ತಿಯ ಸಂಕೇತವಾಗಿ ತಮ್ಮ ಎದೆಗೆ ತಾವೇ ಪ್ರಹಾರ ಮಾಡಿಕೊಳ್ಳುವುದು. ಗಾಯವಾದಲ್ಲಿ ಔಷಧಿಯ ಬದಲು ಅರಿಶಿನವನ್ನು ಬಳಸಿ ದೇವಿಯ ಮೇಲಿನ ಭಕ್ತಿಯನ್ನು ತೋರಿಸುತ್ತಾರೆ.
ರಾತ್ರಿ ಸುಮಾರು ಮೂರು ಗಂಟೆಗೆ ಹೂವಿನ ಕರಗ ಸಿದ್ಧವಾಗುತ್ತಿದ್ದು, ಕೆಂಪು ವಸ್ತ್ರ ಮತ್ತು ಮಂಗಳ ದ್ರವ್ಯಗಳಿಂದ ಅಲಂಕರಿಸಲಾಗುತ್ತದೆ. ಪೂಜಾರಿ ಮಲ್ಲಿಗೆ ಹೂಗಳಿಂದ ಸಿಂಗರಿಸಿಕೊಂಡು ಕರಗವನ್ನು ಹೊತ್ತು ಭಕ್ತಿಭಾವದಿಂದ ನರ್ತನ ಮಾಡುತ್ತಾ ಸಾಗುತ್ತಾರೆ.
ಈ ಕರಗವು ಕೆಂಗೇರಿ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಂಚರಿಸಿ, ನಂತರ ದೇವಸ್ಥಾನಕ್ಕೆ ಮರಳಿ ಪೂಜೆ ಸ್ವೀಕರಿಸುವ ಮೂಲಕ ಮಹೋತ್ಸವ ಮುಕ್ತಾಯಗೊಳ್ಳುತ್ತದೆ.
ಈ ಸಂದರ್ಭದಲ್ಲಿ ಸಮುದಾಯದ ಅನೇಕ ಮುಖಂಡರು ಹಾಗೂ ಭಕ್ತರು ಭಾಗವಹಿಸಿ ಉತ್ಸವಕ್ಕೆ ಭಕ್ತಿ ಭಾವ ತುಂಬಿದರು.
ದೇಶ
ಬೆಂಗಳೂರಿನಲ್ಲಿ ಎಲ್‌ಪಿಜಿ ಸಂಕಷ್ಟ: ಆಟೊ ಚಾಲಕರ ಬದುಕು ಸಂಕಷ್ಟಕ್ಕೆ
ಬೆಂಗಳೂರು: ನಗರದಲ್ಲಿ ಉಂಟಾಗಿರುವ ಎಲ್‌ಪಿಜಿ ಕೊರತೆಯಿಂದ ಆಟೊ ಚಾಲಕರ ಸಮಸ್ಯೆಗಳು ದಿನೇ ದಿನೇ ಗಂಭೀರವಾಗುತ್ತಿವೆ. ಗ್ಯಾಸ್ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಲಭ್ಯವಿರುವ ಬಂಕ್‌ಗಳ ಬಳಿ ಆಟೊ ಚಾಲಕರು ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಂಕ್‌ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ್ದು, ಉಳಿದ ಬಂಕ್‌ಗಳಲ್ಲೂ ‘ನೋ ಸ್ಟಾಕ್’ ಫಲಕಗಳು ಸಾಮಾನ್ಯ ದೃಶ್ಯವಾಗಿವೆ.
ರಾಜಾಜಿನಗರ, ಮತ್ತೀಕೆರೆ, ದಾಸರಹಳ್ಳಿ, ಗುಟ್ಟಹಳ್ಳಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಮಸ್ಯೆ ತೀವ್ರಗೊಂಡಿದೆ. ಬಂಕ್‌ಗಳ ಬಳಿ ಆಟೊಗಳು ಸಾಲುಗಟ್ಟಿ ನಿಲ್ಲುವುದರಿಂದ ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ. ಎಲ್‌ಪಿಜಿ ಕೊರತೆಯಿಂದ ಸಾವಿರಾರು ಆಟೊಗಳು ರಸ್ತೆಗಿಳಿಯಲು ಸಾಧ್ಯವಾಗದೇ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೂ ಒತ್ತಡ ಹೆಚ್ಚಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್ ಪೂರೈಕೆಗೆ ತೀವ್ರ ಹೊಡೆತ ಬಿದ್ದಿದ್ದು, ಆಟೊ ಚಾಲಕರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಗ್ಯಾಸ್ ಬೆಲೆ ಏರಿಕೆಯಿಂದಾಗಿ ಚಾಲಕರು ಕಡಿಮೆ ದೂರಕ್ಕೂ ಪ್ರಯಾಣಿಕರಿಂದ ಹೆಚ್ಚು ಬಾಡಿಗೆ ವಸೂಲು ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೂ ಹೆಚ್ಚುವರಿ ಹೊರೆ ಬೀಳುತ್ತಿದೆ.
ಗ್ಯಾಸ್ ಲಭ್ಯವಿರುವ ಮಾಹಿತಿ ಸಿಕ್ಕ ತಕ್ಷಣ ನೂರಾರು ಆಟೊಗಳು ಬಂಕ್‌ಗಳತ್ತ ಧಾವಿಸುತ್ತಿವೆ. ಪರಿಣಾಮ, ಕೆಲವೇ ಗಂಟೆಗಳಲ್ಲಿ ಸ್ಟಾಕ್ ಖಾಲಿಯಾಗುತ್ತಿದೆ. ಸಿಎನ್‌ಜಿ ಕೊರತೆಯೂ ಕಾಣಿಸಿಕೊಂಡಿರುವುದರಿಂದ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗಿದೆ.
ಇದರಿಂದಾಗಿ ವಿದ್ಯುತ್ ಚಾಲಿತ ಆಟೊಗಳ ಬಳಕೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಇವುಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಪರಿಸ್ಥಿತಿ ಮುಂದುವರಿದರೆ ಅನೇಕ ಆಟೊ ಚಾಲಕರು ವೃತ್ತಿ ತೊರೆಯುವ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.
-
ಚುನಾವಣೆ23 hours agoDavangere By Election 2026 : 25 ಅಭ್ಯರ್ಥಿಗಳ ಕಣ: ಮುಸ್ಲಿಂ ಅಭ್ಯರ್ಥಿಗಳೇ ಗೇಮ್ಚೇಂಜರ್?
-
ದೇಶ21 hours agoಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್?: AI ರೇಸ್ನಲ್ಲಿ ಟೆಕ್ ದೈತ್ಯರ ಹೊಸ ಹೆಜ್ಜೆ
-
ದೇಶ23 hours agoಗಡಿಯಲ್ಲಿ ಹಾವು-ಮೊಸಳೆ ಕಾವಲು?: ಬಿಎಸ್ಎಫ್ ಹೊಸ ಯೋಜನೆ ಚರ್ಚೆಯಲ್ಲಿ
-
ದೇಶ24 hours agoX ನಲ್ಲಿ ವೈರಲ್ ಆದ CA ಕಥೆ: ನಂಬಲೇಬೇಕಾ ಅಥವಾ ಕೇವಲ ಕಥೆಯಾ?
-
ದೇಶ22 hours agoವೀರಕುಮಾರರ ತಪಸ್ಸು, ಭಕ್ತಿಯ ತೇಜಸ್ಸು: ಕೆಂಗೇರಿ ಕರಗದ ವೈಶಿಷ್ಟ್ಯ
-
ಚುನಾವಣೆ21 hours ago‘ಆಪರೇಷನ್ ಸಿಂಧೂರ್’ ವಿವಾದ: ಕಾಂಗ್ರೆಸ್ ವಿರುದ್ಧ ಮೋದಿ ತೀವ್ರ ಆರೋಪ
-
ದೇಶ20 hours agoಹಾರ್ಮುಜ್ ಸಮಸ್ಯೆ ಪರಿಹಾರಕ್ಕೆ ಭಾರತ ಪ್ರಮುಖ ಪಾತ್ರ?: ಇರಾನ್ ವಿಶ್ವಾಸ
-
ದೇಶ22 hours agoಹೊರ್ಮುಜ್ ಜಲಸಂಧಿ ತೆರೆಯಲ್ಲ: ಇರಾನ್ ಕಠಿಣ ನಿಲುವು
