ಸಿನಿಮಾ
ಗಲ್ಲಾಪೆಟ್ಟಿಗೆಯಲ್ಲಿ ಎಲ್ಲ ದಾಖಲೆ ಮುರಿದ ಗದರ್ 2…. ‘ಜವಾನ್’ಗೂ ಶುರುವಾಗಿದೆ ಢವಢವʼ
‘ಗದರ್ 2’ ಚಿತ್ರದ ಎರಡನೇ ಭಾಗವನ್ನು ಜನ ಮೆಚ್ಚಿಕೊಂಡಿದ್ದಾರೆ. ಶೀಘ್ರದಲ್ಲೇ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಸಿನಿಮಾ ಎನ್ನುವ ರೆಕಾರ್ಡ್ ಕೂಡ ಮಾಡಲಿದೆ. ಮೂರನೇ ವಾರದಲ್ಲಿಯೇ 500 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಸಂಚಲನ ಮೂಡಿಸಿದೆ.
ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ ಇತ್ತೀಚಿನ ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ್ದಾರೆ. ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಗದರ್ 2’ ಚಿತ್ರವು ಇನ್ನೂ ಕೂಡ ಬಾಕ್ಸ್ ಆಫೀಸ್ ಅನ್ನು ಆಳುತ್ತಿದೆ. ಚಿತ್ರದ ಒಟ್ಟು ಗಳಿಕೆಯನ್ನು ನೋಡಿದರೆ ಸನ್ನಿ ಡಿಯೋಲ್ ಶೀಘ್ರದಲ್ಲೇ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಇತಿಹಾಸವನ್ನು ಸೃಷ್ಟಿಸಲಿದ್ದಾರೆ.
ಬಾಲಿವುಡ್ ಹಂಗಾಮಾದ ಅಂಕಿ ಅಂಶಗಳ ಪ್ರಕಾರ, ‘ಗದರ್ 2’ ಮೂರನೇ ವಾರದಲ್ಲಿಯೇ 500 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಬಾಕ್ಸ್ ಆಫೀಸ್ನಲ್ಲಿ ಇದುವರೆಗಿನ ಒಟ್ಟು 501.17 ಕೋಟಿ ರೂ. ಗಳಿಕೆ ಮಾಡಿದೆ. ಇನ್ನೊಂದೆಡೆ ಶಾರುಖ್ ಖಾನ್ ಅಭಿನಯದ ‘ಪಠಾಣ್’ ದಾಖಲೆಯನ್ನು ಮುರಿದಿದೆ ಎನ್ನುವ ಮಾತು ಕೇಳಿ ರ್ತಿದೆ. ‘ಗದರ್ 2’ ವೇಗವನ್ನು ನೋಡಿದರೆ, ಶೀಘ್ರದಲ್ಲೇ ಬಾಲಿವುಡ್ ನ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಬಹುದು. ಮತ್ತೊಂದೆಡೆ, ಶಾರುಖ್ ಅವರ ಬಹುನಿರೀಕ್ಷಿತ ಚಿತ್ರ ‘ಜವಾನ್’ ಕೂಡ ಸೆಪ್ಟೆಂಬರ್ 7 ರಂದು ಥಿಯೇಟರ್ಗಳಿಗೆ ಬರಲಿದೆ. ಹೀಗಿರುವಾಗ ಬಾಕ್ಸ್ ಆಫೀಸ್ ನಲ್ಲಿ ಗದರ್ 2 ಚಿತ್ರಕ್ಕೆ ‘ಜವಾನ್’ ಕೂಡ ಪೈಪೋಟಿ ನೀಡಬೇಕಿದೆ. ಗದರ್ 2’ ಚಿತ್ರದ ಗಳಿಕೆಯ ವೇಗವನ್ನು ನೋಡಿದರೆ ‘ಜವಾನ್’ ಗಳಿಕೆಯ ಮೇಲೆ ಸ್ವಲ್ಪವಾದರೂ ಪ್ರಭಾವ ಬೀರಬಹುದು ಎನ್ನುವ ಮಾತು ಕೇಳಿಬರ್ತಿದೆ.ಜವಾನ್ ಸಿನಿಮಾ ಗದರ್ ದಾಖಲೆ ಮುರಿಯುತ್ತಾ ಎಂದು ಶಾರುಖ್ ಫ್ಯಾನ್ಸ್ ಕಾಯ್ತಿದ್ದಾರೆ.
ದೇಶ
ತಮಿಳು ಚಿತ್ರರಂಗಕ್ಕೆ ಸಿಎಂ ವಿಜಯ್ ಬಂಪರ್ ಗಿಫ್ಟ್: ದಿನಕ್ಕೆ 5 ಶೋಗಳಿಗೆ ಗ್ರೀನ್ ಸಿಗ್ನಲ್!
ಚೆನ್ನೈ: Vijay ನೇತೃತ್ವದ ತಮಿಳುನಾಡು ಸರ್ಕಾರ ಚಿತ್ರೋದ್ಯಮಕ್ಕೆ ಮಹತ್ವದ ಸಿಹಿಸುದ್ದಿ ನೀಡಿದೆ. ಹೊಸ ಸಿನಿಮಾ ಬಿಡುಗಡೆಯಾದ ಮೊದಲ ಒಂದು ವಾರದವರೆಗೆ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಸರ್ಕಾರ ಅಧಿಕೃತ ಅನುಮತಿ ನೀಡಿದ್ದು, ನಿರ್ಮಾಪಕರು ಹಾಗೂ ಚಿತ್ರಮಂದಿರ ಮಾಲೀಕರಲ್ಲಿ ಸಂತಸ ಮೂಡಿಸಿದೆ.
ಚಿತ್ರರಂಗದ ಪ್ರತಿನಿಧಿಗಳು, ಚಲನಚಿತ್ರ ಮಂಡಳಿಯ ಪದಾಧಿಕಾರಿಗಳು ಹಾಗೂ ಚಿತ್ರೋದ್ಯಮದ ಪ್ರಮುಖರು ಮೇ 16ರಂದು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡಿ ಹಲವು ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಿದ್ದರು. ಚಿತ್ರಮಂದಿರಗಳ ಆರ್ಥಿಕ ಚೇತರಿಕೆ ಮತ್ತು ಪ್ರೇಕ್ಷಕರ ಅನುಕೂಲಕ್ಕಾಗಿ ದಿನಕ್ಕೆ ಐದು ಶೋಗಳಿಗೆ ಅವಕಾಶ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು.
ಈ ಮನವಿಯನ್ನು ಪರಿಗಣಿಸಿದ ಸರ್ಕಾರ, ಚಿತ್ರೋದ್ಯಮದ ಹಿತದೃಷ್ಟಿಯಿಂದ ಹೊಸ ಆದೇಶ ಹೊರಡಿಸಿದೆ. ಈ ಕುರಿತು Tamil Nadu Chief Minister’s Office ತನ್ನ ಅಧಿಕೃತ ‘ಎಕ್ಸ್’ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದೆ.
ಈ ಮೊದಲು ಜಾರಿಯಲ್ಲಿದ್ದ ಚಿತ್ರಮಂದಿರಗಳ ನಿಯಮ 14-ಎ ಪ್ರಕಾರ, ತಮಿಳುನಾಡಿನಲ್ಲಿ ದಿನಕ್ಕೆ ಕೇವಲ ನಾಲ್ಕು ಪ್ರದರ್ಶನಗಳಿಗೆ ಮಾತ್ರ ಅವಕಾಶವಿತ್ತು. ಹಬ್ಬ-ಹರಿದಿನಗಳು ಅಥವಾ ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ವಿಶೇಷ ಅನುಮತಿ ಪಡೆದು ಐದನೇ ಪ್ರದರ್ಶನ ನಡೆಸಲಾಗುತ್ತಿತ್ತು.
ಆದರೆ ಹೊಸ ನಿಯಮದಂತೆ, ಯಾವುದೇ ಹೊಸ ಸಿನಿಮಾ ಬಿಡುಗಡೆಯಾದ ಬಳಿಕ ಮೊದಲ ಏಳು ದಿನಗಳವರೆಗೆ ಪ್ರತಿದಿನ ಐದು ಪ್ರದರ್ಶನಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಕ್ರಮದಿಂದ ಹೊಸ ಸಿನಿಮಾಗಳಿಗೆ ಹೆಚ್ಚಿನ ಆದಾಯ ಸಾಧ್ಯವಾಗಲಿದ್ದು, ಚಿತ್ರಮಂದಿರಗಳ ವ್ಯವಹಾರಕ್ಕೂ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ತಮಿಳು ಚಿತ್ರರಂಗದ ನಿರ್ಮಾಪಕರು, ವಿತರಕರು ಮತ್ತು ಥಿಯೇಟರ್ ಮಾಲೀಕರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಇದು ಚಿತ್ರೋದ್ಯಮಕ್ಕೆ “ಬೂಸ್ಟರ್ ಡೋಸ್” ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶ
ಬಸ್ ಕಂಡಕ್ಟರ್ನಿಂದ ಸೂಪರ್ ಸ್ಟಾರ್ ತನಕ: ರಜನಿಕಾಂತ್ ಅಪರೂಪದ ಫೋಟೋ ವೈರಲ್
ಬೆಂಗಳೂರು: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ Rajinikanth ಅವರ ಹಳೆಯ ದಿನಗಳ ಅಪರೂಪದ ಗುರುತಿನ ಚೀಟಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸಿನಿಮಾಗಳಿಗೆ ಬರುವ ಮೊದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದ ಈ ಐಡಿ ಕಾರ್ಡ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಬೆಂಗಳೂರು ಸಾರಿಗೆ ಸಂಸ್ಥೆಯ ಡಿಪೋ ಸಂಖ್ಯೆ 4ರಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಜನಿಕಾಂತ್ ಅವರ ಅಧಿಕೃತ ಐಡಿ ಕಾರ್ಡ್ ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರ ಮೂಲ ಹೆಸರು ‘ಶಿವಾಜಿ ರಾವ್ ಗಾಯಕ್ವಾಡ್’ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಯುವಕನಾಗಿದ್ದ ಸಂದರ್ಭದ ಫೋಟೋ ಕೂಡ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಒಂದು ಕಾಲದಲ್ಲಿ ಮೆಜೆಸ್ಟಿಕ್ನಿಂದ ಶ್ರೀನಗರ ಮಾರ್ಗದ ರೂಟ್ ನಂ.10ಎ ಬಸ್ನಲ್ಲಿ ಟಿಕೆಟ್ ನೀಡುತ್ತಿದ್ದ ರಜನಿಕಾಂತ್, ತಮ್ಮ ವಿಶಿಷ್ಟ ಸ್ಟೈಲ್ ಹಾಗೂ ಸಿಳ್ಳೆ ಮೂಲಕ ಪ್ರಯಾಣಿಕರ ಗಮನ ಸೆಳೆಯುತ್ತಿದ್ದರು ಎನ್ನುವ ನೆನಪುಗಳನ್ನು ಈ ಫೋಟೋ ಮತ್ತೆ ಜೀವಂತಗೊಳಿಸಿದೆ.
ಕೇವಲ ₹275 ಸಂಬಳದಿಂದ ಜೀವನ ಆರಂಭಿಸಿದ್ದ ಶಿವಾಜಿ ರಾವ್ ಗಾಯಕ್ವಾಡ್ ಅವರು ಇಂದು ಭಾರತೀಯ ಸಿನಿರಂಗದ ಅತಿ ದೊಡ್ಡ ತಾರೆಯರಲ್ಲಿ ಒಬ್ಬರಾಗಿರುವುದು ಅಭಿಮಾನಿಗಳಿಗೆ ಪ್ರೇರಣೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು “ಇದೇ ನಿಜವಾದ ಲೆಜೆಂಡ್ ಪಯಣ” ಎಂದು ಕಾಮೆಂಟ್ ಮಾಡುತ್ತಿದ್ದು, ಹಳೆಯ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ರಜನಿಕಾಂತ್ ಅವರ ಸರಳ ಜೀವನದಿಂದ ಆರಂಭವಾದ ಯಶೋಗಾಥೆ ಮತ್ತೆ ವೈರಲ್ ಆಗುತ್ತಿದ್ದಂತೆ, ಅವರ ಅಭಿಮಾನಿಗಳು ನೆಚ್ಚಿನ ನಟನ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದಾರೆ.
ದೇಶ
‘ಡಾನ್ 3’ ತೊರೆದ ರಣವೀರ್ ಸಿಂಗ್ಗೆ ಸಂಕಷ್ಟ; FWICEನಿಂದ ಪರೋಕ್ಷ ಬ್ಯಾನ್?
ಮುಂಬೈ: ಬಾಲಿವುಡ್ ನಟ Ranveer Singh ಅವರಿಗೆ ಇದೀಗ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಕಾಣಿಸುತ್ತಿದೆ. ಬಹುನಿರೀಕ್ಷಿತ Don 3 ಸಿನಿಮಾದಿಂದ ದಿಢೀರನೆ ಹೊರನಡೆದ ಹಿನ್ನೆಲೆಯಲ್ಲಿ, ಸಿನಿಮಾ ನೌಕರರ ಒಕ್ಕೂಟವಾದ Federation of Western India Cine Employees ನಟನ ವಿರುದ್ಧ ಅಸಹಕಾರ ತೋರಲು ನಿರ್ಧರಿಸಿದೆ.
Farhan Akhtar ನಿರ್ದೇಶನದ ಈ ಚಿತ್ರವನ್ನು Excel Entertainment ನಿರ್ಮಿಸುತ್ತಿತ್ತು. ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಣವೀರ್ ಸಿಂಗ್ ಸಿನಿಮಾ ತೊರೆದಿರುವುದು ನಿರ್ಮಾಣ ಸಂಸ್ಥೆಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿದೆ ಎಂದು ಹೇಳಲಾಗಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಹಾಗೂ ಯೋಜನೆಗಳಿಗೆ ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿತ್ತು ಎನ್ನಲಾಗಿದೆ.
FWICE ಮುಖ್ಯ ಸಲಹೆಗಾರ Ashoke Pandit ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, “ಚಿತ್ರೀಕರಣಕ್ಕೆ ಕೆಲವೇ ದಿನಗಳಿರುವಾಗ ನಟರು ಸಿನಿಮಾದಿಂದ ಹೊರನಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
FWICE ಅಧ್ಯಕ್ಷ ಬಿ.ಎನ್. ತಿವಾರಿ, ಪ್ರಧಾನ ಕಾರ್ಯದರ್ಶಿ ಅಶೋಕ್ ದುಬೆ ಹಾಗೂ ಖಜಾಂಚಿ ಗಂಗೇಶ್ವರಲಾಲ್ ಶ್ರೀವಾಸ್ತವ್ ಭಾಗವಹಿಸಿದ್ದ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಮೊದಲು ವಿವಾದವನ್ನು ಪರಿಹರಿಸಲು ನಿರ್ಮಾಪಕರ ಸಂಘದ ಮಟ್ಟದಲ್ಲೂ ರಾಜಿ ಸಂಧಾನದ ಪ್ರಯತ್ನ ನಡೆದಿತ್ತು. ರಣವೀರ್ ಸಿಂಗ್ ಮತ್ತು ಎಕ್ಸೆಲ್ ಎಂಟರ್ಟೈನ್ಮೆಂಟ್ ನಡುವೆ ನಷ್ಟ ಪರಿಹಾರ ಹಾಗೂ ಸೆಟಲ್ಮೆಂಟ್ ಕುರಿತು ಮಾತುಕತೆಗಳು ನಡೆದರೂ, ಅವು ಫಲಕಾರಿಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಇದೀಗ ಈ ಅಸಹಕಾರ ಕ್ರಮ ರಣವೀರ್ ಸಿಂಗ್ ಅವರ ಮುಂದಿನ ಸಿನಿಮಾಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇತ್ತೀಚೆಗೆ ಬಿಡುಗಡೆಯಾದ ‘ಧುರಂಧರ್’ ಚಿತ್ರದ ಯಶಸ್ಸಿನ ಬಳಿಕ ಅವರ ಬೇಡಿಕೆ ಹೆಚ್ಚಾಗಿದ್ದರೂ, ಈ ಬೆಳವಣಿಗೆ ಬಾಲಿವುಡ್ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರಣವೀರ್ ಸಿಂಗ್ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.
-
ದೇಶ9 hours agoಕರ್ನಾಟಕಕ್ಕೆ ಹೊಸ ಸಿಎಂ? ಡಿಕೆ ಶಿವಕುಮಾರ್ ಪಾಲಿಗೆ ‘ಶುಭ ಶುಕ್ರವಾರ’ ಫಿಕ್ಸ್!
-
ದೇಶ12 hours agoಬಸ್ ಕಂಡಕ್ಟರ್ನಿಂದ ಸೂಪರ್ ಸ್ಟಾರ್ ತನಕ: ರಜನಿಕಾಂತ್ ಅಪರೂಪದ ಫೋಟೋ ವೈರಲ್
-
ಬೆಂಗಳೂರು10 hours ago“ನಾಳೆ ಎಲ್ಲ ಹೇಳುತ್ತೇನೆ”: ರಾಜಕೀಯ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಸಸ್ಪೆನ್ಸ್ ಉತ್ತರ!
-
ಕ್ರೀಡೆ9 hours ago“That’s a silly question!”: ಆರ್ಸಿಬಿ ಸೋಲಿನ ಬಳಿಕ ಪತ್ರಕರ್ತರ ಮೇಲೆ ಫಿಲಿಪ್ಸ್ ಸಿಡಿತ
-
ದೇಶ12 hours agoಸಿಎಂ ಬದಲಾವಣೆಯ ಬೆನ್ನಲ್ಲೇ ಡಿಕೆಶಿಗೆ ಮತ್ತೊಂದು ಶಾಕ್?
-
ದೇಶ11 hours agoಅಯ್ಯನ ಕೆರೆ ಕಲುಷಿತಗೊಳಿಸಲು ಯತ್ನ: ಸಿಬ್ಬಂದಿಯ ದಿಟ್ಟ ಕ್ರಮಕ್ಕೆ ಭಾರಿ ಮೆಚ್ಚುಗೆ
-
ಅಪರಾಧ13 hours agoಪಿಣರಾಯಿ ವಿಜಯನ್ ನಿವಾಸದ ಮೇಲೆ ಇಡಿ ದಾಳಿ: ಕೇರಳ ರಾಜಕೀಯದಲ್ಲಿ ಭಾರೀ ಸಂಚಲನ!
-
ಕ್ರೀಡೆ12 hours ago‘ಈ ಸಲ ಕಪ್ ನಮ್ದೇ’ ಘೋಷಣೆ ಜೋರಾಗಿದೆ: ಆರ್ಸಿಬಿ ಫೈನಲ್ಗೆ ಎಂಟ್ರಿ
