Connect with us

ರಾಜ್ಯ

ಕೊಡಗು ಬಂದ್‌ʼಗೆ ನೀರಸ ಪ್ರತಿಕ್ರಿಯೆ – ಎಂದಿನಂತೆ ಜನ ಸಂಚಾರ

Published

on

ಮಡಿಕೇರಿ: ವೀರ ಸೇನಾನಿಗಳಿಗೆ ಅಪಮಾನ ಹೇಳಿಕೆಯನ್ನು ಖಂಡಿಸಿ ಸರ್ವಜನಾಂಗಗಳ ಒಕ್ಕೂಟ ಕರೆ ನೀಡಿದ್ದ ʻಕೊಡಗು ಬಂದ್ʼಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ಕೆಲ ದಿನಗಳ‌ ಹಿಂದೆ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ (Field Marshal Cariappa), ಜನರಲ್ ತಿಮ್ಮಯ್ಯ ಅವರ ಬಗ್ಗೆ ವಕೀಲರೊಬ್ಬರು ಆಕ್ಷೇಪರ್ಹ ಸಂದೇಶವನ್ನು ವಾಟ್ಸಪ್ ಗ್ರೂಪ್‌ನಲ್ಲಿ ಹರಿ ಬಿಟ್ಟಿದ್ದು, ಕೊಡಗಿನ ಸೇನಾನಿಗಳಿಗೆ ಮಾಡಿದ ಅಪಮಾನ ಎಂದು ಆಕ್ರೋಶಕ್ಕೆ ಕಾರಣವಾಗಿತ್ತು.

ಬಳಿಕ ವಕೀಲರನ್ನ ಬಂಧಿಸಿ ಕೆಲವೇ ಸಮಯದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಕೊಡಗಿನ ಮುಂಖಡರು ಪ್ರತಿಭಟನೆಗಿಳಿದಿದ್ದರು. ಇಂದು ಸಹ ವಕೀಲರನ್ನ ಗಡಿಪಾರು ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸರ್ವಜನಾಂಗಗಳ ಒಕ್ಕೂಟ ಅರ್ಧದಿನದ ʻಕೊಡಗು ಬಂದ್ʼಗೆ ಕರೆ ನೀಡಿತ್ತು. ಆರಂಭದಲ್ಲಿ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದವು. ಆದ್ರೆ ಇಂದು ಕೆಲವರು ಬಂದ್ ನೈತಿಕ ಬೆಂಬಲ‌ ಮಾತ್ರ ವ್ಯಕ್ತಪಡಿಸಿದ್ದಾರೆ.

ಸರ್ವಜನಾಂಗಗಳ ಒಕ್ಕೂಟ ನೀಡಿದ ಬಂದ್‌ಗೆ ಮಡಿಕೇರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾನೆಯಿಂದಲೇ ಅಂಗಡಿ ಮುಂಗಟ್ಟುಗಳು ಓಪನ್ ಆಗಿದ್ದು ಜನತೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದಾರೆ. ಇನ್ನೂ ಸರ್ಕಾರಿ ಬಸ್ ಕಚೇರಿಗಳು ಶಾಲೆಗಳು ಎಂದಿನಂತೆ ಆರಂಭವಾಗುತ್ತಿದೆ. ಆದ್ರೆ ಖಾಸಗಿ ವಲಯದ ಶಾಲೆಗಳು ಬಸ್‌ಗಳು ಗೊಂದಲದಲ್ಲಿಯೆ ರಸ್ತೆಗಿಳಿಯುತ್ತಿವೆ‌.

ಸದ್ಯದ ಮಟ್ಟಿಗೆ ಜಿಲ್ಲೆಗೆ ಬಂದ್ ಬೀಸಿ ತಟ್ಟಿಲ್ಲ ಯಥಾ ಸ್ಥಿತಿ ಕಾಯ್ದುಕೊಂಡಿದ್ದು ಹತ್ತು ಗಂಟೆಯ ನಂತರ ಯಾವ ರೀತಿ ಬಂದ್ ವಾತವರಣ ಇರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಸದ್ಯ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದು ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದೆ.

ದೇಶ

ರಾಜಾಜಿನಗರ ಶಾಸಕರ ಕಚೇರಿ ಮುಂದೆ ಹೈಡ್ರಾಮಾ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ

Published

on

ಬೆಂಗಳೂರು: ನಗರದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಮುಂಭಾಗದಲ್ಲಿ ಸೋಮವಾರ ನಡೆದ ‘ಜನರೊಂದಿಗೆ ಜನಸೇವಕ – ಜನಸ್ಪಂದನಾ’ ಕಾರ್ಯಕ್ರಮದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಶಾಸಕ ಎಸ್. ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದ ವೇಳೆ **ಎನ್‌ಎಸ್‌ಯುಐ (NSUI)**ಗೆ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಸಹ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಗೆ ಮುಂದಾದರು.

ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗಿದ ಪರಿಣಾಮ ಕೆಲಕಾಲ ಪರಿಸ್ಥಿತಿ ಬಿಗಡಾಯಿಸಿತು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಪ್ರತಿಭಟನೆ ನಡೆಸುತ್ತಿದ್ದ ಎನ್‌ಎಸ್‌ಯುಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ಸ್ಥಳದಿಂದ ತೆರವುಗೊಳಿಸಿದರು.

ಪೊಲೀಸರ ತ್ವರಿತ ಕ್ರಮದಿಂದ ಯಾವುದೇ ಅಹಿತಕರ ಘಟನೆ ನಡೆಯದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಘಟನೆಯ ಹಿನ್ನೆಲೆಯಲ್ಲಿ ಶಾಸಕರ ಕಚೇರಿ ಸುತ್ತಮುತ್ತ ಕೆಲಕಾಲ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿತ್ತು.

ರಾಜಾಜಿನಗರದಲ್ಲಿ ನಡೆದ ಈ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಜನಸ್ಪಂದನಾ ಕಾರ್ಯಕ್ರಮದ ವೇಳೆ ಉಂಟಾದ ಪ್ರತಿಭಟನೆ ಗಮನ ಸೆಳೆದಿದೆ. ಪ್ರತಿಭಟನೆಗೆ ಕಾರಣ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು ಮುಂದಿಟ್ಟ ಬೇಡಿಕೆಗಳ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Continue Reading

ದೇಶ

ಆರು ತಿಂಗಳ ಬಳಿಕ ಕೆಆರ್‌ಎಸ್‌ ಜಲಾಶಯಕ್ಕೆ ಜೀವಕಳೆ! ಒಳಹರಿವು ಏರಿಕೆಯಿಂದ ಮಂಡ್ಯ ಜನರಲ್ಲಿ ಸಂತಸ

Published

on

ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಎಂದೇ ಕರೆಯಲ್ಪಡುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಬರೊಬ್ಬರಿ ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಈ ಸುದ್ದಿ ರೈತರು ಮತ್ತು ಜಿಲ್ಲೆಯ ಜನರಲ್ಲಿ ಹೊಸ ಆಶಾಭಾವ ಮೂಡಿಸಿದೆ.

ಒಳಹರಿವಿನಲ್ಲಿ ಗಮನಾರ್ಹ ಏರಿಕೆ

ನಿನ್ನೆ ಕೇವಲ 1,449 ಕ್ಯೂಸೆಕ್‌ ಇದ್ದ ಒಳಹರಿವಿನ ಪ್ರಮಾಣ ಇಂದು 4,291 ಕ್ಯೂಸೆಕ್‌ಗೆ ಜಿಗಿದಿದೆ. ಕಾವೇರಿ ಜಲಾನಯನ ಪ್ರದೇಶದ ಕೆಲವೆಡೆ ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಈ ಏರಿಕೆ ಕಂಡುಬಂದಿದ್ದು, ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನ ಜಲಾಶಯ ಮಟ್ಟ – ಸಂಪೂರ್ಣ ಮಾಹಿತಿ

124.80 ಅಡಿ ಗರಿಷ್ಠ ಮಟ್ಟದ ಸಾಮರ್ಥ್ಯದ ಈ ಜಲಾಶಯದಲ್ಲಿ ಸದ್ಯ 80.90 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದಿಂದ ಪ್ರಸ್ತುತ 764 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕೆಆರ್‌ಎಸ್‌ ಜಲಾಶಯದ ಇಂದಿನ ಸ್ಥಿತಿಗತಿ:

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 80.90 ಅಡಿ
  • ಒಳಹರಿವು: 4,291 ಕ್ಯೂಸೆಕ್
  • ಹೊರಹರಿವು: 764 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 11.487 ಟಿಎಂಸಿ

ರೈತರಿಗೆ ನಿರೀಕ್ಷೆಯ ಬೆಳಕು

ಕಳೆದ ಆರು ತಿಂಗಳಿನಿಂದ ಒಳಹರಿವಿನ ಕೊರತೆಯಿಂದ ಆತಂಕದಲ್ಲಿದ್ದ ಮಂಡ್ಯ ಭಾಗದ ರೈತರಿಗೆ ಈ ಬೆಳವಣಿಗೆ ನಿರೀಕ್ಷೆಯ ಬೆಳಕು ಮೂಡಿಸಿದೆ. ಮುಂಗಾರು ಮಳೆ ಮುಂದುವರಿದಲ್ಲಿ ಒಳಹರಿವಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Continue Reading

ದೇಶ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮುಚ್ಚಳ: ಪುಣೆಗೆ ರೆಡ್ ಅಲರ್ಟ್ ಘೋಷಣೆ

Published

on

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಭಾರೀ ಮಳೆಯಿಂದ ಮುಂಬೈ (Mumbai) ಮತ್ತು ಪುಣೆ (Pune) ನಡುವಿನ ರಸ್ತೆ ಹಾಗೂ ರೈಲು ಸಂಪರ್ಕ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಂಜಾನೆ ಕರ್ಜತ್-ಲೋನಾವಾಲಾ (Karjat-Lonavala) ನಡುವಿನ ಬೋರ್ ಘಾಟ್ (Bhor Ghat) ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಖಂಡಾಲಾ (Khandala) ಮತ್ತು ಮಂಕಿ ಹಿಲ್ (Monkey Hill) ನಡುವಿನ ರೈಲ್ವೆ ಹಳಿಗಳ ಮೇಲೆ ಬೃಹತ್ ಬಂಡೆಗಳು ಕುಸಿದು ಬಿದ್ದ ಪರಿಣಾಮ ಮೂರೂ ಪ್ರಮುಖ ರೈಲು ಮಾರ್ಗಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇದರ ಪರಿಣಾಮವಾಗಿ ಡೆಕ್ಕನ್ ಕ್ವೀನ್ (Deccan Queen), ಸಿಂಹಗಡ ಎಕ್ಸ್‌ಪ್ರೆಸ್ (Sinhagad Express) ಸೇರಿದಂತೆ 16ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಸಾವಿರಾರು ಪ್ರಯಾಣಿಕರು ವಿವಿಧ ರೈಲು ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ.

ಇದೇ ವೇಳೆ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಹೊಸ ಸುರಂಗ ಮಾರ್ಗದ ಸಮೀಪವೂ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ಮುಚ್ಚಲಾಗಿದೆ. ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲೂ ಮಳೆ ನೀರು ತುಂಬಿಕೊಂಡಿದ್ದು, ವಾಹನಗಳು ಹಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿವೆ. ಹಲವೆಡೆ ಕಿಲೋಮೀಟರ್‌ಗಟ್ಟಲೆ ವಾಹನಗಳ ಸಾಲು ಕಂಡುಬಂದಿದೆ.

ಹವಾಮಾನ ಇಲಾಖೆ ಮುಂದಿನ ಕೆಲವು ಗಂಟೆಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಪುಣೆ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಸಾರ್ವಜನಿಕರು ಅನಗತ್ಯವಾಗಿ ಮುಂಬೈ-ಪುಣೆ ನಡುವೆ ಪ್ರಯಾಣ ಮಾಡಬಾರದು ಎಂದು ಪೊಲೀಸರು ಹಾಗೂ ಆಡಳಿತ ಎಚ್ಚರಿಕೆ ನೀಡಿದ್ದಾರೆ. ರಕ್ಷಣಾ ಸಿಬ್ಬಂದಿ ಭೂಕುಸಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.

Continue Reading

Trending