Connect with us

ದೇಶ

ಪ್ರಧಾನಿ ಮೋದಿ ರೋಡ್ ಶೋ ನಲ್ಲಿ ಭಾಗಿಯಾದ ಕರ್ನಲ್ ಖುರೇಷಿ ಕುಟುಂಬ

Published

on

ಗುಜರಾತ್: ಆಪರೇಷನ್ ಸಿಂಧೂರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ತವರು ರಾಜ್ಯ ಗುಜರಾತ್ ನಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಲ್ ಖುರೇಷಿ ಕುಟುಂಬವೂ ಕೂಡ ಭಾಗಿಯಾಗಿದ್ದರು,
ಈ ವೇಳೆ ಮಾತನಾಡಿದ ಸೋಫಿಯಾ ಖುರೇಷಿ ಅವರ ಸಹೋದರ ಮೊಹಮ್ಮದ್ ಸಂಜಯ್ ಖುರೇಷಿ ಅವರು ಪ್ರಧಾನಿ ಮೋದಿಯವರನ್ನು ಹತ್ತಿರದಿಂದ ನೋಡಿರುವುದು ಬಹಳ ಸಂತೋಷವಾಗಿದೆ, ಸೋಫಿಯಾಗೆ ಈ ಅವಕಾಶ ನೀಡಿದ್ದಕ್ಕಾಗಿ ನಮ್ಮ ರಕ್ಷಣಾ ಪಡೆಗೆ ಧನ್ಯವಾದ ಹೇಳುತ್ತೇನೆ.
ನಮ್ಮ ಮಹಿಳೆಯರು ಪುರುಷರಿಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂಬುದನ್ನು ಶತ್ರುಗಳಿಗೂ ತೋರಿಸಿದ್ದಾರೆ ಎಂದು ಸಂಜಯ್ ಖುರೇಷಿ ಹೇಳಿದರು,

ಚುನಾವಣೆ

ತಮಿಳುನಾಡು ಚುನಾವಣೆ: ಕೇರಳದಲ್ಲಿ ವೇತನ ಸಹಿತ ರಜೆ ಘೋಷಣೆ

Published

on

ತಮಿಳುನಾಡಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 23ರಂದು ನಡೆಯಲಿರುವ ಮತದಾನದ ಹಿನ್ನೆಲೆ, ಕೇರಳದಲ್ಲಿರುವ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ತಮಿಳುನಾಡು ಮೂಲದ ಮತದಾರರಿಗೆ ವೇತನ ಸಹಿತ ರಜೆ ನೀಡುವುದಾಗಿ ಘೋಷಿಸಲಾಗಿದೆ.

ಕೇರಳ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆಯು ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 135B ಅನ್ವಯ ಈ ಆದೇಶ ಹೊರಡಿಸಿದೆ. ಇದರ ಪ್ರಕಾರ, ಯಾವುದೇ ವ್ಯಾಪಾರ, ಕೈಗಾರಿಕೆ ಅಥವಾ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅರ್ಹ ಮತದಾರರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸುವುದು ಕಡ್ಡಾಯವಾಗಿದೆ. ಈ ದಿನದ ರಜೆಗೆ ಸಂಬಂಧಿಸಿದಂತೆ ಯಾವುದೇ ವೇತನ ಕಡಿತ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ದಿನಗೂಲಿ ಹಾಗೂ ಕ್ಯಾಶುವಲ್ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೂ ಈ ಸೌಲಭ್ಯ ಅನ್ವಯವಾಗಲಿದೆ. ಅವರು ಅಂದು ಕೆಲಸಕ್ಕೆ ಹಾಜರಾಗದಿದ್ದರೂ ಪೂರ್ಣ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಭಾರತೀಯ ಚುನಾವಣಾ ಆಯೋಗವು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿ, ತಮ್ಮ ಕ್ಷೇತ್ರದಿಂದ ಹೊರಗಡೆ ಕೆಲಸ ಮಾಡುತ್ತಿರುವ ಮತದಾರರು ಸಹ ಈ ರಜೆಯ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದೆ.

ಶಿಫ್ಟ್ ಆಧಾರದ ಮೇಲೆ ಕೆಲಸ ಮಾಡುವ ಉದ್ಯೋಗಿಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಆದರೆ, ಉದ್ಯೋಗಿಯ ಅನುಪಸ್ಥಿತಿಯಿಂದ ಸಂಸ್ಥೆಗೆ ಗಂಭೀರ ನಷ್ಟವಾಗುವ ಸಾಧ್ಯತೆ ಇದ್ದರೆ ಮಾತ್ರ ವಿನಾಯಿತಿ ನೀಡಲಾಗಿದೆ.

ಒಂದು ವೇಳೆ ಉದ್ಯೋಗದಾತರು ಈ ನಿಯಮವನ್ನು ಉಲ್ಲಂಘಿಸಿದರೆ, ಕಾನೂನು ಕ್ರಮ ಮತ್ತು ದಂಡ ವಿಧಿಸುವ ಅವಕಾಶವಿದೆ. ಈ ಕ್ರಮವು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬ ಮತದಾರನು ಪಾಲ್ಗೊಳ್ಳುವಂತೆ ಮಾಡಲು ಸಹಕಾರಿ ಎನ್ನಲಾಗಿದೆ.

Continue Reading

ದೇಶ

‘ಆಪರೇಷನ್ ಸಿಂಧೂರ’ ಪ್ರತಿಕಾರ, ಆದರೆ ಕುಟುಂಬದ ನೋವು ಅಳಿಯಲೇ ಇಲ್ಲ

Published

on

ಬೆಂಗಳೂರು: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಂದಿಗೆ ಒಂದು ವರ್ಷ ಪೂರ್ತಿಯಾಗಿದೆ. ಕಳೆದ ವರ್ಷ ಬೈಸರನ್ ಕಣಿವೆಯಲ್ಲಿ ನಡೆದ ಈ ಭೀಕರ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ಸೇರಿ ಒಟ್ಟು 26 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಬೆಂಗಳೂರಿನ ಭರತ್ ಭೂಷಣ್ ಅವರ ಕುಟುಂಬದಲ್ಲಿ ಇಂದಿಗೂ ನೋವು ಕಡಿಮೆಯಾಗಿಲ್ಲ.

ಮತ್ತಿಕೆರೆಯ ನಿವಾಸಿಯಾಗಿದ್ದ ಭರತ್ ಭೂಷಣ್, ಪತ್ನಿ ಡಾ. ಸುಜಾತ ಹಾಗೂ ಮಗುವಿನೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಆಗ ಉಗ್ರರು ನಡೆಸಿದ ದಾಳಿಯಲ್ಲಿ ಭರತ್ ಭೂಷಣ್ ತಲೆಗೆ ಗುಂಡು ಹೊಡೆದು ಹತ್ಯೆ ಮಾಡಲಾಗಿತ್ತು. ಈ ಘಟನೆ ಅವರ ಕುಟುಂಬವನ್ನು ತತ್ತರಗೊಳಿಸಿದ್ದು, ಒಂದು ವರ್ಷ ಕಳೆದರೂ ಆ ನೆನಪು ಇನ್ನೂ ಕಾಡುತ್ತಿದೆ.

ಭರತ್ ಭೂಷಣ್ ಅವರ ಪತ್ನಿ ಡಾ. ಸುಜಾತ, “ಪ್ರತಿಕ್ಷಣವೂ ಆ ಘಟನೆ ನೆನಪಾಗುತ್ತದೆ. ನಾವು ಸುರಕ್ಷಿತವಾಗಿದ್ದೇವೆ ಎಂಬ ನಂಬಿಕೆಯಿಂದಲೇ ಪ್ರವಾಸಕ್ಕೆ ಹೋಗಿದ್ದೆವು. ಆದರೆ ಆ ದಿನ ನಡೆದದ್ದು ಜೀವನವನ್ನೇ ಬದಲಿಸಿತು” ಎಂದು ಕಣ್ಣೀರಿಟ್ಟಿದ್ದಾರೆ. ಮಗ ಹಾಗೂ ಕುಟುಂಬ ಸದಸ್ಯರ ಮನಸ್ಸಿನಲ್ಲಿ ನೋವು ಇನ್ನೂ ತಾಜಾ ಇದೆ ಎಂದು ಹೇಳಿದ್ದಾರೆ.

ಈ ದಾಳಿಗೆ ಭಾರತ ‘ಆಪರೇಷನ್ ಸಿಂಧೂರ’ ಮೂಲಕ ಪ್ರತಿಕಾರ ತೀರಿಸಿಕೊಂಡಿದ್ದರೂ, ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಈ ನೋವು ಮರೆಯಲಾಗದ ಗಾಯವಾಗಿದೆ. ಪ್ರವಾಸಿಗರ ಭದ್ರತೆ ಕುರಿತು ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು ಎಂಬ ಒತ್ತಾಯವೂ ಕುಟುಂಬದಿಂದ ಕೇಳಿಬಂದಿದೆ.

ಒಂದು ವರ್ಷದ ಬಳಿಕವೂ ಈ ಘಟನೆ ದೇಶದ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆ ಎಬ್ಬಿಸುತ್ತಿದ್ದು, ಭಯೋತ್ಪಾದನೆ ವಿರುದ್ಧ ಹೋರಾಟದ ಅಗತ್ಯವನ್ನು ಮತ್ತೆ ನೆನಪಿಸುತ್ತದೆ.

Continue Reading

ದೇಶ

ಬೆಂಗಳೂರು ಐಆರ್‌ಆರ್ ಯೋಜನೆಗೆ ಮರುಜೀವ: ನಾಲ್ಕನೇ ರಿಂಗ್ ರಸ್ತೆ ಸಿದ್ಧತೆ

Published

on

ಬೆಂಗಳೂರು, ಏ.22: ಸುಮಾರು ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಇಂಟರ್‌ಮೀಡಿಯೇಟ್ ರಿಂಗ್ ರೋಡ್ (ಐಆರ್‌ಆರ್) ಯೋಜನೆಗೆ ರಾಜ್ಯ ಸರ್ಕಾರ ಮರುಚಾಲನೆ ನೀಡಿದೆ. ಈ ಯೋಜನೆ ಜಾರಿಯಾದರೆ, ಬೆಂಗಳೂರಿಗೆ ನಾಲ್ಕನೇ ರಿಂಗ್ ರಸ್ತೆ ಲಭ್ಯವಾಗಲಿದೆ. ನಗರ ಹೊರವಲಯದ 12 ಉಪನಗರಗಳನ್ನು ಸಂಪರ್ಕಿಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಜಾರಿಗೊಳಿಸಲಿದೆ.

210 ಕಿ.ಮೀ ಉದ್ದದ ಈ ಕಾರಿಡಾರ್‌ನ್ನು ಮೊದಲಿಗೆ 2007ರಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ ಭೂಸ್ವಾಧೀನ ಹಾಗೂ ಕಾನೂನು ಅಡಚಣೆಗಳಿಂದಾಗಿ ಯೋಜನೆ ವಿಳಂಬವಾಗಿತ್ತು. ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಯೋಜನೆಗೆ ಮರುಜೀವ ದೊರೆತಿದೆ.

ಕನಕಪುರ, ಹಾರೋಹಳ್ಳಿ, ಬಿಡದಿ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಆನೇಕಲ್ ಸೇರಿದಂತೆ ಪ್ರಮುಖ ಹೊರವಲಯ ಪ್ರದೇಶಗಳನ್ನು ಸಂಪರ್ಕಿಸುವ ಮೂಲಕ ಸಂಚಾರ ವ್ಯವಸ್ಥೆ ಸುಧಾರಣೆಗೆ ಇದು ನೆರವಾಗಲಿದೆ. ಹೈಕೋರ್ಟ್ ಸೂಚನೆಗಳ ನಂತರ ಮಾರ್ಗ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದ್ದು, 2023ರ ಪರಿಷ್ಕೃತ ವಿನ್ಯಾಸವನ್ನು ಕೈಬಿಡಲಾಗಿದೆ.

ಹೊಸ ವಿನ್ಯಾಸದಲ್ಲಿ ಅಸ್ತಿತ್ವದಲ್ಲಿರುವ ಬಡಾವಣೆಗಳಿಗೆ ತೊಂದರೆಯಾಗದಂತೆ ಹಾಗೂ ಇತರ ರಸ್ತೆ ಜಾಲಗಳೊಂದಿಗೆ ಹೊಂದಾಣಿಕೆ ಸಾಧಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಕೆಲವು ಪ್ರದೇಶಗಳಲ್ಲಿ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಜೊತೆಗೆ ಸಂಪರ್ಕ ಕಲ್ಪಿಸಲಾಗುತ್ತದೆ.

ಭೂಸ್ವಾಧೀನ ವೆಚ್ಚವನ್ನು ಕಡಿಮೆ ಮಾಡಲು ಡೆವಲಪರ್‌ಗಳಿಂದ ಉಚಿತವಾಗಿ ಭೂಮಿ ಪಡೆಯುವ ಯೋಜನೆಯೂ ರೂಪಿಸಲಾಗಿದೆ. ಈಗಾಗಲೇ 175 ಎಕರೆ ಭೂಮಿಯನ್ನು ಬಿಎಂಆರ್‌ಡಿಎ ಹೊಂದಿದ್ದು, ಅಗತ್ಯವಿದ್ದರೆ ಹೆಚ್ಚುವರಿ ಭೂಸ್ವಾಧೀನ ಕೈಗೊಳ್ಳಲಿದೆ.

ಈ ಯೋಜನೆ ಜಾರಿಗೆ ಬಂದರೆ, ಬೆಂಗಳೂರು ನಗರದಲ್ಲಿ ಟ್ರಾಫಿಕ್ ದಟ್ಟಣೆ ತಗ್ಗಿಸುವುದರ ಜೊತೆಗೆ ಉಪನಗರಗಳ ಅಭಿವೃದ್ಧಿಗೆ ಹೊಸ ದಾರಿ ತೆರೆದಿಡಲಿದೆ.

Continue Reading

Trending