ದೇಶ
ಟರ್ಕಿಯಲ್ಲಿ F-16 ಯುದ್ಧವಿಮಾನ ಪತನ: ಓರ್ವ ಪೈಲಟ್ ಮೃತ್ಯು
ಅಂಕಾರ/ವಾಷಿಂಗ್ಟನ್: Turkish Air Forceಗೆ ಸೇರಿದ ಅಮೆರಿಕ ನಿರ್ಮಿತ F-16 Fighting Falcon ಯುದ್ಧವಿಮಾನ ಪತನಗೊಂಡು ಓರ್ವ ಪೈಲಟ್ ಸಾವನ್ನಪ್ಪಿರುವ ಘಟನೆ ಟರ್ಕಿಯ Balikesir ನಗರದಲ್ಲಿ ನಡೆದಿದೆ.
ಬುರ್ಸಾ–ಇಜ್ಮಿರ್ ಹೆದ್ದಾರಿ ಸಮೀಪ ಈ ದುರಂತ ಸಂಭವಿಸಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಮತ್ತು ಆಂಬುಲೆನ್ಸ್ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ವಿಮಾನದ ಅವಶೇಷಗಳು ರಸ್ತೆಯ ಮೇಲೆ ಚದುರಿಕೊಂಡಿರುವುದು ಕಾಣಿಸಿಕೊಂಡಿದೆ.
ಗವರ್ನರ್ ಅಧಿಕೃತ ಹೇಳಿಕೆ
ಬಲಿಕೇಸಿರ್‌ನ 9ನೇ ಮುಖ್ಯ ಜೆಟ್ ಬೇಸ್ ಕಮಾಂಡ್‌ಗೆ ಸೇರಿದ F-16 ವಿಮಾನ ಫೆಬ್ರವರಿ 23ರಂದು ನಸುಕಿನ 12:50ರ ಸುಮಾರಿಗೆ ಮಿಷನ್ ಹಾರಾಟದ ವೇಳೆ ಅಪಘಾತಕ್ಕೀಡಾಗಿದೆ ಎಂದು ಗವರ್ನರ್ Ismail Ustaoglu ತಿಳಿಸಿದ್ದಾರೆ. “ನಮ್ಮ ಪೈಲಟ್ ಹುತಾತ್ಮರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ” ಎಂದು ಸಂತಾಪ ಸೂಚಿಸಿದ್ದಾರೆ.
ರೇಡಿಯೋ ಸಂಪರ್ಕ ಕಳೆದುಕೊಂಡ ವಿಮಾನ
Turkish Ministry of National Defense ತಿಳಿಸಿದಂತೆ, ಬೆಳಗ್ಗೆ 12:56ರಿಂದ ವಿಮಾನ ರೇಡಿಯೋ ಮತ್ತು ಟ್ರ್ಯಾಕಿಂಗ್ ಸಂಪರ್ಕ ಕಳೆದುಕೊಂಡಿತ್ತು. ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸಿ ಬಳಿಕ ಪತನಗೊಂಡಿರುವುದು ದೃಢಪಟ್ಟಿತು.
ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ತಂಡಗಳು ತನಿಖೆ ನಡೆಸುತ್ತಿದ್ದು, ಅಪಘಾತದ ಮೂಲ ಕಾರಣವನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
ದಲಿತರನ್ನು ಸಿಎಂ ಮಾಡಿ ಎಂದ ಆರ್ ಅಶೋಕ್
ನಾಯಕತ್ವ ಬದಲಾವಣೆ, ಮಂತ್ರಿ ಸ್ಥಾನಕ್ಕಾಗಿ ಶಾಸಕರ ಪತ್ರ, ದಲಿತ ಸಿಎಂ ಕೂಗಿನ ನಡುವೆ ಕೆಪಿಸಿಸಿ ಅಧ್ಯಕ್ಷ ಪಟ್ಟದ ಕಿತ್ತಾಟವೂ ಮುನ್ನಲೆಗೆ ಬರುತ್ತಿದೆ. ಕಾಂಗ್ರೆಸ್ ಮನೆಯೊಳಗಿನ ಬೆಂಕಿಗೆ ವಿಪಕ್ಷ ನಾಯಕ ಆರ್.ಅಶೋಕ್ ತುಪ್ಪ ಸುರಿದಿದ್ದಾರೆ. ದಲಿತರ ಪರ ಎನ್ನುತ್ತೀರಿ, ದಲಿತರನ್ನೇ ಸಿಎಂ ಮಾಡಿ ಎಂದಿದ್ದಾರೆ.
ಹೆಚ್ಚಿದ ಡಿಸಿಎಂ ಡಿಕೆಶಿ ಬೆಂಬಲಿಗರ ಒತ್ತಡ
ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಜ್ವಾಲೆ ನಿಗಿನಿಗಿ ಎನ್ನುತ್ತಿರುವುದು ದೂರದಿಂದಲೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದೆಡೆ ಬಜೆಟ್‌ಗೂ ಮುಂಚೆಯೇ ನಾಯಕತ್ವ ವಿಚಾರ ಇತ್ಯರ್ಥ ಆಗ್ಬೇಕು ಎಂದು ಡಿಕೆಶಿ ಪಟ್ಟು ಹಿಡಿದು ಕುಳಿತಿದ್ದಾರೆ. ಮತ್ತೊಂದೆಡೆ ಮಾರ್ಚ್ 6ಕ್ಕೆ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ದಲಿತಾಸ್ತ್ರ, ಅಹಿಂದಸ್ತ್ರಗಳೂ ಪ್ರಯೋಗವಾಗುತ್ತಿವೆ. ಹೀಗಾಗಿ ಡಿಕೆಶಿ ಬೆಂಬಲಿತ ಶಾಸಕರು ನೇರಾನೇರವಾಗಿ ಹೈಕಮಾಂಡ್‌ಗೆ ಡೆಡ್ಲೈನ್ ಕೊಡುವ ಕೆಲಸ ಮಾಡುತ್ತಿದ್ದಾರೆ.
ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋಡೋಣ: ಪರಮೇಶ್ವರ್
ಒಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು ತಮ್ಮ ನಾಯಕನ ವಿರುದ್ಧ ನಿತ್ಯವೂ ಒಂದಿಲ್ಲ ಒಂದು ರೀತಿ ಬ್ಯಾಟ್ ಬೀಸುತ್ತಿದ್ದಾರೆ. ಇದರ ಮಧ್ಯೆಯೇ ಗೃಹ ಸಚಿವ ಡಾ. ಜಿ ಪರಮೇಶ್ವರ್, ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಹೊಟ್ಟೆ ತುಂಬಿದವರಿಗೆ ಅಗತ್ಯವಿಲ್ಲ: ಕದಲೂರು
ನಾಯಕತ್ವ ಬದಲಾವಣೆ ಗೊಂದಲದಿಂದಾಗಿ ಸಂಪುಟ ಪುನಾರಚನೆಗೂ ಗ್ರಹಣ ಹಿಡಿದಿದೆ. ಡಜನ್‌ಗೂ ಹೆಚ್ಚು ಸಚಿವಾಕಾಂಕ್ಷಿಗಳು ಮಂತ್ರಿ ಆಗಬೇಕು ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ ಮೊದಲ ಬಾರಿ ಗೆದ್ದ 31 ಶಾಸಕರು ನಮ್ಮಲ್ಲಿ ಐವರಿಗೆ ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಶಾಸಕ ಕದಲೂರು ಉದಯ್, ಕೆಲ ಸಚಿವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ. ಹೊಟ್ಟೆ ತುಂಬಿದವರಿಗೆ ಅಗತ್ಯವಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಹೊಸಬರನ್ನು ನಿರ್ಲಕ್ಷಿಸಬೇಡಿ: ರವಿ ಗಣಿಗ
ಇತ್ತ ಶಾಸಕ ರವಿ ಗಣಿಗ ನಾನೂ ಪತ್ರಕ್ಕೆ ಸಹಿ ಹಾಕಿದ್ದೇನೆ. ಹೊಸದಾಗಿ ಗೆದ್ದಿದ್ದೇವೆ ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡಬೇಡಿ. ಪ್ರತಿಭಾವಂತರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
‘ಮೊದಲ ಬಾರಿಗ ಗೆದ್ದವರೆಲ್ಲರೂ ಅರ್ಹರೇ’
ಮೊದಲ ಬಾರಿಗೆ ಗೆದ್ದಿರುವ ಶಾಸಕರಿಗೆ ಸಚಿವ ನೀಡಬೇಕು ಎಂಬ ಕೂಗಿಗೆ ಮಧುಗಿರಿ ಕಾಂಗ್ರೆಸ್ ಶಾಸಕ ಕೆಎನ್ ರಾಜಣ್ಣ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಅತ್ತ ಗೃಹ ಸಚಿವ ಪರಮೇಶ್ವರ್ ಸಹ ಗೆದ್ದವರೆಲ್ಲರೂ ಅರ್ಹರೇ ಎಂದು ಹೇಳಿದ್ದಾರೆ.
ನಾನು ಮಂತ್ರಿ ಮಂಡಲ ಮಾಡುತ್ತೇನೆ ಎಂದಿಲ್ಲ: ಡಿಕೆಶಿ
ಹೊಸ ಪೀಳಿಗೆ ಬೆಳೆಯಬೇಕು ಎಂದಿರುವ ಡಿಕೆ ಶಿವಕುಮಾರ್, ನಾನು ಮಂತ್ರಿಮಂಡಲ ಮಾಡುತ್ತೇನೆ ಎಂದು ಹೇಳಿಲ್ಲ. ಸಿಎಂ ರಚನೆ ಮಾಡುತ್ತಾರೆ. ಲಾಬಿ ಮಾಡುವವರು ಮಾಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ದೇಶ
ಪ್ರಮಾಣವಚನ ಸಮಾರಂಭದ ಭದ್ರತೆಗಾಗಿ ಸರ್ಕಾರಿ ನೌಕರರಿಗೆ ವಿಶೇಷ ರಜೆ ಘೋಷಣೆ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಸಂಜೆ 4:05 ಗಂಟೆಗೆ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಸರ್ಕಾರ ಭದ್ರತಾ ಹಾಗೂ ಸಂಚಾರ ನಿರ್ವಹಣೆಗೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಎಂಎಸ್ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ಪ್ರಮಾಣವಚನ ಸಮಾರಂಭದ ವೇಳೆ ಲೋಕಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಜನಸಂದಣಿ ಮತ್ತು ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಮಾಣವಚನ ಸಮಾರಂಭಕ್ಕೆ ಸುಮಾರು 800 ವಿಐಪಿಗಳಿಗೆ ಆಹ್ವಾನ ನೀಡಲಾಗಿದ್ದು, ಕಾಂಗ್ರೆಸ್ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ಭಾಗವಹಿಸುವ ಸಾಧ್ಯತೆ ಇದೆ. ಇಂಡಿಯಾ ಮೈತ್ರಿಕೂಟದ ಹಲವು ಪ್ರಮುಖ ಮುಖಂಡರು ಸಹ ಸಮಾರಂಭದಲ್ಲಿ ಹಾಜರಾಗುವ ನಿರೀಕ್ಷೆಯಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸುಮಾರು 2,200 ಪಾಸ್‌ಗಳನ್ನು ವಿತರಿಸಲಾಗಿದ್ದು, ಸಮಾರಂಭದ ಹಿನ್ನೆಲೆಯಲ್ಲಿ ಲೋಕಭವನ ಸುತ್ತಮುತ್ತ ವಿವಿಐಪಿ ಸಂಚಾರ ಗಣನೀಯವಾಗಿ ಹೆಚ್ಚಾಗಲಿದೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.
ಇದೇ ವೇಳೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸಂಜೆ ವೇಳೆಗೆ ಜನದಟ್ಟಣೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮತ್ತು ಅಗತ್ಯವಿದ್ದಲ್ಲಿ ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ರಾಜಕೀಯವಾಗಿ ಮಹತ್ವದ ಈ ಸಮಾರಂಭಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.
ಕ್ರೀಡೆ
ಸರಳ ಉಡುಪಿನಲ್ಲಿ ಆಶ್ರಮಕ್ಕೆ ಆಗಮಿಸಿದ ವಿರಾಟ್-ಅನುಷ್ಕಾ; ಫೋಟೋಗಳಿಗೆ ಭಾರಿ ಮೆಚ್ಚುಗೆ
ಲಕ್ನೋ: ಐಪಿಎಲ್ 2026ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆಧ್ಯಾತ್ಮಿಕ ಪಯಣ ಕೈಗೊಂಡಿದ್ದಾರೆ. ಈ ದಂಪತಿ ಸೋಮವಾರ ವೃಂದಾವನದಲ್ಲಿರುವ ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಮಹಾರಾಜರ ‘ರಾಧಾ ಕೇಳಿ ಕುಂಜ್’ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಆಶ್ರಮಕ್ಕೆ ಆಗಮಿಸಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಹಾರಾಜರ ದರ್ಶನ ಪಡೆದು ಕೆಲ ಸಮಯ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಭೇಟಿ ಬಳಿಕ ಆಶ್ರಮದಿಂದ ಹೊರಬರುತ್ತಿರುವ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿರಾಟ್ ಮತ್ತು ಅನುಷ್ಕಾ ವೃಂದಾವನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅವರು ಹಲವು ಬಾರಿ ಪ್ರೇಮಾನಂದ್ ಮಹಾರಾಜರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಜೀವನದ ಪ್ರಮುಖ ಘಟ್ಟಗಳು ಹಾಗೂ ವೃತ್ತಿಜೀವನದ ಮಹತ್ವದ ಸಂದರ್ಭಗಳಲ್ಲಿ ಈ ದಂಪತಿ ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯುವುದು ವಿಶೇಷವಾಗಿದೆ.
ಈ ಬಾರಿ ಕೂಡ ಎಂದಿನಂತೆ ಯಾವುದೇ ವಿಶೇಷ ಭದ್ರತಾ ಪ್ರದರ್ಶನವಿಲ್ಲದೆ ಸರಳ ಉಡುಪಿನಲ್ಲಿ ಆಶ್ರಮಕ್ಕೆ ಆಗಮಿಸಿದ ವಿರಾಟ್ ಮತ್ತು ಅನುಷ್ಕಾ, ತಮ್ಮ ಸರಳತೆ ಮೂಲಕ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ಭಕ್ತಿ ಹಾಗೂ ವಿನಯಶೀಲತೆಯನ್ನು ಮೆಚ್ಚಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ಆರ್‌ಸಿಬಿ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವ ವೇಳೆಯಲ್ಲೇ ಕೊಹ್ಲಿ ಆಧ್ಯಾತ್ಮಿಕ ಆಶೀರ್ವಾದ ಪಡೆಯಲು ತೆರಳಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಆಸಕ್ತಿ ಮೂಡಿಸಿದೆ. ಸದ್ಯ ಅವರ ವೃಂದಾವನ ಭೇಟಿ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ದೇಶ
‘ಚೋರ್, ಚೋರ್’ ಘೋಷಣೆಗಳ ನಡುವೆ ಅಭಿಷೇಕ್ ಓಟ; ಬಿಜೆಪಿ-ಟಿಎಂಸಿ ವಾಕ್ಸಮರ ತೀವ್ರ
ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದ್ದು, ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಬಿಜೆಪಿ ಶಾಸಕಿ ರತ್ನಾ ದೇವ್‌ನಾಥ್ ನೀಡಿರುವ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಕೋಲ್ಕತ್ತಾದ ಸೋನಾರ್‌ಪುರದಲ್ಲಿ ನಡೆದ ಪ್ರತಿಭಟನೆಯ ವೇಳೆ ಅಭಿಷೇಕ್ ಬ್ಯಾನರ್ಜಿ ಮೇಲೆ ಮೊಟ್ಟೆ ಹಾಗೂ ಕಲ್ಲು ತೂರಾಟ ನಡೆದ ಘಟನೆಗೆ ಸಂಬಂಧಿಸಿದಂತೆ ರತ್ನಾ ದೇವ್‌ನಾಥ್ ಸಾರ್ವಜನಿಕರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಭಿಷೇಕ್ ಬ್ಯಾನರ್ಜಿ ಅವರ ತ್ವಚೆ ಮತ್ತು ಕೂದಲಿನ ಆರೈಕೆಯನ್ನು ಸೋನಾರ್‌ಪುರದ ಜನರು ಮಾಡಿದ್ದಾರೆ” ಎಂದು ವ್ಯಂಗ್ಯವಾಡಿದ್ದು, ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ತಮ್ಮ ಕೃತ್ಯಗಳ ಫಲವನ್ನು ಪ್ರತಿಯೊಬ್ಬರೂ ಅನುಭವಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ಟಿಎಂಸಿ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ರತ್ನಾ ದೇವ್‌ನಾಥ್, ರಾಜ್ಯದ ಜನರು ದೀರ್ಘಕಾಲದ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಹಿಂಸಾಚಾರ ಮತ್ತು ರಾಜಕೀಯ ದೌರ್ಜನ್ಯಗಳ ಬಗ್ಗೆ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದಿದ್ದ ತರಬೇತಿ ವೈದ್ಯೆಯ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಅವರು, ತಮ್ಮ ಕುಟುಂಬ ಅನುಭವಿಸಿದ ನೋವನ್ನು ಸ್ಮರಿಸಿ ಭಾವುಕರಾದರು. ಈ ಪ್ರಕರಣದ ತನಿಖೆ ಮತ್ತು ನ್ಯಾಯದ ವಿಚಾರದಲ್ಲಿ ಆಡಳಿತದ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.
ಇತ್ತ, ಸೋನಾರ್‌ಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಭೇಟಿ ವೇಳೆ ಕೆಲ ಪ್ರತಿಭಟನಾಕಾರರು ‘ಚೋರ್, ಚೋರ್’ ಘೋಷಣೆಗಳನ್ನು ಕೂಗಿದರೆಂದು ವರದಿಯಾಗಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು.
ಈ ಘಟನೆಯನ್ನು ಟಿಎಂಸಿ ಪಕ್ಷ ಬಿಜೆಪಿ ಪ್ರೇರಿತ ರಾಜಕೀಯ ದಾಳಿ ಎಂದು ಆರೋಪಿಸಿದ್ದು, ಬಿಜೆಪಿ ಮಾತ್ರ ಇದು ಜನರ ಸ್ವಾಭಾವಿಕ ಆಕ್ರೋಶದ ಪ್ರತಿಫಲನ ಎಂದು ಪ್ರತಿಪಾದಿಸಿದೆ. ಈ ಬೆಳವಣಿಗೆಗಳು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿವೆ.
-
ದೇಶ3 hours agoಅಮಿತ್ ಷಾ ಭೇಟಿಗೆ ದೆಹಲಿಗೆ ಅಣ್ಣಾಮಲೈ ದೌಡು; ಬಿಜೆಪಿ ತೊರೆಯುವ ಚರ್ಚೆ ತೀವ್ರ
-
ದೇಶ3 hours agoನೆತನ್ಯಾಹು ವಿರುದ್ಧ ಟ್ರಂಪ್ ಆಕ್ರೋಶ: ‘ನಿನಗೆ ಹುಚ್ಚು ಹಿಡಿದಿದ್ಯಾ?’ ಎಂದು ದೂರವಾಣಿಯಲ್ಲೇ ತರಾಟೆ
-
ದೇಶ2 hours ago‘ಚೋರ್, ಚೋರ್’ ಘೋಷಣೆಗಳ ನಡುವೆ ಅಭಿಷೇಕ್ ಓಟ; ಬಿಜೆಪಿ-ಟಿಎಂಸಿ ವಾಕ್ಸಮರ ತೀವ್ರ
-
ದೇಶ3 hours agoಜಮೀರ್ ನಿವಾಸಕ್ಕೆ ಡಿ.ಕೆ. ಸುರೇಶ್ ದಿಢೀರ್ ಭೇಟಿ: ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ ಲೆಕ್ಕಾಚಾರ!
-
ದೇಶ2 hours agoಪ್ರಮಾಣವಚನ ಸಮಾರಂಭದ ಭದ್ರತೆಗಾಗಿ ಸರ್ಕಾರಿ ನೌಕರರಿಗೆ ವಿಶೇಷ ರಜೆ ಘೋಷಣೆ
-
ಕ್ರೀಡೆ2 hours agoಸರಳ ಉಡುಪಿನಲ್ಲಿ ಆಶ್ರಮಕ್ಕೆ ಆಗಮಿಸಿದ ವಿರಾಟ್-ಅನುಷ್ಕಾ; ಫೋಟೋಗಳಿಗೆ ಭಾರಿ ಮೆಚ್ಚುಗೆ
