crcket
ಮ್ಯಾಕ್ಸ್‌ವೆಲ್ ದ್ವಿಶತಕದ ಆಟಕ್ಕೆ ಕಿಂಗ್ ಕೊಹ್ಲಿ ಕ್ಲೀನ್ ಬೌಲ್ಡ್
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಎಬ್ಬಿಸಿದ ಸುನಾಮಿಗೆ ಇಡೀ ಕ್ರಿಕೆಟ್ ಲೋಕವೇ ದಂಗಾಗಿ ಹೋಗಿದೆ. ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ದ್ವಿಶತಕದ ಇನ್ನಿಂಗ್ಸ್ ಆಡಿದ ಮ್ಯಾಕ್ಸ್ವೆಲ್ಗೆ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರರೆಲ್ಲ ಸಲಾಂ ಹೊಡೆದಿದ್ದಾರೆ. ಮ್ಯಾಕ್ಸ್‌ವೆಲ್ ಅವರ ಸಿಡಿಲಬ್ಬರ್ ಇನ್ನಿಂಗ್ಸ್ ನೋಡಿದ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ವಾಸಿಂ ಅಕ್ರಮ್, ಮಿಸ್ಬಾ ಉಲ್ ಹಕ್, ಡೇಲ್ ಸ್ಟೇಯ್ನ್ ಅವರಂತಹ ದಿಗ್ಗಜರು ತಮ್ಮ ಕ್ರಿಕೆಟ್ ಜೀವನದಲ್ಲಿ ಇಂತಹ ಇನ್ನಿಂಗ್ಸ್ ನೋಡಿರಲಿಲ್ಲ ಎಂದಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಇನ್ನಿಂಗ್ಸ್ ಎಷ್ಟು ಅದ್ಭುತವಾಗಿತ್ತು ಎಂದರೆ 49 ಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿ ಕೂಡ ಆಶ್ಚರ್ಯಚಕಿತರಾಗಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮ್ಯಾಕ್ಸ್ವೆಲ್ರನ್ನು ಹಾಡಿ ಹೊಗಳಿದ್ದಾರೆ.ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಹೊಗಳಿ ವಿಶೇಷವಾದ ಕಾಮೆಂಟ್ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮ್ಯಾಕ್ಸ್‌ವೆಲ್ ಅವರ ಫೋಟೋವನ್ನು ಹಂಚಿಕೊಂಡಿರುವ ಕೊಹ್ಲಿ, ‘ನಿನ್ನಿಂದ ಮಾತ್ರ ಇದು ಸಾಧ್ಯ’ ಎಂದು ಬರೆದುಕೊಂಡಿದ್ದಾರೆ.
crcket
ಕ್ಯಾಪ್ಟನ್ಸಿಯಲ್ಲಿ ವಿಶೇಷ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!
2022ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಂತರ ಭಾರತದ ಟಿ20 ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದ ಅನುಭವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಇದೀಗ ಕಮ್‌ಬ್ಯಾಕ್ ಮಾಡಿದ್ದಾರೆ. ಪ್ರವಾಸಿ ಅಫಘಾನಿಸ್ತಾನ ಎದುರು ನಡೆಯುತ್ತಿರುವ ಮೊತ್ತ ಮೊದಲ ದ್ವಿಪಕ್ಷೀಯ ಟಿ20 ಕ್ರಿಕೆಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದ ರೋಹಿತ್ ಜೊತೆಗೆ ಕ್ಯಾಪ್ಟನ್ಸಿ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಗುರುವಾರ (ಜ.11) ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕನಾಗಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ.
ಮೊಹಾಲಿ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬರೋಬ್ಬರಿ 14 ತಿಂಗಳ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಪ್ರವಾಸಿ ಅಫಘಾನಿಸ್ತಾನ ಎದುರು ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಹಣಾಹಣಿ ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಗುರುವಾರ (ಜ.11) ನಡೆದು, ಈ ಪಂದ್ಯದಲ್ಲಿ ಕಣಕ್ಕಿಳಿದ ರೋಹಿತ್ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಈಗ 36 ವರ್ಷ, 256 ದಿನಗಳ ವಯಸ್ಸಿನ ಹಿರಿಯ ಬ್ಯಾಟರ್ ಪಾಲಾಗಿದೆ. ಈ ಮೂಲಕ ಹಿರಿಯ ಓಪನರ್ ಶಿಖರ್ ಧವನ್ ಅವರ ಹೆಸರಲ್ಲಿದ್ದ ದಾಖಲೆಯನ್ನು ರೋಹಿತ್ ಅಳಿಸಿಹಾಕಿದ್ದಾರೆ.
crcket
ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಕ್ರಿಕೆಟಿಗ ಮುಹಮ್ಮದ್ ಶಮಿ
ದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಅವರಿಗೆ ಇಂದು ಅರ್ಜುನ ಪ್ರಶಸ್ತಿ ಪ್ರದಾನ ಮಾಡಿದರು. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮುಹಮ್ಮದ್ ಶಮಿ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಕೇವಲ ಏಳು ಪಂದ್ಯಗಳಲ್ಲಿ 24 ವಿಕೆಟ್ ಗಳನ್ನು ಕಬಳಿಸುವ ಮೂಲಕ ಶಮಿ ತಮ್ಮ ಏಕದಿನ ವಿಶ್ವಕಪ್ 2023 ಯಾತ್ರೆ ಅನ್ನು ಯಶಸ್ವಿಯಾಗಿ ಮುಗಿಸಿದ್ದರು.
“ಈ ಪ್ರಶಸ್ತಿಯು ನನ್ನ ಕನಸಾಗಿತ್ತು. ಹಲವಾರು ಮಂದಿ ತಮ್ಮ ಜೀವಿತಾವಧಿ ಮುಗಿಸಿದರೂ ಈ ಪ್ರಶಸ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಈ ಪ್ರಶಸ್ತಿಗೆ ನನ್ನನ್ನು ನಾಮಕರಣ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ” ಎಂದು ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಾರಂಭಕ್ಕೂ ಮುನ್ನ ಮುಹಮ್ಮದ್ ಶಮಿ ಸಂತಸ ವ್ಯಕ್ತಪಡಿಸಿದರು. ಮುಹಮ್ಮದ್ ಶಮಿ ಅವರು ವಿಶ್ವಕಪ್ ಕ್ರೀಡಾಕೂಟದ ಆರಂಭಿಕ ನಾಲ್ಕು ಪಂದ್ಯಗಳಿಂದ ಆಡುವ ಹನ್ನೊಂದು ಮಂದಿ ತಂಡದಿಂದ ಹೊರಗಿದ್ದರು. ಆದರೆ, ಹಾರ್ದಿಕ್ ಪಾಂಡ್ಯ ಗಾಯಾಳುವಾಗಿದ್ದರಿಂದ ಶಮಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆತಿತ್ತು. ತಮ್ಮ ಮೊದಲ ಪಂದ್ಯದಲ್ಲೇ ನ್ಯೂಝಿಲೆಂಡ್ ತಂಡದ ವಿರುದ್ಧ 5 ವಿಕೆಟ್ ಗಳನ್ನು ಕಿತ್ತು ಶಮಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು. ಅಲ್ಲಿಂದಾಚೆಗೆ ಶಮಿ ದಾಖಲೆಯ ಓಟ ಓಡಿದರು. ಕೇವಲ ಏಳು ಪಂದ್ಯಗಳಿಂದ 24 ವಿಕೆಟ್ ಗಳನ್ನು ಪಡೆದು ಮಿಂಚಿದ್ದರು.
crcket
35 ವರ್ಷಗಳ ಬಳಿಕ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕಲರವ..
ಭಾರತದ ಮುಕುಟ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿತ್ತು. ಆದರೆ ಭಯೋತ್ಪಾದನೆಯಿಂದಾಗಿ ಅದನ್ನು ನಿಲ್ಲಿಸಲಾಯಿತು. ಇದೀಗ ಬರೋಬ್ಬರಿ 35 ವರ್ಷಗಳ ಬಳಿಕ ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ ಮತ್ತೆ ಮರುಕಳಿಸಿದೆ. ಹೀಗಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.35 ವರ್ಷಗಳ ನಂತರ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿದೆ. ಈಗಾಗಲೇ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡು ಪಂದ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಹಾಗಂತ ಪಂದ್ಯವನ್ನು ವೀಕ್ಷಿಸಲು ಬಂದ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಇರಲಿಲ್ಲ. ಜಮ್ಮುವಿನಲ್ಲಿ ಕ್ರಿಕೆಟ್ ಬೆಳವಣಿಗೆಗೆ ಈ ಪಂದ್ಯಗಳು ಇದು ಪ್ರಮುಖ ಪಾತ್ರ ವಹಿಸುತ್ತದೆ. ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಮುಂದೆ ಮತ್ತಷ್ಟು ಪಂದ್ಯಗಳು ನಡೆಯಲಿವೆ.ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣವನ್ನು 1966ರಲ್ಲಿ ನಿರ್ಮಿಸಲಾಯಿತು. 1988ರ ಡಿಸೆಂಬರ್ 19ರಂದು ಆ ಮೈದಾನದಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ನಡೆದಿದೆ. ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಆ ಬಳಿಕ ಭಯೋತ್ಪಾದನೆಯಿಂದಾಗಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಈ ಮೈದಾನದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ.ಲೆಜೆಂಡ್ಸ್ ಲೀಗ್ ಕ್ರಿಕೆಟ್ ಬಳಿಕ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸುವಲ್ಲಿ ಮತ್ತು ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂ ಒಂದು ಹೆಜ್ಜೆ ಮುಂದಿಟ್ಟಿದೆ. ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಈ ಮೈದಾನದಲ್ಲಿ ಆಯೋಜಿಸಲಾಗಿದೆ. ಇನ್ನೆರಡು ಪಂದ್ಯಗಳು ನಡೆಯಬೇಕಿದೆ.ನವೆಂಬರ್ 27ರ ಸೋಮವಾರ ನಡೆಯದ ಮೊದಲ ಪಂದ್ಯದಲ್ಲಿ ಮಣಿಪಾಲ್ ಟೈಗರ್ಸ್ ಮತ್ತು ಸರ್ದಾನ್ ಸೂಪರ್ ಸ್ಟಾರ್ಸ್ ಮುಖಾಮುಖಿಯಾದವು. ರಾಸ್ ಟೇಲರ್ ಬಳಗವು ಹರ್ಭಜನ್ ಸಿಂಗ್ ಅವರ ಮಣಿಪಾಲವನ್ನು ಐದು ವಿಕೆಟ್ ಗಳಿಂದ ಸೋಲಿಸಿತು. ನವೆಂಬರ್ 29ರ ಬುಧವಾರ ನಡೆಯಬೇಕಿದ್ದ ಭಿಲ್ವಾರ ಕಿಂಗ್ಸ್ ಮತ್ತು ಸರ್ದಾನ್ ಸೂಪರ್ ಸ್ಟಾರ್ಸ್ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿತು.ನವೆಂಬರ್ 30ರ ಗುರುವಾರ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ತಂಡಗಳ ನಡುವೆ ಪಂದ್ಯ ನಡೆಯಯುತ್ತಿದೆ. ಕೊನೆಯ ಪಂದ್ಯದಲ್ಲಿ ಭಿಲ್ವಾರ ಕಿಂಗ್ಸ್ ಮತ್ತು ಅರ್ಬನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಡಿಸೆಂಬರ್ 1ರ ಶುಕ್ರವಾರ ಪಂದ್ಯ ನಡೆಯಲಿದೆ.100ಕ್ಕೂ ಹೆಚ್ಚು ಮಾಜಿ ಕ್ರಿಕೆಟಿಗರು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗರಾದ ಗಂಭೀರ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಶೇನ್ ವ್ಯಾಟ್ಸನ್, ರಾಬಿನ್ ಉತ್ತಪ್ಪ, ಕ್ರಿಸ್ ಗೇಲ್, ಹಾಶಿಮ್ ಆಮ್ಲಾ, ಮೊರ್ನೆ ಮೊರ್ಕೆಲ್ ಮುಂತಾದ ತಾರೆಯರು ಇದ್ದಾರೆ.
-
ಬೆಂಗಳೂರು14 hours agoBENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
-
ದೇಶ11 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ದೇಶ13 hours agoGBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ
-
ಕ್ರೀಡೆ8 hours agoIND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
-
ದೇಶ11 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ಅಪರಾಧ13 hours agoCRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
-
ದೇಶ12 hours agoBHARATH BANDH : ದೇಶವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರ ಹೋರಾಟ, ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ
-
ದೇಶ9 hours agoHAL ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?
