ಸಿನಿಮಾ
ಅಬ್ಬಬ್ಬಾ!; ‘ಕಲ್ಕಿ’ ಕಲೆಕ್ಷನ್ ₹180 ಕೋಟಿ: ಕೆಜಿಎಫ್ 2, ಜವಾನ್ ಸೇರಿ ಹಿಟ್ ಸಿನಿಮಾಗಳ ದಾಖಲೆಗಳೆಲ್ಲಾ ಉಡೀಸ್ – Kalki 2898 AD Collection
ನಾಗ್ ಅಶ್ವಿನ್ ನಿರ್ದೇಶನದ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ಕಲ್ಕಿ 2898 ಎಡಿ’ ಚಿತ್ರ ಕಳೆದ ದಿನ (ಗುರುವಾರ, ಜೂನ್ 27) ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿ ಧೂಳೆಬ್ಬಿಸಿದೆ. ಬಹುತೇಕ ಮೆಚ್ಚುಗೆ ಸ್ವೀಕರಿಸಿದ ಈ ಚಿತ್ರ, ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಪ್ರದರ್ಶನ ಕಂಡಿದೆ. ಭಾರತದಲ್ಲೇ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವಲ್ಲಿ ಯಶ ಕಂಡ ಚಿತ್ರತಂಡವೀಗ ಯಶಸ್ಸಿನಲೆಯಲ್ಲಿ ತೇಲುತ್ತಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಇಂಡಿಯನ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ, ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಸೇರಿದಂತೆ ಬಹುತಾರಾಗಣದ ಬಿಗ್ ಪ್ರಾಜೆಕ್ಟ್ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತಿದೊಡ್ಡ ಓಪನರ್ ಆಗಿ ದಾಖಲೆ ಬರೆದಿದೆ.
ಸೂಪರ್ ಹಿಟ್ ಸಿನಿಮಾಗಳ ದಾಖಲೆ ಬ್ರೇಕ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳಿರುವ ಕಲ್ಕಿ 2898 ಎಡಿ ಚಿತ್ರ ತೆರೆಕಂಡ ಮೊದಲ ದಿನ ಭಾರತದಲ್ಲಿ ಎಲ್ಲಾ ಭಾಷೆ ಸೇರಿ ಸರಿ ಸುಮಾರು 118 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಮೈಥೋ ಸೈನ್ಸ್ ಫಿಕ್ಷನ್ ಪ್ರಪಂಚದಾದ್ಯಂತ ಬರೋಬ್ಬರಿ 180 ಕೋಟಿ ರೂ. ಸಂಗ್ರಹಿಸಿದೆ. ಪ್ರಭಾಸ್ ಮುಖ್ಯಭೂಮಿಕೆಯ ಈ ಚಿತ್ರ ತನ್ನ ಮೊದಲ ದಿನದ ಅಂಕಿ ಅಂಶಗಳೊಂದಿಗೆ ಕೆಜಿಎಫ್ 2 (159 ಕೋಟಿ ರೂ.), ಸಲಾರ್ (158 ಕೋಟಿ ರೂ.), ಲಿಯೋ (142.75 ಕೋಟಿ ರೂ.), ಸಾಹೋ (130 ಕೋಟಿ ರೂ.) ಮತ್ತು ಜವಾನ್ (129 ಕೋಟಿ ರೂ.) ಎಂಬ ಸೂಪರ್ ಹಿಟ್ ಚಿತ್ರಗಳ ಜಾಗತಿಕ ಆರಂಭಿಕ ದಾಖಲೆಗಳನ್ನು ಪುಡಿಗಟ್ಟಿದೆ.
ಅತಿ ಹೆಚ್ಚು ಕಲೆಕ್ಷನ್ ಮಾಡಿದ 3ನೇ ಚಿತ್ರವಿದು: ಅದಾಗ್ಯೂ, 2022ರ ಬ್ಲಾಕ್ಬಸ್ಟರ್ ಸಿನಿಮಾ ‘ಆರ್ಆರ್ಆರ್’ಭಾರತೀಯ ಚಿತ್ರರಂಗದಲ್ಲೇ ತೆರೆಕಂಡ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ವಿಶ್ವ ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಸದ್ದು ಮಾಡಿದ ಈ ಚಿತ್ರ ತನ್ನ ಮೊದಲ ದಿನ 223 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ‘ಆರ್ಆರ್ಆರ್’ ನಂತರದ ಸ್ಥಾನವನ್ನು ಪ್ರಬಾಸ್ ಅವರದ್ದೇ ಆದ ಬಾಹುಬಲಿ 2 ಹೊಂದಿದೆ. ಈ ಸೂಪರ್ ಹಿಟ್ ಸಿನಿಮಾ ಬಿಡುಗಡೆ ಆದ ದಿನ 217 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಅನೇಕರು ‘ಕಲ್ಕಿ 2898 ಎಡಿ’ ತನ್ನ ಮೊದಲ ದಿನ 200 ಕೋಟಿ ರೂ. ಗಳಿಸಲಿದೆ ಎಂದು ಅಂದಾಜಿಸಿದ್ದರು. ಈ ಚಿತ್ರ 200 ಕೋಟಿ ರೂಪಾಯಿಗಳ ಗಡಿ ದಾಟುವಲ್ಲಿ ಹಿನ್ನೆಡೆ ಕಂಡಿದೆ. ಅದಾಗ್ಯೂ ಸದ್ಯದ ಅಂಕಿ-ಅಂಶ (180 ಕೋಟಿ ರೂ.) ಕಡಿಮೆಯೇನಿಲ್ಲ. ಭಾರತೀಯ ಚಿತ್ರರಂಗದಲ್ಲೇ ಹೆಚ್ಚು ಕಲೆಕ್ಷನ್ ಮಾಡಿದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನೂ ಶನಿವಾರ ಮತ್ತು ಭಾನುವಾರದ ಕಲೆಕ್ಷನ್ ಮೇಲೆ ಎಲ್ಲರ ಗಮನವಿದೆ. ಮೊದಲ ದಿನದ ಕಲೆಕ್ಷನ್ ಮತ್ತು ಡಿಜಿಟಲ್ ರೈಟ್ಸ್ ಮಾರಾಟದಿಂದಲೇ ಚಿತ್ರದ ಬಹುತೇಕ ಬಂಡವಾಳ ವಾಪಸ್ ಬಂದಂತಾಗಿದೆ. ಭಾನುವಾರದವರೆಗಿನ ಗಳಿಕೆ ಚಿತ್ರದ ಸೋಲು-ಗೆಲುವನ್ನು ನಿರ್ಧರಿಸಲಿದೆ. ಚಿತ್ರ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದು ವರದಿಯಾಗಿದೆ.
ದೇಶ
ಅಮೀರ್ ಖಾನ್ಗೆ ಕಾಜೋಲ್ ತಮಾಷೆ; ಕಾರ್ಯಕ್ರಮದಲ್ಲಿ ನಗೆಗಡಲಾದ ಸಿನಿತಾರೆಯರು
ಮುಂಬೈ: ಬಾಲಿವುಡ್ನ ಖ್ಯಾತ ನಟ Aamir Khan ಅವರ ಮೂರನೇ ಮದುವೆ ಕುರಿತ ಸುದ್ದಿಗಳ ನಡುವೆ ನಟಿ Kajol ಮಾಡಿದ ತಮಾಷೆಯ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಅಮೀರ್ ಖಾನ್ ಪ್ರೊಡಕ್ಷನ್ಸ್ನ 25ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಲವು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಕಾಜೋಲ್, ಅಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆ ಕಳೆದ 25 ವರ್ಷಗಳಲ್ಲಿ ಅನೇಕ ಗುಣಮಟ್ಟದ ಚಿತ್ರಗಳನ್ನು ನೀಡಿದೆ ಎಂದು ಪ್ರಶಂಸಿಸಿದರು.
‘Lagaan’ ಚಿತ್ರದ ಮೂಲಕ ನಿರ್ಮಾಪಕರಾಗಿ ಆರಂಭವಾದ ಅಮೀರ್ ಅವರ ಪಯಣ ಇಂದಿಗೂ ಯಶಸ್ವಿಯಾಗಿ ಸಾಗುತ್ತಿದೆ. ಉತ್ತಮ ಕಥೆಗಳು ಮತ್ತು ವಿಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡುವಲ್ಲಿ ಅಮೀರ್ ಅವರಿಗೆ ಅದ್ಭುತ ಅಭಿರುಚಿ ಇದೆ ಎಂದು ಕಾಜೋಲ್ ಹೇಳಿದರು.
ಇದಾದ ಬಳಿಕ ಹಾಸ್ಯಮಯವಾಗಿ ಮಾತನಾಡಿದ ಅವರು, “ಸಿನಿಮಾಗಳಷ್ಟೇ ಅಲ್ಲ, ಮಹಿಳೆಯರ ಆಯ್ಕೆಯಲ್ಲೂ ಅವರಿಗೆ ಉತ್ತಮ ಅಭಿರುಚಿ ಇದೆ” ಎಂದು ಹೇಳಿ ಅಮೀರ್ ಅವರನ್ನು ಕೆಣಕಿದರು. ಈ ಮಾತು ಕೇಳುತ್ತಿದ್ದಂತೆಯೇ ಸಭಾಂಗಣದಲ್ಲಿ ನಗೆಗಡಲು ಮೂಡಿತು. ಅಮೀರ್ ಖಾನ್ ಕೂಡ ಮುಜುಗರದ ನಗೆಯೊಂದಿಗೆ ಪ್ರತಿಕ್ರಿಯಿಸಿದರು.
ಅಮೀರ್ ಖಾನ್ ಈ ಹಿಂದೆ Reena Dutta ಹಾಗೂ Kiran Rao ಅವರನ್ನು ವಿವಾಹವಾಗಿದ್ದರು. ಎರಡೂ ದಾಂಪತ್ಯಗಳು ವಿಚ್ಛೇದನದಲ್ಲಿ ಅಂತ್ಯಗೊಂಡಿದ್ದರೂ, ಮಾಜಿ ಪತ್ನಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಅವರು ಮುಂದುವರಿಸಿಕೊಂಡಿದ್ದಾರೆ.
ಇದೀಗ ಅಮೀರ್ ಖಾನ್ ತಮ್ಮ ಗೆಳತಿ Gauri Spratt ಅವರನ್ನು ಜುಲೈ 5ರಂದು ವಿವಾಹವಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ನಡುವೆ ಕಾಜೋಲ್ ಅವರ ಹಾಸ್ಯಭರಿತ ಹೇಳಿಕೆ ಅಭಿಮಾನಿಗಳ ಗಮನ ಸೆಳೆದಿದೆ.
ಕಾರ್ಯಕ್ರಮದಲ್ಲಿ ‘Ishq’ ಚಿತ್ರದ ಸಹನಟಿಯರಾದ Juhi Chawla ಮತ್ತು ಕಾಜೋಲ್ ಅಮೀರ್ ಜೊತೆ ವೇದಿಕೆ ಹಂಚಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ದೇಶ
Special Story : ಗನ್ ಹಿಡಿಯುವ ನಿರ್ಧಾರದಿಂದ ಡಿಸಿಎಂ ಹುದ್ದೆಯವರೆಗೆ: ಪವನ್ ಕಲ್ಯಾಣ್ ಜೀವನದ ಅಚ್ಚರಿಯ ಕಥೆ
ಹೈದರಾಬಾದ್: ಟಾಲಿವುಡ್ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ Pawan Kalyan ತಮ್ಮ ಹದಿಹರೆಯದ ದಿನಗಳ ಕುರಿತು ಅಚ್ಚರಿಯ ಬಹಿರಂಗವೊಂದನ್ನು ಮಾಡಿದ್ದಾರೆ. ಯುವಕನಾಗಿದ್ದಾಗ ತಾವು ನಕ್ಸಲ್ ಚಳವಳಿಗೆ ಸೇರುವ ಬಗ್ಗೆ ಗಂಭೀರವಾಗಿ ಯೋಚಿಸಿದ್ದೆ ಎಂದು ಹೇಳಿರುವ ಅವರು, ಆ ನಿರ್ಧಾರದಿಂದ ತಮ್ಮನ್ನು ಹಿಂತೆಗೆಸಿದವರು ಅಣ್ಣ Chiranjeevi ಎಂದು ತಿಳಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಪವನ್ ಕಲ್ಯಾಣ್, 17ರಿಂದ 21 ವರ್ಷದ ಅವಧಿಯಲ್ಲಿ ಸಮಾಜದಲ್ಲಿನ ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳ ಬಗ್ಗೆ ತೀವ್ರ ಆಕ್ರೋಶ ಹೊಂದಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಶಸ್ತ್ರಸಜ್ಜಿತ ಹೋರಾಟದ ವಿಚಾರಗಳು ತಮ್ಮ ಮನಸ್ಸಿನಲ್ಲಿ ಮೂಡಿದ್ದವು ಹಾಗೂ ವಿದ್ಯಾರ್ಥಿ ಸಂಘಟನೆಗಳ ಕೆಲವು ಸಭೆಗಳಲ್ಲಿ ಕೂಡ ಭಾಗವಹಿಸುತ್ತಿದ್ದೆ ಎಂದು ಹೇಳಿದ್ದಾರೆ.
ಆದರೆ ತಮ್ಮನ ಮನಸ್ಥಿತಿಯನ್ನು ಗಮನಿಸಿದ ಚಿರಂಜೀವಿ, ಒಂದು ಪ್ರಶ್ನೆಯ ಮೂಲಕ ಅವರ ಚಿಂತನೆಗೆ ಹೊಸ ದಿಕ್ಕು ನೀಡಿದರು. “ನಾನು ಚಿರಂಜೀವಿ ಆಗಿರದಿದ್ದರೆ ಮತ್ತು ಕುಟುಂಬದ ಸಂಪೂರ್ಣ ಜವಾಬ್ದಾರಿ ನಿನ್ನ ಹೆಗಲ ಮೇಲಿದ್ದರೆ, ಇದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆಯಾ?” ಎಂದು ಕೇಳಿದ ಪ್ರಶ್ನೆ ತನ್ನ ಬದುಕನ್ನು ಬದಲಿಸಿತು ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ. ಅಣ್ಣನ ಮಾತುಗಳು ಜವಾಬ್ದಾರಿಯ ಮಹತ್ವವನ್ನು ಅರ್ಥಮಾಡಿಸಿಕೊಟ್ಟವು ಎಂದು ಅವರು ಹೇಳಿದ್ದಾರೆ.
ಪವನ್ ಕಲ್ಯಾಣ್ ತಮ್ಮ ಅಣ್ಣನ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸಿದ್ದು, “ನನಗೆ ಜಗತ್ತಿನಲ್ಲಿ ಒಬ್ಬರೇ ಹೀರೋ, ಅದು ಚಿರಂಜೀವಿ. ಅವರ ಪಕ್ಕ ನಿಂತಾಗ ನಾನು ಕೂಡ ಒಬ್ಬ ನಟ ಎಂಬುದನ್ನೇ ಮರೆತುಬಿಡುತ್ತೇನೆ” ಎಂದು ಹೇಳಿದ್ದಾರೆ.
1990ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪವನ್ ಕಲ್ಯಾಣ್, ನಂತರ ರಾಜಕೀಯಕ್ಕೆ ಪ್ರವೇಶಿಸಿ ಜನಸೇನಾ ಪಕ್ಷವನ್ನು ಸ್ಥಾಪಿಸಿದರು. ಇಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ.
ಆರೋಗ್ಯ
ಕಾಜೋಲ್ ಬ್ಯಾಗ್ನಲ್ಲಿ ಯಾವಾಗಲೂ ಇರುವುದು ಇದೇ ವಸ್ತು! ಆರೋಗ್ಯ ರಹಸ್ಯ ಬಯಲು
ಮುಂಬೈ: ಬಾಲಿವುಡ್ ನಟಿ Kajol ತಮ್ಮ ಆರೋಗ್ಯ ಕಾಳಜಿಯ ಅಭ್ಯಾಸವೊಂದನ್ನು ಹಂಚಿಕೊಂಡಿದ್ದು, ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಜನರು ಪ್ರಯಾಣದ ವೇಳೆ ತಿಂಡಿ, ಹಣ್ಣು ಅಥವಾ ಇತರ ಆಹಾರ ಪದಾರ್ಥಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಆದರೆ ಕಾಜೋಲ್ ಮಾತ್ರ ಯಾವಾಗಲೂ ಕಪ್ಪು ಉಪ್ಪು (ಬ್ಲ್ಯಾಕ್ ಸಾಲ್ಟ್) ಅನ್ನು ತಮ್ಮ ಬ್ಯಾಗ್ನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಕಪ್ಪು ಉಪ್ಪು ನನ್ನೊಂದಿಗೆ ಯಾವಾಗಲೂ ಇರುತ್ತದೆ. ಕೆಲವೊಮ್ಮೆ ಆಹಾರದಲ್ಲಿ ಉಪ್ಪು ಕಡಿಮೆಯಾಗಿದೆ ಎಂದು ಅನಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಕಪ್ಪು ಉಪ್ಪು ಆಹಾರಕ್ಕೆ ಉತ್ತಮ ರುಚಿ ನೀಡುತ್ತದೆ” ಎಂದು ಹೇಳಿದ್ದಾರೆ.
ಆಯುರ್ವೇದ ತಜ್ಞರ ಪ್ರಕಾರ, ಕಪ್ಪು ಉಪ್ಪು ಕೇವಲ ರುಚಿ ಹೆಚ್ಚಿಸುವ ಪದಾರ್ಥವಲ್ಲ. ಇದು ಜೀರ್ಣಕ್ರಿಯೆ ಸುಧಾರಿಸಲು, ಹೊಟ್ಟೆಯ ಉಬ್ಬರ ಕಡಿಮೆ ಮಾಡಲು ಹಾಗೂ ಪ್ರಯಾಣದ ವೇಳೆ ಕಾಣಿಸಿಕೊಳ್ಳುವ ವಾಕರಿಕೆ, ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯ ವೈದ್ಯ ಡಾ. ರಾಜೇಶ್ ಬಾಯರಿ ಅವರ ಪ್ರಕಾರ, ಕಪ್ಪು ಉಪ್ಪಿನಲ್ಲಿರುವ ಖನಿಜಾಂಶಗಳು ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು ನೆರವಾಗುತ್ತವೆ. ಬಿಸಿಲಿನ ವಾತಾವರಣ ಅಥವಾ ದೀರ್ಘ ಪ್ರಯಾಣದ ಸಂದರ್ಭಗಳಲ್ಲಿ ಇದು ದೇಹದ ನಿರ್ಜಲೀಕರಣ ಸಮಸ್ಯೆಯನ್ನು ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ.
ಇದಲ್ಲದೆ, ಕಪ್ಪು ಉಪ್ಪಿನ ವಿಶಿಷ್ಟ ರುಚಿ ಹಣ್ಣುಗಳು, ಸಲಾಡ್, ಮೊಸರು, ಮಜ್ಜಿಗೆ ಹಾಗೂ ವಿವಿಧ ತಿಂಡಿಗಳ ರುಚಿಯನ್ನು ಹೆಚ್ಚಿಸುತ್ತದೆ. ಆರೋಗ್ಯದ ಜೊತೆಗೆ ರುಚಿಯನ್ನೂ ಹೆಚ್ಚಿಸುವ ಈ ಸರಳ ಪದಾರ್ಥವನ್ನು ಕಾಜೋಲ್ ತಮ್ಮ ಪ್ರಯಾಣದ ಅವಿಭಾಜ್ಯ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ.
-
ದೇಶ5 hours agoಬಿಡದಿ ಟೌನ್ಶಿಪ್ ವಿವಾದಕ್ಕೆ ಹೊಸ ಟ್ವಿಸ್ಟ್: ಕುಮಾರಸ್ವಾಮಿ ಹಳೆಯ ವಿಡಿಯೋ ಬಿಡುಗಡೆ
-
ದೇಶ6 hours agoಸ್ಲೋವಾಕಿಯಾದಲ್ಲಿ ಮೋದಿ ಐತಿಹಾಸಿಕ ಭೇಟಿ: 33 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯ ಹೆಜ್ಜೆ
-
ಕ್ರೀಡೆ6 hours agoಜರ್ಮನಿಯ ಗೋಲುಗಳ ಮಳೆ: ಕುರಾಕಾವೊ ವಿರುದ್ಧ 7-1 ಭರ್ಜರಿ ಜಯ
-
ದೇಶ4 hours agoರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಗೃಹಲಕ್ಷ್ಮಿಯಿಂದ ಐಟಿ, ಜಿಎಸ್ಟಿ ಪಾವತಿದಾರರು ಔಟ್
-
ದೇಶ5 hours agoಅಮೀರ್ ಖಾನ್ಗೆ ಕಾಜೋಲ್ ತಮಾಷೆ; ಕಾರ್ಯಕ್ರಮದಲ್ಲಿ ನಗೆಗಡಲಾದ ಸಿನಿತಾರೆಯರು
-
ದೇಶ6 hours agoಫ್ರೀಡಂ ಪಾರ್ಕ್ನಲ್ಲಿ ವಿದ್ಯಾರ್ಥಿಗಳ ಆಕ್ರೋಶ; ನೀಟ್ ಹಗರಣದ ವಿರುದ್ಧ ಧ್ವನಿ ಎತ್ತಿದ ಸಿಜೆಪಿ
-
ಆರೋಗ್ಯ5 hours agoಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
-
ದೇಶ6 hours agoಕಮರ್ಷಿಯಲ್ ಸ್ಟ್ರೀಟ್ ಬಳಿ ಟ್ರಾಫಿಕ್ ತಲೆನೋವು: ತಿಂಗಳಾದರೂ ಮುಗಿಯದ ರಸ್ತೆ ಕಾಮಗಾರಿ
