crcket
ನಾಲ್ಕನೇ ಕ್ರಮಾಂಕಕ್ಕೆ ಕೊಹ್ಲಿ ಹೆಸರನ್ನು ಸೂಚಿಸಿದ : ಎಬಿ ಡಿ ವಿಲಿಯರ್ಸ್
ಏಷ್ಯಕಪ್,ಒನ್ ಡೇ ವಲ್ಡಕಪ್ ಕ್ರಿಕೆಟ್ ಟೋರ್ನಮೆಂಟ್‌ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಪರ ನಾಲ್ಕನೇ ಕ್ರಮಂಕದಲ್ಲಿ ಯಾವ ಆಟಗಾರನನ್ನು ಬ್ಯಾಟಿಂಗ್ ಗೆ ಇಳಿಸಬೇಕು ಎಂಬುವುದರ ಕುರಿತು ವಿರೋಧ ಚರ್ಚೆಗಳು ನಡೆಯುತ್ತಿದೆ ಈ ಕುರಿತು ದಕ್ಷಿಣ ಆಪ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿ ವಿಲಿಯರ್ಸ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ನಾಲ್ಕನೇ ಕ್ರಮಾಂಕಕ್ಕೆ ತಮ್ಮ ಆಪ್ತ ಸ್ನೇಹಿತರಾದ ವಿರಾಟ್ ಕೊಹ್ಲಿ ಹೆಸರನ್ನು ಸೂಚಿಸಿದರು.ವಿರಾಟ್ ಕೊಹ್ಲಿಗೆ ತಾನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.ನಾಲ್ಕನೆ ಕ್ರಮಂಕಕ್ಕೆ ವಿರಾಟ್ ಕೋಹ್ಲಿ ಅತ್ಯುತ್ತಮ ಆಯ್ಕೆ.ಮಧ್ಯಮ ಕ್ರಮಂಕದಲ್ಲಿ ಯಾವುದೇ ರೀತಿಯ ಜವಾಬ್ದಾರಿಯನ್ನು ನೀಬಾಹಿಸಬಲ್ಕರು.ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುವುದಕ್ಕೆ ಅವರು ಇಷ್ಷಪಡುತ್ತಾರೆ ಅಲ್ಲಿ ಸಾವಿರಾರು ರನ್ ಗಳಿಸಿದ್ದಾರೆ ಆದರೆ ತಂಡವು ನಿರ್ದಿಷ್ಷ ಜವಾಬ್ಬಾರಿ ಬಯಸಿದ್ದರೆ ಅದನ್ನು ನಿರ್ವಹಿಸಬೇಕಾಗುತ್ತದೆ ಎಂದು ಎಬಿ ಡಿ ತಿಳಿಸಿದರು.ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ,39 ಇನ್ನಿಂಗ್ಸ್‌ಗಳಲ್ಲಿ 55.21ರ ಸರಾಸರಿಯಲ್ಲಿ(90.66 ಸ್ಟ್ರೈಕ್ ರೇಟ್)1,767 ರನ್ ಗಳಿಸಿದ್ದಾರೆ.
crcket
ಕ್ಯಾಪ್ಟನ್ಸಿಯಲ್ಲಿ ವಿಶೇಷ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!
2022ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಂತರ ಭಾರತದ ಟಿ20 ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದ ಅನುಭವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಇದೀಗ ಕಮ್‌ಬ್ಯಾಕ್ ಮಾಡಿದ್ದಾರೆ. ಪ್ರವಾಸಿ ಅಫಘಾನಿಸ್ತಾನ ಎದುರು ನಡೆಯುತ್ತಿರುವ ಮೊತ್ತ ಮೊದಲ ದ್ವಿಪಕ್ಷೀಯ ಟಿ20 ಕ್ರಿಕೆಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದ ರೋಹಿತ್ ಜೊತೆಗೆ ಕ್ಯಾಪ್ಟನ್ಸಿ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಗುರುವಾರ (ಜ.11) ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕನಾಗಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ.
ಮೊಹಾಲಿ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬರೋಬ್ಬರಿ 14 ತಿಂಗಳ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಪ್ರವಾಸಿ ಅಫಘಾನಿಸ್ತಾನ ಎದುರು ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಹಣಾಹಣಿ ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಗುರುವಾರ (ಜ.11) ನಡೆದು, ಈ ಪಂದ್ಯದಲ್ಲಿ ಕಣಕ್ಕಿಳಿದ ರೋಹಿತ್ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಈಗ 36 ವರ್ಷ, 256 ದಿನಗಳ ವಯಸ್ಸಿನ ಹಿರಿಯ ಬ್ಯಾಟರ್ ಪಾಲಾಗಿದೆ. ಈ ಮೂಲಕ ಹಿರಿಯ ಓಪನರ್ ಶಿಖರ್ ಧವನ್ ಅವರ ಹೆಸರಲ್ಲಿದ್ದ ದಾಖಲೆಯನ್ನು ರೋಹಿತ್ ಅಳಿಸಿಹಾಕಿದ್ದಾರೆ.
crcket
ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಕ್ರಿಕೆಟಿಗ ಮುಹಮ್ಮದ್ ಶಮಿ
ದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಅವರಿಗೆ ಇಂದು ಅರ್ಜುನ ಪ್ರಶಸ್ತಿ ಪ್ರದಾನ ಮಾಡಿದರು. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮುಹಮ್ಮದ್ ಶಮಿ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಕೇವಲ ಏಳು ಪಂದ್ಯಗಳಲ್ಲಿ 24 ವಿಕೆಟ್ ಗಳನ್ನು ಕಬಳಿಸುವ ಮೂಲಕ ಶಮಿ ತಮ್ಮ ಏಕದಿನ ವಿಶ್ವಕಪ್ 2023 ಯಾತ್ರೆ ಅನ್ನು ಯಶಸ್ವಿಯಾಗಿ ಮುಗಿಸಿದ್ದರು.
“ಈ ಪ್ರಶಸ್ತಿಯು ನನ್ನ ಕನಸಾಗಿತ್ತು. ಹಲವಾರು ಮಂದಿ ತಮ್ಮ ಜೀವಿತಾವಧಿ ಮುಗಿಸಿದರೂ ಈ ಪ್ರಶಸ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಈ ಪ್ರಶಸ್ತಿಗೆ ನನ್ನನ್ನು ನಾಮಕರಣ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ” ಎಂದು ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಾರಂಭಕ್ಕೂ ಮುನ್ನ ಮುಹಮ್ಮದ್ ಶಮಿ ಸಂತಸ ವ್ಯಕ್ತಪಡಿಸಿದರು. ಮುಹಮ್ಮದ್ ಶಮಿ ಅವರು ವಿಶ್ವಕಪ್ ಕ್ರೀಡಾಕೂಟದ ಆರಂಭಿಕ ನಾಲ್ಕು ಪಂದ್ಯಗಳಿಂದ ಆಡುವ ಹನ್ನೊಂದು ಮಂದಿ ತಂಡದಿಂದ ಹೊರಗಿದ್ದರು. ಆದರೆ, ಹಾರ್ದಿಕ್ ಪಾಂಡ್ಯ ಗಾಯಾಳುವಾಗಿದ್ದರಿಂದ ಶಮಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆತಿತ್ತು. ತಮ್ಮ ಮೊದಲ ಪಂದ್ಯದಲ್ಲೇ ನ್ಯೂಝಿಲೆಂಡ್ ತಂಡದ ವಿರುದ್ಧ 5 ವಿಕೆಟ್ ಗಳನ್ನು ಕಿತ್ತು ಶಮಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು. ಅಲ್ಲಿಂದಾಚೆಗೆ ಶಮಿ ದಾಖಲೆಯ ಓಟ ಓಡಿದರು. ಕೇವಲ ಏಳು ಪಂದ್ಯಗಳಿಂದ 24 ವಿಕೆಟ್ ಗಳನ್ನು ಪಡೆದು ಮಿಂಚಿದ್ದರು.
crcket
35 ವರ್ಷಗಳ ಬಳಿಕ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕಲರವ..
ಭಾರತದ ಮುಕುಟ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿತ್ತು. ಆದರೆ ಭಯೋತ್ಪಾದನೆಯಿಂದಾಗಿ ಅದನ್ನು ನಿಲ್ಲಿಸಲಾಯಿತು. ಇದೀಗ ಬರೋಬ್ಬರಿ 35 ವರ್ಷಗಳ ಬಳಿಕ ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ ಮತ್ತೆ ಮರುಕಳಿಸಿದೆ. ಹೀಗಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.35 ವರ್ಷಗಳ ನಂತರ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿದೆ. ಈಗಾಗಲೇ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡು ಪಂದ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಹಾಗಂತ ಪಂದ್ಯವನ್ನು ವೀಕ್ಷಿಸಲು ಬಂದ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಇರಲಿಲ್ಲ. ಜಮ್ಮುವಿನಲ್ಲಿ ಕ್ರಿಕೆಟ್ ಬೆಳವಣಿಗೆಗೆ ಈ ಪಂದ್ಯಗಳು ಇದು ಪ್ರಮುಖ ಪಾತ್ರ ವಹಿಸುತ್ತದೆ. ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಮುಂದೆ ಮತ್ತಷ್ಟು ಪಂದ್ಯಗಳು ನಡೆಯಲಿವೆ.ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣವನ್ನು 1966ರಲ್ಲಿ ನಿರ್ಮಿಸಲಾಯಿತು. 1988ರ ಡಿಸೆಂಬರ್ 19ರಂದು ಆ ಮೈದಾನದಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ನಡೆದಿದೆ. ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಆ ಬಳಿಕ ಭಯೋತ್ಪಾದನೆಯಿಂದಾಗಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಈ ಮೈದಾನದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ.ಲೆಜೆಂಡ್ಸ್ ಲೀಗ್ ಕ್ರಿಕೆಟ್ ಬಳಿಕ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸುವಲ್ಲಿ ಮತ್ತು ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂ ಒಂದು ಹೆಜ್ಜೆ ಮುಂದಿಟ್ಟಿದೆ. ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಈ ಮೈದಾನದಲ್ಲಿ ಆಯೋಜಿಸಲಾಗಿದೆ. ಇನ್ನೆರಡು ಪಂದ್ಯಗಳು ನಡೆಯಬೇಕಿದೆ.ನವೆಂಬರ್ 27ರ ಸೋಮವಾರ ನಡೆಯದ ಮೊದಲ ಪಂದ್ಯದಲ್ಲಿ ಮಣಿಪಾಲ್ ಟೈಗರ್ಸ್ ಮತ್ತು ಸರ್ದಾನ್ ಸೂಪರ್ ಸ್ಟಾರ್ಸ್ ಮುಖಾಮುಖಿಯಾದವು. ರಾಸ್ ಟೇಲರ್ ಬಳಗವು ಹರ್ಭಜನ್ ಸಿಂಗ್ ಅವರ ಮಣಿಪಾಲವನ್ನು ಐದು ವಿಕೆಟ್ ಗಳಿಂದ ಸೋಲಿಸಿತು. ನವೆಂಬರ್ 29ರ ಬುಧವಾರ ನಡೆಯಬೇಕಿದ್ದ ಭಿಲ್ವಾರ ಕಿಂಗ್ಸ್ ಮತ್ತು ಸರ್ದಾನ್ ಸೂಪರ್ ಸ್ಟಾರ್ಸ್ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿತು.ನವೆಂಬರ್ 30ರ ಗುರುವಾರ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ತಂಡಗಳ ನಡುವೆ ಪಂದ್ಯ ನಡೆಯಯುತ್ತಿದೆ. ಕೊನೆಯ ಪಂದ್ಯದಲ್ಲಿ ಭಿಲ್ವಾರ ಕಿಂಗ್ಸ್ ಮತ್ತು ಅರ್ಬನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಡಿಸೆಂಬರ್ 1ರ ಶುಕ್ರವಾರ ಪಂದ್ಯ ನಡೆಯಲಿದೆ.100ಕ್ಕೂ ಹೆಚ್ಚು ಮಾಜಿ ಕ್ರಿಕೆಟಿಗರು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗರಾದ ಗಂಭೀರ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಶೇನ್ ವ್ಯಾಟ್ಸನ್, ರಾಬಿನ್ ಉತ್ತಪ್ಪ, ಕ್ರಿಸ್ ಗೇಲ್, ಹಾಶಿಮ್ ಆಮ್ಲಾ, ಮೊರ್ನೆ ಮೊರ್ಕೆಲ್ ಮುಂತಾದ ತಾರೆಯರು ಇದ್ದಾರೆ.
-
ಕ್ರೀಡೆ11 hours ago15ರ ಹರೆಯದಲ್ಲೇ ಐಪಿಎಲ್ ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ! 5 ಪ್ರಶಸ್ತಿಗಳೊಂದಿಗೆ ಭರ್ಜರಿ ದಾಖಲೆ
-
ಕ್ರೀಡೆ12 hours agoಸತತ 2ನೇ ಕಿರೀಟ ಗೆದ್ದ ಆರ್ಸಿಬಿ; ಫೈನಲ್ ಬಳಿಕ ಗುಜರಾತ್ ಬಸ್ನಲ್ಲಿ ಬೆಂಕಿ
-
ಕ್ರೀಡೆ11 hours agoವಿರಾಟ್ ಕೊಹ್ಲಿ ಮಾಸ್ಟರ್ ಕ್ಲಾಸ್; ಆರ್ಸಿಬಿ ಐತಿಹಾಸಿಕ ಗೆಲುವಿಗೆ MLA S T Somashekhar ಮೆಚ್ಚುಗೆ
-
ದೇಶ9 hours ago3.2 ಕೋಟಿ ಸೊಳ್ಳೆಗಳನ್ನು ಬಿಡುಗಡೆ ಮಾಡಲು ಗೂಗಲ್ ಯೋಜನೆ! ಕಾರಣ ತಿಳಿದರೆ ಅಚ್ಚರಿ
-
ಕ್ರೀಡೆ8 hours ago‘We Did It Twice’ ಟೀ-ಶರ್ಟ್ ವೈರಲ್! ಆರ್ಸಿಬಿ ಗೆಲುವಿನ ಅಪರೂಪದ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ
-
ದೇಶ9 hours agoಅಮಾನತು ಬಳಿಕ ಜಮೀರ್ ಸರದಿ? ಕಾಂಗ್ರೆಸ್ನಲ್ಲಿ ಶಿಸ್ತು ಕ್ರಮದ ಚರ್ಚೆ
-
ದೇಶ5 hours agoಬಿಜೆಪಿ ಹೈಕಮಾಂಡ್ನ ದೊಡ್ಡ ಪ್ಲಾನ್! ಕರ್ನಾಟಕದಲ್ಲಿ ಹೊಸ ನಾಯಕತ್ವಕ್ಕೆ ವೇದಿಕೆ?
