ರಾಜ್ಯ
ಕಾಣಿಕೆ ಡಬ್ಬಿ ಕದ್ದ ಕಳ್ಳನಿಗೆ ಕುತ್ತು ಕಂದ ನಿದ್ದೆ.. ಬಬ್ಬು ಸ್ವಾಮಿಯ ಕಾರ್ಣಿಕಕ್ಕೆ ಬೆರಗಾದ ಭಕ್ತರು!
ಉಡುಪಿ: ಬಬ್ಬು ಸ್ವಾಮಿ ದೈವದ ಕಾರ್ಣಿಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಾಣಿಕೆ ಡಬ್ಬಿ ಕದ್ದ ಕಳ್ಳನನ್ನು ದೈವ 24 ಗಂಟೆಯೊಳಗೆ ಹುಡುಕಿಕೊಟ್ಟ ಅಚ್ಚರಿಯ ಘಟನೆ ಉಡುಪಿಯಲ್ಲಿ ನಡೆದಿದೆ.
ಚಿಟ್ಪಾಡಿ ಕಸ್ತೂರ್ಬಾ ನಗರದ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಕಳ್ಳತನ ನಡೆದಿತ್ತು. ಕಳ್ಳನೊಬ್ಬ ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಿದ್ದನು. ಜು.5 ರಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು.
ಸಾಮೂಹಿಕ ಪ್ರಾರ್ಥನೆ
ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನಿಸಿದ್ದರು. ಮಾತ್ರವಲ್ಲದೆ, ಊರಿನ ಸಂಕಷ್ಟ ಬಗೆಹರಿಸುವ ದೈವದ ಸನ್ನಿಧಾನದಲ್ಲಿ ಕಳ್ಳತನವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು.
ಭಕ್ತರ ಪ್ರಾರ್ಥನೆಯಿಂದ ಕಳ್ಳನನ್ನು 24 ಗಂಟೆಯೊಳಗೆ ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಅಚ್ಚರಿ ಎಂಬಂತೆ ಜು. 6ರಂದು ಬೆಳಗ್ಗೆ ಕಳ್ಳನನ್ನು ಸಿಕ್ಕಿದ್ದಾನೆ.
ಎಲ್ಲಿದ್ದ ಗೊತ್ತಾ ಕಳ್ಳ?
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳ ಮಲಗಿರೋದು ಗೊತ್ತಾಗಿದೆ. ಬಸ್ ನಿಲ್ದಾಣ ಪರಿಸರದಲ್ಲಿ ಆಟೋ ಚಾಲಕರು ಕಳ್ಳನ ಗುರುತು ಪತ್ತೆ ಹಚ್ಚಿದ್ದಾರೆ.
ಬಾಗಲಕೋಟೆ ಮೂಲದ ಮುದುಕಪ್ಪ ಕಾಣೆಕೆ ಡಬ್ಬಿ ಕದ್ದು ಸಿಕ್ಕಿಬಿದ್ದ ಕಳ್ಳ. ಈತ ಬಾಗಲಕೋಟೆಗೆ ಹೋಗಬೇಕಾದವನು ಬಸ್ ನಿಲ್ದಾಣದಲ್ಲಿಯೇ ನಿದ್ದೆ ಮಾಡಿ ಬಾಕಿಯಾಗಿದ್ದನು. ಬೆಳಿಗ್ಗೆ ಎಂಟು ಗಂಟೆಯಾದರೂ ನಿದ್ದೆ ಮಂಪರಿನಲ್ಲಿ ಮಲಗಿದ್ದನು.
ಕಳ್ಳತನವೇ ಈತನ ಚಾಳಿ
ಮುದುಕಪ್ಪ ದೈವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿಯನು ಹೊಂದಿದ್ದನು. ಚಿಟ್ಪಾಡಿಯ ನಂತರ ಉದ್ಯಾವರ ಪರಿಸರದಲ್ಲೂ ಕಳ್ಳತನ ಮಾಡಿದ್ದನು. ದೋಚಿದ ಹಣದೊಂದಿಗೆ ಬಾಗಲಕೋಟೆಗೆ ಹೋಗಲು ತಯಾರಿ ನಡೆಸಿದ್ದನು. ಬಸ್ ಸಿಗದ ಕಾರಣ ಮಲಗಿದ್ದಲ್ಲೇ ಬಾಕಿಯಾಗಿದ್ದನು. ಆದರೀಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಇತ್ತ ಭಕ್ತರು ಬಬ್ಬು ಸ್ವಾಮಿ ದೈವದ ಕಾರ್ಣಿಕಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಪವಾಡ
ಇನ್ನು ವರ್ಷದ ಹಿಂದೆ ಸನ್ನಿಧಾನದಲ್ಲಿ ಇದೇ ರೀತಿಯ ಪವಾಡ ನಡೆದಿತ್ತು. ಸನ್ನಿಧಾನದ ಬೋರ್ವೆಲ್ ನಲ್ಲಿ ನೀರು ಸಿಗದೇ ಹೋದಾಗ ಸಾಮೂಹಿಕ ಪ್ರಾರ್ಥನೆ ನಡೆದಿತ್ತು. ಪ್ರಾರ್ಥನೆ ನಡೆದ ಬೆನ್ನಲ್ಲೇ ನೀರು ಆಕಾಶದೆತ್ತರಕ್ಕೆ ಚಿಮ್ಮಿತ್ತು.
ದೇಶ
ಸಾರ್ವಜನಿಕರಿಗೆ ಗುಡ್ ನ್ಯೂಸ್! ಭಾನುವಾರವೂ ಸಿಗಲಿವೆ ನೋಂದಣಿ ಸೇವೆಗಳು
ಬೆಂಗಳೂರು: ರಾಜ್ಯದಾದ್ಯಂತ ಇರುವ ಎಲ್ಲಾ ಉಪ ನೋಂದಣಿ ಕಚೇರಿಗಳು ಜುಲೈ 12ರ ಭಾನುವಾರ ರಜಾ ದಿನವಾಗಿದ್ದರೂ ಸಾರ್ವಜನಿಕರ ಅನುಕೂಲಕ್ಕಾಗಿ ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ಮಹತ್ವದ ಪ್ರಕಟಣೆ ಹೊರಡಿಸಿದೆ.
ಸಾಮಾನ್ಯವಾಗಿ ಭಾನುವಾರ ಸರ್ಕಾರಿ ಕಚೇರಿಗಳಿಗೆ ರಜೆ ಇರುತ್ತದೆ. ಆದರೆ ಇಲಾಖೆಯಲ್ಲಿ ಹೆಚ್ಚುತ್ತಿರುವ ಕಾರ್ಯದೊತ್ತಡವನ್ನು ಕಡಿಮೆ ಮಾಡುವ ಜೊತೆಗೆ ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವ ಉದ್ದೇಶದಿಂದ ಈ ವಿಶೇಷ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಆಸ್ತಿ ನೋಂದಣಿ ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು ಕಾಯುತ್ತಿದ್ದವರಿಗೆ ಅನುಕೂಲವಾಗಲಿದೆ.
ಇಲಾಖೆಯ ಪ್ರಕಟಣೆಯ ಪ್ರಕಾರ, ಜುಲೈ 12ರಂದು ಎಲ್ಲಾ ಉಪ ನೋಂದಣಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ಎಂದಿನಂತೆ ಆಸ್ತಿ ನೋಂದಣಿ, ಮುದ್ರಾಂಕ (Stamp) ಖರೀದಿ ಹಾಗೂ ಇಲಾಖೆಗೆ ಸಂಬಂಧಿಸಿದ ಇತರ ಸೇವೆಗಳನ್ನು ಯಾವುದೇ ಅಡಚಣೆಯಿಲ್ಲದೆ ಪಡೆಯಬಹುದಾಗಿದೆ.
ಈ ವಿಶೇಷ ವ್ಯವಸ್ಥೆಯಿಂದ ವಾರದ ಕೆಲಸದ ದಿನಗಳಲ್ಲಿ ಕಚೇರಿಗೆ ತೆರಳಲು ಸಾಧ್ಯವಾಗದ ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆಗೆ ಸಮಯ ನಿಗದಿಪಡಿಸಿಕೊಂಡಿರುವವರು ಕೂಡ ಈ ಅವಕಾಶವನ್ನು ಬಳಸಿಕೊಳ್ಳಬಹುದು.
ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ಸಾರ್ವಜನಿಕರು ಈ ವಿಶೇಷ ಸೇವೆಯ ಸದುಪಯೋಗ ಪಡೆದು ತಮ್ಮ ನೋಂದಣಿ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಮನವಿ ಮಾಡಿದೆ. ಭಾನುವಾರವೂ ಸೇವೆ ಲಭ್ಯವಿರುವುದರಿಂದ ನೋಂದಣಿ ಪ್ರಕ್ರಿಯೆಯಲ್ಲಿ ಉಂಟಾಗುವ ವಿಳಂಬವೂ ಕಡಿಮೆಯಾಗುವ ನಿರೀಕ್ಷೆಯಿದೆ.
ದೇಶ
14 ಗಂಟೆಯಲ್ಲಿ 265 ಕಿ.ಮೀ ಪಯಣ; MLA ಸುರೇಶ್ ಕುಮಾರ್ ಅವರ ಫಿಟ್ನೆಸ್‌ಗೆ ಜನ ಫಿದಾ
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಮತ್ತೊಮ್ಮೆ ತಮ್ಮ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಇರುವ ಬದ್ಧತೆಯನ್ನು ಸಾಬೀತುಪಡಿಸಿದ್ದಾರೆ. 70 ವರ್ಷದ ವಯಸ್ಸಿನಲ್ಲಿಯೂ ಯುವಕರಿಗೆ ಮಾದರಿಯಾಗುವಂತೆ ಅವರು ಬೆಂಗಳೂರುದಿಂದ ತಿರುಪತಿವರೆಗೆ 265 ಕಿಲೋಮೀಟರ್‌ಗಳನ್ನು ಸೈಕಲ್‌ನಲ್ಲಿ ಕ್ರಮಿಸಿ ಗಮನ ಸೆಳೆದಿದ್ದಾರೆ.
‘ರಾಜಾಜಿನಗರ ಪೆಡಲ್ ಪವರ್-ಸೈಕ್ಲಿಂಗ್‘ ತಂಡದ ಸದಸ್ಯರೊಂದಿಗೆ ಅವರು ಜುಲೈ 10ರಂದು ಆರಂಭವಾದ ಈ ಸೈಕ್ಲಿಂಗ್ ಯಾತ್ರೆಯಲ್ಲಿ ಭಾಗವಹಿಸಿದ್ದರು. ಜುಲೈ 9ರಂದು ಬೆಳಗ್ಗೆ 4:30ಕ್ಕೆ ಬಸವೇಶ್ವರನಗರದಿಂದ ಹೊರಟ ತಂಡವು ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ತಿರುಪತಿ ತಲುಪಿತು. ಮಧ್ಯದಲ್ಲಿ ಮದನಪಲ್ಲಿಯಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದ ತಂಡ ಒಟ್ಟು 265 ಕಿಲೋಮೀಟರ್‌ಗಳನ್ನು ಸುಮಾರು 14 ಗಂಟೆ 10 ನಿಮಿಷಗಳಲ್ಲಿ ಪೂರ್ಣಗೊಳಿಸಿದೆ.
ವಿಶೇಷವೆಂದರೆ, ಇದು ಸುರೇಶ್ ಕುಮಾರ್ ಅವರ ಮೊದಲ ತಿರುಪತಿ ಸೈಕಲ್ ಯಾತ್ರೆಯಲ್ಲ. 2024 ಮತ್ತು 2025ರಲ್ಲೂ ಇದೇ ರೀತಿಯಲ್ಲಿ ಸೈಕಲ್ ಮೂಲಕ ತಿರುಪತಿಗೆ ತೆರಳಿ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರಿದ್ದರು. ಈ ವರ್ಷವೂ ತಮ್ಮ ತಂಡದೊಂದಿಗೆ ಪೆಡಲ್ ಹೊಡೆದು ಯಶಸ್ವಿಯಾಗಿ ಗುರಿ ತಲುಪಿದ್ದಾರೆ.
ಪ್ರಯಾಣದ ಬಳಿಕ ಮಾತನಾಡಿದ ಶಾಸಕ ಎಸ್. ಸುರೇಶ್ ಕುಮಾರ್, “ಈ ಯಾತ್ರೆ ನಮ್ಮ ತಂಡಕ್ಕೆ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ನೀಡಿದೆ. ಇಂತಹ ಸೈಕ್ಲಿಂಗ್ ಚಟುವಟಿಕೆಗಳು ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ಮಾರ್ಗ” ಎಂದು ಹೇಳಿದರು.
ಸಾರ್ವಜನಿಕ ಜೀವನದ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಿರುವ ಸುರೇಶ್ ಕುಮಾರ್ ಅವರ ಈ ಸಾಧನೆ ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿದ್ದು, ಯುವಜನತೆಗೆ ಮಾತ್ರವಲ್ಲದೆ ಎಲ್ಲ ವಯೋಮಾನದವರಿಗೂ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವಾಗಿದೆ.
ದೇಶ
Iran-ಅಮೆರಿಕ ಯುದ್ಧ ಆತಂಕ: ಮಂಗಳೂರಿನಲ್ಲಿ ಮತ್ತೊಂದು ಬೃಹತ್ ತೈಲ ಸಂಗ್ರಹಾಗಾರ, ಭಾರತದ ಇಂಧನ ಭದ್ರತೆಗೆ ONGC ಮಹತ್ವದ ನಿರ್ಧಾರ
ನವದೆಹಲಿ: ಇರಾನ್-ಅಮೆರಿಕ (Iran-USA War) ಸಂಘರ್ಷದಿಂದ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ನಡುವೆಯೇ, ಭಾರತ ತನ್ನ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲೂ ತೈಲ ಕೊರತೆ ಉಂಟಾಗದಂತೆ ತಡೆಯುವ ಉದ್ದೇಶದಿಂದ ಮಂಗಳೂರಿನಲ್ಲಿ (Mangaluru) ಮತ್ತೊಂದು ಬೃಹತ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ (Strategic Petroleum Reserve – SPR) ನಿರ್ಮಾಣಕ್ಕೆ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) ತಾತ್ವಿಕ ಅನುಮೋದನೆ ನೀಡಿದೆ.
ಹೊಸದಾಗಿ ನಿರ್ಮಾಣವಾಗಲಿರುವ ಈ ಸಂಗ್ರಹಾಗಾರವು 1.75 MMT ಸಾಮರ್ಥ್ಯ ಹೊಂದಿದ್ದು, ದೇಶದ ತುರ್ತು ತೈಲ ಸಂಗ್ರಹ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. ಸುಮಾರು 1.28 ಕೋಟಿ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹಿಸಬಹುದಾದ ಈ ಯೋಜನೆ, ಜಾಗತಿಕ ಬಿಕ್ಕಟ್ಟುಗಳ ಸಮಯದಲ್ಲಿ ಭಾರತದ ಇಂಧನ ಸುರಕ್ಷತೆಗೆ ದೊಡ್ಡ ಬಲವಾಗಲಿದೆ.
ಪ್ರಸ್ತುತ ಭಾರತದಲ್ಲಿ ಮಂಗಳೂರು, ಪಾದೂರು (ಉಡುಪಿ) ಹಾಗೂ ವಿಶಾಖಪಟ್ಟಣಂನಲ್ಲಿ ಒಟ್ಟು 5.33 MMT ಸಾಮರ್ಥ್ಯದ ಭೂಗತ ತೈಲ ಸಂಗ್ರಹಾಗಾರಗಳಿವೆ. ಈಗ ಮಂಗಳೂರಿನಲ್ಲಿ ಹೆಚ್ಚುವರಿಯಾಗಿ ನಿರ್ಮಾಣವಾಗುವ ಈ ಯೋಜನೆಯಿಂದ ದೇಶದ ತುರ್ತು ತೈಲ ಬ್ಯಾಕಪ್ ಮತ್ತಷ್ಟು ಬಲಿಷ್ಠವಾಗಲಿದೆ.
ಇದುವರೆಗೆ ದೇಶದ ತುರ್ತು ತೈಲ ಸಂಗ್ರಹಾಗಾರಗಳನ್ನು Indian Strategic Petroleum Reserves Limited (ISPRL) ನಿರ್ಮಿಸುತ್ತಿತ್ತು. ಆದರೆ, ಮೊದಲ ಬಾರಿಗೆ ONGC ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ಇಂತಹ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿರುವುದು ವಿಶೇಷವಾಗಿದೆ.
ಮಂಗಳೂರಿನಲ್ಲಿ ಈಗಾಗಲೇ MRPL ಸಂಸ್ಥೆಯು ದಿನಕ್ಕೆ ಸುಮಾರು 3 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಶುದ್ಧೀಕರಿಸುವ ಸಾಮರ್ಥ್ಯದ ರಿಫೈನರಿ ಹೊಂದಿದೆ. ಹೊಸ ಸಂಗ್ರಹಾಗಾರವನ್ನು ಇದೇ ಮೂಲಸೌಕರ್ಯಕ್ಕೆ ಸಂಪರ್ಕಿಸುವ ಯೋಜನೆ ರೂಪಿಸಲಾಗಿದ್ದು, ವಾಣಿಜ್ಯ ಬಳಕೆಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವನ್ನು ONGC ಕೋರಿದೆ.
MRPL ಷೇರುಗಳಲ್ಲಿ ಭಾರಿ ಏರಿಕೆ
ಈ ಘೋಷಣೆಯ ಬಳಿಕ ONGC ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಷೇರುಗಳು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ ಕಂಡಿವೆ. ಶುಕ್ರವಾರದ ವಹಿವಾಟಿನಲ್ಲಿ ಷೇರುಗಳು ಸುಮಾರು 9% (₹12.17) ಏರಿಕೆಯಾಗಿದ್ದು, ಮಾರುಕಟ್ಟೆ ತಜ್ಞರ ಪ್ರಕಾರ ₹165 ಮಟ್ಟ ದಾಟಿದರೆ ಮುಂದಿನ ದಿನಗಳಲ್ಲಿ ₹190 ರಿಂದ ₹200ರವರೆಗೆ ಏರಿಕೆ ಕಾಣುವ ಸಾಧ್ಯತೆಯಿದೆ.
ತುರ್ತು ತೈಲ ಸಂಗ್ರಹ ಏಕೆ ಅಗತ್ಯ?
ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿದೆ. ಯುದ್ಧ, ಜಾಗತಿಕ ಬಿಕ್ಕಟ್ಟು ಅಥವಾ ಪೂರೈಕೆ ವ್ಯತ್ಯಯದ ಸಂದರ್ಭದಲ್ಲಿ ದೇಶದಲ್ಲಿ ಇಂಧನ ಕೊರತೆ ಉಂಟಾಗದಂತೆ ತಡೆಯಲು ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರಸ್ತುತ ಭಾರತದ ತುರ್ತು ತೈಲ ಸಂಗ್ರಹವು ಸುಮಾರು 9 ದಿನಗಳ ಅವಶ್ಯಕತೆಯನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಸಾಮರ್ಥ್ಯವನ್ನು 15 MMTಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ (IEA) ತನ್ನ ಸದಸ್ಯ ರಾಷ್ಟ್ರಗಳು ಕನಿಷ್ಠ 90 ದಿನಗಳ ತೈಲ ಸಂಗ್ರಹ ಹೊಂದಿರಬೇಕೆಂದು ಶಿಫಾರಸು ಮಾಡಿದೆ.
ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಈ ಹೊಸ ಯೋಜನೆ ಭವಿಷ್ಯದ ಜಾಗತಿಕ ಬಿಕ್ಕಟ್ಟುಗಳನ್ನು ಎದುರಿಸಲು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
-
ದೇಶ21 hours ago7 ದಿನದಲ್ಲಿ ವಾಹನ ತೆರವುಗೊಳಿಸಿ, ಇಲ್ಲದಿದ್ದರೆ ಹರಾಜು! ಬೆಂಗಳೂರು ಪೊಲೀಸರ ಖಡಕ್ ಎಚ್ಚರಿಕೆ
-
ದೇಶ19 hours agoಮೈಸೂರು ದಸರಾ ದಿನಾಂಕ ಘೋಷಣೆ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ
-
ದೇಶ20 hours agoತಮಿಳುನಾಡು ಸರ್ಕಾರದ ಹೊಸ ಆದೇಶ: ಸರ್ಕಾರಿ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆ ಸಂಪೂರ್ಣ ನಿಷೇಧ
-
ದೇಶ19 hours agoಬಾಲಿವುಡ್ ನಟ ರಾಜ್ಪಾಲ್ ಯಾದವ್ಗೆ ಹಿನ್ನಡೆ: ದೆಹಲಿ ಕೋರ್ಟ್ ಮಹತ್ವದ ತೀರ್ಪು
-
ಆರೋಗ್ಯ24 hours agoಮೆಡಿಕಲ್ ಶಾಪ್ಗಳಿಗೆ ಹೊಸ ಮಾರ್ಗಸೂಚಿ: ಔಷಧ ಮಾರಾಟದ ದಾಖಲೆ 3 ವರ್ಷ ಕಡ್ಡಾಯ
-
ದೇಶ22 hours agoಕರ್ನಾಟಕ PRC ಆದೇಶ ಸಂವಿಧಾನ ವಿರೋಧಿ? ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಮನವಿ
-
ಕ್ರೀಡೆ22 hours agoಇಂಗ್ಲೆಂಡ್ ವಿರುದ್ಧದ ಸೋಲು ಬೆನ್ನಲ್ಲೇ ಗಂಭೀರ್ ಭವಿಷ್ಯ ಪ್ರಶ್ನೆ; ಲಕ್ಷ್ಮಣ್ ಹೆಸರು ಮುನ್ನೆಲೆಗೆ?
-
ದೇಶ21 hours agoಭಾರೀ ಮಳೆಯಿಂದ ಹಾವು ಸಾಕಾಣಿಕೆ ಕೇಂದ್ರಗಳು ಜಲಾವೃತ; ನಾಗರಹಾವು ಸೇರಿ 900 ಸರ್ಪಗಳು ಪರಾರಿ
