Connect with us

ದೇಶ

ಇಂದು ವಿಶ್ವ ಹಾವು ದಿನ: ಸರ್ಪಗಳ ಬಗ್ಗೆ ನೀವು ತಿಳಿಯಲೇಬೇಕಾದ ಹಲವು ಸಂಗತಿಗಳು ಇಲ್ಲಿವೆ! – World Snake Day 2024

Published

on

ಪ್ರಪಂಚದಾದ್ಯಂತದ ಇಂದು (ಜುಲೈ 16) ವಿಶ್ವ ಹಾವು ದಿನ ಆಚರಿಸಲಾಗುತ್ತದೆ. ವಿವಿಧ ಪ್ರಭೇದದ ಹಾವುಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಒತ್ತು ನೀಡುತ್ತದೆ. ಈವರೆಗೆ ಸುಮಾರು 3,789 ಪ್ರಕಾರದ ಹಾವುಗಳ ಪ್ರಭೇದಗಳನ್ನು ಗುರುತಿಸಲಾಗಿದೆ. ವಿಶ್ವ ಹಾವು ದಿನವು ಪರಿಸರದ ಸಮತೋಲನ ಕಾಪಾಡುವಲ್ಲಿ ಮತ್ತು ಹಾವುಗಳ ಸಂರಕ್ಷಣಾ ಪ್ರಯತ್ನಗಳನ್ನು ಉತ್ತೇಜಿಸುವಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ.

ಹಾವುಗಳ ಕುರಿತ ನಕಾರಾತ್ಮಕ ಗ್ರಹಿಕೆ ಮತ್ತು ಪುರಾಣಗಳ ಹೊರತಾಗಿಯೂ, ಇಲಿಗಳ ನಿಯಂತ್ರಿಸುವಲ್ಲಿ ಮತ್ತು ಅವುಗಳಿಂದ ಹರಡುವು ರೋಗಗಳನ್ನು ತಡೆಗಟ್ಟುವಲ್ಲಿ ಹಾವುಗಳು ಅತ್ಯಗತ್ಯ. ಭಾರತವು ಸುಮಾರು 300 ಹಾವು ಪ್ರಭೇದಗಳಿಗೆ ನೆಲೆಯಾಗಿದೆ. ವಿಶ್ವ ಹಾವು ದಿನವು ಹಾವು ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪೂರಕವಾಗಿದೆ.

ವಿಶ್ವ ಹಾವು ದಿನದ ಇತಿಹಾಸ: ವಿಶ್ವ ಹಾವು ದಿನವನ್ನು ಯಾವಾಗಿನಿಂದ ಆಚರಣೆ ಮಾಡಿಕೊಂಡುಬರಲಾಗುತ್ತದೆ ಎಂಬುದನ್ನು ದಾಖಲಿಸಲ್ಪಟ್ಟಿಲ್ಲ. ಆದರೆ, ಭಾರತದಲ್ಲಿ ಈ ಬಗ್ಗೆ ಹೊಂದಿರುವ ಮಹತ್ವವನ್ನು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪುರಾಣಗಳಿಂದ ಗುರುತಿಸಬಹುದು. ಭಾರತೀಯ ಪುರಾಣಗಳಲ್ಲಿ ನಾಗಗಳು ಎಂದೂ ಕರೆಯಲ್ಪಡುವ ಹಾವುಗಳನ್ನು ಪವಿತ್ರ ಜೀವಿಗಳೆಂದು ಗುರುತಿಸಲಾಗಿದೆ.

ನಾಗರಹಾವು, ಕಾಳಿಂಗ ಸರ್ಪ ಮತ್ತು ರಸ್ಸೆಲ್ಸ್ ವೈಪರ್ ಸೇರಿದಂತೆ ಭಾರತದಲ್ಲಿ ಕಂಡುಬರುವ ವಿವಿಧ ಹಾವಿನ ಜಾತಿಗಳನ್ನು ಗಮನಿಸಿದರೆ, ಈ ಆಚರಣೆಯು ಆವಾಸಸ್ಥಾನದ ನಷ್ಟ ಮತ್ತು ಮಾನವ-ಪ್ರಾಣಿ ಸಂಘರ್ಷದಿಂದಾಗಿ ಈ ಹಾವುಗಳ ಜನಸಂಖ್ಯೆಯು ಕ್ಷೀಣಿಸುತ್ತಿರುವುದನ್ನು ಕಾಣಬಹುದು.

ಇತ್ತೀಚಿನ ವರ್ಷಗಳಲ್ಲಿ ಹಾವಿನ ರಕ್ಷಣೆ ಮತ್ತು ಪುನರ್ವಸತಿ ಮುಂತಾದ ಉಪಕ್ರಮಗಳಿಂದ ಅನೇಕ ಹಾವುಗಳ ಜೀವ ಉಳಿಸುವಲ್ಲಿ ಮತ್ತು ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ದಿನ ಸಹಕಾರಿಯಾಗಿದೆ. ಭಾರತದಲ್ಲಿ ಜಾಗೃತಿ ಅಭಿಯಾನಗಳು, ಹಾವು ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಾಗಾರಗಳು ಮತ್ತು ಪ್ರದರ್ಶನಗಳಂತಹ ವಿವಿಧ ಶೈಕ್ಷಣಿಕ ಮತ್ತು ಸಂರಕ್ಷಣಾ ಚಟುವಟಿಕೆಗಳ ಮೂಲಕ ವಿಶ್ವ ಹಾವು ದಿನವನ್ನು ಆಚರಿಸಲಾಗುತ್ತದೆ.

ಈ ಕಾರ್ಯಕ್ರಮಗಳ ಮೂಲಕ ಪರಿಸರ ವ್ಯವಸ್ಥೆಯಲ್ಲಿ ಹಾವುಗಳು ವಹಿಸುವ ಪ್ರಮುಖ ಪಾತ್ರ, ಅವುಗಳ ಸರಿಯಾದ ನಿರ್ವಹಣೆ ಮತ್ತು ಅವುಗಳ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ತಿಳಿಸುವ ಉದ್ದೇಶ ಹೊಂದಿದೆ. ನೇಚರ್ ಕ್ಲಬ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಈ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತವೆ. ಈ ಸರೀಸೃಪಗಳ ಬಗ್ಗೆ ಉತ್ತಮ ಅರಿವು ಮೂಡಿಸಲು ವನ್ಯಜೀವಿ ತಜ್ಞರು ಮತ್ತು ಉರಗ ತಜ್ಞರು ನೇತೃತ್ವದಲ್ಲಿ ಸಮಾವೇಶಗಳನ್ನು ನಡಸಲಾಗುತ್ತದೆ.

ವಿಶ್ವ ಹಾವು ದಿನದ ಮಹತ್ವ: ಹಾವುಗಳು ಮಾರುವೇಷದಲ್ಲಿ ಪ್ರಾವೀಣ್ಯತೆ, ನುರಿತ ಬೇಟೆ ಮತ್ತು ತಿನ್ನುವುದರಲ್ಲಿ ಚಾಂಪಿಯನ್. ಈ ಮಾಂಸಾಹಾರಿ ಸರೀಸೃಪಗಳ ಬಗ್ಗೆ ನಿಮಗೆ ತಿಳಿಯದಿರುವ ಅದ್ಭುತ ಸಂಗತಿಗಳು ಇಲ್ಲಿವೆ.

  • ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಸುಮಾರು 600 ಜಾತಿಯ ಹಾವುಗಳು ವಿಷಪೂರಿತವಾಗಿವೆ. ಇದರಲ್ಲಿ ಕೇವಲ 200 ಪ್ರಕಾರ ಹಾವುಗಳು ಮಾನವನನ್ನು ಕೊಲ್ಲಲು ಅಥವಾ ಗಾಯಗೊಳಿಸುವ ಸಾಮರ್ಥ್ಯ ಹೊಂದಿದೆ.
  • ಹಾವುಗಳು ತಮ್ಮ ತಲೆಗಿಂತ ಶೇ 75ರಿಂದ 100ರಷ್ಟು ದೊಡ್ಡದಾದ ಪ್ರಾಣಿಗಳನ್ನು ನುಂಗಬಲ್ಲವು.
  • ಇತ್ತೀಚಿನ ದತ್ತಾಂಶದ ಪ್ರಕಾರ, ಒಟ್ಟು 3,789 ಹಾವಿನ ಪ್ರಭೇದಗಳಿವೆ. ಇದು ಹಲ್ಲಿಗಳ ನಂತರ ಸರೀಸೃಪಗಳ ಎರಡನೇ ದೊಡ್ಡ ಗುಂಪಾಗಿದೆ. ಇವುಗಳಲ್ಲಿ 30 ವಿವಿಧ ಮುಖ್ಯ ಪ್ರಭೇದಗಳು ಮತ್ತು ಹಲವು ಉಪ ಪ್ರಭೇದಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಸರಿಸುಮಾರು 140 ಪ್ರಭೇದದ ಹಾವುಗಳು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತವೆ.
  • ಭಾರತೀಯ ಸಂಸ್ಕೃತಿಯಲ್ಲಿ ನಾಗರಹಾವುಗಳನ್ನು ಸರ್ಪಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಇವುಗಳು ನಂಬಲಾಗದ ಶಕ್ತಿಗಳನ್ನು ಹೊಂದಿದೆ ಎಂದು ನಂಬಿಕೆಯಿದೆ. ಹಿಂದೂ ಪುರಾಣಗಳಲ್ಲಿ ನಾಗರಹಾವನ್ನು ಸಾಮಾನ್ಯವಾಗಿ ನಾಗ ಎಂದು ಕರೆಯಲಾಗುತ್ತದೆ. ಅನೇಕ ಕಥೆಗಳು ಈ ಶಕ್ತಿಯುತ ಜೀವಿಗಳ ಸುತ್ತ ಸುತ್ತುತ್ತವೆ. ಕೆಲವೊಮ್ಮೆ ಈ ನಾಗವನ್ನು ಅರ್ಧ ಮಾನವ ಮತ್ತು ಅರ್ಧ ಹಾವು ಎಂದು ಚಿತ್ರಿಸಲಾಗುತ್ತದೆ.
  • ಹಿಂದೂ ಧರ್ಮದ ಪ್ರಮುಖ ದೇವರಲ್ಲಿ ಒಬ್ಬರಾದ ಭಗವಾನ್ ಶಿವನ ಕುತ್ತಿಗೆಯಲ್ಲಿ ನಾಗರಹಾವು ಇರುವ ಚಿತ್ರಿ ಕಂಡುಬರುತ್ತದೆ. ನಾಗರಹಾವುಗಳು ಸಾವು ಮತ್ತು ಪುನರ್ಜನ್ಮದ ಮೇಲಿನ ಶಕ್ತಿಯನ್ನು ಸಂಕೇತಿಸುತ್ತದೆ ಎಂದು ಪುರಾಣಗಳಿಂದ ತಿಳಿದುಬರುತ್ತದೆ.
  • ಆಶ್ಚರ್ಯ ಎಂದರೆ, ಹಾವುಗಳಿಗೆ ಕಣ್ಣುರೆಪ್ಪೆಗಳಿಲ್ಲ. ಇದರರ್ಥ ಹಾವುಗಳು ಕಣ್ಣುಗಳನ್ನು ಮಿಟುಕಿಸುವುದಿಲ್ಲ ಮತ್ತು ತಮ್ಮ ಕಣ್ಣುಗಳನ್ನು ತೆರೆದು ಮಲಗುತ್ತವೆ. ಕಣ್ಣುರೆಪ್ಪೆಗಳ ಬದಲಿಗೆ ಅವುಗಳನ್ನು ರಕ್ಷಿಸಲು ಪ್ರತಿ ಕಣ್ಣಿಗೆ ತೆಳುವಾದ ಪೊರೆಯನ್ನು ಜೋಡಿಸಲಾಗಿದೆ. ಅದನ್ನು ಮೆಂಬರೇನ್ ‘ಬ್ರಿಲ್ಲೆ’ ಎಂದು ಕರೆಯಲಾಗುತ್ತದೆ. ಜರ್ಮನ್ ಭಾಷೆಯಲ್ಲಿ ‘ಬ್ರಿಲ್ಲೆ’ ಅಂದ್ರೆ ಕನ್ನಡಕ ಎಂದರ್ಥ.
  • ಹಾವುಗಳು ಮೂಗಿನ ಹೊಳ್ಳೆಗಳನ್ನು ಹೊಂದಿರುತ್ತವೆ. ಆದರೆ, ಅವುಗಳನ್ನು ವಾಸನೆ ಗ್ರಹಿಸಲು ಬಳಸುವುದಿಲ್ಲ. ಬದಲಿಗೆ ಹಾವುಗಳು ತಮ್ಮ ನಾಲಿಗೆಯಿಂದ ವಾಸನೆಯನ್ನು ಗ್ರಹಿಸುತ್ತವೆ. ಜೊತೆಗೆ ಅವುಗಳ ಬಾಯಿಯಲ್ಲಿರುವ ಜಾಕೋಬ್ಸನ್ ಅಂಗವನ್ನು ಬಳಸುತ್ತವೆ. ಹಾವುಗಳ ವಾಸನೆ ಗ್ರಹಿಕೆ ಸಾಮರ್ಥ್ಯ ಉತ್ತಮವಾಗಿದೆ. ಇದನ್ನು ಸ್ಟಿರಿಯೊದಲ್ಲಿ ವಾಸನೆ ಎಂದು ವಿವರಿಸಲಾಗುತ್ತದೆ. ಹಾವುಗಳು ಕವಲೊಡೆದ ನಾಲಿಗೆಯನ್ನು ಹೊಂದಿವೆ. ಹಾವುಗಳ ಸಮೀಪ ವಿವಿಧ ರಾಸಾಯನಿಕ ವಾಸನೆ ಬಂದರೆ, ಅವು ಸುಲಭವಾಗಿ ಗ್ರಹಿಸುತ್ತವೆ.
  • ಹುಲ್ಲಿನ ಮೇಲೆ ಹಾವುಗಳು ಫಾಸ್ಟ್​ ಆಗಿ ಚಲಿಸುತ್ತವೆ. ಏಕೆಂದರೆ ಇದು ಹಾವುಗಳಲ್ಲಿ ಲೊಕೊಮೊಶನ್ ಲಕ್ಷಣವಾಗಿದೆ. ಇದನ್ನು ಲ್ಯಾಟರಲ್ ಅಂಡ್ಯುಲೇಶನ್ ಎಂದೂ ಕರೆಯುತ್ತಾರೆ. ಆದರೆ, ಹಾವುಗಳು ನಾಲ್ಕು ಇತರ ರೀತಿಯ ಚಲನೆಯನ್ನು ಹೊಂದಿವೆ. ಉದಾಹರಣೆಗೆ, ಅರ್ಬೊರಿಯಲ್ ಹಾವುಗಳು ಕನ್ಸರ್ಟಿನಾ ಎಂದು ಕರೆಯಲ್ಪಡುವ ಏಳು ಪಟ್ಟು ಹೆಚ್ಚು ಶಕ್ತಿಯನ್ನು ಅಂದ್ರೆ, ಲೊಕೊಮೊಶನ್ ಅನ್ನು ಗುಣಲಕ್ಷಣವನ್ನು ಹೊಂದಿವೆ. ಹಾವು ನಯವಾದ ಮೇಲ್ಮೈಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ವಿಶೇಷವಾದ ಲೊಕೊಮೊಶನ್ ಅನ್ನು ಸಹ ಬಳಸಲಾಗುತ್ತದೆ. ಇದನ್ನು ಸ್ಲೈಡ್ ಪುಶಿಂಗ್ ಎಂದು ಕರೆಯಲಾಗುತ್ತದೆ.
  • ಹೆಚ್ಚಿನ ಹಾವುಗಳು ಮೊಟ್ಟೆಗಳನ್ನು ಇಡುತ್ತವೆ. ಆದರೆ, ಸಮುದ್ರ ಹಾವುಗಳು ಸೇರಿದಂತೆ ಕೆಲವು ಜಾತಿಗಳು ಮರಿಗಳಿಗೆ ಜನ್ಮ ನೀಡುತ್ತವೆ.
  • ಮಿಲನದ ಅವಧಿಯನ್ನು ಹೊರತುಪಡಿಸಿ ಹಾವುಗಳು ಹೆಚ್ಚಾಗಿ ಒಂಟಿಯಾಗಿರುತ್ತವೆ.
  • ಅಂಟಾರ್ಕ್ಟಿಕಾ ಮತ್ತು ಉತ್ತರ ಮತ್ತು ದಕ್ಷಿಣ ಪೋಲ್​ಗಳ ಹೊರೆಗೆ, ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ಹೊರತುಪಡಿಸಿ ಭೂಮಿಯ ಎಲ್ಲೆಡೆ ಹಾವುಗಳು ಕಂಡುಬರುತ್ತವೆ.
  • ಕೆಲವು ಸಮುದ್ರ ಹಾವುಗಳು ತಮ್ಮ ಚರ್ಮದ ಮೂಲಕ ಆಂಶಿಕವಾಗಿ ಉಸಿರಾಡಬಲ್ಲವು. ಇದು ಅವುಗಳಿಗೆ ನೀರಿನ ಅಡಿಯಲ್ಲಿ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುತ್ತದೆ.
  • ಹಾವುಗಳು ಎಲುಬುಗಳನ್ನು ಹೊಂದಿದ್ದು, ಇವು 1,200ರವರೆಗೆ ಮೂಳೆಗಳು ಹೊಂದಿರಬಹುದು.
  • ಹಾವುಗಳು (ರ್‍ಯಾಟಲ್​ಸ್ನೇಕ್ ರ್‍ಯಾಟಲ್ಸ್) ಕೆರಾಟಿನ್ ಅನ್ನು ಹೊಂದಿರುತ್ತವೆ. ಕೆರಾಟಿನ್ ಮಾನವನ ಕೂದಲು ಮತ್ತು ಉಗುರುಗಳಲ್ಲಿ ಕಂಡುಬರುತ್ತದೆ.
  • ಕೆಲವು ಹಾವುಗಳು ಹೆಣ್ಣು ಶಕ್ತಿಯನ್ನು ಹೊಂದಿವೆ. ಅವುಗಳಲ್ಲಿ ಚಿಕ್ಕ ಬ್ರಾಹ್ಮಿನಿ ಬ್ಲೈಂಡ್​ಸ್ನೇಕ್ ಅಥವಾ ಫ್ಲವರ್​ಫೊಟ್​ ಸ್ನೇಕ್ ಸೇರಿದ್ದು, ಇವು ಹೆಣ್ಣಿನ ಗುಣ ಹೊಂದಿರುವ ಏಕೈಕ ಹಾವಿನ ಜಾತಿಯಾಗಿದೆ. ಅವುಗಳು ತಮ್ಮದೇ ಆದ ಸಂತಾನೋತ್ಪತ್ತಿ ಮಾಡಬಲ್ಲವು.

ಕರ್ನಾಟಕದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದವರ ಸಂಖ್ಯೆ: ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯ ಅಂಕಿ-ಅಂಶಗಳ ಪ್ರಕಾರ, ಈ ವರ್ಷ ಕರ್ನಾಟಕದಲ್ಲಿ 5,418 ಹಾವು ಕಡಿತದ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 36 ಸಾವುಗಳ ಸಂಭವಿಸಿವೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ 2024ರ ಫೆಬ್ರವರಿಯಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. 2030ರ ವೇಳೆಗೆ ಸಾವುಗಳು ಮತ್ತು ಅಂಗವೈಕಲ್ಯ ಸೇರಿದಂತೆ ಹಾವು ಕಡಿತದ ಪ್ರಕರಣಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಕಾಳಿಂಗ ಸರ್ಪ, ಮಲಬಾರ್ ಪಿಟ್ ವೈಪರ್ ಮತ್ತು ಹಂಪ್ ನೋಸ್ಡ್ ಪಿಟ್ ವೈಪರ್​ನಂತಹ ಹಲವಾರು ವಿಷಕಾರಿ ಹಾವುಗಳಿಗೆ ರಾಜ್ಯವು ನೆಲೆಯಾಗಿದೆ.

ಹಾವು ಕಡಿತದ ಪ್ರಕರಣಗಳನ್ನು ಕಡಿಮೆ ಮಾಡಲು ವಿವಿಧ ಸಂಸ್ಥೆಗಳನ್ನು ಒಳಗೊಂಡ ಸಂಘಟಿತ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. 172 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಜೊತೆಗೆ ಕೆಲವು ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳೆಂದು ಗುರುತಿಸಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉನ್ನತ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತಕ್ಕೆ ಅಗತ್ಯ ಔಷಧಿ ಲಭ್ಯವಿರುತ್ತದೆ.

ಕರ್ನಾಟಕದಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ (ಜನವರಿಯಿಂದ ಜೂನ್‌ವರೆಗೆ) ಒಟ್ಟು 5,418 ಹಾವು ಕಡಿತ ಪ್ರಕರಣಗಳು ಮತ್ತು 36 ಸಾವುಗಳು ವರದಿಯಾಗಿದೆ. 2023ರಲ್ಲಿ 6,596 ಹಾವು ಕಡಿತ ಪ್ರಕರಣಗಳು ಮತ್ತು 19 ಸಾವುಗಳು ಮಾತ್ರ ವರದಿಯಾಗಿದ್ದವು.

ಭಾರತದಲ್ಲಿ ADSI ಪ್ರಕಾರ ಹಾವು ಕಡಿತದ ಸಾವಿನ ಪ್ರಕರಣಗಳು (2018-2022)

ವರ್ಷಗಾಯಗೊಂಡಿರುವರ ಸಂಖ್ಯೆಮೃತಪಟ್ಟವರ ಸಂಖ್ಯೆ
2018708962
2019399224
2020629822
20216410382
20223110096

Source:ADSI REPORT

ಕರ್ನಾಟಕದಲ್ಲಿ ADSI ಪ್ರಕಾರ ಹಾವು ಕಡಿತದ ಸಾವಿನ ಪ್ರಕರಣಗಳು (2018-2022)

ವರ್ಷಗಾಯಗೊಂಡಿರುವರ ಸಂಖ್ಯೆಮೃತಪಟ್ಟವರ ಸಂಖ್ಯೆ
20182561
20190614
20200636
20210698
20220688

Source:ADSI REPORT

ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ: ಹೆಚ್ಚಿನ ಹಾವುಗಳು ಜನರಿಗೆ ಅಪಾಯಕಾರಿ ಅಲ್ಲ. ಪ್ರಪಂಚದಾದ್ಯಂತ ಕೇವಲ ಶೇ15 ಮತ್ತು ಅಮೆರಿಕದಲ್ಲಿ ಶೇ 20ರಷ್ಟು ಹಾವುಗಳು ತುಂಬಾ ವಿಷಕಾರಿಯಾಗಿವೆ. ಈ ಹಾವುಗಳ ಕಚ್ಚಿದರೆ, ವ್ಯಕ್ತಿ ಬೇಗ ಸಾವನ್ನಪ್ಪುತ್ತಾನೆ. ಉತ್ತರ ಅಮೆರಿಕಾದಲ್ಲಿ ಇವುಗನ್ನು ರ್‍ಯಾಟಲ್​ಸ್ನೇಕ್, ಕೋರಲ್ ಹಾವು, ವಾಟರ್​ ಮೊಕಾಸಿನ್ ಕಾಟನ್‌ಮೌತ್, ಕಾಪರ್‌ಹೆಡ್ ಎಂದೂ ಕರೆಯುತ್ತಾರೆ. ಇವುಗಳ ಕಡಿತವು ಗಂಭೀರ ಗಾಯಗಳಿಗೆ ಕಾರಣವಾಗಬಹುದು ಮತ್ತು ಕೆಲವೊಮ್ಮೆ ಸಾವಿಗೆ ಕಾರಣವಾಗಬಹುದು.

ವಿಷಪೂರಿತ ಹಾವು ನಿಮಗೆ ಕಚ್ಚಿದರೆ, ತಕ್ಷಣವೇ 911 ಅಥವಾ ನಿಮ್ಮ ಸ್ಥಳೀಯ ತುರ್ತು ಸಂಖ್ಯೆಗೆ ಕರೆ ಮಾಡಿ, ವಿಶೇಷವಾಗಿ ಕಚ್ಚಿದ ಪ್ರದೇಶವು ಬಣ್ಣವನ್ನು ಬದಲಾಗುತ್ತದೆ. ಊದಿಕೊಂಡಿರುತ್ತದೆ. ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಅನೇಕ ತುರ್ತು ವಿಭಾಗಗಳಲ್ಲಿ ಆಂಟಿವೆನಮ್ ಔಷಧ ಇರುತ್ತದೆ. ಅಲ್ಲಿ ನಿಮಗೆ ಸಹಾಯ ಮಾಡಬಹುದು.

ಹಾವು ಕಚ್ಚಿದಾಗ ಸಾಧ್ಯವಾದರೆ ಈ ಕ್ರಮಗಳನ್ನು ಪಾಲಿಸಿ:

  • ಹಾವಿನಿಂದ ದೂರ ಸರಿಯಿರಿ.
  • ನಿಮ್ಮ ಹತ್ತಿರದಲ್ಲಿ ಹಾವು ಇದ್ದರೆ ಗದ್ದಲ ಮಾಡದೆ ಶಾಂತವಾಗಿರಿ.
  • ಹಾವು ಕಚ್ಚಿದ ಭಾಗದಲ್ಲಿ ಊತ ಪ್ರಾರಂಭವಾಗುವ ಮೊದಲು ಯಾವುದೇ ಆಭರಣಗಳು, ಕೈಗಡಿಯಾರಗಳು ಅಥವಾ ಬಿಗಿಯಾದ ಬಟ್ಟೆಗಳನ್ನು ತೆಗೆದುಹಾಕಿ.
  • ಹಾವು ಕಚ್ಚಿದ ಸಮಯದಲ್ಲಿ ಭಯ ಪಡಬಾರದು, ಆರಾಮದಾಯಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ ಅಥವಾ ಮಲಗಿಕೊಳ್ಳಿ.
  • ಸೋಪ್ ಮತ್ತು ನೀರಿನಿಂದ ಕಚ್ಚಿದ ಭಾಗವನ್ನು ಸ್ವಚ್ಛಗೊಳಿಸಿ. ಸ್ವಚ್ಛ, ಒಣ ಬ್ಯಾಂಡೇಜ್‌ನಿಂದ ಅದನ್ನು ಸುತ್ತಿ ಅಥವಾ ಸಡಿಲವಾಗಿ ಕಟ್ಟಿಕೊಳ್ಳಿ.

ಎಚ್ಚರಿಕೆ ಕ್ರಮಗಳು:

  • ಟೂರ್ನಿಕೆಟ್ ಅಥವಾ ಐಸ್ ಬಳಸಬೇಡಿ.
  • ಕಚ್ಚುದ ಭಾಗವನ್ನು ಕತ್ತರಿಸಬೇಡಿ ಅಥವಾ ವಿಷವನ್ನು ತೆಗೆದುಹಾಕಲು ಪ್ರಯತ್ನಿಸಬೇಡಿ.
  • ಕೆಫೀನ್ ಅಥವಾ ಆಲ್ಕೋಹಾಲ್ ಕುಡಿಯಬೇಡಿ.
  • ಆಸ್ಪಿರಿನ್, ಐಬುಪ್ರೊಫೇನ್ (ಅಡ್ವಿಲ್, ಮೋಟ್ರಿನ್ ಐಬಿ, ಇತರೆ) ಅಥವಾ ನ್ಯಾಪ್ರೋಕ್ಸೆನ್ ಸೋಡಿಯಂ (ಅಲೆವ್) ನಂತಹ ನೋವು ನಿವಾರಕ ಔಷಧವನ್ನು ತೆಗೆದುಕೊಳ್ಳಬೇಡಿ. ಹಾಗೆ ಮಾಡುವುದರಿಂದ ನಿಮ್ಮ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು.
  • ಹಾವನ್ನು ಹಿಡಿಯಲು ಅಥವಾ ಬಲೆಗೆ ಬೀಳಿಸಲು ಪ್ರಯತ್ನಿಸಬೇಡಿ. ಅದರ ಬಣ್ಣ ಮತ್ತು ಆಕಾರವನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿ. ಇದರಿಂದ ನೀವು ಹಾವಿನ ವಿವರಿಸಬಹುದು. ಸಾಧ್ಯವಾದರೆ ದೂರದಿಂದ ಹಾವಿನ ಚಿತ್ರವನ್ನು ತೆಗೆದುಕೊಳ್ಳಿ. ನಿಮಗೆ ಯಾವ ರೀತಿಯ ಹಾವು ಕಚ್ಚಿದ ಎಂಬುದನ್ನು ತಿಳಿದು ಚಿಕಿತ್ಸೆ ನೀಡಲು ಸಹಾಯ ಆಗುತ್ತದೆ.

J S Vasudev is the Founder and Editor of Hosasuddi.in, a Kannada digital news platform established in 2023. He is actively involved in news writing, editing, content development, and digital publishing. With a focus on timely and informative journalism, he works on developing news stories covering Karnataka, India, and significant national and international developments. His role includes researching news, preparing and editing articles, managing digital content, and continuously developing Hosasuddi.in as a credible Kannada news platform. Through Hosasuddi.in, J S Vasudev aims to provide readers with accessible, relevant, and timely news while maintaining professional standards in digital journalism.

Continue Reading

ರಾಜ್ಯ

Mysuru Dasara ಉದ್ಘಾಟನೆ: ಚಾಮುಂಡಿಬೆಟ್ಟಕ್ಕೆ ನಾಳೆ ಬೆಳಗ್ಗೆ ಪ್ರವೇಶ ನಿರ್ಬಂಧ

Published

on

Mysuru Dasara inauguration and Chamundi Hills temple in Mysuru

ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ವಿಶ್ವವಿಖ್ಯಾತ ಮೈಸೂರು ದಸರಾ(Mysuru Dasara) ಮಹೋತ್ಸವದ ವೈಭವಯುತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ನಾಡದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಹಾಗೂ ದಸರಾ ಉದ್ಘಾಟನಾ ಸಮಾರಂಭವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಪ್ರವಾಸಿಗರು ಮೈಸೂರಿನತ್ತ ಆಗಮಿಸಲು ಸಜ್ಜಾಗಿದ್ದಾರೆ. ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

Mysuru Dasara

ನಾಳೆ ಭಾನುವಾರ ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ದೊರೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಗಣ್ಯರ ಆಗಮನ ಮತ್ತು ಭದ್ರತಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರು ಮತ್ತು ವಾಹನಗಳ ಪ್ರವೇಶಕ್ಕೆ ನಿರ್ದಿಷ್ಟ ಅವಧಿಯಲ್ಲಿ ನಿರ್ಬಂಧ ವಿಧಿಸಲಾಗಿದೆ.

ನಾಳೆ ಮೈಸೂರು ದಸರಾ ಉದ್ಘಾಟನೆ

ಸಂಪ್ರದಾಯದಂತೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ. ಈ ಬಾರಿ ಕೊಪ್ಪಳದ ಗವಿಮಠದ ಶ್ರೀಗಳು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಐತಿಹಾಸಿಕ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು, ಗಣ್ಯರು ಹಾಗೂ ಪ್ರಮುಖ ಮಠಾಧೀಶರು ಭಾಗವಹಿಸುವ ನಿರೀಕ್ಷೆಯಿದೆ.

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ದಸರಾ ರಾಜ್ಯದ ಪ್ರಮುಖ ಪ್ರವಾಸೋದ್ಯಮ ಆಕರ್ಷಣೆಯಾಗಿ ಹೊರಹೊಮ್ಮುತ್ತಿದೆ. ದಸರಾ ಉದ್ಘಾಟನೆಯೊಂದಿಗೆ ಮೈಸೂರು ನಗರದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನಗಳು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.

Mysuru Dasara ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ

ದಸರಾ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಗಣ್ಯರ ಆಗಮನ, ಸಮಾರಂಭದ ಭದ್ರತೆ ಹಾಗೂ ಶಿಷ್ಟಾಚಾರವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು ಸಾರ್ವಜನಿಕರು ಮತ್ತು ವಾಹನಗಳ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

ಜಿಲ್ಲಾಡಳಿತದ ಮಾಹಿತಿಯಂತೆ, ನಾಳೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರು ಮತ್ತು ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಹೀಗಾಗಿ ಭಕ್ತರು ಮತ್ತು ಪ್ರವಾಸಿಗರು ಈ ಅವಧಿಯಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುವುದನ್ನು ತಪ್ಪಿಸುವುದು ಸೂಕ್ತವಾಗಿದೆ.

ಬೆಳಗ್ಗೆಯೇ ಚಾಮುಂಡಿಬೆಟ್ಟಕ್ಕೆ ತೆರಳಲು ಯೋಜನೆ ಮಾಡಿಕೊಂಡಿರುವ ಭಕ್ತರು ತಮ್ಮ ಪ್ರಯಾಣದ ವೇಳಾಪಟ್ಟಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಮಧ್ಯಾಹ್ನ 1 ಗಂಟೆಯ ನಂತರ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ದೊರೆಯಲಿದೆ ಎಂದು ತಿಳಿಸಲಾಗಿದ್ದು, ಅದರಂತೆ ಪ್ರವಾಸಿಗರು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬಹುದು.

ಪ್ರವಾಸಿಗರಿಗೆ ಜಿಲ್ಲಾಡಳಿತದ ಸಲಹೆ

ಮೈಸೂರು ದಸರಾ ಉದ್ಘಾಟನೆಗೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿರುವುದರಿಂದ, ಪ್ರಮುಖ ಪ್ರವಾಸಿ ತಾಣಗಳಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿದೆ. ಚಾಮುಂಡಿಬೆಟ್ಟಕ್ಕೆ ತೆರಳುವವರು ಪ್ರವೇಶ ನಿರ್ಬಂಧದ ಸಮಯವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಸುವುದು ಅಗತ್ಯವಾಗಿದೆ.

ವಿಶೇಷವಾಗಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಚಾಮುಂಡಿಬೆಟ್ಟದ ಪ್ರವೇಶ ನಿರ್ಬಂಧ ಇರುವುದರಿಂದ, ಈ ಅವಧಿಯಲ್ಲಿ ಬೆಟ್ಟಕ್ಕೆ ತೆರಳುವ ಪ್ರವಾಸಿಗರು ಅನಗತ್ಯವಾಗಿ ತೊಂದರೆ ಅನುಭವಿಸುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಾಹ್ನದ ನಂತರ ದರ್ಶನಕ್ಕೆ ತೆರಳುವುದು ಸೂಕ್ತವಾಗಲಿದೆ.

Mysuru Dasara ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಫಲಪುಷ್ಪ ಪ್ರದರ್ಶನವೂ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿದೆ. ನಗರದ ಪ್ರಸಿದ್ಧ ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳು ನಡೆದಿದ್ದು, ಈ ಬಾರಿ ವಿಶೇಷ ವಿಷಯಾಧಾರಿತ ಪರಿಕಲ್ಪನೆಯೊಂದಿಗೆ ಅಲಂಕಾರಗಳನ್ನು ರೂಪಿಸಲಾಗಿದೆ.

ಈ ವರ್ಷದ ಫಲಪುಷ್ಪ ಪ್ರದರ್ಶನದ ಪ್ರಮುಖ ವಿಷಯ ‘ಪ್ರಜಾಪ್ರಭುತ್ವದ ಹಬ್ಬ’ ಎಂಬುದಾಗಿದೆ. ವಿವಿಧ ಬಗೆಯ ಹೂವುಗಳು ಮತ್ತು ಸಸ್ಯಗಳನ್ನು ಬಳಸಿ ವಿಶೇಷ ಅಲಂಕಾರಗಳನ್ನು ಸಿದ್ಧಪಡಿಸಲಾಗಿದ್ದು, ಪ್ರವಾಸಿಗರಿಗೆ ವಿಭಿನ್ನ ದೃಶ್ಯಾನುಭವ ನೀಡುವ ನಿರೀಕ್ಷೆಯಿದೆ.

Mysuru Dasara ಅಕ್ಟೋಬರ್ 11ರಿಂದ 21ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಮೈಸೂರು ದಸರಾ ಪ್ರವಾಸಕ್ಕೆ ಬರುವವರಿಗೆ ಇದು ಮತ್ತೊಂದು ಪ್ರಮುಖ ಆಕರ್ಷಣೆಯಾಗಲಿದೆ. ದಸರಾ ಸಂಭ್ರಮದ ಜೊತೆಗೆ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.

ಮೈಸೂರು ದಸರಾ ಉದ್ಘಾಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದಸರಾ ಕಾರ್ಯಕ್ರಮಗಳಿಗೆ ಆಗಮಿಸುವ ಪ್ರವಾಸಿಗರು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವುದರ ಜೊತೆಗೆ, ಚಾಮುಂಡಿಬೆಟ್ಟದ ಪ್ರವೇಶ ನಿರ್ಬಂಧದ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರವಾಸದ ವೇಳಾಪಟ್ಟಿಯನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ.

Also Read: https://hosasuddi.in/cjp-leaders-detained-inside-delhi-flight-women-cops/

Continue Reading

ದೇಶ

CJP : ವಿಮಾನದಲ್ಲಿ ಪೊಲೀಸರನ್ನು ಕಂಡ CJP ನಾಯಕರು ಘೋಷಣೆ ಕೂಗಿದರು; ನಂತರ ನಡೆದಿದ್ದೇನು?

Published

on

CJP leaders detained by Delhi Police inside Air India flight

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಅಭಿಜಿತ್ ದೀಪ್ಕೆ (Abhijeet Dipke), ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದಲೇ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಚರ್ಚೆಗೆ ಕಾರಣವಾಗಿದೆ. ಜಂತರ್‌ಮಂತರ್‌ನಲ್ಲಿ ನಡೆಯಬೇಕಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದ ಮೂವರು ನಾಯಕರನ್ನು ವಿಮಾನದಿಂದ ಕೆಳಗಿಳಿಯುವ ಮುನ್ನವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಈ ಕಾರ್ಯಾಚರಣೆಯ ವೇಳೆ ಗಮನ ಸೆಳೆದ ಮತ್ತೊಂದು ವಿಚಾರವೆಂದರೆ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂಬುದು. ವಿಮಾನದೊಳಗಿನ ಸೀಮಿತ ಸ್ಥಳಾವಕಾಶದಲ್ಲಿ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿಡಲು ಮಹಿಳಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು ಎನ್ನಲಾಗುತ್ತಿದೆ. ಆದರೆ, ಮಹಿಳಾ ಪೊಲೀಸ್ ಸಿಬ್ಬಂದಿಯನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲು ದೆಹಲಿ ಪೊಲೀಸರು ತೆಗೆದುಕೊಂಡ ನಿಖರ ಕಾರಣವನ್ನು ಅಧಿಕೃತವಾಗಿ ಸ್ಪಷ್ಟಪಡಿಸಲಾಗಿಲ್ಲ.

ವಿಮಾನದೊಳಗೇ ಪೊಲೀಸ್ ಕಾರ್ಯಾಚರಣೆ

ಏರ್ ಇಂಡಿಯಾ ವಿಮಾನ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಪೊಲೀಸ್ ಸಿಬ್ಬಂದಿ ವಿಮಾನದೊಳಗೆ ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ. ಕಿಟಕಿ ಪಕ್ಕದ ಆಸನದಲ್ಲಿ ಕುಳಿತಿದ್ದ ಅಭಿಜಿತ್ ದೀಪ್ಕೆ ಅವರು ಪೊಲೀಸ್ ಕಾರ್ಯಾಚರಣೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಲು ಆರಂಭಿಸಿದ್ದಾರೆ. ಸೌರವ್ ದಾಸ್ ಮಧ್ಯದ ಆಸನದಲ್ಲಿದ್ದರೆ, ಅವರ ಪಕ್ಕದಲ್ಲಿ ಅಶುತೋಷ್ ರಂಕಾ ಕುಳಿತಿದ್ದರು ಎನ್ನಲಾಗಿದೆ.

ಪೊಲೀಸರು ವಿಮಾನದೊಳಗೆ ಪ್ರವೇಶಿಸುತ್ತಿದ್ದಂತೆ ಮೂವರು ನಾಯಕರು ‘ಇಂಕ್ವಿಲಾಬ್ ಜಿಂದಾಬಾದ್’ ಮತ್ತು ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ವಿಮಾನದೊಳಗೆ ಸುಮಾರು ಹನ್ನೆರಡು ಮಹಿಳಾ ಪೊಲೀಸ್ ಸಿಬ್ಬಂದಿ ನಾಯಕರನ್ನು ಸುತ್ತುವರಿದಿರುವ ದೃಶ್ಯಗಳು ಕಂಡುಬಂದಿವೆ.

ಅಭಿಜಿತ್ ದೀಪ್ಕೆ ಅವರು ಪೊಲೀಸ್ ಕ್ರಮವನ್ನು ಪ್ರಶ್ನಿಸಿದ್ದು, ತಮ್ಮನ್ನು ವಿಮಾನದಿಂದ ಕೆಳಗಿಳಿದ ನಂತರ ವಶಕ್ಕೆ ಪಡೆಯಬಹುದಿತ್ತು ಎಂದು ಹೇಳಿದ್ದಾರೆ. ವಿಮಾನದೊಳಗೇ ಪೊಲೀಸ್ ಸಿಬ್ಬಂದಿ ಬಂದು ತಮ್ಮನ್ನು ವಶಕ್ಕೆ ಪಡೆಯುತ್ತಿರುವ ಕ್ರಮದ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ ಎಂದು ಹೇಳಿರುವ ಅವರು, ಇದನ್ನು ಸರ್ವಾಧಿಕಾರದ ಕ್ರಮ ಎಂದು ಆರೋಪಿಸಿದ್ದಾರೆ.

ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜನೆ ಏಕೆ?

ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದ್ದಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಆದರೆ, ದೆಹಲಿ ಪೊಲೀಸರು ಈ ನಿರ್ಧಾರಕ್ಕೆ ನೀಡಿರುವ ನಿಖರ ಕಾರಣ ಅಧಿಕೃತವಾಗಿ ಬಹಿರಂಗವಾಗಿಲ್ಲ ಎಂಬುದು ಗಮನಾರ್ಹ.

ವಿಮಾನದೊಳಗೆ ಆಸನಗಳ ಸಾಲುಗಳ ನಡುವೆ ಸ್ಥಳಾವಕಾಶ ಅತ್ಯಂತ ಸೀಮಿತವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಅಥವಾ ದೈಹಿಕ ಸಂಘರ್ಷ ಉಂಟಾದರೆ, ಅದನ್ನು ನಿಯಂತ್ರಿಸುವುದು ಸವಾಲಾಗಬಹುದು. ಹೀಗಾಗಿ, ಪರಿಸ್ಥಿತಿ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿರಬಹುದು ಎಂಬ ವಿಶ್ಲೇಷಣೆಗಳು ವ್ಯಕ್ತವಾಗಿವೆ.

ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಲವು ಮಾತಿನ ಚಕಮಕಿ ನಡೆದಿದ್ದರೂ, ದೊಡ್ಡ ಮಟ್ಟದ ಗೊಂದಲ ಉಂಟಾಗದೆ ಮೂವರು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಮಹಿಳಾ ಸಿಬ್ಬಂದಿಯ ನಿಯೋಜನೆಯ ಹಿಂದಿನ ಅಧಿಕೃತ ಕಾರಣ ಹೊರಬಂದ ಬಳಿಕವೇ ಈ ಕ್ರಮದ ನಿಖರ ಉದ್ದೇಶ ಸ್ಪಷ್ಟವಾಗಲಿದೆ.

ಹಿಂದಿನ ಪ್ರತಿಭಟನೆ ಘಟನೆ ಹಿನ್ನೆಲೆ

ಈ ಬೆಳವಣಿಗೆಯ ಹಿಂದೆ ಜುಲೈ 20ರಂದು ನಡೆದಿದ್ದ ಪ್ರತಿಭಟನೆಯ ಘಟನೆಗಳೂ ಪ್ರಮುಖ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಖಂಡಿಸಿ ವಿದ್ಯಾರ್ಥಿಗಳು ಸಂಸತ್ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು ಎಂದು ವರದಿಯಾಗಿದೆ.

ಈ ಘಟನೆಯ ಬಳಿಕ ಪುರುಷ ಪೊಲೀಸ್ ಸಿಬ್ಬಂದಿ ಯುವತಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು CJP ಆರೋಪಿಸಿತ್ತು. 12 ವರ್ಷದ ಬಾಲಕಿಯರು ಸೇರಿದಂತೆ ಹಲವು ಯುವತಿಯರಿಗೆ ತಲೆಗೆ ಗಾಯಗಳಾಗಿದ್ದು, ಪ್ರತಿಭಟನೆಯ ವೇಳೆ ಅವರ ಬಟ್ಟೆಗಳನ್ನು ಹರಿಯಲಾಗಿದೆ ಎಂಬ ಆರೋಪವನ್ನೂ ಸಂಘಟನೆ ಮಾಡಿತ್ತು.

CJP ಬೆಂಬಲಿಗರಲ್ಲಿ ಹೆಚ್ಚಿನವರು ಯುವಕರು ಹಾಗೂ ಜೆನ್ ಝೀ ವರ್ಗಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗುತ್ತಿದ್ದು, ಹಿಂದಿನ ಘಟನೆಗಳ ಹಿನ್ನೆಲೆಯಲ್ಲಿ ಈ ಬಾರಿ ನಾಯಕರನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಜಂತರ್‌ಮಂತರ್ ಪ್ರತಿಭಟನೆಗೆ ಮುನ್ನವೇ ವಶಕ್ಕೆ

CJP ನಾಯಕರು ಜಂತರ್‌ಮಂತರ್‌ನಲ್ಲಿ ನಡೆಯಬೇಕಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದರು. ಆದರೆ, ಪ್ರತಿಭಟನಾ ಸ್ಥಳಕ್ಕೆ ತಲುಪುವ ಮುನ್ನವೇ ವಿಮಾನ ನಿಲ್ದಾಣದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಮಾನದಿಂದ ಕೆಳಗಿಳಿದ ನಂತರ ಸಾಮಾನ್ಯವಾಗಿ ನಡೆಯಬಹುದಾಗಿದ್ದ ಪೊಲೀಸ್ ಕ್ರಮವನ್ನು ವಿಮಾನದೊಳಗೇ ಕೈಗೊಂಡಿರುವುದಕ್ಕೆ ಅಭಿಜಿತ್ ದೀಪ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸಾರ್ವಜನಿಕ ಶಾಂತಿ ಮತ್ತು ಭದ್ರತೆಯ ದೃಷ್ಟಿಯಿಂದ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಸದ್ಯ ವಿಮಾನದೊಳಗಿನ ಪೊಲೀಸ್ ಕಾರ್ಯಾಚರಣೆ ಮತ್ತು ಮಹಿಳಾ ಸಿಬ್ಬಂದಿಯ ಹೆಚ್ಚಿನ ನಿಯೋಜನೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಯಾಗುತ್ತಿದೆ. ಆದರೆ, ಈ ಕ್ರಮದ ಹಿಂದಿನ ನಿಖರ ಕಾರಣ ಮತ್ತು ಕಾನೂನುಬದ್ಧ ಹಿನ್ನೆಲೆಯ ಕುರಿತು ದೆಹಲಿ ಪೊಲೀಸರ ಅಧಿಕೃತ ಸ್ಪಷ್ಟನೆ ಬಂದ ಬಳಿಕವೇ ಸಂಪೂರ್ಣ ಚಿತ್ರಣ ತಿಳಿಯಲಿದೆ.

Also Read: https://hosasuddi.in/hd-kumaraswamy-ravi-ganiga-pendrive-politics/

Continue Reading

ರಾಜ್ಯ

HD Kumaraswamy: ಪೆನ್‌ಡ್ರೈವ್ ಹಿಡಿದು ಬರುತ್ತೇನೆ ಎಂದ ರವಿ ಗಣಿಗೆ; ಹೆಚ್‌ಡಿಕೆ ಹೇಳಿದ್ದೇನು?

Published

on

ಬೆಂಗಳೂರು: HD Kumaraswamy ಕರ್ನಾಟಕ ರಾಜಕಾರಣದಲ್ಲಿ ಇದೀಗ ಸ್ಟಿಂಗ್ ಆಪರೇಷನ್ (Sting Operation) ಮತ್ತು ಪೆನ್‌ಡ್ರೈವ್ ರಾಜಕೀಯ ಮತ್ತೆ ತೀವ್ರ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಕೆಲ ಪ್ರಮುಖ ಸಚಿವರನ್ನು ಟ್ರ್ಯಾಪ್ ಮಾಡಲು ಖಾಸಗಿ ತಂಡವೊಂದು ಸ್ಟಿಂಗ್ ಆಪರೇಷನ್ ನಡೆಸಲು ಯತ್ನಿಸಿತ್ತು ಎಂಬ ಮುಖ್ಯಮಂತ್ರಿ ಅವರ ಹೇಳಿಕೆಯ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.

ಈ ಬೆಳವಣಿಗೆಯ ನಡುವೆಯೇ ಕಾಂಗ್ರೆಸ್ ಶಾಸಕ ರವಿ ಗಣಿಗೆ ಅವರು ಪೆನ್‌ಡ್ರೈವ್ ಪ್ರದರ್ಶಿಸಿ ಸ್ಫೋಟಕ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಇದೀಗ ಈ ಹೇಳಿಕೆಗೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ತೀವ್ರ ವ್ಯಂಗ್ಯದ ಮೂಲಕ ಪ್ರತಿಕ್ರಿಯಿಸಿದ್ದಾರೆ.

‘ನನ್ನ ಸ್ಟೈಲ್ ಕಾಪಿ ಮಾಡಲು ಸಾಧ್ಯವಿಲ್ಲ’

ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ರವಿ ಗಣಿಗೆ ಅವರ ಪೆನ್‌ಡ್ರೈವ್ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ. ತಾವು ಹಿಂದೆ ಪೆನ್‌ಡ್ರೈವ್ ಮೂಲಕ ದಾಖಲೆಗಳನ್ನು ಬಿಡುಗಡೆ ಮಾಡಿದ್ದ ರೀತಿಯನ್ನು ಅನುಸರಿಸಲು ರವಿ ಗಣಿಗೆ ಮುಂದಾಗಿದ್ದಾರೆ ಎಂಬ ರೀತಿಯಲ್ಲಿ ವ್ಯಂಗ್ಯವಾಡಿದ ಅವರು, ತಮ್ಮ ರಾಜಕೀಯ ಶೈಲಿಯನ್ನು ಯಾರಿಂದಲೂ ಅನುಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ನಾನು ಕಾಣದಿರುವುದನ್ನು ಇವರು ನೋಡಿಬಿಟ್ಟಿದ್ದಾರಾ? ಅವರೇನೋ ನನ್ನ ಸ್ಟೈಲ್ ಅನ್ನು ಕಾಪಿ ಮಾಡಲು ಹೊರಟಿದ್ದಾರೆ. ಆದರೆ ಯಾರಿಂದಲೂ ನನ್ನ ಸ್ಟೈಲ್ ಅನ್ನು ಅನುಕರಿಸಲು ಸಾಧ್ಯವಿಲ್ಲ” ಎಂಬ ಅರ್ಥದಲ್ಲಿ ಹೆಚ್‌ಡಿಕೆ ಪ್ರತಿಕ್ರಿಯಿಸಿದ್ದಾರೆ.

ರವಿ ಗಣಿಗೆ ಅವರು ಒಂದು ವಾರದ ನಂತರವಾಗಲಿ ಅಥವಾ ಒಂದು ವರ್ಷದ ನಂತರವಾಗಲಿ ದಾಖಲೆ ಬಿಡುಗಡೆ ಮಾಡಲಿ, ಅವರು ಯಾವ ದಾಖಲೆಗಳನ್ನು ಹೊರತರುತ್ತಾರೆ ಎಂಬುದನ್ನು ತಾವೂ ನೋಡೋಣ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಈ ಮೂಲಕ ಪೆನ್‌ಡ್ರೈವ್ ವಿಚಾರದಲ್ಲಿ ತಮ್ಮ ವಿರುದ್ಧ ಅಥವಾ ತಮ್ಮ ಶೈಲಿಯನ್ನು ಉಲ್ಲೇಖಿಸಿ ನೀಡಲಾಗಿರುವ ಹೇಳಿಕೆಗೆ ನೇರವಾಗಿ ತಿರುಗೇಟು ನೀಡಿದ್ದಾರೆ.

ತಮ್ಮ ಹಿಂದಿನ ಪೆನ್‌ಡ್ರೈವ್ ವಿಚಾರ ನೆನಪಿಸಿದ ಹೆಚ್‌ಡಿಕೆ

ತಮ್ಮ ಹಿಂದಿನ ಪೆನ್‌ಡ್ರೈವ್ ಪ್ರದರ್ಶನದ ವಿಚಾರವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಅಂದು ತಾವು ಯಾವ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದೆವು ಎಂಬುದನ್ನು ವಿವರಿಸಿದ್ದಾರೆ.

ಅಂದು ಸರ್ಕಾರ ರಚನೆಯಾದ ಆರಂಭಿಕ ಅವಧಿಯಲ್ಲಿ ಇಂಜಿನಿಯರ್‌ಗಳ ವರ್ಗಾವಣೆ ವಿಚಾರದಲ್ಲಿ ಹಣಕಾಸಿನ ವ್ಯವಹಾರ ನಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇದ್ದವು ಎಂದು ಅವರು ಹೇಳಿದ್ದಾರೆ. ಆಗಿನ ನೀರಾವರಿ ಸಚಿವರಾಗಿದ್ದವರು ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಆ ವಿಚಾರದಲ್ಲಿ ತಮ್ಮ ಬಳಿ ದಾಖಲೆಗಳಿದ್ದವು ಎಂದು ಪ್ರತಿಪಾದಿಸಿದ್ದಾರೆ.

ಇದೇ ಸಂದರ್ಭದಲ್ಲಿ ನೈಸ್ (NICE) ಯೋಜನೆಗೆ ಸಂಬಂಧಿಸಿದ ಆರೋಪಗಳು ಮತ್ತು ನ್ಯಾಯಾಲಯದ ಆದೇಶಗಳ ಉಲ್ಲಂಘನೆ ಕುರಿತು ತಾವು ಹಿಂದೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದರೂ, ಕಾಂಗ್ರೆಸ್ ನಾಯಕರಿಂದ ಇದುವರೆಗೆ ಸೂಕ್ತ ಉತ್ತರ ಬಂದಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

Also Read: https://hosasuddi.in/trisha-krishnan-locket-vijay-marriage-rumours/

ರೈತರ ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿಯೂ ಸರ್ಕಾರದ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ. ರೈತರ ಭೂಮಿಯನ್ನು ಕಂಪನಿಗಳು ಕಬಳಿಸುತ್ತಿವೆ ಎಂಬ ಆರೋಪಗಳನ್ನು ಪ್ರಸ್ತಾಪಿಸಿದ ಅವರು, ಇಂತಹವರಿಗೆ ಆಡಳಿತಾರೂಢ ಸರ್ಕಾರವೇ ರಕ್ಷಣೆ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸ್ಟಿಂಗ್ ಆಪರೇಷನ್ ವಿವಾದಕ್ಕೆ ಹೆಚ್‌ಡಿಕೆ ತಿರುಗೇಟು

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಮತ್ತು ಕೆಲ ಸಚಿವರನ್ನು ಖಾಸಗಿ ತಂಡವೊಂದು ಸ್ಟಿಂಗ್ ಆಪರೇಷನ್ ಮೂಲಕ ಟ್ರ್ಯಾಪ್ ಮಾಡಲು ಪ್ರಯತ್ನಿಸಿತ್ತು ಎಂದು ಹೇಳಿರುವ ವಿಚಾರಕ್ಕೂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಬೆಳವಣಿಗೆಗಳನ್ನು ಅವರು ‘ಹುಡುಗಾಟಿಕೆಯ ರಾಜಕಾರಣ’ ಎಂದು ಟೀಕಿಸಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸಲು ಯತ್ನಿಸಿದವರು ಯಾರು, ಇದರ ಹಿಂದೆ ಯಾರಿದ್ದಾರೆ ಮತ್ತು ಇಂತಹ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗಳನ್ನು ಅವರು ಎತ್ತಿದ್ದಾರೆ.

ರಾಜ್ಯದ ಹಿರಿಯ ರಾಜಕೀಯ ನಾಯಕರೊಬ್ಬರ ಮಾನಹರಣ ಮಾಡುವ ರೀತಿಯಲ್ಲಿ ನಡೆದಿರುವ ಘಟನೆಗಳ ಕುರಿತು ಸರ್ಕಾರ ಗಂಭೀರವಾಗಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆರೋಪಿತ ಕೃತ್ಯಗಳ ಹಿಂದೆ ಇರುವವರನ್ನು ಪತ್ತೆಹಚ್ಚುವ ಬದಲು ಅವರಿಗೆ ಸರ್ಕಾರದ ಕಡೆಯಿಂದ ರಕ್ಷಣೆ ಸಿಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಕುಮಾರಸ್ವಾಮಿ ಮಾಡಿದ್ದಾರೆ.

ಪೆನ್‌ಡ್ರೈವ್ ರಾಜಕೀಯಕ್ಕೆ ಮತ್ತೆ ವೇದಿಕೆ

ಕರ್ನಾಟಕ ರಾಜಕೀಯದಲ್ಲಿ ಪೆನ್‌ಡ್ರೈವ್ ವಿಚಾರ ಹೊಸದೇನಲ್ಲ. ಹಿಂದೆ ಕೂಡ ಹಲವು ಸಂದರ್ಭಗಳಲ್ಲಿ ರಾಜಕೀಯ ನಾಯಕರು ಪೆನ್‌ಡ್ರೈವ್ ಮೂಲಕ ದಾಖಲೆಗಳಿವೆ ಎಂದು ಹೇಳಿಕೊಂಡು ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದ್ದಾರೆ. ಇದೀಗ ರವಿ ಗಣಿಗೆ ಅವರು ಪೆನ್‌ಡ್ರೈವ್ ಬಿಡುಗಡೆ ಮಾಡುವುದಾಗಿ ಹೇಳಿರುವುದು ಈ ಚರ್ಚೆಗೆ ಮತ್ತೆ ವೇಗ ನೀಡಿದೆ.

ಆದರೆ ರವಿ ಗಣಿಗೆ ಅವರು ಯಾವ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಾಖಲೆಗಳು ಬಹಿರಂಗವಾದ ನಂತರವೇ ಅವುಗಳ ಸ್ವರೂಪ, ಸತ್ಯಾಸತ್ಯತೆ ಮತ್ತು ರಾಜಕೀಯ ಪರಿಣಾಮದ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

ಇತ್ತ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಹಿಂದಿನ ಪೆನ್‌ಡ್ರೈವ್ ರಾಜಕೀಯವನ್ನು ಉಲ್ಲೇಖಿಸಿ ನೀಡಿರುವ ಪ್ರತಿಕ್ರಿಯೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ರವಿ ಗಣಿಗೆ ನಿಜವಾಗಿಯೂ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆಯೇ, ಮಾಡಿದರೆ ಅದರಲ್ಲಿರುವ ಅಂಶಗಳು ಏನು ಎಂಬುದರ ಮೇಲೆ ಇದೀಗ ಎಲ್ಲರ ಗಮನ ನೆಟ್ಟಿದೆ.

ಸದ್ಯಕ್ಕೆ ಸ್ಟಿಂಗ್ ಆಪರೇಷನ್ ಮತ್ತು ಪೆನ್‌ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ವಾಕ್ಸಮರ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

Continue Reading

Trending