Connect with us

ದೇಶ

ಸಿದ್ದರಾಮಯ್ಯ – ಅಶ್ವಥ್ ನಾರಾಯಣ್‌ ನಡುವೆ ಏಕವಚನ, ಮಾತಿನ ಚಕಮಕಿ; ಸದನದಲ್ಲಿ ಕೋಲಾಹಲ!

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಗುರುವಾರವಾದ ಇಂದು ಸಹ ವಾಲ್ಮೀಕಿ ನಿಗಮದ ಹಗರಣ ಕೇಸ್‌ ಸದ್ದು ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಅವರ ನಡುವೆ ಜಟಾಪಟಿ ನಡೆಯಿತು. ಈ ವೇಳೆ ಇಬ್ಬರೂ ಏಕವಚನ ಪ್ರಯೋಗಿಸಿ ವಾಗ್ದಾಳಿ ನಡೆಸಿದರು.

ಕಲಾಪ ಆರಂಭದಲ್ಲೇ ವಾಲ್ಮೀಕಿ ಹಗರಣದ ವಿಚಾರದಲ್ಲಿ ಕಾಂಗ್ರೆಸ್‌ – ಬಿಜೆಪಿ ನಾಯಕರ ನಡುವೆ ತೀವ್ರ ಗದ್ದಲ ಏರ್ಪಟ್ಟಿತು. ಬಿಜೆಪಿ ಅವರಿಂದ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಅಶ್ವಥ್‌ ನಾರಾಯಣ್‌ ಏರುಧ್ವನಿಯಲ್ಲಿ ವಾಗ್ದಾಳಿ ನಡೆಸಿದರು. ಪೇ ಸಿಎಂ, 100% ಸಿಎಂ ಅಂತ ಕೂಗಿದರು, ಇದಕ್ಕೆ ಬಿಜೆಪಿಯ ಎಲ್ಲ ಶಾಸಕರು ದನಿಗೂಡಿಸಿದರು. ನಂತರ ಗರಂ ಆದ ಸಿಎಂ, ನಿಮಗೆ ಮಾನ ಮಾರ್ಯಾದೆ ಇಲ್ಲ, ನಿಮ್ಮ ಹಗರಣಗಳನ್ನೆಲ್ಲ ಈಗ ಬಲಿಗೆ ಎಳೆಯುತ್ತೇನೆ ಎನ್ನುತ್ತಿದ್ದಂತೆ ʻಭ್ರಷ್ಟ ಮುಖ್ಯಮಂತ್ರಿʼ ಎಂದು ಅಶ್ವಥ್‌ ನಾರಾಯಣ್‌ ಕೂಗಿದರು. ಇದಕ್ಕೆ ಆಕ್ರೋಶ ಹೊರಹಾಕಿದ ಕೈ ಸಚಿವರಾದ ಕೃಷ್ಣ ಭೈರೇಗೌಡ, ದಿನೇಶ್‌ ಗುಂಡೂರಾವ್‌, ಬೈರತಿ ಸುರೇಶ್, ಪ್ರಿಯಾಂಕ್‌ ಖರ್ಗೆ, ಅಶ್ವಥ್‌ ನಾರಾಯಣ ಅವರನ್ನ ಹೊರಗೆ ಹಾಕಿ ಎಂದ ಸ್ಪೀಕರ್‌ ಎದುರು ಪಟ್ಟು ಹಿಡಿದರು. ಈ ವೇಳೆ ಉಭಯ ನಾಯಕರ ನಡುವೆ ಗದ್ದಲ ಏರ್ಪಟ್ಟಿತು.

ನಿಮ್ಮ ಡಿಸಿಎಂ ಜೈಲಿಗೆ ಹೋಗಿದ್ದವರು:
ಅಶ್ವಥ್ ನಾರಾಯಣ್ – ಭೈರತಿ ಸುರೇಶ್ ನಡುವೆಯೂ ಸದನದಲ್ಲಿ ವಾಕ್ಸಮರ ಏರ್ಪಟ್ಟಿತು. ನೀವು ಭ್ರಷ್ಟರಾಗಿದ್ದರಿಂದಲೇ 87 ಕೋಟಿ ರೂ. ಲೂಟಿಯಾಗಿದ್ದು, ನೀವೊಬ್ಬ ಲೂಟಿಕೋರ ಎಂದು ಅಶ್ವಥ್ ನಾರಾಯಣ್ ಗದರಿದರು. ಇದಕ್ಕೆ ನೀನು ಲೂಟಿಕೋರ ನಿಮ್ಮ ಅವಧಿಯಲ್ಲಿ ಏನಾಗಿದೆ ಎಲ್ಲ ಗೊತ್ತಿದೆ ಎಂದು ಬೈರತಿ ಸುರೇಶ್‌ ತಿರುಗೇಟು ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಸುನೀಲ್‌ ಕುಮಾರ್‌, ನಿಮ್ಮ ಉಪಮುಖ್ಯಮಂತ್ರಿ ಜೈಲಿಗೆ ಹೋಗಿದ್ದವರು, ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದರು. ಬಳಿಕ ಗುಡುಗಿದ ಸಚಿವ ದಿನೇಶ್‌ ಗುಂಡೂರಾವ್‌, ಎಲ್ಲವೂ ಸರಿಯಾಗಿ ಚರ್ಚೆಯಾಗ್ತಿತ್ತು, ಇವರು ಮಧ್ಯೆ ಎದ್ದುಬಿಟ್ಟರು. ಅವರು ಯಾವ ಡಾಕ್ಟ್ರೋ ಗೊತ್ತಾಗ್ತಿಲ್ಲ? ಎಂದು ಅಶ್ವಥ್ ನಾರಾಯಣ್ ವಿರುದ್ಧ ಲೇವಡಿ ಮಾಡಿದರು. ಈ ವೇಳೆ ಮೊದಲು ನಿಮ್ಮದು ನೋಡಿಕೊಳ್ಳಿ, ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಾಗ್ತಿದೆ, ಆರೋಗ್ಯ ಇಲಾಖೆ ಏನಾಗಿದೆ? ನೋಡ್ಕೊಳ್ಳಿ ಎಂದು ಗುಂಡೂರಾವ್ ಆರೋಪಕ್ಕೆ ಅಶ್ವಥ್ ನಾರಾಯಣ್ ಟಾಂಗ್ ಕೊಟ್ಟರು. ಇದರಿಂದ ಸದನದಲ್ಲಿ ಎರಡೂ ಕಡೆ ಪರಸ್ಪರ ವಾಕ್ಸಮರ ಉಂಟಾಯಿತು.

ಸಿಎಂ ವಿರುದ್ಧ ಏರುಧ್ವನಿ ಎತ್ತಿದ ಅಶ್ವಥ್‌ ನಾರಾಯಣ್‌:
ಸದನದಲ್ಲಿ ಗದ್ದಲದ ನಡುವೆ ಸಿಎಂ ವಿರುದ್ಧ ಅಶ್ವಥ್ ನಾರಾಯಣ್ ಏರು ಧ್ವನಿಯಲ್ಲಿ ಮಾತನಾಡಿದರು. ಭ್ರಷ್ಟಾಚಾರ ನಡೆಸಿದವರು ನೀವು ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಅಶ್ವಥ್ ನಾರಾಯಣ್‌ಗೆ ಸಿಎಂ ಎಚ್ಚರಿಕೆ ನೀಡಿದರು. ನಿಮ್ಮ ಭ್ರಷ್ಟಾಚಾರಗಳನ್ನೆಲ್ಲ ತೆಗೆಯುತ್ತೇವೆ, ಕೆಲವರದ್ದನ್ನೆಲ್ಲ ಈಗ ತೆಗೆಯುತ್ತೇವೆ. ನಿಮಗಿಂತ ಜಾಸ್ತಿ ಕೂಗೋಕೆ ನಮಗೂ ಬರುತ್ತೆ. ಭ್ರಷ್ಟಾಚಾರ ಮಾಡಿದವನು ನೀನು, ಭ್ರಷ್ಟಾಚಾರದ ಬಗ್ಗೆ ನನಗೆ ಹೇಳಿ ಕೊಡ್ತೀರಾ? 42 ವರ್ಷಗಳಿಂದ ಅಧಿಕಾರದಲ್ಲಿ ಇರುವವನು ನಾನು. ನೀವು 40% ಕಮೀಷನ್ ಹೊಡೆದಿದ್ದು ಬಯಲಾಗಿದೆ. ಹೇಡಿಗಳು, ಭಂಡರು ಅಂತ ಅಶ್ವಥ್ ನಾರಾಯಣ್ ವಿರುದ್ಧ ಸಿಎಂ ಕೆಂಡಾಮಂಡಲವಾದರು.

ಸಿಎಂ ವಿರುದ್ಧ ಏಕವಚನ ಪ್ರಯೋಗ:
ಸಿಎಂ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಂತೆ ಗರಂ ಆದ ಅಶ್ವಥ್‌ ನಾರಾಯಣ್‌ ಸಿಎಂ ವಿರುದ್ಧ ಏಕವಚನ ಪ್ರಯೋಗಿಸಿದರು. ನೀನು ಭ್ರಷ್ಟಾಚಾರದ ಪಿತಾಮಹ ಎಂದು‌ ವಾಗ್ದಾಳಿ ನಡೆಯಿತು. ಇದರಿಂದ ಸದನದಲ್ಲಿ ಕೋಲಾಹಲ ಏರ್ಪಟ್ಟಿತು. ಬಿಜೆಪಿ ಶಾಸಕರು, ಕಾಂಗ್ರೆಸ್‌ ಸಚಿವರು ಪರಸ್ಪರ ವೈಯಕ್ತಿಕ ಟೀಕೆ ನಡೆಸಿದ ಪ್ರಸಂಗ ಕಂಡುಬಂದಿತು.

ದೇಶ

ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಅನುಮತಿ ನಿರೀಕ್ಷೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಕರ್ನಾಟಕ ಸರ್ಕಾರ ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿ ಮಾಡಲಿದೆ ಎಂದು ಡಿಸಿಎಂ D. K. Shivakumar ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆ (IISc)ಯ ಜೆಜೆ ಟಾಟಾ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ (ICDS) ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಸಹಕಾರ ಸಿಗುವ ಭರವಸೆ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆ ಜಾರಿಗೆ ಸಿದ್ಧತೆ

Mekedatu ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಯೋಜನೆ ಪರವಾಗಿದೆ. ಕೇಂದ್ರ ಅನುಮತಿ ದೊರೆತ ಕೂಡಲೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು. ಈ ಯೋಜನೆಯಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಸುಮಾರು 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ – ರೈತರಿಗೆ ಪರಿಹಾರ

Krishna River ಮೇಲ್ದಂಡೆ ಯೋಜನೆ ವಿಚಾರದಲ್ಲಿ 2013ರ ಕಾಯ್ದೆಯಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. 2025ರ ಡಿಸೆಂಬರ್ ವೇಳೆಗೆ 1.72 ಲಕ್ಷ ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಅಣೆಕಟ್ಟು ಸುರಕ್ಷತೆ ರಾಷ್ಟ್ರದ ಆದ್ಯತೆ

ಅಣೆಕಟ್ಟುಗಳು ದೇಶದ ಶಕ್ತಿ ಹಾಗೂ ಪ್ರಗತಿಯ ಪ್ರತೀಕವಾಗಿದ್ದು, ಭಾರತದಲ್ಲಿ ಸುಮಾರು 6,500 ಅಣೆಕಟ್ಟುಗಳಿವೆ. ವಿಶ್ವದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 232 ಅಣೆಕಟ್ಟುಗಳಿದ್ದು, ಅವುಗಳಲ್ಲಿ ಬಹುಪಾಲು 25 ವರ್ಷಕ್ಕಿಂತ ಹಳೆಯದಾಗಿದೆ.

ಕೇಂದ್ರ ಸರ್ಕಾರವು ವಿಶ್ವ ಬ್ಯಾಂಕ್ ನೆರವಿನೊಂದಿಗೆ ಜಾರಿಗೊಳಿಸಿರುವ Dam Rehabilitation and Improvement Project (DRIP) ಯೋಜನೆಯಡಿ ರಾಜ್ಯದಲ್ಲಿ 58 ಅಣೆಕಟ್ಟುಗಳ ದುರಸ್ತಿಗೆ ಸುಮಾರು 1,500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅಣೆಕಟ್ಟುಗಳ ಬಳಿ ಪ್ರವಾಸೋದ್ಯಮಕ್ಕೆ ಮನವಿ

ಅಣೆಕಟ್ಟುಗಳ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

“ಜಲವೇ ಸಂಪತ್ತು, ಜಲವೇ ಇಂಧನ, ಜಲವೇ ಜೀವನ” ಎಂದು ಹೇಳಿದ ಅವರು, ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಬದ್ಧತೆ ವ್ಯಕ್ತಪಡಿಸಿದರು.

Continue Reading

ದೇಶ

BENGALURU : ಮಹಾಶಿವರಾತ್ರಿ ಪ್ರಯುಕ್ತ ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ನಿಷೇಧ

ಬೆಂಗಳೂರು, ಫೆಬ್ರವರಿ 13: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಫೆಬ್ರವರಿ 15ರಂದು ನಗರದಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು Greater Bengaluru Authority (ಜಿಬಿಎ) ಆದೇಶ ಹೊರಡಿಸಿದೆ.

ಜಿಬಿಎ ಪಶುಪಾಲನೆ ವಿಭಾಗದ ಉಪ ನಿರ್ದೇಶಕರು ಹೊರಡಿಸಿದ ಆದೇಶದ ಪ್ರಕಾರ, ಹಬ್ಬದ ದಿನದಂದು ಪ್ರಾಣಿ ವಧೆ ನಡೆಸುವುದಾಗಲಿ ಅಥವಾ ಮಾಂಸ ಉತ್ಪನ್ನಗಳ ಮಾರಾಟ ಮಾಡುವುದಾಗಲಿ ಸಂಪೂರ್ಣ ನಿಷಿದ್ಧವಾಗಿದೆ.

ಆದೇಶದ ಪ್ರಮುಖ ಅಂಶಗಳು

  • ಫೆಬ್ರವರಿ 15ರಂದು ಮಾಂಸ ಮಾರಾಟ ಸಂಪೂರ್ಣ ಬಂದ್
  • ನಗರ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ನಿಷೇಧ
  • ಹಬ್ಬದ ದಿನ ನಿಯಮ ಉಲ್ಲಂಘಿಸಿದರೆ ಕ್ರಮ
  • ನಾಗರಿಕರು ಹಾಗೂ ವ್ಯಾಪಾರಿಗಳು ಆದೇಶ ಪಾಲನೆ ಮಾಡಬೇಕು

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಭಕ್ತಿಭಾವದ ವಾತಾವರಣ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Continue Reading

ದೇಶ

ಶಾಂಘೈನಲ್ಲಿ ದೈತ್ಯ ಸಿಂಕ್‌ಹೋಲ್: ರಸ್ತೆ ಕುಸಿದು ವಾಹನಗಳು ಒಳಗೆ, ಭಯಾನಕ ವಿಡಿಯೋ ವೈರಲ್

ಶಾಂಘೈ, ಫೆಬ್ರವರಿ 13: ಚೀನಾದ **Shanghai**ನಲ್ಲಿ ರಸ್ತೆಯ ಒಂದು ಭಾಗ ಹಠಾತ್ತನೆ ಕುಸಿದು ದೈತ್ಯ ಸಿಂಕ್‌ಹೋಲ್ ಉಂಟಾದ ಘಟನೆ ಬೆಚ್ಚಿಬೀಳಿಸುವಂತಾಗಿದೆ. ವಾಹನಗಳು ಹಾಗೂ ಹತ್ತಿರದ ಕಟ್ಟಡಗಳ ಭಾಗ ಸಿಂಕ್‌ಹೋಲ್‌ನಲ್ಲಿ ಒಳಗಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುರುವಾರ ಹತ್ತಿರದ ಮೆಟ್ರೋ ನಿರ್ಮಾಣ ಕಾಮಗಾರಿಯ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಗಾಯ ಅಥವಾ ಸಾವುನೋವು ವರದಿಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.


ಮಿನ್ಹಾಂಗ್ ಜಿಲ್ಲೆಯಲ್ಲಿ ಹಿಂದೆಯೂ ಘಟನೆ

ಇದಕ್ಕೂ ಮುನ್ನ 2024ರ ಜನವರಿಯಲ್ಲಿ **Minhang District**ನಲ್ಲಿ ಒಳಚರಂಡಿ ಪೈಪ್ ವೈಫಲ್ಯದಿಂದಾಗಿ ರಸ್ತೆ ಕುಸಿದಿತ್ತು. ಅಲ್ಲದೇ 2023ರ ಆಗಸ್ಟ್‌ನಲ್ಲಿ ನಗರದ ಮತ್ತೊಂದು ಭಾಗದಲ್ಲಿ ಸುಮಾರು 10 ಚದರ ಮೀಟರ್ ವ್ಯಾಪ್ತಿಯ ಸಿಂಕ್‌ಹೋಲ್ ಕಾಣಿಸಿಕೊಂಡಿತ್ತು.

ನಿರಂತರ ನಗರಾಭಿವೃದ್ಧಿ ಕಾಮಗಾರಿಗಳು ಮತ್ತು ಭೂಗರ್ಭದ ಮೂಲಸೌಕರ್ಯ ವೈಫಲ್ಯಗಳೇ ಇಂತಹ ಘಟನೆಗಳಿಗೆ ಕಾರಣವಾಗಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

Continue Reading

Trending