Connect with us

ದೇಶ

Super Blue Moon: ನಾಳೆ ಆಕಾಶದಲ್ಲಿ ಕಾಣಿಸಲಿದೆ, ಚಾನ್ಸ್ ಮಿಸ್ ಆದ್ರೆ ಇನ್ನು10 ವರ್ಷ ಸಿಗಲ್ಲ!

Published

on

ನಾಳೆ ಆಕಾಶದಲ್ಲಿ ಕಾಣಿಸಲಿದೆ, ಚಾನ್ಸ್ ಮಿಸ್ ಆದ್ರೆ ಇನ್ನು10 ವರ್ಷ ಸಿಗಲ್ಲ!

Super Blue Moon 2023: ನಾಳೆ (ಆಗಸ್ಟ್​ 30) ರಾಖಿಪೂರ್ಣಿಮೆಯಂದು ಜಗತ್ತು ಅಪರೂಪದ ವಿಶ್ವರೂಪಕ್ಕೆ ಸಾಕ್ಷಿಯಾಗಲಿದೆ. ಅಪರೂಪದ ಸೂಪರ್ ಬ್ಲೂ ಮೂನ್ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ. ವಿಶೇಷವೆಂದರೆ ಈ ಸೂಪರ್ ಬ್ಲೂ ಮೂನ್ 10 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ.   ನಾಳೆ (ಆಗಸ್ಟ್​ 30) ರಾಖಿಪೂರ್ಣಿಮೆಯಂದು ಜಗತ್ತು ಅಪರೂಪದ ವಿಶ್ವರೂಪಕ್ಕೆ ಸಾಕ್ಷಿಯಾಗಲಿದೆ. ಅಪರೂಪದ ಸೂಪರ್ ಬ್ಲೂ ಮೂನ್ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ. ವಿಶೇಷವೆಂದರೆ ಈ ಸೂಪರ್ ಬ್ಲೂ ಮೂನ್ 10 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ.  ನಿಜಕ್ಕೂ ಇದು ಅಪರೂಪದ ಖಗೋಳ ಕೌತುಕ ಎನ್ನಬಹುದು. ಬುಧವಾರ ಸಂಭವಿಸುವ ಈ ಅಪರೂಪದ ಬ್ಲೂ ಮೂನ್‌ ಇನ್ನು ಹಲವು ವರ್ಷಗಳವರೆಗೆ ಪುನಃ ಕಾಣಿಸುವುದಿಲ್ಲ. ಬ್ಲೂ ಮೂನ್‌ ಎಂದರೆ ಚಂದ್ರನ ಬಣ್ಣ ನೀಲಿಯಾಗುವುದು ಎಂದರ್ಥವಲ್ಲ. ಸಾಮಾನ್ಯವಾಗಿ ಸೂಪರ್‌ಮೂನ್‌ ಉದಯದಂದು ಚಂದ್ರನು ಇತರ ಹುಣ್ಣಿಮೆಗಳಂದು ಕಾಣಿಸುವುದಕ್ಕಿಂತ ಶೇ 16ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತಾನೆ. ಅಲ್ಲದೇ, ಚಂದ್ರ ಗಾತ್ರವೂ ದೊಡ್ಡದಾಗಿ ಇರುತ್ತದೆ.  ಚಂದ್ರನು ತನ್ನ ಕೆಳಗಿನ ಸ್ಥಾನದಲ್ಲಿ ಪೂರ್ಣವಾಗಿದ್ದಾಗ, ಚಂದ್ರನು ಭೂಮಿಯಿಂದ ಹೆಚ್ಚು ದೊಡ್ಡದಾಗಿ ಕಾಣಿಸುತ್ತಾನೆ. ಆ ಚಂದ್ರನನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಹುಣ್ಣಿಮೆಯು ತಿಂಗಳಿಗೆ ಎರಡು ಬಾರಿ ಸಂಭವಿಸಿದಾಗ, ಈ ಅಪರೂಪವನ್ನು ಸೂಚಿಸಲು ಬ್ಲೂ ಮೂನ್​ ಎಂದು ಕರೆಯಲಾಗುತ್ತದೆ. ಅಂದಹಾಗೆ ಬ್ಲೂ ಮೂನ್‌ ಹೆಸರಿಗೂ ಹಾಗೂ ಚಂದ್ರನ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ನಿಮ್ಮ ಗಮನಕ್ಕಿರಲಿ, ಈ ವರ್ಷ ನಾಲ್ಕು ಬಾರಿ ಬ್ಲೂ ಮೂನ್‌ ಸಂಭವಿಸಲಿದೆ. ನಾಳೆ ಅಂದರೆ ಆಗಸ್ಟ್‌ 30 ರಂದು ಕಾಣಿಸುವುದು ಮೂರನೇ ಬ್ಲೂ ಮೂನ್‌ ಆಗಿದೆ. ಈ ತಿಂಗಳು ಎರಡು ದಿನ ಚಂದ್ರನು ಪೂರ್ಣ ಆಕಾರದಲ್ಲಿ ಆಗಸದಲ್ಲಿ ಉದಯಿಸಲಿದ್ದಾನೆ. ಅಪರೂಪದ ನೀಲಿ ಚಂದ್ರ ಬುಧವಾರ ಆಕಾಶದಲ್ಲಿ ತೇಲಲಿದೆ. ಬ್ಲೂ ಮೂನ್ ಮತ್ತು ಸೂಪರ್ ಮೂನ್ ಜೋಡಿಗಳು ಅಪರೂಪ. ಸುಮಾರು 10 ರಿಂದ 20 ವರ್ಷಗಳ ನಂತರ, ಚಂದ್ರನ ಈ ಕ್ಷಣ ಬರುತ್ತದೆ. ಪ್ರತಿ ಎರಡರಿಂದ ಎರಡೂವರೆ ವರ್ಷಗಳಿಗೊಮ್ಮೆ ಸೂಪರ್‌ಮೂನ್‌ಗಳು ಸಂಭವಿಸುತ್ತವೆ.  ಬುಧವಾರ ರಾತ್ರಿ 8 ಗಂಟೆಗೆ IST ಸೂಪರ್ ಬ್ಲೂ ಮೂನ್‌ನ ಅತ್ಯುತ್ತಮವಾದ ನೋಟವನ್ನು ಜಗತ್ತು ನೋಡಲಿದೆ. ಮುಂದಿನ ಸೂಪರ್ ಬ್ಲೂ ಮೂನ್ ಜನವರಿ ಮತ್ತು ಮಾರ್ಚ್ 2037 ರಲ್ಲಿ ಸಂಭವಿಸುತ್ತದೆ.   ಬುಧವಾರ ಮುಸ್ಸಂಜೆ ವೇಳೆ, ಸೂರ್ಯಾಸ್ತದ ನಂತರ ಸೂಪರ್‌ ಬ್ಲೂ ಮೂನ್‌ ವೀಕ್ಷಣೆಗೆ ಸೂಕ್ತ ಸಮಯ. ಆಗಸ್ಟ್‌ 30, 2023 ರ ರಾತ್ರಿ 8.37ಕ್ಕೆ ಸರಿಯಾಗಿ ಬ್ಲೂ ಮೂನ್‌ ಗರಿಷ್ಠ ಪ್ರಕಾಶಮಾನದಲ್ಲಿ ಕಾಣಿಸುತ್ತದೆ. ವಿವಿಧ ದೇಶಗಳಲ್ಲಿ ವಿವಿಧ ವಿವಿಧ ಸಮಯಕ್ಕೆ ಈ ಅದ್ಭುತವನ್ನು ವೀಕ್ಷಣೆ ಮಾಡಬಹುದಾಗಿದೆ.

Continue Reading

ಕ್ರೀಡೆ

ಫಿಫಾ ವಿಶ್ವಕಪ್ 2026 ಆರಂಭ: ಜಗತ್ತೆಲ್ಲಾ ಫುಟ್‌ಬಾಲ್ ಜ್ವರದಲ್ಲಿ

Published

on

ಜಗತ್ತಿನಾದ್ಯಂತ ಕೋಟ್ಯಂತರ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದ FIFA World Cup 2026 ಕೊನೆಗೂ ಆರಂಭವಾಗುತ್ತಿದೆ. ಜೂನ್ 11ರಿಂದ ಅಧಿಕೃತವಾಗಿ ಆರಂಭವಾಗಲಿರುವ ಈ ಮಹಾಕ್ರೀಡಾಕೂಟವು ಇಡೀ ವಿಶ್ವವನ್ನು ಫುಟ್‌ಬಾಲ್ ಜ್ವರದಲ್ಲಿ ಮುಳುಗಿಸಲಿದೆ.

ಈ ಬಾರಿ ಉತ್ತರ ಅಮೆರಿಕದ ಅಮೆರಿಕಾ, ಕೆನಡಾ ಮತ್ತು ಮೆಕ್ಸಿಕೋ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿರುವುದು ವಿಶೇಷವಾಗಿದೆ. ಫಿಫಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೂರು ರಾಷ್ಟ್ರಗಳು ಒಟ್ಟಾಗಿ ವಿಶ್ವಕಪ್ ಆಯೋಜಿಸುತ್ತಿದ್ದು, ಇದು 23ನೇ ಆವೃತ್ತಿಯ ಟೂರ್ನಿಯಾಗಲಿದೆ.

ಈ ವಿಶ್ವಕಪ್‌ನಲ್ಲಿ ಪ್ರಮುಖ ಬದಲಾವಣೆಗಳೂ ನಡೆದಿವೆ. ಮೊದಲ ಬಾರಿ 32 ತಂಡಗಳ ಬದಲು ಒಟ್ಟು 48 ತಂಡಗಳು ಭಾಗವಹಿಸುತ್ತಿದ್ದು, ಪಂದ್ಯಗಳ ಸಂಖ್ಯೆ 64ರಿಂದ 104ಕ್ಕೆ ಏರಿಕೆಯಾಗಿದೆ. ಒಟ್ಟು 39 ದಿನಗಳ ಕಾಲ ನಡೆಯುವ ಈ ಟೂರ್ನಿ ಜುಲೈ 19ರಂದು ನ್ಯೂಯಾರ್ಕ್–ನ್ಯೂಜೆರ್ಸಿಯಲ್ಲಿ ನಡೆಯುವ ಫೈನಲ್ ಪಂದ್ಯದಿಂದ ಅಂತ್ಯಗೊಳ್ಳಲಿದೆ.

ಹೊಸ ಮಾದರಿಯಲ್ಲಿ 48 ತಂಡಗಳನ್ನು 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಟಾಪ್ ಎರಡು ತಂಡಗಳು ಹಾಗೂ ಅತ್ಯುತ್ತಮ ಮೂರನೇ ಸ್ಥಾನ ಪಡೆದ ತಂಡಗಳು ಸೇರಿ ಒಟ್ಟು 32 ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಲಿವೆ. ನಂತರ ರೌಂಡ್ ಆಫ್ 32 ರಿಂದ ನೇರ ಎಲಿಮಿನೇಷನ್ ಹಂತ ಆರಂಭವಾಗಲಿದೆ.

ತಂತ್ರಜ್ಞಾನ ಬಳಕೆಯನ್ನೂ ಹೆಚ್ಚಿಸಲಾಗಿದ್ದು ವಿಡಿಯೋ ಅಸಿಸ್ಟೆಂಟ್ ರೆಫರಿ (VAR)ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಜೊತೆಗೆ ಮೈದಾನದಲ್ಲಿ ಸಂವಹನ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ನಿಯಮಗಳನ್ನೂ ಜಾರಿಗೆ ತರಲಾಗಿದೆ.

ಭಾರತೀಯ ಅಭಿಮಾನಿಗಳಿಗೆ ಪಂದ್ಯಗಳು ತಡರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಪ್ರಸಾರವಾಗಲಿವೆ. ಮೆಕ್ಸಿಕೋ ನಗರದ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಈ ವಿಶ್ವಕಪ್ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೋ ಅವರ ಕೊನೆಯ ವಿಶ್ವಕಪ್ ಆಗಬಹುದು ಎಂಬ ಊಹೆಗಳು ಕೂಡ ಅಭಿಮಾನಿಗಳ ಕುತೂಹಲ ಹೆಚ್ಚಿಸಿವೆ. ಬ್ರೆಜಿಲ್, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಬಲಿಷ್ಠ ತಂಡಗಳ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.

Continue Reading

ದೇಶ

4,399 ದಿನಗಳ ನಿರಂತರ ಆಡಳಿತ: ಮೋದಿ ಹೊಸ ದಾಖಲೆ ಸ್ಥಾಪನೆ

Published

on

ನವದೆಹಲಿ: ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಸಂಭವಿಸಿದೆ. ಪ್ರಧಾನಿ Narendra Modi ಅವರು ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರವಾಗಿ ಅಧಿಕಾರದಲ್ಲಿರುವ ಪ್ರಧಾನಿಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಜೂನ್ 10 ರಂದು ಅವರು 4,399 ದಿನಗಳ ನಿರಂತರ ಆಡಳಿತಾವಧಿಯನ್ನು ಪೂರೈಸಿದ್ದು, ಈ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 4,398 ದಿನಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನೆಹರೂ ಅವರು 1952ರಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ 1964ರವರೆಗೆ ನಿರಂತರವಾಗಿ ಸೇವೆ ಸಲ್ಲಿಸಿದ್ದರು.

ಮೋದಿ ಅವರು 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ನಂತರದಿಂದ ನಿರಂತರವಾಗಿ ಅಧಿಕಾರದಲ್ಲಿದ್ದಾರೆ. ಈ ಅವಧಿಯಲ್ಲಿ ಅವರು ಹಲವು ಅಭಿವೃದ್ಧಿ ಯೋಜನೆಗಳು, ಮೂಲಸೌಕರ್ಯ ವೃದ್ಧಿ ಹಾಗೂ ಡಿಜಿಟಲ್ ಕ್ರಾಂತಿಗೆ ಒತ್ತು ನೀಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ಈ ಸಾಧನೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದ್ದು, ಆಡಳಿತ ಪಕ್ಷವು 12 ವರ್ಷಗಳ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. Bharatiya Janata Party ದೇಶದ ವಿವಿಧ ರಾಜ್ಯಗಳಲ್ಲಿ ಸಭೆ, ಸುದ್ದಿಗೋಷ್ಠಿ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ.

ಈ ಸಂದರ್ಭದಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕರು ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಲು ವಿಶೇಷ ಸಭೆ ನಡೆಸಲಿದ್ದಾರೆ. ಜೊತೆಗೆ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮವೂ ಆಯೋಜಿಸಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮೋದಿ ಅವರಿಗೆ ಅಭಿನಂದನೆಗಳು ಹರಿದುಬಂದಿವೆ. ಶ್ರೀಲಂಕಾ ಅಧ್ಯಕ್ಷರು ಹಾಗೂ ಪಪುವಾ ನ್ಯೂಗಿನಿ ಪ್ರಧಾನಿಗಳು ಅವರ ನಾಯಕತ್ವವನ್ನು ಪ್ರಶಂಸಿಸಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೆ ವಿರುದ್ಧವಾಗಿ, ವಿರೋಧ ಪಕ್ಷಗಳು ಸರ್ಕಾರದ ನೀತಿಗಳ ಕುರಿತು ಟೀಕೆ ಮಾಡಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ನೀತಿಗಳನ್ನು ಕಟುವಾಗಿ ಪ್ರಶ್ನಿಸಿದ್ದಾರೆ.

ಈ ಐತಿಹಾಸಿಕ ಕ್ಷಣವು ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ದಾಖಲಿಸಿದೆ.

Continue Reading

ಅಪರಾಧ

ಆವಲಹಳ್ಳಿ ದಾಳಿ: ಅಕ್ರಮ ಜಿಲೆಟಿನ್ ದಾಸ್ತಾನು ಪತ್ತೆ, 225 ಕಡ್ಡಿ ವಶ

Published

on

ಬೆಂಗಳೂರು: ರಾಜ್ಯ ರಾಜಧಾನಿಯ ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಧಾನಸೌಧ ಲೇಔಟ್‌ ಸಮೀಪದ ಯರಪ್ಪನಹಳ್ಳಿ ಗ್ರಾಮದ ಕ್ವಾರಿ ಮೇಲೆ ದಾಳಿ ನಡೆಸಿದ ಪೊಲೀಸರು ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್‌ಗಳನ್ನು ಪತ್ತೆಹಚ್ಚಿದ್ದಾರೆ.

ಪೊಲೀಸರ ಪ್ರಕಾರ, ವೆಂಕಟೇಶ್ವರ ಗ್ರಾನೈಟ್ಸ್ ಕ್ರಶರ್‌ಗೆ ಸೇರಿದ ಕ್ವಾರಿಯಲ್ಲಿ ಕಲ್ಲುಬಂಡೆಗಳನ್ನು ಸ್ಫೋಟಿಸಲು ಬಳಸುವ 225 ಜಿಲೆಟಿನ್ ಕಡ್ಡಿಗಳು ಹಾಗೂ 50 ಡಿಟೊನೇಟರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಸ್ಥಳೀಯರಿಂದ ಬಂದ ಮಾಹಿತಿಯ ಆಧಾರದ ಮೇಲೆ ಆವಲಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿ ಈ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಕ್ವಾರಿ ಮಾಲೀಕರಾದ ವೆಂಕಟರಮಣರೆಡ್ಡಿ ಹಾಗೂ ಉಸ್ತುವಾರಿ ಲೋಕೇಶ್‌ರೆಡ್ಡಿ ಅವರು ಸರ್ಕಾರದಿಂದ ಅಗತ್ಯವಾದ ಪರವಾನಗಿ ಪಡೆಯದೇ ಈ ಸ್ಪೋಟಕಗಳನ್ನು ಸಂಗ್ರಹಿಸಿ ಬಳಸುತ್ತಿದ್ದರೆಂಬ ಆರೋಪವೂ ಕೇಳಿಬಂದಿದೆ. ಜೊತೆಗೆ, ಸುರಕ್ಷತಾ ನಿಯಮಗಳನ್ನು ಪಾಲಿಸದೇ ರಾತ್ರಿ ವೇಳೆ ಕಲ್ಲುಬಂಡೆಗಳನ್ನು ಸ್ಫೋಟಿಸುತ್ತಿದ್ದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಶರ್ ಮಾಲೀಕರು, ಉಸ್ತುವಾರಿ ಹಾಗೂ ಕ್ವಾರಿಯಲ್ಲಿ ಸ್ಫೋಟಕ ಬಳಕೆಯಲ್ಲಿ ತೊಡಗಿದ್ದ ವಿಕಾಸ್, ತೋಹಿದ್ ಮತ್ತು ಸಂದೀಪ್ ವಿರುದ್ಧ ನಿರ್ಲಕ್ಷ್ಯ ಆರೋಪ ಹಾಗೂ ಸ್ಫೋಟಕಗಳ ಕಾಯಿದೆ 1884 ಅಡಿ ಪ್ರಕರಣ ದಾಖಲಿಸಿದ್ದಾರೆ.

ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಸ್ಪೋಟಕಗಳನ್ನು ಕೇವಲ ಕಲ್ಲುಬಂಡೆ ಸ್ಫೋಟಕ್ಕೆ ಮಾತ್ರ ಬಳಸಲಾಗಿತ್ತೇ ಅಥವಾ ಬೇರೆ ದುರುದ್ದೇಶವಿದೆಯೇ ಎಂಬುದರ ಕುರಿತು ತನಿಖೆ ಮುಂದುವರೆಸಿದ್ದಾರೆ. ಈ ನಡುವೆ, ವೈಟ್‌ಫೀಲ್ಡ್ ಉಪ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಸ್ಥಳೀಯ ಪ್ರದೇಶದಲ್ಲಿ ಈ ಘಟನೆ ಆತಂಕ ಮೂಡಿಸಿದ್ದು, ಭದ್ರತಾ ಕ್ರಮಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

Continue Reading

Trending