Connect with us

ದೇಶ

ಚುನಾವಣೆಯಲ್ಲಿ ಎದುರಾಳಿ ಗೆಲುವು- ಕೋರ್ಟ್ ಮೊರೆ ಹೋದ ಮನೇಕಾ ಗಾಂಧಿ

ಅಲಹಾಬಾದ್: ಸುಲ್ತಾನ್‍ಪುರ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಸಂಸದ ಭುವಲ್ ನಿಶಾದ್ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿಯ ಮಾಜಿ ಮೇನಕಾ ಗಾಂಧಿ ಅವರು ಅಲಹಾಬಾದ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ,
ಇತ್ತೀಚಿಗೆ ನಡೆದ ಲೋಕಸಭೆ ಚುವಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಅವರ ವಿರುದ್ಧ ಬಾಕಿ ಉಳಿದಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲ ಮೇನಕಾ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ,
ನಿಶಾದ್ ಅವರು ನಾಮ ನಿರ್ದೇಶನ ಅಫಿಡವಿಟ್‍ನಲ್ಲಿ ಅವರ ವಿರುದ್ಧ ಹನ್ನೆರಡು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಮತ್ತು ಅವರು ಚುನಾವಣಾ ಅಫಿಡವಿಟ್‍ನಲ್ಲಿ ಎಂಟು ಪ್ರಕರಣಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ,
ಬಾಕಿ ಉಳಿದಿರುವ 4 ಕ್ರಿಮಿನಲ್ ಪ್ರಕರಣಗಳನ್ನು ಮುಚ್ಚಿಟ್ಟಿದ್ದಾರೆ, ಅವರ ಆಯ್ಕೆಯನ್ನು ರದ್ದುಪಡಿಸಬೇಕು ಮತ್ತು ತನ್ನನ್ನು ಚುನಾಯಿತ ಅಭ್ಯರ್ಥಿ ಎಂದು ಘೋಷಿಸುವಂತೆ ಅರ್ಜಿಯಲ್ಲ ಒತ್ತಾಯಿಸಲಾಗಿದೆ,
ನಿಶಾದ್ ವಿರುದ್ಧ 43,174 ಮತಗಳಿಂದ ಸೋತಿರುವ ಮೇನಕಾ ಗಾಂಧಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಲಕ್ನೋ ಪೀಠವು ಜುಲೈ 30 ರಂದು ನಡೆಸುವ ಸಾಧ್ಯತೆಯಿದೆ,

ಕ್ರೀಡೆ

ICC Men’s T20 World Cup: ಸಲ್ಮಾನ್ ಆಘಾ ನಿಗೂಢ ಉತ್ತರ: ಕೈಕುಲುಕುವರಾ ಆಟಗಾರರು?

ಕೊಲೊಂಬೋ: ಮಹಾಶಿವರಾತ್ರಿಯ ದಿನ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ20 ವಿಶ್ವಕಪ್ ಲೀಗ್ ಹಂತದ ಮಹತ್ವದ ಪಂದ್ಯ ನಡೆಯಲಿದೆ. R. Premadasa Stadium ನಲ್ಲಿ ನಡೆಯಲಿರುವ ಈ ಹೈವೊಲ್ಟೇಜ್ ಸಮರಕ್ಕೂ ಮುನ್ನ, ಎರಡು ತಂಡಗಳ ಆಟಗಾರರು ಹ್ಯಾಂಡ್‌ಶೇಕ್ ಮಾಡುತ್ತಾರೆಯೇ ಎಂಬ ಪ್ರಶ್ನೆ ಕುತೂಹಲ ಹುಟ್ಟಿಸಿದೆ.

ಪ್ರೀಮ್ಯಾಚ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ Salman Ali Agha, ಹ್ಯಾಂಡ್‌ಶೇಕ್ ವಿಚಾರಕ್ಕೆ ಸ್ಪಷ್ಟ ಉತ್ತರ ನೀಡಲಿಲ್ಲ. “ನಾಳೆಯ ಪಂದ್ಯವನ್ನು ಕ್ರೀಡಾಸ್ಫೂರ್ತಿಯಿಂದ ಆಡುತ್ತೇವೆ. ವೈಯಕ್ತಿಕ ವಿಚಾರ ಮುಖ್ಯವಲ್ಲ” ಎಂದು ಹೇಳುವ ಮೂಲಕ ಅವರು ನಿಗೂಢ ಉತ್ತರ ನೀಡಿದ್ದಾರೆ.

ಭಾರತ–ಪಾಕಿಸ್ತಾನ ಪಂದ್ಯವೆಂದರೆ ಕೇವಲ ಕ್ರಿಕೆಟ್ ಮಾತ್ರವಲ್ಲ, ಭಾವನೆಗಳ ಹೋರಾಟವೂ ಹೌದು. ಹೀಗಾಗಿ ಹ್ಯಾಂಡ್‌ಶೇಕ್‌ನಂತಹ ಸಣ್ಣ ವಿಷಯವೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ.

ಇದಕ್ಕೂ ಮುನ್ನ ನಡೆದ Asia Cup ವೇಳೆ, ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ್ದರೆಂಬ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ, ಪಿಸಿಬಿ ಅಧ್ಯಕ್ಷ Mohsin Naqvi ಅವರಿಂದ ಟ್ರೋಫಿ ಸ್ವೀಕರಿಸದ ಘಟನೆಗೂ ವಿವಾದ ಸೃಷ್ಟಿಯಾಗಿತ್ತು.

ಇದೀಗ ಕೊಲೊಂಬೋದಲ್ಲಿ ಎರಡು ತಂಡಗಳ ಅಭ್ಯಾಸ ವೇಳಾಪಟ್ಟಿಯೂ ಪ್ರಕಟವಾಗಿದೆ. ಮಧ್ಯಾಹ್ನ 2ರಿಂದ 5ರವರೆಗೆ ಪಾಕಿಸ್ತಾನ ತಂಡ ಅಭ್ಯಾಸ ನಡೆಸಲಿದ್ದು, ಸಂಜೆ 6ರಿಂದ 9ರವರೆಗೆ ಭಾರತ ತಂಡ ಅಭ್ಯಾಸ ನಡೆಸಲಿದೆ. ಭಾರತ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಲಭಿಸಿದ್ದು, ಅಭಿಮಾನಿಗಳ ಉತ್ಸಾಹ ಗಮನ ಸೆಳೆದಿದೆ.

ಹ್ಯಾಂಡ್‌ಶೇಕ್ ಆಗುತ್ತದೆಯೇ ಎಂಬುದಕ್ಕಿಂತ ಮೈದಾನದಲ್ಲಿನ ಪ್ರದರ್ಶನವೇ ಅಂತಿಮ ಉತ್ತರ ನೀಡಲಿದೆ

Continue Reading

ದೇಶ

ಸಾಧನಾ ಸಮಾವೇಶದಲ್ಲಿ ಸಿಎಂ ಗರ್ಜನೆ: ಕರ್ನಾಟಕ ಜಿಡಿಪಿ ದೇಶದಲ್ಲೇ ನಂಬರ್ ಒನ್

ಹಾವೇರಿ, ಫೆ.14: ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷಾಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ. ಈಗಾಗಲೇ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ದಾಖಲೆ ನಿರ್ಮಿಸಿದ್ದೇವೆ ಎಂದು ಮುಖ್ಯಮಂತ್ರಿ Siddaramaiah ಘೋಷಿಸಿದರು.

ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ನಡೆದ ಸರ್ಕಾರದ ಸಹಸ್ರ ದಿನಾಚರಣೆ ಹಾಗೂ ಸಾಧನಾ ಸಮಾವೇಶದಲ್ಲಿ 1 ಲಕ್ಷ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಹೇಳಿದರು.

ಕಂದಾಯ ಸಚಿವ Krishna Byre Gowda ನೇತೃತ್ವದಲ್ಲಿ ಇಲಾಖೆಯಲ್ಲಿ ಕ್ರಾಂತಿಕಾರಿ ಪ್ರಗತಿ ಕಂಡಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಎಸ್‌ಟಿ ಸಂಗ್ರಹದಲ್ಲೂ ರಾಜ್ಯ ವೇಗವಾಗಿ ಮುನ್ನಡೆಯುತ್ತಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿದರು.

ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿಎಂ, ಮಾಜಿ ಮುಖ್ಯಮಂತ್ರಿ Basavaraj Bommai ಹಾಗೂ ಕೇಂದ್ರ ಸಚಿವ Pralhad Joshi ಸೇರಿದಂತೆ ಬಿಜೆಪಿ ನಾಯಕರು ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ 9 ತಿಂಗಳು ಕಳೆದಿದ್ದು, 243 ಭರವಸೆಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ₹1,18,000 ಕೋಟಿ ನೇರವಾಗಿ ಜನರ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದರು.

ಆರ್ಥಿಕ ತಜ್ಞರಾದ Amartya Sen ಮತ್ತು Abhijit Banerjee ಸೇರಿದಂತೆ ಹಲವರು ರಾಜ್ಯದ ಜನಪರ ಯೋಜನೆಗಳಿಗೆ ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಹೇಳಿದರು.

ಕೇಂದ್ರದಿಂದ ಜಿಎಸ್‌ಟಿ ಪಾಲಿನಲ್ಲಿ 12–15 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಜಲ ಜೀವನ್ ಮಿಷನ್ (JJM) ಅನುದಾನದಲ್ಲೂ ಸುಮಾರು 15 ಸಾವಿರ ಕೋಟಿ ಬಾಕಿ ಇದೆ. ನ್ಯಾಯಯುತ ಪಾಲು ದೊರೆತರೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ ಎಂದು ತಿಳಿಸಿದರು.

“ನುಡಿದಂತೆ ನಡೆದು” ಆಡಳಿತ ನೀಡಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ. ಎಲ್ಲ ಜಾತಿ, ಧರ್ಮ, ಭಾಷೆಯ ಜನರನ್ನು ಒಳಗೊಂಡ ಸಮಾನತೆಯ ಅಭಿವೃದ್ಧಿಗೆ ನಮ್ಮ ಬದ್ಧತೆ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Continue Reading

ದೇಶ

ಹಂಪಿ ಉತ್ಸವದಲ್ಲಿ ಮಕ್ಕಳ ಕನಸು ನನಸು: Zameer Ahmed Khan ಉಚಿತ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ

ಬಳ್ಳಾರಿ: ವಿಶ್ವ ಪ್ರಸಿದ್ಧ Hampi Utsav ವೇಳೆ ಸರ್ಕಾರಿ ಶಾಲಾ ಮಕ್ಕಳಿಗೆ ಅಚ್ಚರಿ ಉಡುಗೊರೆಯಾಗಿ ಜಿಲ್ಲಾ ಉಸ್ತುವಾರಿ ಸಚಿವ Zameer Ahmed Khan ಉಚಿತ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಿದರು. 60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಲಿಕಾಪ್ಟರ್ ಪ್ರಯಾಣದ ಕನಸು ಈ ಮೂಲಕ ಸಾಕಾರವಾಯಿತು.

ಕಮಲಾಪುರದ Mayura Hotel ಆವರಣದಲ್ಲಿ ‘ಬೈ ಸ್ಕೈ’ ವೀಕ್ಷಣೆಗೆ ಬಂದಿದ್ದ ಮಕ್ಕಳ ಆಸೆ ಗಮನಿಸಿದ ಸಚಿವರು, “ನೀವೂ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಾ?” ಎಂದು ಪ್ರಶ್ನಿಸಿದರು. ಮಕ್ಕಳು ಉತ್ಸಾಹದಿಂದ “ಹೌದು ಸರ್” ಎಂದು ಪ್ರತಿಕ್ರಿಯಿಸಿದರು.

ತಕ್ಷಣವೇ ತಮ್ಮ ಸ್ವಂತ ಖರ್ಚಿನಲ್ಲಿ ಯೂನಿಫಾರ್ಮ್‌ನಲ್ಲಿದ್ದ ಎಲ್ಲಾ ಮಕ್ಕಳಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಿಸಿದರು. ಆಕಾಶಕ್ಕೆ ಹಾರಿದ ಮಕ್ಕಳ ಸಂಭ್ರಮ, ಕೆಳಗಡೆ ನಿಂತಿದ್ದ ಪೋಷಕರ ಕಣ್ಣೀರಿನ ಸಂತೋಷ ಕ್ಷಣಗಳನ್ನು ಸೃಷ್ಟಿಸಿತು.

ಹಂಪಿ ಉತ್ಸವದ ಸಾಂಸ್ಕೃತಿಕ ವೈಭವದ ನಡುವೆ ನಡೆದ ಈ ಮಾನವೀಯ ಕೃತ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Continue Reading

Trending