Connect with us

ದೇಶ

ಪ್ರಧಾನಿಯ ರಕ್ಷಣೆಯಲ್ಲಿರುವ ಅದಾನಿಯನ್ನು ಬೇಗ ಅರೆಸ್ಟ್ ಮಾಡಿ ರಾಹುಲ್ ಗಾಂಧಿ ಆಗ್ರಹ

Published

on

ನವದೆಹಲಿ: ಸೌರ ಶಕ್ತಿ ಗುತ್ತಿಗೆಗೆ ಸಂಬಂಧಪಟ್ಟಂತೆ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದ್ಯಮಿ ಗೌತಮ್ ಅದಾನಿ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ,
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅದಾನಿ ಭಾರತೀಯ ಕಾನೂನು ಮತ್ತು ಅಮೇರಿಕನ್ ಕಾನೂನು ಎರಡನ್ನು ಉಲ್ಲಂಘಿಸಿದ್ದಾರೆ ಎಂಬುದು ಈಗ ಅಮೆರಿಕದಲ್ಲಿ ಸ್ಪಷ್ಟವಾಗಿದೆ ಮತ್ತು ದೃಢಪಟ್ಟಿದೆ, ಅವರು ಯುಎಸ್ ನಲ್ಲಿ ದೋಷಾರೋಪಣೆ ಮಾಡಿದ್ದಾರೆ ಎಂದರು,
ಅಲ್ಲದೇ ಅದಾನಿ ದೇಶದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ, ಇದಕ್ಕೆ ಪ್ರಧಾನಿಯವರೇ ಮುಖ್ಯ ಕಾರಣ, ಪ್ರಧಾನಿಯವರು ಅದಾನಿ ಜೊತೆ ಸೇರಿದ್ದಾರೆ, ಅದಕ್ಕಾಗಿಯೇ ಮೋದಿಯವರು ಗೌತಮ್ ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಿದರು,
ಅದಾನಿ ಅವರು ಬರೋಬ್ಬರಿ 2000 ಸಾವಿರ ಕೋಟಿ ವಂಚನೆ ಮಾಡಿರುವುದು ಅಮೆರಿಕದ ನ್ಯಾಯಾಲಯವೇ ಒತ್ತಿ ಹೇಳಿದೆ ಅದರೂ ಕೂಡ ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಕೂಡಲೇ ಅದಾನಿಯನ್ನು ಬಂಧಿಸಬೇಕು ಅಲ್ಲದೇ ಅವರ ಹಿಂದೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪತ್ತೆ ಹಚ್ಚಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ,

ದೇಶ

ದಿವಂಗತ ಧರ್ಮೇಂದ್ರರಿಗೆ ಪದ್ಮವಿಭೂಷಣ; ರಾಷ್ಟ್ರಪತಿಯಿಂದ ಹೇಮಾ ಮಾಲಿನಿಗೆ ಪ್ರಶಸ್ತಿ ಪ್ರದಾನ

Published

on

ನವದೆಹಲಿ: ಬಾಲಿವುಡ್‌ನ ಹಿರಿಯ ನಟ ಹಾಗೂ ದಿವಂಗತ ಕಲಾವಿದ Dharmendra ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಗಿದೆ. ರಾಷ್ಟ್ರಪತಿ Droupadi Murmu ಅವರು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಧರ್ಮೇಂದ್ರ ಅವರ ಪತ್ನಿ ಹಾಗೂ ನಟಿ Hema Malini ಅವರಿಗೆ ಪ್ರದಾನ ಮಾಡಿದರು.

ಭಾರತೀಯ ಸಿನಿರಂಗಕ್ಕೆ ಧರ್ಮೇಂದ್ರ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ 2026ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಿತ್ತು. ಭಾರತೀಯ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಅವರು, ಆಕ್ಷನ್‌, ಕುಟುಂಬ ಹಾಗೂ ಭಾವನಾತ್ಮಕ ಪಾತ್ರಗಳ ಮೂಲಕ ಜನಮನ ಗೆದ್ದಿದ್ದರು.

1935ರ ಡಿಸೆಂಬರ್‌ 8ರಂದು ಜನಿಸಿದ ಧರ್ಮೇಂದ್ರ ಅವರು ಸುಮಾರು 65 ವರ್ಷಗಳ ಸಿನಿ ಪಯಣದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ ಚಿತ್ರರಂಗದಲ್ಲಿ ಅವರು “ಹೀ-ಮ್ಯಾನ್” ಎಂದೇ ಖ್ಯಾತಿ ಪಡೆದಿದ್ದರು. 2025ರ ನವೆಂಬರ್‌ 24ರಂದು ಅವರು ನಿಧನರಾದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಿದ್ದು, ಧರ್ಮೇಂದ್ರ ಅವರ ಸಿನಿ ಸಾಧನೆಯನ್ನು ಸ್ಮರಿಸಲಾಯಿತು.

Continue Reading

ದೇಶ

ಕೃಷ್ಣಾ ನದಿಗೆ ಹೊಸ ಬ್ಯಾರೇಜ್‌? ಕರ್ನಾಟಕ-ತೆಲಂಗಾಣ ಸಚಿವರ ಮಹತ್ವದ ಸಭೆ

Published

on

ಹೈದರಾಬಾದ್, ತೆಲಂಗಾಣ: ಕೃಷ್ಣಾ ನದಿಗೆ ಸಂಬಂಧಿಸಿದ ಹೊಸ ಬ್ಯಾರೇಜ್ ಮತ್ತು ನೀರಾವರಿ ಯೋಜನೆ ಕುರಿತಂತೆ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳ ನಡುವೆ ಮಹತ್ವದ ಉನ್ನತ ಮಟ್ಟದ ಸಭೆ ಹೈದರಾಬಾದ್‌ನಲ್ಲಿ ನಡೆಯಿತು. ಕರ್ನಾಟಕದ ಸಣ್ಣ ನೀರಾವರಿ ಸಚಿವ N. S. Boseraju ಅವರು ತೆಲಂಗಾಣದ ನೀರಾವರಿ ಸಚಿವ Uttam Kumar Reddy ಅವರನ್ನು ಭೇಟಿ ಮಾಡಿ ಪ್ರಸ್ತಾವಿತ ಯೋಜನೆಗಳ ಕುರಿತು ಚರ್ಚೆ ನಡೆಸಿದರು.

ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ರಾಯಚೂರು ಜಿಲ್ಲೆಯ ಕೊರತ್ಕುಂಡ ಗ್ರಾಮದ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಬ್ಯಾರೇಜ್ ಕುರಿತು ಕಾರ್ಯಸಾಧ್ಯತಾ ಅಧ್ಯಯನ ಮತ್ತು ತಾಂತ್ರಿಕ ಪ್ರಸ್ತುತಿಯನ್ನು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತೆಲಂಗಾಣ ಸರ್ಕಾರದ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು, ರಾಜ್ಯದ ನೀರಾವರಿ ಹಕ್ಕುಗಳು ಮತ್ತು ಭವಿಷ್ಯದ ನೀರಿನ ಅವಶ್ಯಕತೆಗಳ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.

ಸಭೆಯ ಬಳಿಕ ಮಾತನಾಡಿದ ಸಚಿವ ಉತ್ತಮ್ ಕುಮಾರ್ ರೆಡ್ಡಿ, ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳನ್ನು ಮುಖ್ಯಮಂತ್ರಿ Revanth Reddy ಅವರಿಗೆ ತಿಳಿಸಲಾಗುವುದು ಎಂದು ಹೇಳಿದರು. ನಂತರ ಸರ್ಕಾರ ಸಮಗ್ರ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ತೆಲಂಗಾಣದ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂದು ಕರ್ನಾಟಕದ ಅಧಿಕಾರಿಗಳಿಗೆ ಸೂಚಿಸಿದರು. ಕುಡಿಯುವ ನೀರು, ನೀರಾವರಿ ಹಕ್ಕುಗಳು ಮತ್ತು ಭವಿಷ್ಯದ ನೀರಿನ ಭದ್ರತೆ ಎರಡೂ ರಾಜ್ಯಗಳ ಪ್ರಮುಖ ಆದ್ಯತೆಯಾಗಿವೆ ಎಂದು ಅವರು ಹೇಳಿದರು.

ಸಭೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಬೋಸರಾಜು, ಕರ್ನಾಟಕ ಸರ್ಕಾರದ ಈ ಯೋಜನೆ ಜಲಸಂಪನ್ಮೂಲ ನಿರ್ವಹಣೆ, ಕುಡಿಯುವ ನೀರಿನ ಸುರಕ್ಷತೆ, ಸುಸ್ಥಿರ ಕೃಷಿ ಹಾಗೂ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಕರ್ನಾಟಕ ಮತ್ತು ತೆಲಂಗಾಣ ಎರಡೂ ರಾಜ್ಯಗಳು ರೈತರ ಹಾಗೂ ಜನರ ಹಿತದೃಷ್ಟಿಯಿಂದ ಸಹಕಾರದ ಮನೋಭಾವದಲ್ಲಿ ಕೆಲಸ ಮಾಡಲಿವೆ ಎಂದು ಹೇಳಿದ್ದಾರೆ.

Continue Reading

ಕ್ರೀಡೆ

ಕೃಣಾಲ್ ಪಾಂಡ್ಯ ಬೌಲಿಂಗ್‌ಗೆ ಕಾವ್ಯ ಮಾರನ್ ಆಕ್ಷೇಪ? ವೈರಲ್ ಆಯ್ತು SRH ಮಾಲಕಿಯ ರಿಯಾಕ್ಷನ್‌

Published

on

ಹೈದರಾಬಾದ್: Indian Premier League 2026ನಲ್ಲಿ ಶುಕ್ರವಾರ ನಡೆದ Sunrisers Hyderabad ಹಾಗೂ Royal Challengers Bengaluru ನಡುವಿನ ಹೈವೋಲ್ಟೇಜ್ ಪಂದ್ಯ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಆರ್‌ಸಿಬಿ ಸ್ಪಿನ್ನರ್ Krunal Pandya ಎಸೆದ ಬೌನ್ಸರ್‌ಗಳಿಗೆ ಸನ್‌ರೈಸರ್ಸ್‌ ತಂಡದ ಸಿಇಒ ಹಾಗೂ ಮಾಲಕಿ Kavya Maran ಆಕ್ಷೇಪ ವ್ಯಕ್ತಪಡಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಸತತವಾಗಿ ವೇಗದ ಬೌನ್ಸರ್‌ಗಳನ್ನು ಎಸೆದರು. ಸ್ಪಿನ್ನರ್ ಆಗಿದ್ದರೂ ಗಂಟೆಗೆ 120-130 ಕಿ.ಮೀ ವೇಗದಲ್ಲಿ ಚೆಂಡು ಎಸೆಯುತ್ತಿರುವುದರ ಬಗ್ಗೆ ಈಗಾಗಲೇ ಹಲವು ಮಾಜಿ ಕ್ರಿಕೆಟಿಗರು ಪ್ರಶ್ನೆ ಎತ್ತಿದ್ದರು. Ravichandran Ashwin ಸೇರಿ ಕೆಲ ದಿಗ್ಗಜರು ಅವರ ಬೌಲಿಂಗ್ ಶೈಲಿಯನ್ನು ಪರಿಶೀಲಿಸಬೇಕೆಂದು ಅಭಿಪ್ರಾಯಪಟ್ಟಿದ್ದರು.

ಪಂದ್ಯದ ವೇಳೆ ಕೃಣಾಲ್‌ ಎಸೆದ ಬೌನ್ಸರ್ ಕಂಡು ಗ್ಯಾಲರಿಯಲ್ಲಿ ಕುಳಿತಿದ್ದ ಕಾವ್ಯ ಮಾರನ್ ಅಸಮಾಧಾನ ವ್ಯಕ್ತಪಡಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. “ಅವರು ಸರಿಯಾಗಿ ಬೌಲಿಂಗ್ ಮಾಡುತ್ತಿಲ್ಲ, ಚೆಂಡನ್ನು ಎಸೆಯುತ್ತಿದ್ದಾರೆ” ಎಂಬ ಅರ್ಥ ಬರುವ ರೀತಿಯಲ್ಲಿ ಸಹ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿರುವ ವಿಡಿಯೊ ಈಗ ಭಾರೀ ವೈರಲ್ ಆಗಿದೆ. ಕೆಲ ಅಭಿಮಾನಿಗಳು ಕಾವ್ಯ ಅವರಿಗೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲವರು ಇದು ಕ್ರಿಕೆಟ್‌ನ ಭಾಗವೇ ಎಂದು ಪ್ರತಿಕ್ರಿಯಿಸಿದ್ದಾರೆ.

ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 55 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. Abhishek Sharma (56), Ishan Kishan (79) ಮತ್ತು Heinrich Klaasen (51) ಅರ್ಧಶತಕದ ನೆರವಿನಿಂದ ಎಸ್‌ಆರ್‌ಎಚ್ 255 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಗುರಿ ಬೆನ್ನಟ್ಟಿದ ಆರ್‌ಸಿಬಿಗೆ Venkatesh Iyer ವೇಗದ ಆರಂಭ ನೀಡಿದರೂ, Virat Kohli ಮತ್ತು Devdutt Padikkal ಬೇಗ ಔಟಾದರು. ನಾಯಕ Rajat Patidar ಹಾಗೂ ಕೃಣಾಲ್ ಪಾಂಡ್ಯ ಹೋರಾಟ ನಡೆಸಿದರೂ ತಂಡ 200 ರನ್‌ಗಳಿಗೆ ಸೀಮಿತವಾಯಿತು.

Continue Reading

Trending