AI Impact Summit 2026ರಲ್ಲಿ ಅಡೋಬ್ ಮಹತ್ವದ ಘೋಷಣೆ | Hosa Suddi

ದೇಶ

AI Impact Summit 2026ರಲ್ಲಿ ಅಡೋಬ್ ಮಹತ್ವದ ಘೋಷಣೆ

Published

on

ನವದೆಹಲಿ: AI ಇಂಪ್ಯಾಕ್ಟ್ ಶೃಂಗಸಭೆ 2026 ಸಂದರ್ಭದಲ್ಲಿ Adobe ಭಾರತೀಯ ವಿದ್ಯಾರ್ಥಿಗಳಿಗೆ ಮಹತ್ವದ ಘೋಷಣೆ ಮಾಡಿದೆ. ದೇಶದ ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತನ್ನ ಹಲವು ಉತ್ಪಾದಕತೆ ಹಾಗೂ ಸೃಜನಶೀಲ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ನೀಡುವುದಾಗಿ ಕಂಪನಿ ತಿಳಿಸಿದೆ.

ಹೊಸ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳು Adobe Photoshop, Adobe Acrobat ಮತ್ತು Adobe Firefly ಸೇರಿದಂತೆ AI ಆಧಾರಿತ ಟೂಲ್ಸ್‌ಗಳಿಗೆ ಉಚಿತ ಪ್ರವೇಶ ಪಡೆಯಲಿದ್ದಾರೆ. ಇದುವರೆಗೆ ಚಂದಾದಾರಿಕೆ ಆಧಾರದ ಮೇಲೆ ಲಭ್ಯವಿದ್ದ ಸೇವೆಗಳು ಈಗ ಆಯ್ದ ವಿದ್ಯಾರ್ಥಿಗಳಿಗೆ ಉಚಿತವಾಗಲಿವೆ.

ಈ “AI-ಫಸ್ಟ್” ಉಪಕ್ರಮದಡಿ ದೇಶದ 15,000 ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. 2026ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ AVGC (Animation, VFX, Gaming, Comics) ವಲಯದಲ್ಲಿ 2030ರೊಳಗೆ 2 ಮಿಲಿಯನ್ ಉದ್ಯೋಗ ಸೃಷ್ಟಿಸುವ ಗುರಿಗೂ ಇದು ಬೆಂಬಲವಾಗಲಿದೆ.

ಇದರ ಜೊತೆಗೆ NASSCOM FutureSkills Prime ಜೊತೆ ಪಾಲುದಾರಿಕೆ ಮಾಡಿಕೊಂಡು AI ಕೋರ್ಸ್‌ಗಳು ಮತ್ತು ಪ್ರಮಾಣೀಕರಣಗಳನ್ನು ನೀಡಲಾಗುತ್ತದೆ. ಇದು Adobe Digital Academy ಕಾರ್ಯಕ್ರಮದ ವಿಸ್ತರಣೆಯಾಗಿದೆ.

ಒಟ್ಟಾರೆ, ಈ ಘೋಷಣೆ ಡಿಸೈನ್, ವಿಡಿಯೋ ಎಡಿಟಿಂಗ್, ಕಂಟೆಂಟ್ ಕ್ರಿಯೇಶನ್ ಹಾಗೂ ಡಿಜಿಟಲ್ ಕೌಶಲ್ಯಗಳಲ್ಲಿ ವೃತ್ತಿಜೀವನ ಕಟ್ಟಲು ಬಯಸುವ ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶ ಒದಗಿಸಿದೆ.

Trending

Exit mobile version