ಬೆಂಗಳೂರು
ಸಿಎಂ ಕಾರಿಗೆ 7 ಸಂಚಾರ ಉಲ್ಲಂಘನೆ ಪ್ರಕರಣ – 50% ಫೈನ್ ಡಿಸ್ಕೌಂಟ್ಗೆ ನೆಟ್ಟಿಗರ ಲೇವಡಿ
ಬೆಂಗಳೂರು: Bangaloreನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಕುರಿತು ಜಾಗೃತಿ ಹೆಚ್ಚುತ್ತಿರುವ ನಡುವೆಯೇ, ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಕಾರು (KA 05 GA 2023) ಮೇಲೆ ಏಳು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರಿಂದ ಟೀಕೆ, ವ್ಯಂಗ್ಯ ಹಾಗೂ ಲೇವಡಿಗೆ ಕಾರಣವಾಗಿದೆ.
“50% ಆಫರ್ ಇದೆ ಸಾರ್, ಈಗನೇ ಫೈನ್ ಕಟ್ಟೋಣ!” ಎಂಬ ಶೈಲಿಯಲ್ಲಿ ಜನರು ಸಿಎಂಗೆ ತಮಾಷೆಯಾಗಿ ಸಲಹೆ ನೀಡುತ್ತಿದ್ದಾರೆ. ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸಿದ ಪ್ರಕರಣ, ವೇಗದ ಮಿತಿ ಮೀರಿ ಚಾಲನೆ ಸೇರಿದಂತೆ ಒಟ್ಟು ಏಳು ಉಲ್ಲಂಘನೆ ಪ್ರಕರಣಗಳು ದಾಖಲಾಗಿದೆ.
ಸಮಾಜ ಮಾಧ್ಯಮಗಳಲ್ಲಿ ಜನರು ಸಿಎಂ ಕಾರಿನ ಫೋಟೋ ಹಂಚಿಕೊಳ್ಳುತ್ತಾ, ಫೈನ್ ಕಟ್ಟುವಂತೆ ಆಗ್ರಹಿಸುತ್ತಿದ್ದಾರೆ. ಈ ಬೆಳವಣಿಗೆ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ.
ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸರು ಈಗ 50% ಫೈನ್ ಡಿಸ್ಕೌಂಟ್ ಘೋಷಿಸಿರುವುದು ಜನರಿಗೆ ಬಹಳ ಸಹಕಾರಿಯಾಗಲಿದೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 12, 2025 ರವರೆಗೆ ಈ ರಿಯಾಯಿತಿ ಲಭ್ಯವಿದ್ದು, ದಂಡ ಬಾಕಿ ಇರುವ ವಾಹನದ ಮಾಲೀಕರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಹೆಚ್ಚಿನ ಜನರು ಅನಿವಾರ್ಯವಾಗಿ ಅಥವಾ ಅರಿವಿಲ್ಲದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಇದು ತಪ್ಪಿದರೂ, ಅಧಿಕಾರಿಗಳು ತಮ್ಮ ಬುದ್ಧಿವಂತಿಕೆಯಿಂದ ಡಿಸ್ಕೌಂಟ್ ಆಧಾರಿತ ಪರಿಹಾರ ನೀಡುತ್ತಿದ್ದಾರೆ. ಆದರೆ, ಇದು ಕೆವಲ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ದಾಖಲಾಗಿರುವ ಸಂಚಾರಿ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ.