ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ ಶಾಕ್ |

ದೇಶ

ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ ಶಾಕ್

Published

on

ಬೆಂಗಳೂರು: ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಕುರಿತು ವದಂತಿಗಳು ಹರಡುತ್ತಿರುವ ನಡುವೆಯೇ, Shell ಪೆಟ್ರೋಲ್ ಬಂಕ್‌ಗಳು ಏಕಾಏಕಿ ಇಂಧನ ದರವನ್ನು ಹೆಚ್ಚಿಸಿ ವಾಹನ ಸವಾರರಿಗೆ ಶಾಕ್ ನೀಡಿವೆ. Nayara Energy ಬಂಕ್‌ಗಳಲ್ಲಿ ದರ ಏರಿಕೆಯ ಬಳಿಕ ಈಗ ಶೆಲ್ ಕೂಡ ದರ ಹೆಚ್ಚಳ ಮಾಡಿದೆ.

ಒಂದು ಲೀಟರ್ ಪೆಟ್ರೋಲ್‌ಗೆ ₹6 ಮತ್ತು ಡೀಸೆಲ್‌ಗೆ ₹7 ಹೆಚ್ಚಳ ಮಾಡಲಾಗಿದ್ದು, ಕಳೆದ 15 ದಿನಗಳಲ್ಲಿ ಇದು ಮೂರನೇ ಬಾರಿಗೆ ನಡೆದ ಬೆಲೆ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ಜೊತೆಗೆ ಪ್ರೀಮಿಯಂ ಪೆಟ್ರೋಲ್ ದರವನ್ನೂ ಏರಿಸಲಾಗಿದೆ.

ದರ ಏರಿಕೆಯ ನಂತರ, ಸಾಮಾನ್ಯ ಪೆಟ್ರೋಲ್ ಬೆಲೆ ₹112ಕ್ಕೆ ತಲುಪಿದ್ದು, ಪ್ರೀಮಿಯಂ ಪೆಟ್ರೋಲ್ ₹122.42 ಆಗಿದೆ. ಡೀಸೆಲ್ ದರವೂ ಹೆಚ್ಚಳ ಕಂಡಿದ್ದು, ಸಾಮಾನ್ಯ ಡೀಸೆಲ್ ₹98 ಮತ್ತು ಪ್ರೀಮಿಯಂ ಡೀಸೆಲ್ ₹108.50ಕ್ಕೆ ಏರಿಕೆಯಾಗಿದೆ.

ಈ ಬೆಲೆ ಏರಿಕೆ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾದ ಅಸ್ಥಿರತೆಯೊಂದಿಗೇ ಸಂಬಂಧಿಸಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರು, ಇಂಧನ ದರ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷವಾಗಿ ದೈನಂದಿನ ಸಂಚಾರ ಮಾಡುವ ವಾಹನ ಸವಾರರು ಮತ್ತು ಸಾರಿಗೆ ವಲಯದವರು ಈ ಹೆಚ್ಚಳದಿಂದ ಹೆಚ್ಚಿನ ಹೊರೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಧನ ದರ ಇನ್ನಷ್ಟು ಏರಿಕೆಯಾಗುವ ಭೀತಿ ಕೂಡ ವ್ಯಕ್ತವಾಗಿದೆ.

Trending

Exit mobile version