BUDGET 2026 ಭಾರತಕ್ಕೆ ‘ಅಭಿವೃದ್ಧಿ ಎಕ್ಸ್‌ಪ್ರೆಸ್’: ಪ್ರಧಾನಿ ಮೋದಿ ಶ್ಲಾಘನೆ | Hosa Suddi

ದೇಶ

BUDGET 2026 ಭಾರತಕ್ಕೆ ‘ಅಭಿವೃದ್ಧಿ ಎಕ್ಸ್‌ಪ್ರೆಸ್’: ಪ್ರಧಾನಿ ಮೋದಿ ಶ್ಲಾಘನೆ

Published

on

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಯೂನಿಯನ್ ಬಜೆಟ್ 2026 (Union Budget 2026) ಭಾರತಕ್ಕೆ ಹೊಸ ವೇಗ ಮತ್ತು ಶಕ್ತಿ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಈ ಬಜೆಟ್ ಭಾರತದ ‘ಅಭಿವೃದ್ಧಿ ಎಕ್ಸ್‌ಪ್ರೆಸ್’ಗೆ ಇಂಧನ ತುಂಬುವಂತಿದ್ದು, ದೇಶವನ್ನು ಜಾಗತಿಕ ಆರ್ಥಿಕ ಶಕ್ತಿಯಾಗಿ ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಬಜೆಟ್ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಇದು ಬಂಡವಾಳ ಹೂಡಿಕೆ ಮತ್ತು ಬೆಳವಣಿಗೆ ನಡುವೆ ಪರಿಪೂರ್ಣ ಸಮತೋಲನ ಸಾಧಿಸಿರುವ ಬಜೆಟ್ ಎಂದು ಅಭಿಪ್ರಾಯಪಟ್ಟರು. ನಂಬಿಕೆ ಆಧಾರಿತ ಆಡಳಿತ ಮತ್ತು ಜನಕೇಂದ್ರಿತ ಆರ್ಥಿಕ ಚೌಕಟ್ಟಿನ ದೃಷ್ಟಿಕೋನ ಈ ಬಜೆಟ್‌ನಲ್ಲಿದೆ. ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಿಂದ ತೃಪ್ತವಾಗದೆ, ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯೊಂದಿಗೆ ಮುನ್ನುಗ್ಗುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ಈ ಬಜೆಟ್ ನೀಡುತ್ತದೆ ಎಂದು ಮೋದಿ ಹೇಳಿದರು.

ಈ ವರ್ಷದ ಬಜೆಟ್‌ನಲ್ಲಿ ಈಶಾನ್ಯ ಭಾರತದ ಪ್ರವಾಸೋದ್ಯಮ ಉತ್ತೇಜನಕ್ಕೆ ವಿಶೇಷ ಒತ್ತು ನೀಡಲಾಗಿದೆ. ಇದು ಪ್ರಾದೇಶಿಕ ಸಮತೋಲನದ ಅಭಿವೃದ್ಧಿಗೆ ನೆರವಾಗಲಿದ್ದು, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ನಿರೀಕ್ಷೆ ವ್ಯಕ್ತವಾಗಿದೆ. ಒಟ್ಟಾರೆಯಾಗಿ, 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈ ಬಜೆಟ್ ಪ್ರತಿಬಿಂಬಿಸುತ್ತಿದ್ದು, ‘ವಿಕಸಿತ ಭಾರತ’ (Viksit Bharat) ಕನಸಿನತ್ತ ಸ್ಪಷ್ಟ ದಾರಿ ತೋರಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ನಮ್ಮ ಉನ್ನತ ಗುರಿಗಳಿಗೆ ಈ ಬಜೆಟ್ ಬಲವಾದ ಅಡಿಪಾಯವಾಗಲಿದೆ. ವರ್ತಮಾನದ ಕನಸುಗಳಿಗೆ ಜೀವ ತುಂಬಿ, ದೇಶದ ಉಜ್ವಲ ಭವಿಷ್ಯಕ್ಕೆ ಈ ಬಜೆಟ್ ದಿಕ್ಕು ತೋರಿಸುತ್ತದೆ ಎಂದರು.

ಇದೇ ವೇಳೆ, ಮಹಿಳಾ ಸಬಲೀಕರಣಕ್ಕೆ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಿರುವುದನ್ನು ಮೋದಿ ಶ್ಲಾಘಿಸಿದರು. ಮಹಿಳಾ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

Trending

Exit mobile version