ಕ್ರೀಡೆ
ರಿಷಭ್ ಪಂತ್ಗೆ ಕೊಹ್ಲಿ ಜೊತೆ ಹೋಲಿಕೆ ಮಾಡಬೇಕು, ಆದ್ರೆ ಧೋನಿ ಜೊತೆಗಲ್ಲ; ಆರ್ ಅಶ್ವಿನ್
ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶ್ಲಾಘಿಸಿದ್ದಾರೆ. ಲೀಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ನಲ್ಲಿ ಪಂತ್ ಎರಡು ಶತಕಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೂ ಈ ಪಂದ್ಯದಲ್ಲಿ ಭಾರತ ಸೋಲನ್ನು ಕಂಡಿತು . ಇದೇ ವಿಚಾರವಾಗಿ ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದಾರೆ.
‘ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಪ್ರತಿ ಇನ್ನಿಂಗ್ಸ್ನಲ್ಲಿ ಒಂದು ವಿಷಯದ ಮೇಲೆ ಗಮನ ಹರಿಸಬೇಕು. ಅದೇನೆಂದರೇ ಸಾಧ್ಯವಾದಷ್ಟು ಕಾಲ ಕ್ರೀಸ್ನಲ್ಲಿ ಉಳಿಯುಬೇಕು. ಇದು ರನ್ ಗಳಿಸುವುದಕ್ಕಿಂತಲೂ ಹೆಚ್ಚು. ಆಟಗಾರರು ಹೆಚ್ಚು ಕಾಲ ಕ್ರೀಸ್ನಲ್ಲಿದ್ದು ಇಂಗ್ಲೆಂಡ್ ತಂಡದ ಫೀಲ್ಡರ್ಗಳನ್ನು ದಣಿಸಿಬೇಕು. ಸೋಲಿಗೆ ಹೆದರುವ ಅಗತ್ಯವಿಲ್ಲ. ಅಲ್ಲದೇ ಅಂತಿಮ ತಂಡದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿರಬಾರದು. ಎರಡನೇ ಟೆಸ್ಟ್ ಗೆದ್ದು ಸರಣಿ ಸಮಬಲ ಸಾಧಿಸುವ ಸಾಮರ್ಥ್ಯ ಟೀಮ್ ಇಂಡಿಯಾಕ್ಕಿದೆ. ಆದಾಗ್ಯೂ, ಇಂಗ್ಲೆಂಡ್ನ ತಂತ್ರಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮಾತ್ರ ಇದು ಸಾಧ್ಯ. ಇಲ್ಲದಿದ್ದರೆ, ಸರಣಿಯು ನಮ್ಮಿಂದ ಕೈ ಜಾರಿಹೋಗಬಹುದು ಎಂದರು.
ಐದನೇ ದಿನದವರೆಗೂ ಬ್ಯಾಟಿಂಗ್ ಮಾಡಬೇಕು
ಎರಡನೇ ಇನ್ನಿಂಗ್ಸ್ ವೇಳೆ ಐದನೇ ದಿನದವರೆಗೂ ಬ್ಯಾಟಿಂಗ್ ಮಾಡಬೇಕು. ಏಕೆಂದರೇ ಕೊನೆಯ ದಿನ ಇದ್ದರು ಎಷ್ಟೇ ದೊಡ್ಡ ಗುರಿ ನಮ್ಮ ಮುಂದಿದ್ದರು ಅದನ್ನು ಬೆನ್ನಟ್ಟುವುದಾಗಿ ಇಂಗ್ಲೆಂಡ್ ತಂಡ ಹೇಳಿದೆ. ಹಾಗಾಗಿ ನಮ್ಮ ಬ್ಯಾಟಿಂಗ್ ತಂಡ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಎದುರಾಳಿಗೆ ಕಡಿಮೆ ಸಮಯ ನೀಡಿ ದೊಡ್ಡ ಗುರಿಯನ್ನು ಹೊಂದಿಸಬೇಕು. ಸದ್ಯದ ಪರಿಸ್ಥಿತಿಯನ್ನು ನೋಡಿದರೇ ಕನಿಷ್ಠ 400-450 ರನ್ಗಳ ಗುರಿಯನ್ನು ನಿಗದಿಪಡಿಸಿದರೆ ಮಾತ್ರ ನಾವು ಪಂದ್ಯವನ್ನು ಗೆಲ್ಲಲು ಸಾಧ್ಯ. ಪಿಚ್ಗೆ ಅನುಗುಣವಾಗಿ ನೀವು ಆಟವನ್ನು ಬದಲಾಯಿಸಬೇಕಾಗುತ್ತದೆ ಎಂದು ಸೂಚಿಸಿದರು.
ಪಂತ್ ಅವರನ್ನು ಕೊಹ್ಲಿಗೆ ಹೋಲಿಸಬೇಕು: ರಿಷಭ್ ಪಂತ್ ಅವರನ್ನು ಧೋನಿ ಜೊತೆ ಹೋಲಿಸುವುದು ಸೂಕ್ತವಲ್ಲ. ಏಕೆಂದರೆ ಪಂತ್ ಐದನೇ ಸ್ಥಾನದಲ್ಲಿ ಹೆಚ್ಚಾಗಿ ಬ್ಯಾಟಿಂಗ್ ಮಾಡುತ್ತಿರಲಿಲ್ಲ. ಅವರನ್ನು ವಿರಾಟ್ ಕೊಹ್ಲಿಯಂತಹ ಆಟಗಾರನಿಗೆ ಹೋಲಿಸಬೇಕು. ಏಕೆಂದರೆ ಅವರು ಮೂಲತಃ ಬ್ಯಾಟರ್. ಇದಲ್ಲದೆ, ಇನ್ನೂ ಬಹಳಷ್ಟು ವೃತ್ತಿಜೀವನವಿದೆ. ಅವರು ವಿಶೇಷ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ಅಪರೂಪದ ಆಟಗಾರರಲ್ಲಿ ಒಬ್ಬರು ಇದರಲ್ಲಿ ಯಾವುದೇ ಸಂದೇಹವಿಲ್ಲ.
ಪಂತ್ ಅವರಿಗೆ ನನ್ನ ಒಂದೇ ಒಂದು ವಿನಂತಿ ಇದೆ. ದಯವಿಟ್ಟು ಪಲ್ಟಿ ಹೊಡೆಯುವ ಸ್ಟಂಟ್ಗಳನ್ನು ಮಾಡಬೇಡಿ. ಐಪಿಎಲ್ ನಲ್ಲಿ ದೇಹವು ಹೆಚ್ಚು ದಣಿಯುವುದಿಲ್ಲ. ಆಗ ನೀವು ಪಲ್ಟಿ ಹೊಡೆದರೂ ಪರವಾಗಿಲ್ಲ. ಆದರೆ ಟೆಸ್ಟ್ ಕ್ರಿಕೆಟ್ ವಿಭಿನ್ನವಾಗಿರುತ್ತದೆ ಎಂದು ಮನವಿ ಮಾಡಿದರು.