ನನ್ನ ರಕ್ತ ಪ್ಯೂರ್ ಹಿಂದುತ್ವ: ಸಿ.ಟಿ ರವಿ ತಿರುಗೇಟು | Hosa Suddi

ರಾಜಕೀಯ

ನನ್ನ ರಕ್ತ ಪ್ಯೂರ್ ಹಿಂದುತ್ವ: ಸಿ.ಟಿ ರವಿ ತಿರುಗೇಟು

Published

on

ಚಿಕ್ಕಮಗಳೂರು: “ನನ್ನ ರಕ್ತ ಪ್ಯೂರ್ ಹಿಂದುತ್ವ, ಇದರಲ್ಲಿ ಯಾವುದೇ ಬೆರಕೆ ಇಲ್ಲ” ಎಂಬ ಹೇಳಿಕೆ ನೀಡಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತೆ ಸುದ್ದಿಗೆ ಏರಿದ್ದಾರೆ. ಮಂಡ್ಯದ ಮದ್ದೂರಿನಲ್ಲಿ ನಡೆದ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಅವರು ನೀಡಿದ ಪ್ರಚೋದನಕಾರಿ ಭಾಷಣದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಾಗಿರುವ ಸಂದರ್ಭದಲ್ಲಿ ಈ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
“ನಾನು ಕೇಸಿಗೆ ಹೆದರುವ ಜಾಯಮಾನದವನು ಅಲ್ಲ. ಕಲ್ಲು ಹೊಡೆದವರು, ತೊಡೆ ತಟ್ಟಿದವರು, ಪೆಟ್ರೋಲ್ ಬಾಂಬ್ ಹಾಕಿದವರು, ಇವರ ವಿರುದ್ಧ ಕ್ರಮಕೈಗೊಳ್ಳಬೇಕು. ಪ್ರೀತಿಗೆ ಪ್ರೀತಿ, ಕಲ್ಲಿಗೆ ಕಲ್ಲು — ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನನ್ನ ನಿಲುವು” ಎಂದು ಸ್ಪಷ್ಟಪಡಿಸಿದರು.

“ಮಿಸ್ಟರ್ ಮಂಜುನಾಥ್, ಧ್ವನಿವರ್ಧಕದ ಬಳಕೆಗೆ ಸುಪ್ರೀಂ ಕೋರ್ಟ್ ನಿಷೇಧವಿದೆ. ನನ್ನ ಮೇಲೆ ಕೇಸ್ ಹಾಕಿ ನೀವೇ ನಿಯತ ತೋರಿಸೋದು ಸರಿಯಲ್ಲ. ನಾಳೆ ಬೆಳಿಗ್ಗೆ 5ಕ್ಕೆ ಕೂಗುವವರ ಮೇಲೆ ಕೂಡ ಕೇಸ್ ಹಾಕಿ” ಎಂದು ಅವರು ಕಿಡಿಕಾರಿದರು.

“ನಾನು ನಾಮ ಹಾಕಿ, ಟೋಪಿ ಹಾಕಿ ನಾಟಕ ಮಾಡುವವನು ಅಲ್ಲ. ನನ್ನ ಹೃದಯ, ನನ್ನ ಮಾತು, ನನ್ನ ನಡತೆ ಎಲ್ಲವೂ ಹಿಂದುತ್ವದಲ್ಲಿ ನಿಂತಿವೆ” ಎಂದು ಅವರು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿದರು.

ಸಿ.ಟಿ. ರವಿ ವಿರುದ್ಧದ ಪ್ರಕರಣ ಹಿನ್ನಲೆ:

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸೆಪ್ಟೆಂಬರ್ 10ರಂದು ನಡೆದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಸಿ.ಟಿ. ರವಿ ಭಾಷಣ ಮಾಡಿದ್ದು, ಅದರಲ್ಲಿ ಅವರು ಸಮುದಾಯಗಳ ನಡುವೆ ದ್ವೇಷ ಹುಟ್ಟುವಂತೆ ಪ್ರಚೋದನೆ ನೀಡಿದ್ದಾರಂತೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಮದ್ದೂರು ಸಬ್‌ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ದೂರಿನ ಮೇರೆಗೆ ಅವರ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ.

Trending

Exit mobile version