ಅಪರಾಧ
ದೆಹಲಿ ಮೆಟ್ರೋದಲ್ಲಿ ಮಹಿಳೆ–ಪುರುಷ ಜಗಳದ ವಿಡಿಯೋ ವೈರಲ್: ವ್ಯಕ್ತಿಗೆ ಏಟು, ನೆಟ್ಟಿಗರಲ್ಲಿ ಭಿನ್ನ ಅಭಿಪ್ರಾಯ
ನವದೆಹಲಿ:
ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋದಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ನಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮೆಟ್ರೋದಲ್ಲಿ ಪುರುಷ ಪ್ರಯಾಣಿಕನೊಬ್ಬ ಮಹಿಳೆಯ ಸೊಂಟಕ್ಕೆ ಕೈ ಹಾಕಿದ್ದಾನೆ ಎಂಬ ಆರೋಪದ ಮೇಲೆ, ಮಹಿಳೆ ರೊಚ್ಚಿಗೆದ್ದು ಆತನ ಕಪಾಳಕ್ಕೆ ಏಟು ನೀಡಿರುವ ದೃಶ್ಯವೊಂದರ ವೀಡಿಯೋ ವೈರಲ್ ಆಗಿದೆ. ಇತರೆ ಪ್ರಯಾಣಿಕರು ಮಧ್ಯೆ ಪ್ರವೇಶಿಸಿ ಇಬ್ಬರ ಮಧ್ಯೆ ಜಗಳ ತಡೆಹಿಡಿಯಲು ಪ್ರಯತ್ನಿಸಿದರೂ, ಮಹಿಳೆ ಮತ್ತೆ ವ್ಯಕ್ತಿಗೆ ಬಿದ್ದಿದ್ದಾರೆ.
ಮಹಿಳೆಯ ವಿವರಣೆ ಪ್ರಕಾರ,
“ಸೀಟ್ ಖಾಲಿಯಿದ್ದು, ನಾನು ಪಕ್ಕಕ್ಕೆ ಸರಿಯಲು ಕೇಳಿದ್ದೆ. ಆದರೆ ಈ ವ್ಯಕ್ತಿ ನನ್ನ ಜೊತೆಯಲ್ಲಿದ್ದ ಮಹಿಳೆಯ ಸೊಂಟಕ್ಕೆ ಸ್ಪರ್ಶಿಸಿ ‘ಇಲ್ಲಿ ಬಾ ಕುಳಿತು’ ಎಂದು ಹೇಳಿದನು. ಇಂತಹ ಅನಾಚಾರದ ವಿರುದ್ಧ ಜನವರಗೊಳ್ಳುವುದು ಬೇಕು” ಎಂದಿದ್ದಾರೆ.
ಆದರೆ ಆತನ ಸ್ಪಷ್ಟನೆ – “ನಾನು ಯಾರಿಗೂ ಸ್ಪರ್ಶಿಸಲಿಲ್ಲ. ಸೀಟ್ ಖಾಲಿಯಿದೆ ಎಂಬುದನ್ನು ಮಾತ್ರ ಸೂಚಿಸಿದ್ದೆ. ಈ ಮಹಿಳೆ ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ,” ಎಂದು ಹೇಳಿದ್ದಾರೆ.
ಸಹ ಪ್ರಯಾಣಿಕರು ಇಬ್ಬರ ನಡುವಿನ ಗಲಾಟೆಯನ್ನು ಶಮನಗೊಳಿಸಲು ಯತ್ನಿಸಿದರು. ವಿಡಿಯೋದಲ್ಲಿ ಅವರು ವ್ಯಕ್ತಿಗೆ ಕ್ಷಮೆ ಕೇಳಲು ಹೇಳಿದರು. ಆದರೆ, ಮಹಿಳೆ ಮತ್ತೆ ಆತನ ಮೇಲೆ ಕೈಚಾಚಿದ ದೃಶ್ಯ ಕಾಣಿಸಿತು.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ:
ವೀಡಿಯೋ ವೈರಲ್ ಆದ ನಂತರ, ನೆಟ್ಟಿಗರಲ್ಲಿ ಭಿನ್ನಾಭಿಪ್ರಾಯ ಕಂಡುಬಂದಿದೆ.
- ಕೆಲವರು ಮಹಿಳೆಯ ನಡತೆಯನ್ನು ಸಮರ್ಥಿಸಿದರು.
- ಇನ್ನು ಕೆಲವರು ಪುರುಷನ ಹಕ್ಕುಗಳ ರಕ್ಷಣೆಯ ಕುರಿತು ಮಾತಾಡುತ್ತಿದ್ದಾರೆ.
- “ಈ ವ್ಯಕ್ತಿ ಅಪರಾಧಿ ಆಗದೇ ಇದ್ದರೆ, ಅವನು ಪೊಲೀಸ್ ಠಾಣೆಗೆ ದೂರು ಕೊಡಬೇಕು” ಎಂದು ಹಲವರು ಸಲಹೆ ನೀಡಿದ್ದಾರೆ.