“ನಮ್ಮ ವಿರುದ್ಧ ಶಕ್ತಿ ದುಡಿಯಿತು” – ಮಾಜಿ ಪ್ರಧಾನಿ ದೇವೇಗೌಡರಿಂದ ಡಿಕೆಶಿಗೆ ತಿರುಗೇಟು | Hosa Suddi

ದೇಶ

“ನಮ್ಮ ವಿರುದ್ಧ ಶಕ್ತಿ ದುಡಿಯಿತು” – ಮಾಜಿ ಪ್ರಧಾನಿ ದೇವೇಗೌಡರಿಂದ ಡಿಕೆಶಿಗೆ ತಿರುಗೇಟು

Published

on

ಬೆಂಗಳೂರು: ಡಿಸಿಎಂ ಡಿಕೆಶಿವಕುಮಾರ್ ಅವರು “ದೇವೇಗೌಡ, ಕುಮಾರಸ್ವಾಮಿ ಕುಟುಂಬ ನನ್ನನ್ನು ಜೈಲಿಗೆ ಹಾಕಲು ಕಾಯುತ್ತಿದ್ದಾರೆ” ಎಂಬ ಆರೋಪ ಮಾಡಿದ್ದು, ಇದರ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಡಿಕೆಶಿಯ ಹೆಸರು ಉಲ್ಲೇಖಿಸದೇ, ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, “ದಯವಿಟ್ಟು ಬೇರೆ ಯಾರನ್ನೂ ಒಳಗೆಳೆದು ಚರ್ಚೆ ಮಾಡಬೇಡಿ. ನಾನು ಆ ವಿಷಯದಲ್ಲಿ ಮಾತನಾಡಲ್ಲ. ಮೂರು ತಿಂಗಳು ನಮ್ಮ ಮನೆ ಮುಂದೆ ಮಾಧ್ಯಮಗಳು ಹಗಲು ರಾತ್ರಿ ಇದ್ದವು. ಇದರ ಹಿಂದೆ ಯಾವ ಶಕ್ತಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ,” ಎಂದು ಹೇಳಿದ್ದಾರೆ.

ಡಿಕೆಶಿ ವಿರುದ್ಧ ನೇರವಾಗಿ ಆರೋಪಿಸದಿದ್ದರೂ, ದೇವೇಗೌಡರ ಮಾತುಗಳು ಸ್ಪಷ್ಟವಾಗಿ ಅವರತ್ತ ಬಿಟ್ಟಿದ್ದು ಗಮನಾರ್ಹವಾಗಿದೆ. ಅವರು ಮುಂದುವರೆದು, “ಯಾರು ಏನೇ ಮಾತನಾಡಿದ್ರೂ ನಾವು ಸಣ್ಣ ಪಕ್ಷ. ಅದನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಕೆಲಸ ಮಾಡ್ತೀವಿ. ನಾನು ಡಿಕೆಶಿವಕುಮಾರ್ ಬಗ್ಗೆ 20 ವರ್ಷಗಳಿಂದ ಯಾವುದೇ ಮಾತನ್ನಾಡಿಲ್ಲ,” ಎಂದು ಹೇಳಿದ್ದಾರೆ.

ಬಿಡದಿ ಟೌನ್‌ಶಿಪ್ ಕುರಿತು ಪ್ರತಿಕ್ರಿಯೆ ನೀಡಿದ ದೇವೇಗೌಡರು, “ಬಿಡದಿಯಲ್ಲಿ ನಮ್ಮ ಪಕ್ಷದವರು ಪ್ರತಿಭಟನೆ ಮಾಡಿದ್ದಾರೆ. ಈಗ ಅವರ ಸರ್ಕಾರ ಇದೆ. ಅವರು ಏನೇ ಹೇಳಿದರೂ ತಿರಸ್ಕಾರದ ಮನೋಭಾವದಿಂದ ನೋಡಬೇಕು. ಚುನಾವಣೆ ಬಂದಾಗ ಜನ ತೀರ್ಪು ಕೊಡುತ್ತಾರೆ. ಅಷ್ಟರಲ್ಲಿಯೇ ಬಿಡಿ,” ಎಂದು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

Trending

Exit mobile version