‘ಧುರಂಧರ್ 2’ ರಿಲೀಸ್‌ಗೆ ಸಜ್ಜು: ವಿಶ್ವ ನಾಯಕರು ಕೂಡ ಸಿನಿಮಾ ಚರ್ಚೆಯಲ್ಲಿ! |

ದೇಶ

‘ಧುರಂಧರ್ 2’ ರಿಲೀಸ್‌ಗೆ ಸಜ್ಜು: ವಿಶ್ವ ನಾಯಕರು ಕೂಡ ಸಿನಿಮಾ ಚರ್ಚೆಯಲ್ಲಿ!

Published

on

ಮುಂಬೈ: ಬಾಲಿವುಡ್‌ ಸ್ಟಾರ್‌ Ranveer Singh ಅಭಿನಯದ ‘Dhurandhar 2’ ನಾಳೆ (ಮಾ.19) ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಸಿನಿಮಾ ಭಾರತ ಮಾತ್ರವಲ್ಲ, ವಿದೇಶಗಳಲ್ಲೂ ಭಾರಿ ಸಂಚಲನ ಮೂಡಿಸಿದೆ.

ವಿಶ್ವ ನಾಯಕರ ಮಾತುಕತೆಯಲ್ಲಿ ಧುರಂಧರ್!

ಫಿನ್‌ಲ್ಯಾಂಡ್ ಅಧ್ಯಕ್ಷ Alexander Stubb ಹಾಗೂ ಕೆನಡಾ ಪ್ರಧಾನಿ Mark Carney ಲಂಡನ್‌ನ Hyde Park ನಲ್ಲಿ ಜಾಗಿಂಗ್ ಮಾಡುತ್ತಾ ಈ ಚಿತ್ರದ ಬಗ್ಗೆ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಧುರಂಧರ್ ನೋಡಿದ್ರೆ ಫಾಲೋವರ್ಸ್ ಹೆಚ್ಚಾಯ್ತು!’

ಜಾಗಿಂಗ್ ವೇಳೆ ಕಾರ್ನಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಟಬ್, “ನಾನು ‘ಧುರಂಧರ್’ ಸಿನಿಮಾ ನೋಡಿದೆ ಎಂದು ಹೇಳಿದ ನಂತರ ನನ್ನ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಭಾರೀ ಏರಿಕೆಯಾಗಿದೆ” ಎಂದು ಹಾಸ್ಯವಾಗಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್

ಈ ವಿಡಿಯೋವನ್ನು ಸ್ಟಬ್ ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತೀಯ ನೆಟಿಜನ್ಸ್‌ ಗಮನ ಸೆಳೆದಿದೆ. ಇಬ್ಬರು ವಿಶ್ವ ನಾಯಕರು ಭಾರತೀಯ ಸಿನಿಮಾವನ್ನು ಉಲ್ಲೇಖಿಸಿರುವುದು ಆಶ್ಚರ್ಯ ಮೂಡಿಸಿದೆ.

ಹಿಂದಿನ ಚಿತ್ರವೇ ಬ್ಲಾಕ್‌ಬಸ್ಟರ್ ಹಿಟ್

ಕಳೆದ ವರ್ಷ ಬಿಡುಗಡೆಯಾದ ‘ಧುರಂಧರ್’ ಚಿತ್ರ ಭಾರಿ ಯಶಸ್ಸು ಕಂಡಿತ್ತು. ಇದರಲ್ಲಿ Akshaye Khanna, Sanjay Dutt, Arjun Rampal ಮತ್ತು R. Madhavan ಸೇರಿದಂತೆ ಹಲವು ತಾರಾಬಳಗ ನಟಿಸಿದ್ದರು.

Trending

Exit mobile version