ದಾವೋಸ್ನಲ್ಲೂ ಚರ್ಚೆಯಾದ ಕರ್ನಾಟಕ ರಾಜಕೀಯ | Hosa Suddi

ದೇಶ

ದಾವೋಸ್ನಲ್ಲೂ ಚರ್ಚೆಯಾದ ಕರ್ನಾಟಕ ರಾಜಕೀಯ

Published

on

DCM D K Shivkumar

ಬೆಂಗಳೂರು, ಜನವರಿ 22: ರಾಜ್ಯದಲ್ಲಿ ಸಿಎಂ ಕುರ್ಚಿ ವಿಚಾರವಾಗಿ ನಡೆಯುತ್ತಿರುವ ಪೈಪೋಟಿ ಇದೀಗ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಈ ವಿಚಾರ ಅಂತರರಾಷ್ಟ್ರೀಯ ವೇದಿಕೆಯಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭಾಗವಹಿಸಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಮ್ಮ ನಾಯಕರು ತಮಗೆ ನಿರಾಸೆ ಮಾಡಲಾರರು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಡಿಕೆಶಿ, “ಎಲ್ಲ ವಿಷಯಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಇದು ಮಾಧ್ಯಮಗಳಲ್ಲಿ ಚರ್ಚಿಸಬೇಕಾದ ವಿಷಯವಲ್ಲ. ಪಕ್ಷದೊಳಗೇ ಚರ್ಚಿಸಬೇಕಾದ ವಿಷಯ ಇದು” ಎಂದು ಸ್ಪಷ್ಟಪಡಿಸಿದರು. ತಾವು ಸದಾ ಧನಾತ್ಮಕ ಮನೋಭಾವ ಹೊಂದಿದ್ದು, ಶ್ರಮಕ್ಕೆ ಯಾವಾಗಲೂ ಫಲ ಸಿಗುತ್ತದೆ ಎಂಬ ನಂಬಿಕೆ ತಮಗಿದೆ ಎಂದರು. ತಮ್ಮ ನಾಯಕರು ಖಂಡಿತವಾಗಿಯೂ ತಮಗೆ ನಿರಾಸೆ ಉಂಟುಮಾಡುವುದಿಲ್ಲ ಎಂಬ ಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ಸಿಎಂ ಸ್ಥಾನಕ್ಕೆ ಶಾಸಕರ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹಾಗೆ ಹೇಳಿದ್ದು ಯಾರು? ಕೆಪಿಸಿಸಿ ಅಧ್ಯಕ್ಷನಾಗಿರುವ ನನಗೆ ಪಕ್ಷದ 140 ಶಾಸಕರ ಬೆಂಬಲವೂ ಇದೆ. ಸಂಖ್ಯೆಗಳ ಬಗ್ಗೆ ಈಗ ತೀರ್ಮಾನ ಅಗತ್ಯವಿಲ್ಲ” ಎಂದು ಹೇಳಿದರು.

ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಮತ್ತು ತಮ್ಮಿಬ್ಬರಿಗೂ ಎಲ್ಲ ಶಾಸಕರ ಬೆಂಬಲವಿದೆ ಎಂದು ಡಿಕೆಶಿ ತಿಳಿಸಿದರು. ನಾವು ಇಬ್ಬರೂ ಕೂತು ಚರ್ಚಿಸಿದ್ದು, ಎಲ್ಲವನ್ನೂ ಪಕ್ಷದ ನಾಯಕರ ತೀರ್ಮಾನಕ್ಕೆ ಬಿಟ್ಟಿದ್ದೇವೆ. ವರಿಷ್ಠರು ತೆಗೆದುಕೊಳ್ಳುವ ತೀರ್ಮಾನವನ್ನು ಇಬ್ಬರೂ ಒಪ್ಪಿಕೊಳ್ಳುತ್ತೇವೆ ಎಂದು ಈಗಾಗಲೇ ತಿಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

Trending

Exit mobile version