ಗುಂಡಿ ಸಮಸ್ಯೆ: ಬೆಂಗಳೂರು ಮಾತ್ರವಲ್ಲ, ಇಡೀ ದೇಶದ ಚಿತ್ರ ಇದೇ – DCM ಡಿಕೆಶಿ | Hosa Suddi

ಬೆಂಗಳೂರು

ಗುಂಡಿ ಸಮಸ್ಯೆ: ಬೆಂಗಳೂರು ಮಾತ್ರವಲ್ಲ, ಇಡೀ ದೇಶದ ಚಿತ್ರ ಇದೇ – DCM ಡಿಕೆಶಿ

Published

on

ಬೆಂಗಳೂರು: “ದೆಹಲಿಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ. ಇಡೀ ದೇಶದಲ್ಲಿ ಇದೇ ಸ್ಥಿತಿ ಇದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬಿಹಾರಕ್ಕೆ ತೆರಳುವ ಮೊದಲು, ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, “ಈ ಹಿಂದೆ ಬಿಜೆಪಿ ಸರಕಾರಗಳು ರಸ್ತೆಗಳ ನಿರ್ವಹಣೆಯಲ್ಲಿ ಸೂಕ್ತ ಕೆಲಸ ಮಾಡಿದ್ರೆ, ಇವತ್ತು ಇಂತಹ ಪರಿಸ್ಥಿತಿ ಆಗುತ್ತಿರಲಿಲ್ಲ” ಎಂದು ಟೀಕಿಸಿದರು.

ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ರಸ್ತೆ ಸಮಸ್ಯೆಗಳ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, “ನಮ್ಮ ಜಿಬಿಎ ಅಧಿಕಾರಿಗಳು ಪ್ರತಿದಿನವೂ 1,000 ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಬೆಂಗಳೂರು ನಗರವನ್ನು ಗುಂಡಿಗಳಿಂದ ಮುಕ್ತಗೊಳಿಸಲು ನಾವು ಬದ್ಧರಾಗಿದ್ದೇವೆ” ಎಂದರು.

“ನಾವು ನಿರಂತರವಾಗಿ ಗುಂಡಿಗಳನ್ನು ಮುಚ್ಚಿಸುತ್ತಿದ್ದೇವೆ. ಆದರೆ, ಮಾಧ್ಯಮಗಳು ಈ ಸಮಸ್ಯೆಯನ್ನು ಒಂದೇ ಬೆಂಗಳೂರು ನಗರಕ್ಕೆ ಸೀಮಿತವಾದಂತೆ ಬಿಂಬಿಸುತ್ತಿವೆ. ಇದು ನ್ಯಾಯಸಮ್ಮತವಲ್ಲ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Trending

Exit mobile version