"ಸಂವಿಧಾನ ಓದಿ ನಂತರ ಟೀಕೆ ಮಾಡಿ: DK ಶಿವಕುಮಾರ್‌ರಿಂದ ಪ್ರತಾಪ್ ಸಿಂಹಗೆ ತರಾಟೆ" | Hosa Suddi

ಬೆಂಗಳೂರು

“ಸಂವಿಧಾನ ಓದಿ ನಂತರ ಟೀಕೆ ಮಾಡಿ: DK ಶಿವಕುಮಾರ್‌ರಿಂದ ಪ್ರತಾಪ್ ಸಿಂಹಗೆ ತರಾಟೆ”

Published

on

ಬೆಂಗಳೂರು: “ಸಂವಿಧಾನವನ್ನು ಓದಿಲ್ಲದೇ ಜನತೆಗೆ ಪ್ರಜಾಪ್ರಭುತ್ವ ಕಲಿಸುತ್ತಿರುವವರನ್ನು ಜನರು ಚೆನ್ನಾಗಿ ಗುರುತಿಸಿಕೊಳ್ಳಬೇಕು,” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಜೆಪಿ ನಾಯಕ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾನು ಮುಷ್ತಾಕ್ ಅವರ ದಸರಾ ಉದ್ಘಾಟನೆ ಸಂಬಂಧ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಅನ್ನು ನ್ಯಾಯಾಲಯ ವಜಾ ಮಾಡಿದ ಬೆನ್ನಲ್ಲೇ ಅವರು ಈ ವಾಗ್ದಾಳಿ ನಡೆಸಿದರು.

“ಇದು ಬ್ಯಾಲೆಟ್‌ನಲ್ಲಿ ಬಂದ ಸರ್ಕಾರ”

“ಇದು ಜನತೆಯ ಮತದಿಂದ ಆಯ್ಕೆಗೊಂಡ ಸರ್ಕಾರ. ನಾವು ಸಂವಿಧಾನದ ಬದಲು ಯಾವುದರ ಆಧಾರದ ಮೇಲೆ ಕೆಲಸ ಮಾಡ್ತೀವಿ? ಈ ನಿರ್ಧಾರ ಸಂವಿಧಾನ ಬದ್ಧ. ಪ್ರತಾಪ್ ಸಿಂಹ ಮತ್ತು ಬಿಜೆಪಿ ನಾಯಕರು ಮೊದಲು ಸಂವಿಧಾನ ಓದಲಿ, ಆಗ ಅವರಿಗೆ ತಾವು ಕೇಳುತ್ತಿರುವ ಹಕ್ಕುಗಳ ಅರ್ಥವಾಗುತ್ತದೆ,” ಎಂದು ಡಿಕೆಶಿ ಹೇಳಿದರು.

ಅವರ ಪ್ರಕಾರ, ನ್ಯಾಯಾಲಯ ಕೂಡ ಸಂವಿಧಾನದ ಪ್ರಕಾರವೇ ಕೆಲಸ ಮಾಡುತ್ತದೆ. ಸರ್ಕಾರದ ಪ್ರತಿಯೊಂದು ನಿರ್ಧಾರವೂ ಸಂವಿಧಾನ ಬದ್ಧವಾಗಿರಬೇಕು ಎಂಬುದು ಅವರ ಒತ್ತಾಯ.

“ಪಾಪ, ಟಿಕೆಟ್ ಸಿಕ್ಕಿಲ್ಲ!”

ಪ್ರತಾಪ್ ಸಿಂಹ ಕುರಿತು ವೈಯಕ್ತಿಕವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಪಾಪ, ಆತನಿಗೆ ಪಕ್ಷದಿಂದ ಟಿಕೆಟ್ ಸಿಗಲಿಲ್ಲ. ರಾಜಕೀಯ ಜೀವನ ಉಳಿಸಿಕೊಳ್ಳಲು ಇಂತಹ ಕುತಂತ್ರಗಳು ಇರುತ್ತವೆ. ಆದರೆ, ನೈಜವಾಗಿ ದೇಶವನ್ನು ಪ್ರೀತಿಸುವವರು ಜನರ ಮಧ್ಯದಲ್ಲಿಯೇ ಇರುತ್ತಾರೆ,” ಎಂದು ತಿರುಗೇಟು ನೀಡಿದರು.


ದಸರಾ ಉದ್ಘಾಟನೆ ವಿವಾದದ ಹಿನ್ನೆಲೆ

ಮೈಸೂರು ದಸರಾ ಉತ್ಸವದ ಉದ್ಘಾಟಕರಾಗಿ ಮುಸ್ಲಿಂ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಠಿಣ ವಿರೋಧ ವ್ಯಕ್ತಪಡಿಸಿದ್ದರು. ಅವರು ಈ ಸಂಬಂಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿದೆ.

Trending

Exit mobile version