86 ವರ್ಷದ ಉದ್ಯಮಿ ಊಬರ್ ಡ್ರೈವರ್! ಭಾರತದಲ್ಲಿನ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಣ ಸಂಗ್ರಹಿಸುವ ಫಿಜಿಯ ವ್ಯಕ್ತಿಯ ಕಥೆ ವೈರಲ್ |

ದೇಶ

86 ವರ್ಷದ ಉದ್ಯಮಿ ಊಬರ್ ಡ್ರೈವರ್! ಭಾರತದಲ್ಲಿನ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಣ ಸಂಗ್ರಹಿಸುವ ಫಿಜಿಯ ವ್ಯಕ್ತಿಯ ಕಥೆ ವೈರಲ್

Published

on

ಫಿಜಿ: ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಅತ್ಯಂತ ಪ್ರಚಲಿತವಾಗಿರುವ ವಿಡಿಯೋವೊಂದರಲ್ಲಿ, 86 ವರ್ಷದ ವೃದ್ಧ ಉದ್ಯಮಿ ಊಬರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ದೃಶ್ಯ ನೆಟ್ಟಿಗರ ಮನಸ್ಸು ಗೆದ್ದಿದೆ.

ಶಾ ಎಂಬ ವ್ಯಕ್ತಿ ಫಿಜಿಯಲ್ಲಿ ಪ್ರಯಾಣಿಸುತ್ತಿದ್ದಾಗ ಊಬರ್ ಡ್ರೈವರ್ ಜೊತೆ ಮಾತನಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಅಚ್ಚರಿಯ ವಿಷಯವೇನೆಂದರೆ, ಆ ಚಾಲಕ ಸ್ವತಃ 175 ಮಿಲಿಯನ್ ಮೌಲ್ಯದ ಬಿಸಿನೆಸ್ ಸಾಮ್ರಾಜ್ಯದ ಮಾಲೀಕ!

ಆದರೆ ಅವರು ಈ ವಯಸ್ಸಿನಲ್ಲಿಯೂ ಊಬರ್ ಓಡಿಸುತ್ತಿರುವುದರ ಹಿಂದಿರುವ ಕಾರಣ ಅನೇಕರ ಹೃದಯ ಸ್ಪರ್ಶಿಸಿದೆ. “ನಾನು ಭಾರತದಲ್ಲಿನ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಊಬರ್ ಓಡಿಸುತ್ತಿದ್ದೇನೆ. ಪ್ರತೀ ವರ್ಷ ಕನಿಷ್ಠ 24 ಹೆಣ್ಣು ಮಕ್ಕಳ ಓದಿಗೆ ಹಣ ನೀಡುತ್ತೇನೆ,” ಎಂದು ವೃದ್ಧ ಉದ್ಯಮಿ ತಿಳಿಸಿದ್ದಾರೆ.

ಅವರು ತಮ್ಮ ಬಳಿ 13 ಆಭರಣ ಅಂಗಡಿಗಳು, ಆರು ರೆಸ್ಟೋರೆಂಟ್‌ಗಳು, ನಾಲ್ಕು ಸೂಪರ್ ಮಾರ್ಕೆಟ್‌ಗಳು ಮತ್ತು ಸ್ಥಳೀಯ ‘ಫಿಜಿ ಟೈಮ್ಸ್’ ಪತ್ರಿಕೆ ಇವೆ ಎಂದು ಹೇಳಿದ್ದಾರೆ. ಅವರ ತಂದೆ 1929ರಲ್ಲಿ ಕೇವಲ ಐದು ಪೌಂಡ್‌ನಿಂದ ಈ ವ್ಯವಹಾರವನ್ನು ಆರಂಭಿಸಿದ್ದರು ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ.

ಶಾ ಅವರು ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು, “ನಿಜವಾದ ಯಶಸ್ಸು ಎಂದರೆ ನೀವು ಎಷ್ಟು ಎತ್ತರಕ್ಕೆ ಏರುತ್ತೀರಿ ಎಂಬುದಲ್ಲ; ನೀವು ಎಷ್ಟು ಜನರನ್ನು ಎತ್ತುತ್ತೀರಿ ಎಂಬುದೇ ನಿಜವಾದ ಯಶಸ್ಸು,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರು “ಇದು ಮಾನವೀಯತೆಯ ನಿಜವಾದ ಉದಾಹರಣೆ” ಎಂದು ಕೊಂಡಾಡಿದ್ದಾರೆ.

Trending

Exit mobile version