ಜೆಬಿಎ ಜನರ ತೆರಿಗೆ ದುಡ್ಡು ನುಂಗುತ್ತಿದೆಯಾ? ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿಕೆ |

ಬೆಂಗಳೂರು

ಜೆಬಿಎ ಜನರ ತೆರಿಗೆ ದುಡ್ಡು ನುಂಗುತ್ತಿದೆಯಾ? ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿಕೆ

Published

on

H D Kumarswamy

ಬೆಂಗಳೂರು: ಬೆಂಗಳೂರು ನಗರದ ರಸ್ತೆ ಗುಂಡಿಗಳು, ಕಸದ ಸಮಸ್ಯೆ ಹಾಗೂ ಜೆಬಿಎ ಆಡಳಿತದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. “ಜೆಬಿಎ ಏನು ಮಾಡುತ್ತಿದೆ? ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯಾ?” ಎಂದು ಪ್ರಶ್ನಿಸಿದ್ದಾರೆ.

ಏಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಕಿಡಿಕಾರಿಕೆ ಸಂದೇಶದಲ್ಲಿ ಅವರು, “ನಾಡಪ್ರಭು ಕೆಂಪೇಗೌಡರ ಹೆಮ್ಮೆಯ ನಗರ ಇಂದು ಗುಂಡಿಗಳ ನಗರವಾಗಿ ಕುಖ್ಯಾತಿಯು ಗಳಿಸುತ್ತಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಈ ಸ್ಥಿತಿಗೆ ಹೊಣೆಗಾರರು” ಎಂದು ಆರೋಪಿಸಿದರು.

ಅವರು ಆಡಳಿತ ವೈಫಲ್ಯದ ಬಗ್ಗೆ ಮಾತನಾಡುತ್ತ, “ತೆರಿಗೆ ಹಾಕುವುದು ರಾಕೆಟ್ ವೇಗದಲ್ಲಿ, ಆದರೆ ಗುಂಡಿ ಮುಚ್ಚುವುದು ಆಮೆ ವೇಗದಲ್ಲಿ ನಡೆಯುತ್ತಿದೆ. ಕಂಪನಿಗಳು ಈಗ ಬೆಂಗಳೂರು ತೊರೆದು ನೆರೆರಾಜ್ಯಗಳತ್ತ ವಲಸೆ ಹೋಗುತ್ತಿವೆ” ಎಂದರು.

ಕಂಪನಿಗಳಿಗೆ ಭರವಸೆ ನೀಡುತ್ತ, “ಬೆಂಗಳೂರು ನಗರಕ್ಕೆ ಪರಂಪರೆ ಇದೆ. ಈ ನಗರವನ್ನು ಬದಲಾಯಿಸಲು ನಾವು ಎಲ್ಲರೂ ಸೇರಿ ಕೆಲಸ ಮಾಡಬೇಕು. ನಿಮ್ಮ ಜತೆಗೆ ನಾವಿದ್ದೇವೆ” ಎಂದು ಕರೆ ನೀಡಿದರು.

Trending

Exit mobile version