ಮಾಗಡಿಗೆ ನೀರು ಬಿಡದಿದ್ರೆ ಹುಷಾರ್-ತುಮಕೂರಿಗೆ ಮಾಗಡಿ ಶಾಸಕ ಬಾಲಕೃಷ್ಣ ಧಮಕಿ! |

ರಾಜಕೀಯ

ಮಾಗಡಿಗೆ ನೀರು ಬಿಡದಿದ್ರೆ ಹುಷಾರ್-ತುಮಕೂರಿಗೆ ಮಾಗಡಿ ಶಾಸಕ ಬಾಲಕೃಷ್ಣ ಧಮಕಿ!

Published

on

ಮಾಗಡಿ: ಹೇಮಾವತಿ ಎಕ್ಸ್ ಪ್ರೆಸ್ ಕೆನಲ್ ಲಿಂಕ್ ಯೋಜನೆ ವಿರೋಧಿಸಿ ತುಮಕೂರಿನ ಗುಬ್ಬಿಯಲ್ಲಿ ನಡೆದ ಪ್ರತಿಭಟನೆ ಬಗ್ಗೆ ಮಾಗಡಿಯ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ, ಹೇಮಾವತಿ ನೀರು ಮಾಗಡಿಗೆ ಬರಲೇಬೇಕು, ಇದನ್ನು ವಿರೋಧಿಸಿದರೆ ಪರಿಣಾಮ ಸರಿಯಿರುವುದಿಲ್ಲ ಎಂದು ತುಮಕೂರಿನ ಎಲ್ಲ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ,
ತುಮಕೂರಿನ ಹಾಲು ಮಾಗಡಿಗೆ ಸರಬರಾಜಾಗುತ್ತಿದೆ, ಈಗಾಗಲೇ ಹಾಲು ಸರಬರಾಜು ನಿಲ್ಲಿಸಿದ್ದೇವೆ, ಇನ್ನು ಮುಂದೆಯೂ ಇದೇ ರೀತಿ ಪ್ರತಿಭಟನೆ ನಡೆದರೆ ತುಮಕೂರಿನ ರೈತರ ತರಕಾರಿಯನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ,
ನಾವು ಅಣ್ಣ ತಮ್ಮಂದಿರಂತೆ ಇರಬೇಕೆಂದರೆ ಹೇಮಾವತಿ ನೀರು ಬಿಡಬೇಕು, ನಾವು ಕೇಳುತ್ತಿರುವುದು ನ್ಯಾಯರೀತ್ಯಾ ನಮಗೆ ಬರಬೇಕಿರುವ ನೀರು ಬಿಡಿ, ಇದನ್ನ ವಿರೋಧಿಸಿ ರೈತರು ಪ್ರತಿಭಟಿಸುತ್ತಿರುವುದು ಸರಿಯಲ್ಲ, ತುಮಕೂರಿನ ಶಾಸಕರುಗಳಾದ ಸುರೇಶ್ ಗೌಡ, ಎಂ ಟಿ ಕೃಷ್ಣಪ್ಪ ಎಲ್ಲಿರಿಗೂ ಈ ಮೂಲಕ ಎಚ್ಚಿರಿಕೆ ನೀಡುತ್ತಿದ್ದೇವೆ ಎಂದು ಬಾಲಕೃಷ್ಣ ಹೇಳಿದ್ದಾರೆ,

Trending

Exit mobile version