ರಾಜ್ಯದಲ್ಲಿ ‘ಐ ಲವ್ ಆರ್ ಎಸ್ ಎಸ್’ ಅಭಿಯಾನ: ಸಿಎಂ ಸಿದ್ದರಾಮಯ್ಯಗೆ ಪ್ರಿಯಾಂಕ್ ಖರ್ಗೆ ಪತ್ರದ ಬೆನ್ನಲ್ಲೇ ಕಾರ್ಯಕರ್ತರ ಆಕ್ರೋಶ |

ದೇಶ

ರಾಜ್ಯದಲ್ಲಿ ‘ಐ ಲವ್ ಆರ್ ಎಸ್ ಎಸ್’ ಅಭಿಯಾನ: ಸಿಎಂ ಸಿದ್ದರಾಮಯ್ಯಗೆ ಪ್ರಿಯಾಂಕ್ ಖರ್ಗೆ ಪತ್ರದ ಬೆನ್ನಲ್ಲೇ ಕಾರ್ಯಕರ್ತರ ಆಕ್ರೋಶ

Published

on

ಬೆಂಗಳೂರು: ರಾಜ್ಯದಲ್ಲಿ ಆರ್ ಎಸ್ ಎಸ್ ಬ್ಯಾನ್ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ಹಿನ್ನಲೆಯಲ್ಲಿ, ರಾಜ್ಯಾದ್ಯಂತ ‘ಐ ಲವ್ ಆರ್ ಎಸ್ ಎಸ್’ ಅಭಿಯಾನ ಪ್ರಾರಂಭವಾಗಿದೆ. ಕಾರ್ಯಕರ್ತರು ಪೋಸ್ಟರ್ ಹಿಡಿದು, “ಯಾರು ಭಾರತವನ್ನು ಪ್ರೀತಿಸುತ್ತಾರೆ, ಅವರು ಆರ್ ಎಸ್ ಎಸ್ ಅನ್ನು ಸಹ ಪ್ರೀತಿಸುತ್ತಾರೆ” ಎಂಬ ಸಂದೇಶವನುಲ್ಲಿಸಿರುವರು.

ಈ ಅಭಿಯಾನವನ್ನು ಎಲ್ಲಾ ಆರ್ ಎಸ್ ಎಸ್ ಕಾರ್ಯಕರ್ತರು ಪ್ರಾರಂಭಿಸಿದ್ದು, ಬಿಜೆಪಿ ಸಹ ಸಾಥ್ ನೀಡುತ್ತಿದೆ. ರಾಜ್ಯ ಸರ್ಕಾರವನ್ನು ಧಮ್-ತಾಕತ್ ಇದ್ದರೆ ಆರ್ ಎಸ್ ಎಸ್ ಅನ್ನು ಬ್ಯಾನ್ ಮಾಡಲು ಸವಾಲು ಹಾಕಿರುವ ಮೂಲಕ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮಂಡ್ಯದ ವಿವಿ ರೋಡ್ ನಲ್ಲಿ ಕಾರ್ಯಕರ್ತರು ಸ್ಕೂಟರ್, ಕಾರು, ಆಟೋಗಳಿಗೆ ಸ್ಟಿಕರ್ ಅಂಟಿಸಿ ಪ್ರತಿಭಟನೆ ನಡೆಸಿದರೆ, ಕೆಲ ಸ್ಥಳಗಳಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿದ್ದಾರೆ. ಕಲಬುರ್ಗಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಕೂಡ ಪೋಸ್ಟರ್ ಅಭಿಯಾನ ಜೋರಾಗಿದ್ದು, ಎಲ್ಲಾ ಕಡೆ “ಭಾರತವನ್ನು ಪ್ರೀತಿಸುವವರು ಆರ್ ಎಸ್ ಎಸ್ ಅನ್ನು ಸಹ ಪ್ರೀತಿಸುತ್ತಾರೆ” ಎಂಬ ಸಂದೇಶವನ್ನು ಪ್ರಸಾರ ಮಾಡಲಾಗಿದೆ.

ಈ ಅಭಿಯಾನವು ರಾಜ್ಯದಲ್ಲಿ ರಾಜಕೀಯ ಗಲಾಟೆ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದು, ಆರ್ ಎಸ್ ಎಸ್ ಮತ್ತು ಸರ್ಕಾರದ ನಿಲುವಿನ ಮೇಲೆ ಸಾರ್ವಜನಿಕ ಗಮನ ಸೆಳೆಯುತ್ತಿದೆ.

Trending

Exit mobile version