Connect with us

ಕ್ರೀಡೆ

IND vs NZ ODI ಸರಣಿ: ಗಾಯಗೊಂಡ ರಿಷಭ್ ಪಂತ್ ಹೊರಗೆ, ಧ್ರುವ್ ಜುರೆಲ್‌ಗೆ ಭಾರತ ತಂಡದಲ್ಲಿ ಅವಕಾಶ

Published

on

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ (IND vs NZ ODI Series) ಇಂದಿನಿಂದ (ಜ.11) ಆರಂಭವಾಗುತ್ತಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಗಾಯಗೊಂಡ ಹಿನ್ನೆಲೆಯಲ್ಲಿ ಸರಣಿಯಿಂದ ಹೊರಬಿದ್ದಿದ್ದಾರೆ.

ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ ನಡೆದ ಭಾರತ ತಂಡದ ಅಭ್ಯಾಸ ಅವಧಿಯಲ್ಲಿ ನೆಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಪಂತ್ ಅವರ ಬಲ ಪಾರ್ಶ್ವದ ಹೊಟ್ಟೆಯ ಭಾಗಕ್ಕೆ ಚೆಂಡು ತಗುಲಿ ಗಾಯವಾಗಿದೆ. ಗಾಯದಿಂದ ಅಸ್ವಸ್ಥಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ವೈದ್ಯಕೀಯ ಪರೀಕ್ಷೆಯಲ್ಲಿ ಪಂತ್ ಅವರಿಗೆ ಪಾರ್ಶ್ವ ಸ್ನಾಯು ನೋವು (ಒಬ್ಲಿಕ್ ಮಸಲ್ ಟಿಯರ್) ಇರುವುದು ದೃಢಪಟ್ಟಿದ್ದು, ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಕೈಬಿಡಲಾಗಿದೆ.

ಪಂತ್ ಅವರ ಬದಲಾಗಿ ಯುವ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಅವರನ್ನು ಭಾರತ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪ್ರಸ್ತುತ ವಿಜಯ ಹಝಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶ್ ಪರ ಕಣಕ್ಕಿಳಿಯುತ್ತಿರುವ ಜುರೆಲ್ ಶೀಘ್ರದಲ್ಲೇ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

ಭಾರತ ಏಕದಿನ ತಂಡ

ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕ್ರೀಡೆ

ವಿಶ್ವ ಚೆಸ್‌ನಲ್ಲಿ Praggnanandhaa ಹೊಸ ಇತಿಹಾಸ; ಕರುವಾನಾಗೆ ಶಾಕ್ ನೀಡಿ ಐತಿಹಾಸಿಕ ಪ್ರಶಸ್ತಿ ಗೆಲುವು

Published

on

By

ಸೆಂಟ್ ಲೂಯಿಸ್: ಭಾರತದ ಯುವ ಗ್ರಾಂಡ್‌ಮಾಸ್ಟರ್ ಆರ್. Praggnanandhaa ಅವರು ವಿಶ್ವ ಚೆಸ್‌ ರಂಗದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೆಂಟ್ ಲೂಯಿಸ್‌ನಲ್ಲಿ ನಡೆದ ಪ್ರತಿಷ್ಠಿತ ಗ್ರಾಂಡ್ ಚೆಸ್ ಟೂರ್ 2026 ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಫ್ಯಾಬಿಯಾನೊ ಕರುವಾನಾ ವಿರುದ್ಧ ಭರ್ಜರಿ ಪುನರಾಗಮನ ಸಾಧಿಸಿದ ಪ್ರಜ್ಞಾನಂದ, ತಮ್ಮ 2026ರ ಅದ್ಭುತ ಪ್ರದರ್ಶನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರಿಸಿದ್ದಾರೆ.

6 ಅಂಕಗಳ ಹಿನ್ನಡೆಯಿಂದ ರೋಚಕ ಕಮ್‌ಬ್ಯಾಕ್

ಕ್ಲಾಸಿಕಲ್ ಪಂದ್ಯಗಳ ಅಂತ್ಯದಲ್ಲಿ ಪ್ರಜ್ಞಾನಂದ ಅವರು ಕರುವಾನಾ ವಿರುದ್ಧ 3-9 ಅಂಕಗಳಿಂದ ಆರು ಅಂಕಗಳ ಹಿನ್ನಡೆಯಲ್ಲಿದ್ದರು. ಹೀಗಾಗಿ ಪ್ರಶಸ್ತಿ ಗೆಲ್ಲುವ ಅವಕಾಶ ಕ್ಷೀಣಿಸಿತ್ತು. ಆದರೆ ಅಂತಿಮ ದಿನ ರ್ಯಾಪಿಡ್ ಪಂದ್ಯಗಳಲ್ಲಿ ಅದ್ಭುತ ಆಟವಾಡಿದ ಪ್ರಜ್ಞಾನಂದ ಸತತ ಎರಡು ಗೆಲುವು ದಾಖಲಿಸಿ 11-9 ಅಂಕಗಳ ಮುನ್ನಡೆ ಪಡೆದರು.

ಬಳಿಕ ನಡೆದ ಬ್ಲಿಟ್ಸ್ ಪಂದ್ಯದಲ್ಲಿ ಮೊದಲ ಪಂದ್ಯ ಡ್ರಾಗೊಂಡರೆ, ಎರಡನೇ ಪಂದ್ಯವನ್ನು ಕರುವಾನಾ ಗೆದ್ದು 12-12ರಲ್ಲಿ ಸಮಬಲ ಸಾಧಿಸಿದರು. ಆದರೆ ಮೂರನೇ ಬ್ಲಿಟ್ಸ್ ಪಂದ್ಯದಲ್ಲಿ ಪ್ರಜ್ಞಾನಂದ ಮತ್ತೆ ಗೆದ್ದು ನಿರ್ಣಾಯಕ ಮುನ್ನಡೆ ಪಡೆದುಕೊಂಡರು.

‘ತ್ರೀಫೋಲ್ಡ್ ರಿಪಿಟಿಷನ್’ ಮೂಲಕ ಪ್ರಶಸ್ತಿ ಖಚಿತ

ಅಂತಿಮ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಪ್ರಶಸ್ತಿ ತನ್ನದಾಗುವ ಪರಿಸ್ಥಿತಿಯಲ್ಲಿದ್ದ ಪ್ರಜ್ಞಾನಂದ, ಯಾವುದೇ ಅನಗತ್ಯ ಅಪಾಯ ತೆಗೆದುಕೊಳ್ಳಲಿಲ್ಲ. ಮೂರು ಬಾರಿ ಒಂದೇ ಸ್ಥಾನ ಪುನರಾವರ್ತನೆಯಾಗುವ ‘ತ್ರೀಫೋಲ್ಡ್ ರಿಪಿಟಿಷನ್’ ನಿಯಮವನ್ನು ಚಾಣಾಕ್ಷವಾಗಿ ಬಳಸಿಕೊಂಡು ಪಂದ್ಯವನ್ನು ಡ್ರಾ ಮಾಡಿಕೊಂಡರು. ಇದರೊಂದಿಗೆ ಪ್ರಶಸ್ತಿ ಅವರ ಪಾಲಾಯಿತು.

ಫೈನಲ್‌ನ ಒಟ್ಟು ಆರು ಪಂದ್ಯಗಳಲ್ಲಿ ಪ್ರಜ್ಞಾನಂದ ಮೂರು ಗೆಲುವು ದಾಖಲಿಸಿದರೆ, ಎರಡು ಪಂದ್ಯಗಳು ಡ್ರಾಗೊಂಡವು. ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿದರು.

2026ರಲ್ಲಿ ಮುಂದುವರಿದ ಪ್ರಜ್ಞಾನಂದ ಗೆಲುವಿನ ಓಟ

ಈ ಗೆಲುವಿನೊಂದಿಗೆ 2026ರಲ್ಲಿ ಪ್ರಜ್ಞಾನಂದ ಅವರ ಯಶಸ್ಸಿನ ಪಯಣ ಮತ್ತಷ್ಟು ಗಟ್ಟಿಯಾಗಿದೆ. ವರ್ಷದ ಆರಂಭದಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಹಿನ್ನಡೆ ಕಂಡಿದ್ದರೂ, ನಂತರ ಅದ್ಭುತವಾಗಿ ಚೇತರಿಸಿಕೊಂಡ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಎರಡು ಬಾರಿ ಮಣಿಸಿ ಪ್ರಶಸ್ತಿ ಗೆದ್ದಿದ್ದರು.

ಇದೀಗ ಗ್ರಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನೂ ಗೆಲ್ಲುವ ಮೂಲಕ ವಿಶ್ವದ ಅಗ್ರ ಚೆಸ್ ಆಟಗಾರರ ಸಾಲಿನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಕೇವಲ 21ನೇ ವಯಸ್ಸಿನಲ್ಲೇ ಪ್ರಜ್ಞಾನಂದ ಸಾಧಿಸುತ್ತಿರುವ ಈ ಸರಣಿ ಗೆಲುವುಗಳು ಭಾರತೀಯ ಚೆಸ್‌ನ ಭವಿಷ್ಯದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿಸಿವೆ.

Continue Reading

ಕ್ರೀಡೆ

India vs Panama: ವಿಶ್ವಕಪ್ ಆಡಿದ ಪನಾಮ ವಿರುದ್ಧ ಭಾರತ ಸೆಣಸು; ಪಂದ್ಯಕ್ಕೆ ದಿನಾಂಕ ಫಿಕ್ಸ್

Published

on

By

ನವದೆಹಲಿ, ಆ.26: ಬ್ರೆಜಿಲ್ ವಿರುದ್ಧದ ಬಹುನಿರೀಕ್ಷಿತ ಅಂತಾರಾಷ್ಟ್ರೀಯ ಸ್ನೇಹಪರ ಪಂದ್ಯಕ್ಕೂ ಮುನ್ನ ಭಾರತೀಯ ಫುಟ್‌ಬಾಲ್ ತಂಡಕ್ಕೆ ಮತ್ತೊಂದು ಮಹತ್ವದ ಪರೀಕ್ಷೆ ಎದುರಾಗಿದೆ. ಸೆಪ್ಟೆಂಬರ್ 26ರಂದು ಭಾರತ ಪನಾಮ ವಿರುದ್ಧ ಅಂತಾರಾಷ್ಟ್ರೀಯ ಸ್ನೇಹಪರ ಪಂದ್ಯದಲ್ಲಿ ಸೆಣಸಲಿದೆ. ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (AIFF) ಈ ಪಂದ್ಯವನ್ನು ಖಚಿತಪಡಿಸಿದ್ದು, ಪಂದ್ಯ ನಡೆಯುವ ಸ್ಥಳವನ್ನು ಬಳಿಕ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಪನಾಮ ವಿಶ್ವ ಫುಟ್‌ಬಾಲ್ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿರುವ ತಂಡವಾಗಿದ್ದು, ಇತ್ತೀಚೆಗೆ ನಡೆದ 2026ರ ಫಿಫಾ ವಿಶ್ವಕಪ್‌ನಲ್ಲೂ ಆಡಿದೆ. ಹೀಗಾಗಿ, ವಿಶ್ವಕಪ್‌ನಲ್ಲಿ ಆಡಿದ ತಂಡವೊಂದರ ವಿರುದ್ಧ ಭಾರತಕ್ಕೆ ತನ್ನ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ಈ ಪಂದ್ಯ ಉತ್ತಮ ಅವಕಾಶವಾಗಲಿದೆ. ಭಾರತ ಮತ್ತು ಪನಾಮ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.

ಬ್ರೆಜಿಲ್ ಪಂದ್ಯಕ್ಕೂ ಮುನ್ನ ಕಠಿಣ ಸವಾಲು

ಭಾರತೀಯ ತಂಡದ ಮುಖ್ಯ ಕೋಚ್ ಖಾಲಿದ್ ಜಮಿಲ್ ಅವರ ತಂಡಕ್ಕೆ ಪನಾಮ ವಿರುದ್ಧದ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಸೆಪ್ಟೆಂಬರ್ 26ರ ಪಂದ್ಯದ ಬಳಿಕ ಕೇವಲ ಕೆಲವೇ ದಿನಗಳಲ್ಲಿ ಭಾರತ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ವಿರುದ್ಧ ಅಕ್ಟೋಬರ್ 3ರಂದು ಕೋಲ್ಕತ್ತಾದಲ್ಲಿ ಕಣಕ್ಕಿಳಿಯಲಿದೆ.

ಬ್ರೆಜಿಲ್ ಪ್ರಸ್ತುತ ಫಿಫಾ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಹೀಗಾಗಿ, ಪನಾಮ ವಿರುದ್ಧದ ಪಂದ್ಯವು ಬ್ರೆಜಿಲ್‌ನಂತಹ ಬಲಿಷ್ಠ ತಂಡವನ್ನು ಎದುರಿಸುವ ಮುನ್ನ ಭಾರತದ ಆಟಗಾರರಿಗೆ ಉತ್ತಮ ಸಿದ್ಧತಾ ಅವಕಾಶವಾಗಲಿದೆ.

AIFF ಉಪ ಪ್ರಧಾನ ಕಾರ್ಯದರ್ಶಿ ಎಂ. ಸತ್ಯನಾರಾಯಣ್ ಅವರು ಪನಾಮ ವಿರುದ್ಧದ ಪಂದ್ಯ ಭಾರತಕ್ಕೆ ಕಠಿಣ ಪರೀಕ್ಷೆಯಾಗಲಿದೆ ಎಂದು ಹೇಳಿದ್ದಾರೆ. ವಿಶ್ವದ ಅಗ್ರ 50 ತಂಡಗಳಲ್ಲಿರುವ ಪನಾಮ ವಿರುದ್ಧ ಆಡುವುದರಿಂದ ಭಾರತೀಯ ಆಟಗಾರರಿಗೆ ಉನ್ನತ ಮಟ್ಟದ ಅನುಭವ ಮತ್ತು ಅಂತಾರಾಷ್ಟ್ರೀಯ ಮಾನ್ಯತೆ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ಆಡಿದ ತಂಡದ ವಿರುದ್ಧ ಮೊದಲ ಪಂದ್ಯ

ಪನಾಮ ತಂಡವನ್ನು ‘ಲಾಸ್ ಕೆನಾಲೆರೋಸ್’ ಎಂದು ಕರೆಯಲಾಗುತ್ತದೆ. 2026ರ ಫಿಫಾ ವಿಶ್ವಕಪ್‌ನಲ್ಲಿ ಪನಾಮ ಭಾಗವಹಿಸಿತ್ತು. ಹೀಗಾಗಿ, ವಿಶ್ವಕಪ್‌ನಲ್ಲಿ ಆಡಿದ ತಂಡಗಳ ವಿರುದ್ಧ ಭಾರತ 2026ರಲ್ಲಿ ಆಡಲಿರುವ ಪಂದ್ಯಗಳ ಸರಣಿಯಲ್ಲಿ ಪನಾಮ ವಿರುದ್ಧದ ಪಂದ್ಯ ಮೊದಲನೆಯದಾಗಿದೆ.

ಈ ಪಂದ್ಯ ಭಾರತಕ್ಕೆ ಮತ್ತೊಂದು ವಿಶೇಷತೆಯನ್ನೂ ಹೊಂದಿದೆ. ಪನಾಮ ವಿರುದ್ಧ ಆಡಿದರೆ ಭಾರತ ಎದುರಿಸಿರುವ ವಿಭಿನ್ನ ಕಾನ್ಕಕ್ಯಾಫ್‌ (CONCACAF) ತಂಡಗಳ ಸಂಖ್ಯೆ ಒಂಬತ್ತಕ್ಕೆ ಏರಲಿದೆ. ಇದುವರೆಗೆ ಉಭಯ ತಂಡಗಳು ಹಿರಿಯ ಪುರುಷರ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಮುಖಾಮುಖಿಯಾಗಿಲ್ಲ.

ಬ್ರೆಜಿಲ್ ಬಳಿಕ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯ

ಪನಾಮ ಮತ್ತು ಬ್ರೆಜಿಲ್ ಪಂದ್ಯಗಳ ಬಳಿಕವೂ ಭಾರತಕ್ಕೆ ಬಲಿಷ್ಠ ಎದುರಾಳಿಗಳ ವಿರುದ್ಧ ಆಡುವ ಅವಕಾಶ ಮುಂದುವರಿಯಲಿದೆ. ನವೆಂಬರ್ 12 ಮತ್ತು 15ರಂದು ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳನ್ನು ಭಾರತ ಆಡಲಿದೆ. ಹೀಗಾಗಿ, 2026ರ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ತಂಡಗಳ ವಿರುದ್ಧ ಭಾರತ ಆಡಲಿರುವ ನಾಲ್ಕು ಪಂದ್ಯಗಳ ಸರಣಿಯಲ್ಲಿ ಪನಾಮ, ಬ್ರೆಜಿಲ್ ಮತ್ತು ನ್ಯೂಜಿಲೆಂಡ್ ಸೇರಿವೆ.

ಈ ಪಂದ್ಯಗಳು ಖಾಲಿದ್ ಜಮಿಲ್ ನೇತೃತ್ವದ ಭಾರತ ತಂಡಕ್ಕೆ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಅನುಭವ ಪಡೆಯಲು ಪ್ರಮುಖ ವೇದಿಕೆಯಾಗಲಿವೆ. ವಿಶೇಷವಾಗಿ ವಿಶ್ವಕಪ್ ಅನುಭವ ಹೊಂದಿರುವ ತಂಡಗಳ ವಿರುದ್ಧ ಆಡುವ ಮೂಲಕ ಭಾರತದ ಆಟಗಾರರಿಗೆ ವೇಗ, ತಂತ್ರಗಾರಿಕೆ ಹಾಗೂ ಒತ್ತಡದ ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ಅವಕಾಶ ಸಿಗಲಿದೆ.

ASEAN ಕಪ್‌ನಿಂದ ಹಿಂದೆ ಸರಿದ ಬಳಿಕ ಫ್ರೆಂಡ್ಲಿ

ಬ್ರೆಜಿಲ್ ವಿರುದ್ಧದ ಪಂದ್ಯ ಮತ್ತು ಫಿಫಾ ASEAN ಕಪ್‌ನ ವೇಳಾಪಟ್ಟಿಯಲ್ಲಿ ಉಂಟಾದ ಸಂಘರ್ಷದ ಹಿನ್ನೆಲೆಯಲ್ಲಿ ಭಾರತ ASEAN ಕಪ್‌ನಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿತ್ತು. ASEAN ಕಪ್ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 3ರವರೆಗೆ ನಡೆಯಲಿದ್ದು, ಅಕ್ಟೋಬರ್ 3ರಂದೇ ಭಾರತ-ಬ್ರೆಜಿಲ್ ಪಂದ್ಯ ನಿಗದಿಯಾಗಿತ್ತು. ಭಾರತ ಫೈನಲ್‌ಗೆ ತಲುಪಿದ್ದರೆ ಎರಡೂ ಪಂದ್ಯಗಳು ಒಂದೇ ದಿನ ನಡೆಯುವ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತಿತ್ತು.

ಇದರ ಬದಲಾಗಿ ಭಾರತ ತನ್ನ ಅಂತಾರಾಷ್ಟ್ರೀಯ ಫುಟ್‌ಬಾಲ್ ಕ್ಯಾಲೆಂಡರ್‌ನಲ್ಲಿ ಬಲಿಷ್ಠ ತಂಡಗಳ ವಿರುದ್ಧ ಸ್ನೇಹಪರ ಪಂದ್ಯಗಳಿಗೆ ಆದ್ಯತೆ ನೀಡಿದೆ. ಪನಾಮ ವಿರುದ್ಧದ ಪಂದ್ಯ ಇದೇ ಯೋಜನೆಯ ಭಾಗವಾಗಿದೆ.

ಬ್ರೆಜಿಲ್ ಪಂದ್ಯದ ಬಳಿಕ ಅಕ್ಟೋಬರ್ 6ರಂದು ಕಾಬೊ ವರ್ಡೆ ವಿರುದ್ಧ ಮತ್ತೊಂದು ಸ್ನೇಹಪರ ಪಂದ್ಯ ಆಯೋಜಿಸುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ಒಟ್ಟಾರೆ, ಮುಂದಿನ ಕೆಲವು ತಿಂಗಳುಗಳು ಭಾರತೀಯ ಫುಟ್‌ಬಾಲ್ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ವಿಶ್ವಕಪ್ ಅನುಭವ ಹೊಂದಿರುವ ತಂಡಗಳ ವಿರುದ್ಧ ಸತತ ಪಂದ್ಯಗಳು ಬ್ಲೂ ಟೈಗರ್ಸ್‌ಗೆ ದೊಡ್ಡ ಸವಾಲಾಗಲಿವೆ.

Continue Reading

ದೇಶ

Imran Khan ಆರೋಗ್ಯದ ಬಗ್ಗೆ ಭರ್ಜರಿ ಅಪ್‌ಡೇಟ್; ಕಣ್ಣಿನ ಸಮಸ್ಯೆ ಬಗ್ಗೆ Ramiz Raja ಹೇಳಿದ್ದೇನು?

Published

on

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ Ramiz Raja, ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ 1992ರ ವಿಶ್ವಕಪ್ ವಿಜೇತ ನಾಯಕ Imran Khan ಅವರ ಆರೋಗ್ಯದ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಮೀಜ್ ರಾಜಾ ಅವರ ಹೇಳಿಕೆ ಗಮನ ಸೆಳೆದಿದೆ.

ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಹಲವು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಅವರ ಆರೋಗ್ಯದ ಬಗ್ಗೆ ಕಳವಳ ಹೆಚ್ಚಾಗಿದ್ದು, ಭಾರತ ಸೇರಿದಂತೆ ವಿವಿಧ ದೇಶಗಳ ಮಾಜಿ ಕ್ರಿಕೆಟ್ ನಾಯಕರು ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದರು.

ಇಮ್ರಾನ್ ಖಾನ್ ಕಣ್ಣಿನ ಸಮಸ್ಯೆ ಹೇಗಿದೆ?

ಸ್ಕೈ ಸ್ಪೋರ್ಟ್ಸ್‌ನ ‘ಸ್ಟಿಕ್ ಟು ಕ್ರಿಕೆಟ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಮೀಜ್ ರಾಜಾ ಅವರಿಗೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರಾದ ಡೇವಿಡ್ ಲಾಯ್ಡ್ ಮತ್ತು ಅಲಸ್ಟೇರ್ ಕುಕ್ ಅವರು ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಮೀಜ್ ರಾಜಾ, ಇಮ್ರಾನ್ ಖಾನ್ ಅವರಿಗೆ ಇತ್ತೀಚೆಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಆ ಸಮಸ್ಯೆಯನ್ನು ಇದೀಗ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಮ್ರಾನ್ ಖಾನ್ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದಾರೆ. ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿರುವುದು ಅವರಿಗೆ ಕಠಿಣ ಪರಿಸ್ಥಿತಿಯಾಗಿದೆ ಎಂದು ರಾಮೀಜ್ ರಾಜಾ ಹೇಳಿದ್ದಾರೆ.

ಇಮ್ರಾನ್ ಖಾನ್ ಅವರ ಕಣ್ಣಿನ ಸಮಸ್ಯೆ ಸುಮಾರು ಒಂದು ವಾರದ ಹಿಂದೆ ಕಾಣಿಸಿಕೊಂಡಿತ್ತು. ಇದೀಗ ಅದು ಸರಿಯಾಗಿದೆ. ಉಳಿದಂತೆ ಅವರು ತಮ್ಮ ಗಟ್ಟಿಯಾದ ಮನೋಸ್ಥೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ರಾಮೀಜ್ ರಾಜಾ ತಿಳಿಸಿದ್ದಾರೆ.

ಕಪಿಲ್ ದೇವ್ ಸೇರಿ 22 ಮಾಜಿ ನಾಯಕರಿಂದ ಪತ್ರ

ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾರತದ ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ಸೇರಿದಂತೆ 22 ಮಾಜಿ ಕ್ರಿಕೆಟ್ ನಾಯಕರು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಪತ್ರಕ್ಕೆ ಮೈಕೆಲ್ ಅಥರ್ಟನ್, ಅಲೆನ್ ಬಾರ್ಡರ್, ಮೈಕೆಲ್ ಬ್ರೇರ್‌ಲಿ, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಅಲಸ್ಟೇರ್ ಕುಕ್, ಮೈಕೆಲ್ ಗ್ಯಾಟಿಂಗ್, ಸುನಿಲ್ ಗವಾಸ್ಕರ್, ಕಪಿಲ್ ದೇವ್, ಲೀ ಜರ್ಮನ್, ಆಡಂ ಗಿಲ್‌ಕ್ರಿಸ್ಟ್, ಡೇವಿಡ್ ಗೋವರ್, ಕಿಮ್ ಹ್ಯೂಸ್, ನಾಸಿರ್ ಹುಸೇನ್, ಕ್ಲೈವ್ ಲಾಯ್ಡ್, ಅರ್ಜುನ ರಣತುಂಗ, ಆಂಡ್ರ್ಯೂ ಸ್ಟ್ರಾಸ್, ದಿಲೀಪ್ ವೆಂಗ್‌ಸರ್ಕರ್, ಸ್ಟೀವ್ ವಾ ಮತ್ತು ಜಾನ್ ರೈಟ್ ಸೇರಿದಂತೆ ಹಲವು ಮಾಜಿ ನಾಯಕರು ಸಹಿ ಹಾಕಿದ್ದಾರೆ.

ಇಮ್ರಾನ್ ಖಾನ್‌ರನ್ನು ಆಸ್ಪತ್ರೆಗೆ ದಾಖಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ

ಪತ್ರದಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನಗಳನ್ನೂ ಉಲ್ಲೇಖಿಸಲಾಗಿದೆ. ಇಮ್ರಾನ್ ಖಾನ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿ, ಅವರ ವೈಯಕ್ತಿಕ ವೈದ್ಯರು ಹಾಗೂ ಸಹೋದರಿ ಡಾ. ಉಜ್ಮಾ ಖಾನ್ ಅವರನ್ನು ಒಳಗೊಂಡ ವೈದ್ಯಕೀಯ ಮಂಡಳಿಯಿಂದ ಪರೀಕ್ಷೆ ನಡೆಸುವಂತೆ ನ್ಯಾಯಾಲಯ ಸೂಚಿಸಿತ್ತು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಕುಟುಂಬ ಸದಸ್ಯರಿಗೆ ವಾರದ ಭೇಟಿಗೆ ಅವಕಾಶ ನೀಡುವಂತೆ ನ್ಯಾಯಾಲಯ ನೀಡಿದ್ದ ನಿರ್ದೇಶನವನ್ನೂ ಸ್ವಾಗತಿಸಲಾಗಿದೆ.

ಆದರೆ ಇಮ್ರಾನ್ ಖಾನ್ ಅವರ ಆಸ್ಪತ್ರೆ ವಾಸ್ತವ್ಯ ಕೆಲವೇ ಗಂಟೆಗಳಿಗೆ ಸೀಮಿತವಾಗಿತ್ತು. ನ್ಯಾಯಾಲಯ ಸೂಚಿಸಿದ್ದ ವೈದ್ಯಕೀಯ ಮಂಡಳಿಯ ಬದಲು ಸರ್ಕಾರ ನೇಮಿಸಿದ್ದ ತಂಡದಿಂದ ಪರೀಕ್ಷೆ ನಡೆಸಿ ಅವರನ್ನು ವೈದ್ಯಕೀಯವಾಗಿ ಆರೋಗ್ಯವಂತರಾಗಿದ್ದಾರೆ ಎಂದು ಘೋಷಿಸಿ ಮತ್ತೆ ಅಡಿಯಾಲಾ ಜೈಲಿಗೆ ಕಳುಹಿಸಲಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಇಮ್ರಾನ್ ಆರೋಗ್ಯದ ಬಗ್ಗೆ ಮುಂದುವರಿದ ಕಳವಳ

ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಪಾಕಿಸ್ತಾನದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆ ನಡೆಯುತ್ತಿದೆ. ಈ ನಡುವೆ ರಾಮೀಜ್ ರಾಜಾ ನೀಡಿರುವ ಮಾಹಿತಿ ಅವರ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ.

ಆದರೆ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಒದಗಿಸಬೇಕು ಎಂಬ ಆಗ್ರಹ ಮುಂದುವರಿದಿದೆ.

Continue Reading

Trending