ಐಟಿ ಕಾರಿಡಾರ್‌ಗೆ 400 ಕೋಟಿ ರೂ. ಬಂಪರ್ ಅನುದಾನ – ಡಿಕೆಶಿ | Hosa Suddi

ದೇಶ

ಐಟಿ ಕಾರಿಡಾರ್‌ಗೆ 400 ಕೋಟಿ ರೂ. ಬಂಪರ್ ಅನುದಾನ – ಡಿಕೆಶಿ

Published

on

ಬೆಂಗಳೂರು: ಐಟಿ ವಲಯಕ್ಕೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ. ಬೆಂಗಳೂರಿನ ಐಟಿ ಕಾರಿಡಾರ್ ಅಭಿವೃದ್ಧಿಗೆ 400 ಕೋಟಿ ರೂ. ಮೀಸಲಿಟ್ಟಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ಎಕ್ಸ್‌ ಮೇಲೆ ಪೋಸ್ಟ್ ಹಂಚಿಕೊಂಡಿರುವ ಡಿಕೆಶಿ, “ಐಟಿ ಕಾರಿಡಾರ್ ಅಭಿವೃದ್ಧಿಗೆ ಸರ್ಕಾರ 400 ಕೋಟಿ ರೂ. ಮೀಸಲಿಟ್ಟಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಯೇ ನಮ್ಮ ಆದ್ಯತೆ” ಎಂದು ತಿಳಿಸಿದ್ದಾರೆ.

ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆಆರ್ ಪುರಂವರೆಗೆ 20.50 ಕಿ.ಮೀ ಉದ್ದದ ಐಟಿ ಕಾರಿಡಾರ್ ಹೊರವರ್ತುಲ ರಸ್ತೆನ್ನು ವಿಶ್ವದರ್ಜೆ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಸರ್ಕಾರದ ಮುಂದಿದೆ. 400 ಕೋಟಿಯ ಬೃಹತ್ ನಿಧಿಯಿಂದ ರಸ್ತೆ ಗುಣಮಟ್ಟ, ಸಂಚಾರ ನಿರ್ವಹಣೆ ಹಾಗೂ ಮೂಲಸೌಕರ್ಯಗಳನ್ನು ಸುಧಾರಿಸಲಾಗುವುದು.

ಡಿಕೆಶಿ ಅವರ ಪ್ರಕಾರ, ಈ ರಸ್ತೆ ಅಭಿವೃದ್ಧಿಯಿಂದ ಐಟಿ ಕಾರಿಡಾರ್ ಪ್ರದೇಶದ ದೀರ್ಘಕಾಲದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ. ಸುಧಾರಿತ ರಸ್ತೆ ವ್ಯವಸ್ಥೆಯಿಂದ ದಿನವೂ ಈ ಮಾರ್ಗದಲ್ಲಿ ಸಂಚರಿಸುವ ಲಕ್ಷಾಂತರ ಉದ್ಯೋಗಿಗಳು ಮತ್ತು ಸಾರ್ವಜನಿಕರಿಗೆ ದೊಡ್ಡ ರಿಲೀಫ್ ಸಿಗಲಿದೆ.

Trending

Exit mobile version