ದೇಶ
ವಿಧಾನಸಭೆ ಗದ್ದಲಕ್ಕೆ ತೆರೆ?: ಖಾದರ್ ಎಚ್ಚರಿಕೆಗೆ ಸರ್ಕಾರ ಮಣಿದು ಉತ್ತರ ಸಲ್ಲಿಕೆ ಆರಂಭ
ಬೆಂಗಳೂರು, ಮಾರ್ಚ್ 17: ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆ ಅಸಮಾಧಾನಗೊಂಡು ಕಲಾಪ ಮುಂದೂಡಿದ್ದ U. T. Khader ಅವರ ಖಡಕ್ ನಿಲುವಿನ ಬಳಿಕ, Karnataka Legislative Assembly ಕಾರ್ಯಚಟುವಟಿಕೆಯಲ್ಲಿ ಸುಧಾರಣೆ ಕಾಣುತ್ತಿದೆ. ಇಲಾಖಾವಾರು ಲಿಖಿತ ಉತ್ತರಗಳನ್ನು ಸರ್ಕಾರ ಸಲ್ಲಿಸಲು ಆರಂಭಿಸಿದ್ದು, ಪರಿಸ್ಥಿತಿ ನಿಧಾನವಾಗಿ ಸರಿಯಾಗುತ್ತಿದೆ ಎಂದು ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರದ ಕಲಾಪದಲ್ಲಿ ಮಾತನಾಡಿದ ಖಾದರ್, “ಈಗ ಸ್ವಲ್ಪ ಸುಧಾರಣೆ ಕಂಡುಬರುತ್ತಿದೆ” ಎಂದರು. ಸೋಮವಾರ ನಡೆದ ಕಲಾಪದಲ್ಲಿ 230 ಪ್ರಶ್ನೆಗಳ ಪೈಕಿ ಕೇವಲ 84ಕ್ಕೆ ಮಾತ್ರ ಉತ್ತರ ಬಂದಿದ್ದರಿಂದ ಅಸಮಾಧಾನಗೊಂಡ ಅವರು, ಸಚಿವರು ಮತ್ತು ಅಧಿಕಾರಿಗಳು ಸಮರ್ಪಕ ಉತ್ತರ ನೀಡುವವರೆಗೂ ಸದನ ನಡೆಸುವುದಿಲ್ಲ ಎಂದು ಹೇಳಿ ಪೀಠದಿಂದ ಕೆಳಗಿಳಿದು ತೆರಳಿದ್ದರು.
ಈ ಘಟನೆಯ ಬಳಿಕ ವಿವಿಧ ಇಲಾಖೆಗಳು ಉತ್ತರಗಳ ಸಂಖ್ಯೆಯನ್ನು ಹೆಚ್ಚಿಸಿರುವುದು ಗಮನಾರ್ಹವಾಗಿದೆ.
ಯಾವ ಇಲಾಖೆಯಿಂದ ಎಷ್ಟು ಉತ್ತರ?
- ಆರ್ಥಿಕ ಇಲಾಖೆ: 30ರಲ್ಲಿ 6 ಉತ್ತರ
- ಸಮಾಜ ಕಲ್ಯಾಣ ಇಲಾಖೆ: 9ರಲ್ಲಿ 1 ಉತ್ತರ
- ಸಹಕಾರ ಇಲಾಖೆ: 12ರಲ್ಲಿ 0 ಉತ್ತರ
- ಜಲಸಂಪನ್ಮೂಲ ಇಲಾಖೆ: 11ರಲ್ಲಿ 4 ಉತ್ತರ
- ನಗರಾಭಿವೃದ್ಧಿ ಇಲಾಖೆ: 24ರಲ್ಲಿ 7 ಉತ್ತರ
- ಸಣ್ಣ ನೀರಾವರಿ ಇಲಾಖೆ: 19ರಲ್ಲಿ 13 ಉತ್ತರ (ಉತ್ತಮ ಸಾಧನೆ)
- ಐಟಿ ಇಲಾಖೆ: 2ರಲ್ಲಿ 2 ಉತ್ತರ
ಕಳೆದ ಐದು ದಿನಗಳಿಂದ ಕೇವಲ 10% ರಿಂದ 30% ರಷ್ಟು ಉತ್ತರ ಮಾತ್ರ ಬರುತ್ತಿದ್ದರೆ, ಇದೀಗ ಅದರಲ್ಲೂ ಏರಿಕೆ ಕಂಡುಬಂದಿದೆ. ಆದರೂ ಶಾಸಕರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಸರ್ಕಾರ ಜವಾಬ್ದಾರಿಯುತವಾಗಿ ಉತ್ತರಿಸಬೇಕು ಎಂದು ಸ್ಪೀಕರ್ ಪುನರುಚ್ಚರಿಸಿದರು.
ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡದ ಹಿನ್ನೆಲೆ ಸ್ಪೀಕರ್ ಸದನ ತೊರೆದ ಘಟನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.