ಮೈಸೂರು ದಸರಾ 2025: ಜಂಬೂಸವಾರಿಗೆ ಎರಡು ಹಂತದ ಭದ್ರತೆ, 6,384 ಪೊಲೀಸರ ನಿಯೋಜನೆ | Hosa Suddi

ರಾಜ್ಯ

ಮೈಸೂರು ದಸರಾ 2025: ಜಂಬೂಸವಾರಿಗೆ ಎರಡು ಹಂತದ ಭದ್ರತೆ, 6,384 ಪೊಲೀಸರ ನಿಯೋಜನೆ

Published

on

ಮೈಸೂರು: ಈ ವರ್ಷದ ನಾಡಹಬ್ಬ ದಸರಾ ಮಹೋತ್ಸವದ ಭದ್ರತೆಗಾಗಿ ಎರಡು ಹಂತದ ಕಠಿಣ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ ದಸರಾ ಉತ್ಸವದ ಹಿನ್ನೆಲೆಯಲ್ಲಿ, ಮೊದಲ ಹಂತದ ಭದ್ರತೆ ಸೆ.22ರಿಂದ 29ರವರೆಗೆ ಮತ್ತು ಎರಡನೇ ಹಂತದ ಭದ್ರತೆ ಸೆ.30 ರಿಂದ ಅ.2ರವರೆಗೆ ಜಾರಿಗೊಳಿಸಲಾಗುವುದು.

ದಸರಾ ಉದ್ಘಾಟನೆ, ವಸ್ತು ಪ್ರದರ್ಶನ, ಕುಸ್ತಿ, ಪೋಷಣ ಆಹಾರ ಮೇಳ, ಪುಸ್ತಕ ಮೇಳ, ದೀಪಾಲಂಕಾರ, ಯುವ ದಸರಾ, ಏರ್ ಶೋ ಮೊದಲಾದ ಕಾರ್ಯಕ್ರಮಗಳಿಗೆ ಸಂಪೂರ್ಣ ಭದ್ರತೆ ಒದಗಿಸಲಾಗುವುದು. ಜಂಬೂಸವಾರಿ ಮೆರವಣಿಗೆ ಹಾಗೂ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿರುವ ಎರಡನೇ ಹಂತಕ್ಕೆ ಇತರ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಒಟ್ಟು 6,384 ಪೊಲೀಸ್ ಸಿಬ್ಬಂದಿ, 5 ಎಸ್ಪಿ, 35 ಡಿವೈಎಸ್ಪಿ, 35 ಕೆಎಸ್ಆರ್ಪಿ ತುಕಡಿ, 1 ಗರುಡ, 1 ಎಆರ್ಎಫ್ ತಂಡ ಸೇರಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 30,614 ಸಿಸಿಟಿವಿ ಕ್ಯಾಮೆರಾಗಳು, ಡ್ರೋನ್ ಕ್ಯಾಮರಾ, ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ವಿಶೇಷ ಭದ್ರತೆ ಏರ್ಪಡಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ದಸರಾ ಕುರಿತು ಸುಳ್ಳು ಸುದ್ದಿ, ಗಾಬರಿ ಸೃಷ್ಟಿಸುವ ವಿಡಿಯೋಗಳನ್ನು ಹಂಚಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತೆ ಎಚ್ಚರಿಕೆ ನೀಡಿದ್ದಾರೆ.

Trending

Exit mobile version