ದೇಶ
“ನಾವೇ ಬ್ರ್ಯಾಂಡ್!” — ಶಿವರಾಜ್‌ಕುಮಾರ್ ಅವರ ಖಡಕ್ ನುಡಿ ವೈರಲ್!
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಮತ್ತೆ ತಮ್ಮ ಸ್ಪಷ್ಟ ನುಡಿಗಳಿಂದ ಗಮನ ಸೆಳೆದಿದ್ದಾರೆ. “ನಾವು ಯಾವಾಗಲೂ ಬ್ರ್ಯಾಂಡ್ ಹಿಂದೆ ಹೋಗಬಾರದು, ನಾವೇ ಒಂದು ಬ್ರ್ಯಾಂಡ್” ಎಂದು ಖಡಕ್ ನುಡಿದಿದ್ದಾರೆ.
ಇತ್ತೀಚೆಗೆ ಅವರು ‘ಗತವೈಭವ’ (Gatha Vaibhava) ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಿಂಪಲ್ ಸುನಿ (Simple Suni) ಹಾಗೂ ಅವರ ಕಾಂಬಿನೇಷನ್‌ನ ಸಿನಿಮಾ ನಿಲ್ಲಲು ಕಾರಣ ಏನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ಶಿವಣ್ಣ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಅಗತ್ಯದ ಕುರಿತು ಮಾತನಾಡಿದರು.
“ನನಗೆ ಬಂದ ಭಾಗ್ಯ ಅಂದ್ರೆ ಹೊಸ ಹೊಸ ಡೈರೆಕ್ಟರ್‌ಗಳು ಬರುತ್ತಾರೆ. ಅವರು ಹೊಸ ಕಥೆಗಳನ್ನ ಹೇಳ್ತಾರೆ. ಹೊಸಬರ ಮೇಲೆ ನಂಬಿಕೆ ಇಡ್ಬೇಕು. ನಾವು ಬ್ರ್ಯಾಂಡ್ ಹಿಂದೆ ಹೋಗೋದು ಬಿಡ್ಬೇಕು, ನಾವೇ ಬ್ರ್ಯಾಂಡ್. ಯಾಕೆ ಬ್ರ್ಯಾಂಡ್ ಹಿಂದೆ ಹೋಗ್ಬೇಕು? ನಂಬಿಕೆ ಇಟ್ಟರೆ ಬ್ರ್ಯಾಂಡ್ ಆಗ್ತೀವಿ,” ಎಂದು ಹೇಳಿದರು ಶಿವರಾಜ್‌ಕುಮಾರ್.
ಶಿವಣ್ಣ ಅವರ ಈ ನುಡಿಗಳು ಕನ್ನಡ ಚಿತ್ರರಂಗದ ಯುವ ನಿರ್ದೇಶಕರಿಗೆ ಸ್ಪೂರ್ತಿಯಾಗಿದೆ. ಹೊಸ ಪ್ರತಿಭೆಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಶಿವರಾಜ್‌ಕುಮಾರ್ ಅವರ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.