ಟಿ20 ವಿಶ್ವಕಪ್ ಸೂಪರ್-8: ಪಾಕಿಸ್ತಾನ ಸೆಮಿಫೈನಲ್ ಕನಸು ಇನ್ನೂ ಜೀವಂತ – ಇಂಗ್ಲೆಂಡ್ ಗೆಲುವೇ ಕೀಲಿ |

ಕ್ರೀಡೆ

ಟಿ20 ವಿಶ್ವಕಪ್ ಸೂಪರ್-8: ಪಾಕಿಸ್ತಾನ ಸೆಮಿಫೈನಲ್ ಕನಸು ಇನ್ನೂ ಜೀವಂತ – ಇಂಗ್ಲೆಂಡ್ ಗೆಲುವೇ ಕೀಲಿ

Published

on

ಟಿ20 ವಿಶ್ವಕಪ್ ಸೂಪರ್-8 ಸುತ್ತಿನ ಗ್ರೂಪ್–2 ಹಂತದಲ್ಲಿ ಭಾರೀ ಕುತೂಹಲದ ಲೆಕ್ಕಾಚಾರ ಶುರುವಾಗಿದೆ. ಈಗಾಗಲೇ England ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಆದರೆ Sri Lanka ತಂಡ ಟೂರ್ನಿಯಿಂದ ಎಲಿಮಿನೇಟ್ ಆಗಿದೆ. ಇದೀಗ ಎರಡನೇ ಸೆಮಿಫೈನಲ್ ಸ್ಥಾನಕ್ಕಾಗಿ Pakistan ಮತ್ತು New Zealand ನಡುವೆ ಕಟುವಾದ ಪೈಪೋಟಿ ನಡೆಯುತ್ತಿದೆ.

ಪಾಕಿಸ್ತಾನ ಸೆಮಿಫೈನಲ್ ತಲುಪಬೇಕಾದರೆ ಇಂಗ್ಲೆಂಡ್ ತಂಡದ ಫಲಿತಾಂಶವೇ ನಿರ್ಣಾಯಕ. ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ವಿರುದ್ಧ ಗೆದ್ದರೆ ಮಾತ್ರ ಪಾಕಿಸ್ತಾನಕ್ಕೆ ಅವಕಾಶ ಉಳಿಯಲಿದೆ. ಆದರೆ ಅದು ಮಾತ್ರ ಸಾಕಾಗುವುದಿಲ್ಲ.

ನ್ಯೂಝಿಲೆಂಡ್ ತಂಡವು ಪ್ರಸ್ತುತ ಅತ್ಯುತ್ತಮ ನೆಟ್ ರನ್ ರೇಟ್ (+3.050) ಹೊಂದಿದ್ದು, ಪಾಕಿಸ್ತಾನ (-0.461) ದೊಡ್ಡ ಅಂತರದ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆ ಇದೆ. ಫೆಬ್ರವರಿ 27ರಂದು ಇಂಗ್ಲೆಂಡ್ ನ್ಯೂಝಿಲೆಂಡ್ ಅನ್ನು ಸೋಲಿಸಿ, ಫೆಬ್ರವರಿ 28ರಂದು ಪಾಕಿಸ್ತಾನ ಶ್ರೀಲಂಕಾವನ್ನು ಮಣಿಸಿದರೆ ಎರಡೂ ತಂಡಗಳು 3 ಅಂಕಗಳನ್ನು ಪಡೆಯುತ್ತವೆ. ಆಗ ನಿರ್ಣಯವಾಗುವುದು ನೆಟ್ ರನ್ ರೇಟ್ ಆಧಾರದಲ್ಲಿ.

ಪಾಕಿಸ್ತಾನ ಗೆಲುವಿನ ಲೆಕ್ಕಾಚಾರ ಹೇಗೆ?

ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿದರೆ ಸುಮಾರು 70–80 ರನ್‌ಗಳ ಅಂತರದ ಜಯ ಅಗತ್ಯ. ಚೇಸಿಂಗ್ ಸಂದರ್ಭದಲ್ಲಿ, ಶ್ರೀಲಂಕಾ 160 ರನ್ ನೀಡಿದರೆ ಪಾಕಿಸ್ತಾನವು 12–13 ಓವರ್‌ಗಳಲ್ಲೇ ಗುರಿ ಮುಟ್ಟಬೇಕು. ಅಂದರೆ ಕನಿಷ್ಠ 40–45 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಬೇಕು.

ಇಲ್ಲಿ ಮತ್ತೊಂದು ಮುಖ್ಯ ಅಂಶವೆಂದರೆ, ಇಂಗ್ಲೆಂಡ್ ನ್ಯೂಝಿಲೆಂಡ್ ಅನ್ನು ಎಷ್ಟು ದೊಡ್ಡ ಅಂತರದಿಂದ ಸೋಲಿಸುತ್ತದೆಯೋ, ಪಾಕಿಸ್ತಾನಕ್ಕೆ ಅಷ್ಟೇ ಲೆಕ್ಕಾಚಾರ ಸುಲಭವಾಗುತ್ತದೆ. ನ್ಯೂಝಿಲೆಂಡ್ ಮೇಲೆ ಇಂಗ್ಲೆಂಡ್ ಭಾರಿ ಜಯ ಸಾಧಿಸಿದರೆ, ಪಾಕ್ ತಂಡದ ಸೆಮಿಫೈನಲ್ ಕನಸು ಇನ್ನಷ್ಟು ಬಲపడಲಿದೆ.

Trending

Exit mobile version