WAQF ಕಲಬುರಗಿಯಲ್ಲಿ ಭುಗಿಲೆದ್ದ ವಕ್ಫ್ ವಿವಾದ-ಮಠಕ್ಕೂ ಬಂತು ನೋಟಿಸ್! | Hosa Suddi

ರಾಜಕೀಯ

WAQF ಕಲಬುರಗಿಯಲ್ಲಿ ಭುಗಿಲೆದ್ದ ವಕ್ಫ್ ವಿವಾದ-ಮಠಕ್ಕೂ ಬಂತು ನೋಟಿಸ್!

Published

on

ಕಲಬುರಗಿ: ಕಲಬುರಗಿಯ ಚಿಂಚೋಳಿ ಪಟ್ಟಣದ ಮಹಾಂತೇಶ್ವರ ಮಠಕ್ಕೂ ವಕ್ಫ್ ಬೋರ್ಡ್ ನಿಂದ ನೋಟಿಸ್ ಜಾರಿ ಮಾಡಲಾಗಿದೆ, ಮಠದ 10*7 ಜಾಗ ತಮ್ಮದೆಂದು ವಕ್ಫ್ ಬೋರ್ಡ್ ನೋಟಿಸ್ ನಲ್ಲಿ ಪ್ರತಿಪಾದಿಸಲಾಗಿದೆ, ವಕ್ಫ್ ಬೋರ್ಡ್ ನೋಟಿಸ್ ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ,
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ 45 ಕ್ಕೂ ಹೆಚ್ಚು ರೈತರಿಗೆ ವಕ್ಫ್ ಬೋರ್ಡ್ ನಿಂದ ನೋಟಿಸ್‍ಗಳು ಬಂದಿವೆ, ಈ ನೋಟಿಸ್‍ಗಳಿಂದ ರೈತರು ಆತಂಕಕ್ಕೀಡಾಗಿದ್ದಾರೆ, ರೈತರು ಮಾತ್ರವಲ್ಲದೆ ಲಕ್ಷಾಂತರ ರೂ ಕೊಟ್ಟು ಜಮೀನು ಖರೀದಿ ಮಾಡಿದವರಿಗೂ ಸಂಕಷ್ಟ ಎದುರಾಗಿದೆ,
ಪ್ರಿಯಾಂಕ್ ಖರ್ಗೆ ತವರು ಕಲಬುರಗಿಯಲ್ಲೂ ವಕ್ಫ್ ಬೋರ್ಡ್ ನಿಂದ ಸಮಸ್ಯೆ ಎದುರಾಗಿದೆ, ಜಿಲ್ಲೆಯ ಚಿಂಚೋಳಿ ತಾಲೂಕಿನ 45 ಕ್ಕೂ ಹೆಚ್ಚು ರೈತರಿಗೆ ವಕ್ಫ ಮಂಡಳಿಯಿಂದ ನೋಟಿಸ್ ಬಂದಿದೆ, ಚಿಂಚೋಳಿ ತಾಲೂಕಿನ 45 ಕ್ಕೂ ಹೆಚ್ಚು ರೈತರಿಗೆ ತಹಶೀಲ್ದಾರರು ನೋಟಿಸ್ ನೀಡಿದ್ದು, ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಆಗಿದೆ ಎನ್ನಲಾಗಿದೆ, ನೋಟಿಸ್ ನೋಡಿ ರೈತರು ಕಂಗಾಲಾಗಿದ್ದಾರೆ,

Trending

Exit mobile version