ದೇಶ

2000 ರೂ. ನೋಟು ವಾಪಸಾತಿಗೆ ಇನ್ನೂ ಇದೆ ಕಾಲಾವಕಾಶ-ಆರ್‍ಬಿಐ

ನವದೆಹಲಿ: 2,000 ರೂ ನೋಟುಗಳು ಇನ್ನೂ ಕಾನೂನುಬದ್ಧವಾಗಿದ್ದು ವಾಪಾಸಾತಿಗೆ ಇನ್ನು ಕಾಲಾವಕಾಶವಿದೆ ಎಂದು ಆರ್‍ಬಿಐ ತಿಳಿಸಿದೆ,
2023 ರ ಮೇ 19 ರಂದು 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಆರ್‍ಬಿಐ ಘೋಷಿಸಿತ್ತು, ಇದುವರೆಗೆ ಚಲಾವಣೆಯಲ್ಲಿರುವ 2,000 ರೂ ನೋಟುಗಳನ್ನು 98.08 % ಮರಳಿದೆ ಎಂದು ಆರ್‍ಬಿಐ ಹೇಳಿದೆ,
2023 ಮೇ 19 ರಂದು ಚಲಾವಣೆಯಲ್ಲಿರುವ 2,000 ರೂ ನೋಟುಗಳ ಮೌಲ್ಯವು ರೂ 3.56 ಲಕ್ಷ ಕೋಟಿಗಳಷ್ಟಿತ್ತು, ಅದರೆ 2024 ರ ನವೆಂಬರ್ 29 ರವೇಳೆಗೆ 6,839 ಕೋಟಿ ರೂ ಗೆ ಇಳಿದಿದೆ, 2,000 ರೂ ನೋಟುಗಳು ಕಾನೂನುಬದ್ಧ ಟೆಂಡರ್ ಆಗಿವೆ ಎಂದು ಆರ್‍ಬಿಐ ಮಾಹಿತಿ ನೀಡಿದೆ,
2016 ರ ನವೆಂಬರ್‍ನಲ್ಲಿ 1,000 ಮತ್ತು 500 ರೂ ನೋಟುಗಳ ಅಮಾನ್ಯೀಕರಣದ ನಂತರ 2,000 ರೂ ನೋಟ್ ಅನ್ನು ಬ್ಯಾಂಕ್ ನೋಟುಗಳನ್ನು ಪರಿಚಯಿಸಲಾಯಿತು..

Leave a Reply

Your email address will not be published. Required fields are marked *

Trending

Exit mobile version