ದೇಶ
ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಪುಷ್ಟ-2 ಒಂದು ದಿನದ ಕಲೆಕ್ಷನ್ ಎಷ್ಟು?

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಟಾಲಿವುಡ್ ನ ಪುಷ್ಪ 2 ಸಿನಿಮಾ ಮೊದಲ ದಿನವೇ ಬಾಕ್ಸ್ ಫೀಸ್ ಚಿಂದಿ ಮಾಡಿದೆ, ವಿಶ್ವದಾದ್ಯಂತ ಸುಮಾರು 10 ಸಾವಿರ ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನವಾಗಿದ್ದು ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ, ಎಲ್ಲಾ ಬಾಷೆಗಳಲ್ಲೂ ಉತ್ತಮ ಯಶಸ್ಸು ಕಂಡಿದೆ,
ಪುಷ್ಪ 2 ಮುಂಗಡ ಬುಕಿಂಗ್ ಮೂಲಕವೇ 100 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ, ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ, ಪ್ರೀಮಿಯರ್ ಶೋ ಮೂಲಕ ಚಿತ್ರ 10 ಕೋಟಿ ರೂಪಾಯಿ ಗಳಿಸಿದೆ ಸಿನಿಮಾ ಡಿಸೆಂಬರ್ 5 ರಂದು ಭಾರತದಲ್ಲಿ 165 ಕೋಟಿ ರೂ. ಕಲೆಕ್ಷನ್ ಮಾಡಿದೆ, ವಿಶ್ವಾದ್ಯಂತ ಒಟ್ಟು 250 ಕೋಟಿ ರೂ ಗಳಿಸಿರುವ ಸಾಧ್ಯತೆ ಇದೆ,
ಚಿತ್ರದ ಮೊದಲ ದಿನ ಕಲೆಕ್ಷನ್‍ಗಳ ಲೆಕ್ಕ ಆಯಾ ರಾಜ್ಯದಲ್ಲಿ ವಿಭಿನ್ನವಾಗಿ ಇದೆ, ಕರ್ನಾಟಕದಲ್ಲಿ ಡೆಲ್ ಇದ್ದರೂ ದಕ್ಷಿಣದ ಇತರ ರಾಜ್ಯಗಳಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ,
ಭಾರತದಲ್ಲಿ ಆರ್‍ಆರ್‍ಆರ್ ಚಿತ್ರ ಮೊದಲ ದಿನ 133 ಕೋಟಿ ರೂಪಾಯಿ ಗಳಿಸಿತ್ತು, ಬಾಹುಬಲಿ 121 ಕೋಟಿ, ಕೆಜಿಎಫ್ 2 116 ಕೋಟಿ ರೂಪಾಯಿ ಗಳಿಸಿತ್ತು, ಈ ಎಲ್ಲಾ ದಾಖಲೆಗಳನ್ನು ಪುಷ್ಪ 2 ಮುರಿದಿದೆ,