ದೇಶ
ಮೈಸೂರು ರಾಜಕುಮಾರನಿಗೆ ಸಂಪಿಗೆ ಮರದಲ್ಲಿ ತೊಟ್ಟಿಲ ಶಾಸ್ತ್ರ!

ಮೈಸೂರು: ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಮಗು ಜನನ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಯದುವಂಶಸ್ಧರಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ಮಾಡಲಾಗಿದೆ,
ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿರುವ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಪೂಜೆ ಸಲ್ಲಿಸಲಗಿದ್ದು, ಯದುವಂಶಸ್ಧರ ಕುಲದೇವತೆಯಾಗಿರುವ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ನಡೆದ ಸಾಂಪ್ರದಾಯಿಕ ಪೂಜೆ ನೆರವೇರಿದೆ, ನವರಾತ್ರಿ ಸಂದರ್ಭದಲ್ಲಿ ಗಂಡು ಮಗುವಿಗೆ ತ್ರಿಷಿಕಾ ಕುಮಾರಿ ಜನ್ಮ ನೀಡಿದ್ದರು,
ಈ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಯದುವೀರ್ ಮತ್ತು ಪುತ್ರ ಆದ್ಯವೀರ್ ವಿಂಚಿದ್ದಾರೆ, ಪ್ರಮೋದಾದೇವಿ ಒಡೆಯರ್, ತ್ರಿಷಿಕಾಕುಮಾರಿ ಉಪಸ್ದಿತರಿದ್ದಾರೆ, ಚಾಮುಂಡಿ ಬೆಟ್ಟದ ಪ್ರಧಾನ ಆಗಮಿಕರಾದ ಶಶಿಶೇಖರ್ ದೀಕ್ಷಿತ್ ಅವರಿಂದ ಪೂಜಾ ವಿಧಿಗಳು ನೆರವೇರಿಕೆ ಮಾಡಲಾಗಿದೆ, ಇದೇ ಮೊದಲ ಬಾರಿಗೆ ಯದುವೀರ್ ದಂಪತಿಯ ಎರಡನೇ ಪುತ್ರನ ಫೋಟೋ ರಿವೀಲ್ ಆಗಿದೆ,