ಕ್ರೀಡೆ
ಭಾರತೀಯ ಬ್ಯಾಟರ್‌ಗಳಲ್ಲಿ ತಾಂತ್ರಿಕ ಕೊರತೆಗಳಿವೆ, ಅವರು ಹೆಚ್ಚು ದೇಶಿ ಕ್ರಿಕೆಟ್ ಆಡಬೇಕು: ಸುನಿಲ್ ಗವಾಸ್ಕರ್ – SUNIL GAVASKAR
ಸಿಡ್ನಿ(ಆಸ್ಟ್ರೇಲಿಯಾ): ಮುಂದಿನ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೂ ಮುನ್ನ ಭಾರತ ಕ್ರಿಕೆಟ್ ತಂಡದ ಆಟಗಾರರು ಹೆಚ್ಚು ದೇಶಿ ಕ್ರಿಕೆಟ್ ಆಡುವುದನ್ನು ಮುಖ್ಯ ಕೋಚ್ ಖಾತ್ರಿಪಡಿಸಿಕೊಳ್ಳಬೇಕು ಎಂದು ಭಾರತದ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಅದೇ ರೀತಿ, ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾಗಿಯೂ ದೇಶಿ ಕ್ರಿಕೆಟ್‌ನಿಂದ ಹೊರಗುಳಿಯಲು ಬಯಸುವ ಕ್ರಿಕೆಟಿಗರ ವಿರುದ್ಧ ಮುಲಾಜಿಲ್ಲದೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಬ್ಯಾಟಿಂಗ್ ಲೈನಪ್‌ನಲ್ಲಿ ಕಂಡುಬಂದ ತಾಂತ್ರಿಕ ಕೌಶಲಗಳ ಕೊರತೆಗಳ ಕುರಿತು ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯವಾಗಿ, ನಾಯಕ ರೋಹಿತ್ ಶರ್ಮಾ (3 ಪಂದ್ಯ ಮತ್ತು 5 ಇನ್ನಿಂಗ್ಸ್‌ನಲ್ಲಿ 6.20ರ ಸರಾಸರಿಯಲ್ಲಿ 31 ರನ್), ವಿರಾಟ್ ಕೊಹ್ಲಿ (5 ಪಂದ್ಯ ಮತ್ತು 9 ಇನ್ನಿಂಗ್ಸ್‌ನಲ್ಲಿ 23.75ರ ಸರಾಸರಿಯಲ್ಲಿ 190 ರನ್) ಇಬ್ಬರೂ ಕೂಡಾ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ವಿಫಲರಾಗಿದ್ದರು. ವಿರಾಟ್ ಕೊಹ್ಲಿ ಇಡೀ ಟೂರ್ನಿಯಾದ್ಯಂತ ಔಟ್‌ಸೈಡ್ ಆಫ್ ಸ್ಟಂಪ್‌ನಲ್ಲೇ ಆಸೀಸ್ ಆಟಗಾರರಿಗೆ ಸುಲಭವಾಗಿ ವಿಕೆಟ್ ನೀಡಿ ಪೆವಿಲಿಯನ್ ಸೇರುತ್ತಿದ್ದರು. ವೇಗದ ಬೌಲರ್ ಸ್ಕಾಟ್ ಬಾಲೆಂಡ್ ಕೊಹ್ಲಿಯನ್ನು ನಾಲ್ಕು ಬಾರಿ ಔಟ್ ಮಾಡಿದ್ದರು ಎಂಬುದು ಗಮನಾರ್ಹ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಜೊತೆ ಭಾರತದ ಬ್ಯಾಟಿಂಗ್ ವೈಫಲ್ಯದ ಕುರಿತು ಮಾತನಾಡಿದ ಗವಾಸ್ಕರ್, “ನಾನು ಭಾರತೀಯ ಬ್ಯಾಟರ್‌ಗಳಲ್ಲಿ ತಾಂತ್ರಿಕ ಕೊರತೆಗಳನ್ನು ಕಂಡೆ. ಮಾಡಿದ ತಪ್ಪನ್ನೇ ಅವರು ಮತ್ತೆ ಮತ್ತೆ ಮಾಡುತ್ತಿದ್ದಾರೆ. ಇದೊಂದೇ ಸರಣಿಯನ್ನು ಉದ್ದೇಶಿಸಿ ನಾನು ಮಾತನಾಡುತ್ತಿಲ್ಲ. ಇದಕ್ಕೂ ಹಿಂದಿನ ನ್ಯೂಜಿಲೆಂಡ್ ಸರಣಿಯ ಕುರಿತು ಕೂಡಾ ಮಾತನಾಡುತ್ತಿದ್ದೇನೆ. ನೀವು ನ್ಯೂಜಿಲೆಂಡ್ ವಿರುದ್ಧ ಭಾರತದಲ್ಲಿ ಹೇಗೆ ಆಡಿದ್ದೀರಿ? ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಆವೃತ್ತಿ ಜೂನ್‌ನಿಂದ ಆರಂಭವಾಗಲಿದೆ. ಈ ಬಾರಿ ನಾವು ಅರ್ಹತೆ ಪಡೆದಿಲ್ಲ. ಹೀಗಾಗಿ, ಇಂದಿನಿಂದಲೇ ಸರಿಯಾದ ಸಿದ್ಧತೆ ನಡೆಸಬೇಕು. ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರೆ ಮಾತ್ರ ನಾವು ಅವರನ್ನು ಎದುರಿಸಬಹುದು” ಎಂದು ಹೇಳಿದರು.
ರಣಜಿ ಕ್ರಿಕೆಟ್ ಆಡಲೇಬೇಕು: ಈ ನಿಟ್ಟಿನಲ್ಲಿ ಮುಂಬರುವ ರಣಜಿ ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರು ಆಡಲೇಬೇಕು ಎಂದು ಒತ್ತಾಯಿಸಿರುವ ಗವಾಸ್ಕರ್, “ಜನವರಿ 23ರಿಂದ ರಣಜಿ ಟ್ರೋಫಿಯ ಮುಂದಿನ ಹಂತ ನಡೆಯುತ್ತದೆ. ಎಷ್ಟು ಮಂದಿ ಈ ತಂಡದಿಂದ ಆಡುತ್ತಾರೆ, ಎಷ್ಟು ಮಂದಿ ರಣಜಿಗೆ ಲಭ್ಯವಾಗುತ್ತಾರೆ ನೋಡೋಣ. ಈ ಪಂದ್ಯಗಳಲ್ಲಿ ಆಡದೇ ಇರುವವರ ವಿಚಾರವಾಗಿ ಯಾವುದೇ ಸಬೂಬು, ನೆಪ, ಸಮರ್ಥನೆಗೆ ಅವಕಾಶವೇ ಇರಕೂಡದು. ಒಂದು ವೇಳೆ ಆಡದೇ ಇದ್ದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು. ಆಟಗಾರರಲ್ಲಿ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ನಮಗೆ ನಿಮ್ಮಲ್ಲಿ ಬದ್ಧತೆ ಬೇಕು. ನೀವು ಸೂಕ್ತ ರೀತಿಯಲ್ಲಿ ಆಡುತ್ತಿಲ್ಲ. ನೀವು ಏನೆಲ್ಲಾ ಮಾಡಬೇಕೋ ಮಾಡಿ. ಇಲ್ಲದೇ ಹೋದರೆ ನಿಮಗೆ ಟೆಸ್ಟ್ ತಂಡದಲ್ಲಿ ಸ್ಥಾನವಿರದು” ಎಂದು ಚಾಟಿ ಬೀಸಿದರು.
ದೃಢ ನಿರ್ಧಾರಕ್ಕೆ ಬದ್ಧತೆಯ ಕೊರತೆ: ಆಸ್ಟೇಲಿಯಾ ವಿರುದ್ಧ ಭಾರತದ ಬ್ಯಾಟಿಂಗ್ ಲೈನಪ್‌ನಿಂದ ಶತಕಗಳ ಕೊರತೆಯ ಕುರಿತು ಮಾತನಾಡಿದ ಗವಾಸ್ಕರ್, “ಯಶಸ್ವಿ ಜೈಸ್ವಾಲ್ ಮತ್ತು ನಿತಿಶ್ ಕುಮಾರ್ ರೆಡ್ಡಿ ಮಾತ್ರ ತಲಾ ಒಂದೊಂದು ಶತಕ ಬಾರಿಸಿದರು. ಇಲ್ಲಿ ತಂಡದ ಬದ್ಧತೆ, ಯೋಜನೆ, ಯೋಚನೆಗಳ ಅನ್ವಯಿಸುವಿಕೆ ಅತ್ಯಂತ ಕೆಳ ಮಟ್ಟದಲ್ಲಿರುವುದು ಕಾಣುತ್ತದೆ. ಎಷ್ಟು ಮಂದಿ ಭಾರತದ ಬ್ಯಾಟರ್‌ಗಳ ಶತಕ ಬಾರಿಸಿದರು?, ಮೊದಲ ಟೆಸ್ಟ್‌ನಲ್ಲಿ ಮೂಡಿಬಂದ ಎರಡು ಶತಕಗಳನ್ನು ಹೊರತುಪಡಿಸಿದರೆ ನಿತೀಶ್ ರೆಡ್ಡಿ ಮಾತ್ರ ಶತಕ ಬಾರಿಸಿದ್ದಾರೆ. ಎಷ್ಟು ಮಂದಿ ಆಟಗಾರರು ಅರ್ಧ ಶತಕ ಸಿಡಿಸಿದರು?, ಶತಕ ಸಿಡಿಸುವುದು ಸುಲಭವಲ್ಲ ಎಂದು ನೀವು ಹೇಳಬಹುದು. ಆದರೆ, ಎಷ್ಟು ಮಂದಿ ಆಟಗಾರರು ಕನಿಷ್ಠ ಅರ್ಧ ಶತಕ ಸಿಡಿಸಿ ಪಂದ್ಯ ಗತಿಯನ್ನು ಬದಲಿಸಲು ಪ್ರಯತ್ನಿಸಿದರು?, ಇದು ನಡೆಯಲೇ ಇಲ್ಲ, ಏಕೆಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅನ್ವಯಿಸುವಿಕೆ ಬಹಳ ಮುಖ್ಯ. ಹಾಗಾಗಿ ಈ ಅನ್ವಯಿಸುವಿಕೆ ಮತ್ತು ಗಟ್ಟಿ ನಿರ್ಧಾರ ತೆಗೆದುಕೊಳ್ಳುವಲ್ಲಿನ ಬದ್ಧತೆಯ ಕೊರತೆ ಕಂಡುಬಂತು” ಎಂದರು.
ಕ್ರೀಡೆ
IPL 2026ಕ್ಕೆ BCCI ಹೊಸ ನಿಯಮ: ಬೌಂಡರಿ ಬಳಿ ‘ಎಕ್ಸ್ಟ್ರಾ’ ಆಟಗಾರರಿಗೆ ಎಂಟ್ರಿ ಬ್ಯಾನ್!
ಮುಂಬೈ: Indian Premier League (IPL 2026) ಮುನ್ನ ಪಂದ್ಯಗಳ ಶಿಸ್ತು ಕಾಪಾಡಲು Board of Control for Cricket in India ಮಹತ್ವದ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಮೈದಾನದಲ್ಲಿ ಕಂಡುಬರುವ ಗೊಂದಲ ಮತ್ತು ಅನಗತ್ಯ ಆಟಗಾರರ ಓಡಾಟವನ್ನು ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ನಿಯಮದ ಪ್ರಕಾರ, ಪಂದ್ಯಕ್ಕೆ ಮುನ್ನ ತಂಡದ ಪಟ್ಟಿಯಲ್ಲಿ ಹೆಸರು ಪಡೆದಿರುವ 16 ಆಟಗಾರರು (ಪ್ಲೇಯಿಂಗ್ 11 + 5 ಬದಲಿ) ಮಾತ್ರ ಮೈದಾನಕ್ಕೆ ಪ್ರವೇಶಿಸಬಹುದು. ಡ್ರಿಂಕ್ಸ್ ತರುವುದು, ಬ್ಯಾಟ್ ನೀಡುವುದು ಅಥವಾ ಸಂದೇಶ ಸಾಗಿಸುವುದು ಈ ಆಟಗಾರರ ಜವಾಬ್ದಾರಿ ಆಗಿರುತ್ತದೆ.
ಇದಕ್ಕೂ ಮೊದಲು ಎಕ್ಸ್ಟ್ರಾ ಸ್ಕ್ವಾಡ್ ಸದಸ್ಯರು ಸಹ ಮೈದಾನಕ್ಕೆ ಬಂದು ಸಹಾಯ ಮಾಡುತ್ತಿದ್ದರು. ಆದರೆ ಇನ್ನುಮುಂದೆ ಅವರಿಗೆ ಮೈದಾನ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಅವರು ಕಡ್ಡಾಯವಾಗಿ ಡಗೌಟ್‌ನಲ್ಲಿಯೇ ಇರಬೇಕು.
ಇದಲ್ಲದೆ, ಬೌಂಡರಿ ಲೈನ್ ಬಳಿ ಇರುವ ಆಟಗಾರರ ಸಂಖ್ಯೆಯನ್ನೂ ನಿಯಂತ್ರಿಸಲಾಗಿದೆ. ಯಾವುದೇ ಸಮಯದಲ್ಲಿ ಕೇವಲ 5 ಆಟಗಾರರಿಗೆ ಮಾತ್ರ ಬೌಂಡರಿ ಬಳಿ ಇರಲು ಅವಕಾಶವಿದೆ. ಅವರು ‘ಬಿಬ್ಸ್’ ಧರಿಸಿಕೊಂಡು ಚೆಂಡು ಸಂಗ್ರಹಿಸುವುದು ಅಥವಾ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿರಬೇಕು.
ಈ ನಿಯಮಗಳ ಮುಖ್ಯ ಉದ್ದೇಶ ಮೈದಾನದಲ್ಲಿ ಶಿಸ್ತು ಕಾಪಾಡುವುದು, ಅನಗತ್ಯ ಸಮಯ ವ್ಯಯ ತಡೆಯುವುದು ಹಾಗೂ ಟಿವಿ ಪ್ರಸಾರದ ಗುಣಮಟ್ಟವನ್ನು ಉತ್ತಮಗೊಳಿಸುವುದಾಗಿದೆ.
ಒಟ್ಟಿನಲ್ಲಿ, IPL 2026ನಲ್ಲಿ ಈ ಹೊಸ ನಿಯಮಗಳು ಪಂದ್ಯಗಳ ರೂಪವನ್ನು ಬದಲಾಯಿಸುವ ಸಾಧ್ಯತೆ ಇದ್ದು, ತಂಡಗಳು ತಮ್ಮ ತಂತ್ರವನ್ನು ಬದಲಾಯಿಸಬೇಕಾಗಬಹುದು.
ಕ್ರೀಡೆ
ಕೊಹ್ಲಿ ಹೋಲಿಕೆಗೆ ಬಾಬರ್ ಅಜಮ್ ಕಿಡಿ: ಪತ್ರಿಕಾಗೋಷ್ಠಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ
ಕರಾಚಿ: ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ Babar Azam ಮತ್ತೆ ಸುದ್ದಿಯಲ್ಲಿದ್ದಾರೆ. Pakistan Super League (PSL 2026) ವೇಳೆ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವುದು ವೈರಲ್ ಆಗಿದೆ.
ಪೇಶಾವರ್ ಝಲ್ಮಿ ತಂಡದ ನಾಯಕನಾಗಿರುವ ಬಾಬರ್, ಹೈದರಾಬಾದ್ ಕಿಂಗ್ಸ್‌ಮೆನ್ ವಿರುದ್ಧದ ಪಂದ್ಯದಲ್ಲಿ 43 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ ಪಂದ್ಯವನ್ನು ಕೊನೆಗೊಳಿಸದೆ ಔಟ್ ಆದ ಬಗ್ಗೆ ಪ್ರಶ್ನೆ ಕೇಳಲಾಯಿತು. ವಿಶೇಷವಾಗಿ, ಅವರನ್ನು Virat Kohli ಜತೆ ಹೋಲಿಸಿ ಪ್ರಶ್ನೆ ಕೇಳಿದಾಗ ಬಾಬರ್ ಅಸಮಾಧಾನ ವ್ಯಕ್ತಪಡಿಸಿದರು.
“ಈ ಹೋಲಿಕೆಗಳನ್ನು ಇಲ್ಲಿ ಮುಗಿಸಿಬಿಡಿ. ನಿಮ್ಮಲ್ಲೇ ಇಟ್ಟುಕೊಳ್ಳಿ. ಪಂದ್ಯವನ್ನು ಫಿನಿಶ್ ಮಾಡಿಲ್ಲ ಎಂಬುದು ತಪ್ಪು ಕಲ್ಪನೆ” ಎಂದು ಅವರು ಸ್ಪಷ್ಟವಾಗಿ ಹೇಳಿದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಬಾಬರ್ ಅಜಮ್ ಅವರನ್ನು ಪಾಕಿಸ್ತಾನದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾದರೂ, ಟಿ20 ಕ್ರಿಕೆಟ್‌ನಲ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ಈ PSL ಸೀಸನ್‌ನಲ್ಲಿ ಅವರು ಎರಡು ಪಂದ್ಯಗಳಲ್ಲಿ 82 ರನ್ ಗಳಿಸಿದ್ದರೂ, ಸ್ಟ್ರೈಕ್ ರೇಟ್ ಮತ್ತು ಬೌಂಡರಿಗಳ ಕೊರತೆ ಚರ್ಚೆಗೆ ಕಾರಣವಾಗಿದೆ.
ಒಟ್ಟಿನಲ್ಲಿ, ಕೊಹ್ಲಿ ಹೋಲಿಕೆ ಪ್ರಶ್ನೆ ಮತ್ತೆ ಬಾಬರ್ ಮೇಲೆ ಒತ್ತಡ ಹೆಚ್ಚಿಸಿದ್ದು, ಮುಂದಿನ ಪಂದ್ಯಗಳಲ್ಲಿ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕ್ರೀಡೆ
ಚಿನ್ನಸ್ವಾಮಿಯಲ್ಲಿ ರನ್ ಮಳೆ: ಆರ್ಸಿಬಿ 250 ರನ್ ಸಿಡಿತ!
ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣನಲ್ಲಿ ನಡೆಯುತ್ತಿರುವ Indian Premier League ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಆರ್ಸಿಬಿಗೆ ಬ್ಯಾಟಿಂಗ್ ಆಹ್ವಾನಿಸಿದರು. ಆರಂಭದಲ್ಲಿ ವಿರಾಟ್ ಕೊಹ್ಲಿ (28) ಬೇಗ ಔಟ್ ಆದರೂ, ಫಿಲ್ ಸಾಲ್ಟ್ (46) ತಂಡಕ್ಕೆ ವೇಗ ನೀಡಿದರು.
ಆದರೆ, ನಂತರದ ಹಂತದಲ್ಲಿ ಆರ್ಸಿಬಿ ಬ್ಯಾಟಿಂಗ್ ಭರ್ಜರಿಯಾಗಿ ಸಿಡಿಯಿತು. ದೇವದತ್ತ ಪಡಿಕಲ್ (50) ಅರ್ಧಶತಕ ಸಿಡಿಸಿ ತಂಡಕ್ಕೆ ಬಲ ನೀಡಿದರೆ, ನಾಯಕ ರಜತ್ ಪಾಟೀದಾರ್ (48*) ವೇಗದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಟಿಮ್ ಡೇವಿಡ್ (70*) ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳಿಂದ ಚೆನ್ನೈ ಬೌಲರ್ಗಳನ್ನು ಕಂಗೆಡಿಸಿದರು.
ಪವರ್ಪ್ಲೇಯಲ್ಲೇ ವಿಕೆಟ್ ಪಡೆಯಲು ವಿಫಲವಾದ ಸಿಎಸ್ಕೆ ಬೌಲರ್ಗಳು ಮತ್ತೆ ಅದೇ ತಪ್ಪನ್ನು ಮುಂದುವರೆಸಿದರು. ಪರಿಣಾಮವಾಗಿ, ಆರ್ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರೀ 250 ರನ್ ಗಳಿಸಿತು.
ಈ ಬೃಹತ್ ಗುರಿಯನ್ನು ಬೆನ್ನತ್ತುತ್ತಿರುವ ಸಿಎಸ್ಕೆ, ತನ್ನ ಮೊದಲ ಗೆಲುವು ದಾಖಲಿಸಬಹುದೇ ಎಂಬುದು ಈಗ ಕುತೂಹಲ ಮೂಡಿಸಿದೆ.
ಆರ್ಸಿಬಿ ಬ್ಯಾಟಿಂಗ್ ವಿವರ:
- ವಿರಾಟ್ ಕೊಹ್ಲಿ – 28 (18)
- ಫಿಲ್ ಸಾಲ್ಟ್ – 46 (30)
- ದೇವದತ್ತ ಪಡಿಕಲ್ – 50 (29)
- ರಜತ್ ಪಾಟೀದಾರ್ – 48* (19)
- ಟಿಮ್ ಡೇವಿಡ್ – 70* (25)
-
ದೇಶ10 hours agoಇಸ್ಲಾಮಾಬಾದ್ನಲ್ಲಿ ಅಮೆರಿಕಾ-ಇರಾನ್ ಶಾಂತಿ ಮಾತುಕತೆ: 2 ದಿನ ಸಾರ್ವಜನಿಕ ರಜೆ ಘೋಷಣೆ
-
ಚುನಾವಣೆ13 hours agoತಮಿಳುನಾಡು ರಾಜಕೀಯಕ್ಕೆ ವಿಜಯ್ ಎಂಟ್ರಿ: ‘ಟಿವಿಕೆ’ ಭವಿಷ್ಯ ಏನು?
-
ದೇಶ13 hours agoAAP ಒಳಗಲ್ಲಾಟ: ರಾಘವ್ ಚಡ್ಡಾ sidelined ಆಗಿರುವ ಹಿನ್ನಲೆ ಏನು?
-
ದೇಶ17 hours agoಬಿಕಿನಿ ಬ್ಲೌಸ್ ಜೊತೆ ಸೀರೆ: ಆಕಾಂಕ್ಷಾ ಪುರಿಗೆ ಟ್ರೋಲ್ ಮಳೆ!
-
ದೇಶ17 hours agoBeauty Tips : ಟ್ಯಾನಿಂಗ್ ಸಮಸ್ಯೆಗೆ ಮನೆಮದ್ದು: ಅರಿಶಿನದ ಅದ್ಭುತ ಪ್ರಯೋಜನ
-
ದೇಶ9 hours agoಪಾಕಿಸ್ತಾನ ಮಧ್ಯಸ್ಥಿಕೆ ವಿರುದ್ಧ ಇಸ್ರೇಲ್ ಆಕ್ಷೇಪ: ಅಮೆರಿಕಾ-ಇರಾನ್ ಮಾತುಕತೆಗೆ ಹೊಸ ತಿರುವು
-
ಕ್ರೀಡೆ9 hours agoಕೊಹ್ಲಿ ಹೋಲಿಕೆಗೆ ಬಾಬರ್ ಅಜಮ್ ಕಿಡಿ: ಪತ್ರಿಕಾಗೋಷ್ಠಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ
-
ದೇಶ17 hours agoಪಾಕ್ PM ಪೋಸ್ಟ್ ಗೊಂದಲ: ‘ಡ್ರಾಫ್ಟ್’ ಬಿಟ್ಟು ಬಿಟ್ಟ ತಪ್ಪು ವೈರಲ್!
