Connect with us

ಕ್ರೀಡೆ

ಭಾರತೀಯ ಬ್ಯಾಟರ್‌ಗಳಲ್ಲಿ ತಾಂತ್ರಿಕ ಕೊರತೆಗಳಿವೆ, ಅವರು ಹೆಚ್ಚು ದೇಶಿ ಕ್ರಿಕೆಟ್ ಆಡಬೇಕು: ಸುನಿಲ್ ಗವಾಸ್ಕರ್ – SUNIL GAVASKAR

Published

on

ಸಿಡ್ನಿ(ಆಸ್ಟ್ರೇಲಿಯಾ): ಮುಂದಿನ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೂ ಮುನ್ನ ಭಾರತ ಕ್ರಿಕೆಟ್‌ ತಂಡದ ಆಟಗಾರರು ಹೆಚ್ಚು ದೇಶಿ ಕ್ರಿಕೆಟ್‌ ಆಡುವುದನ್ನು ಮುಖ್ಯ ಕೋಚ್‌ ಖಾತ್ರಿಪಡಿಸಿಕೊಳ್ಳಬೇಕು ಎಂದು ಭಾರತದ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಅದೇ ರೀತಿ, ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾಗಿಯೂ ದೇಶಿ ಕ್ರಿಕೆಟ್‌ನಿಂದ ಹೊರಗುಳಿಯಲು ಬಯಸುವ ಕ್ರಿಕೆಟಿಗರ ವಿರುದ್ಧ ಮುಲಾಜಿಲ್ಲದೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಬಾರ್ಡರ್‌-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಬ್ಯಾಟಿಂಗ್‌ ಲೈನಪ್‌ನಲ್ಲಿ ಕಂಡುಬಂದ ತಾಂತ್ರಿಕ ಕೌಶಲಗಳ ಕೊರತೆಗಳ ಕುರಿತು ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯವಾಗಿ, ನಾಯಕ ರೋಹಿತ್ ಶರ್ಮಾ (3 ಪಂದ್ಯ ಮತ್ತು 5 ಇನ್ನಿಂಗ್ಸ್‌ನಲ್ಲಿ 6.20ರ ಸರಾಸರಿಯಲ್ಲಿ 31 ರನ್‌), ವಿರಾಟ್ ಕೊಹ್ಲಿ (5 ಪಂದ್ಯ ಮತ್ತು 9 ಇನ್ನಿಂಗ್ಸ್‌ನಲ್ಲಿ 23.75ರ ಸರಾಸರಿಯಲ್ಲಿ 190 ರನ್) ಇಬ್ಬರೂ ಕೂಡಾ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ವಿಫಲರಾಗಿದ್ದರು. ವಿರಾಟ್ ಕೊಹ್ಲಿ ಇಡೀ ಟೂರ್ನಿಯಾದ್ಯಂತ ಔಟ್‌ಸೈಡ್‌ ಆಫ್ ಸ್ಟಂಪ್‌ನಲ್ಲೇ ಆಸೀಸ್ ಆಟಗಾರರಿಗೆ ಸುಲಭವಾಗಿ ವಿಕೆಟ್‌ ನೀಡಿ ಪೆವಿಲಿಯನ್ ಸೇರುತ್ತಿದ್ದರು. ವೇಗದ ಬೌಲರ್ ಸ್ಕಾಟ್‌ ಬಾಲೆಂಡ್ ಕೊಹ್ಲಿಯನ್ನು ನಾಲ್ಕು ಬಾರಿ ಔಟ್‌ ಮಾಡಿದ್ದರು ಎಂಬುದು ಗಮನಾರ್ಹ.

ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ ಜೊತೆ ಭಾರತದ ಬ್ಯಾಟಿಂಗ್ ವೈಫಲ್ಯದ ಕುರಿತು ಮಾತನಾಡಿದ ಗವಾಸ್ಕರ್, “ನಾನು ಭಾರತೀಯ ಬ್ಯಾಟರ್‌ಗಳಲ್ಲಿ ತಾಂತ್ರಿಕ ಕೊರತೆಗಳನ್ನು ಕಂಡೆ. ಮಾಡಿದ ತಪ್ಪನ್ನೇ ಅವರು ಮತ್ತೆ ಮತ್ತೆ ಮಾಡುತ್ತಿದ್ದಾರೆ. ಇದೊಂದೇ ಸರಣಿಯನ್ನು ಉದ್ದೇಶಿಸಿ ನಾನು ಮಾತನಾಡುತ್ತಿಲ್ಲ. ಇದಕ್ಕೂ ಹಿಂದಿನ ನ್ಯೂಜಿಲೆಂಡ್‌ ಸರಣಿಯ ಕುರಿತು ಕೂಡಾ ಮಾತನಾಡುತ್ತಿದ್ದೇನೆ. ನೀವು ನ್ಯೂಜಿಲೆಂಡ್‌ ವಿರುದ್ಧ ಭಾರತದಲ್ಲಿ ಹೇಗೆ ಆಡಿದ್ದೀರಿ? ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಮುಂದಿನ ಆವೃತ್ತಿ ಜೂನ್‌ನಿಂದ ಆರಂಭವಾಗಲಿದೆ. ಈ ಬಾರಿ ನಾವು ಅರ್ಹತೆ ಪಡೆದಿಲ್ಲ. ಹೀಗಾಗಿ, ಇಂದಿನಿಂದಲೇ ಸರಿಯಾದ ಸಿದ್ಧತೆ ನಡೆಸಬೇಕು. ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರೆ ಮಾತ್ರ ನಾವು ಅವರನ್ನು ಎದುರಿಸಬಹುದು” ಎಂದು ಹೇಳಿದರು.

ರಣಜಿ ಕ್ರಿಕೆಟ್‌ ಆಡಲೇಬೇಕು: ಈ ನಿಟ್ಟಿನಲ್ಲಿ ಮುಂಬರುವ ರಣಜಿ ಕ್ರಿಕೆಟ್‌ ಪಂದ್ಯಗಳಲ್ಲಿ ಆಟಗಾರರು ಆಡಲೇಬೇಕು ಎಂದು ಒತ್ತಾಯಿಸಿರುವ ಗವಾಸ್ಕರ್, “ಜನವರಿ 23ರಿಂದ ರಣಜಿ ಟ್ರೋಫಿಯ ಮುಂದಿನ ಹಂತ ನಡೆಯುತ್ತದೆ. ಎಷ್ಟು ಮಂದಿ ಈ ತಂಡದಿಂದ ಆಡುತ್ತಾರೆ, ಎಷ್ಟು ಮಂದಿ ರಣಜಿಗೆ ಲಭ್ಯವಾಗುತ್ತಾರೆ ನೋಡೋಣ. ಈ ಪಂದ್ಯಗಳಲ್ಲಿ ಆಡದೇ ಇರುವವರ ವಿಚಾರವಾಗಿ ಯಾವುದೇ ಸಬೂಬು, ನೆಪ, ಸಮರ್ಥನೆಗೆ ಅವಕಾಶವೇ ಇರಕೂಡದು. ಒಂದು ವೇಳೆ ಆಡದೇ ಇದ್ದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು. ಆಟಗಾರರಲ್ಲಿ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ನಮಗೆ ನಿಮ್ಮಲ್ಲಿ ಬದ್ಧತೆ ಬೇಕು. ನೀವು ಸೂಕ್ತ ರೀತಿಯಲ್ಲಿ ಆಡುತ್ತಿಲ್ಲ. ನೀವು ಏನೆಲ್ಲಾ ಮಾಡಬೇಕೋ ಮಾಡಿ. ಇಲ್ಲದೇ ಹೋದರೆ ನಿಮಗೆ ಟೆಸ್ಟ್ ತಂಡದಲ್ಲಿ ಸ್ಥಾನವಿರದು” ಎಂದು ಚಾಟಿ ಬೀಸಿದರು.

ದೃಢ ನಿರ್ಧಾರಕ್ಕೆ ಬದ್ಧತೆಯ ಕೊರತೆ: ಆಸ್ಟೇಲಿಯಾ ವಿರುದ್ಧ ಭಾರತದ ಬ್ಯಾಟಿಂಗ್‌ ಲೈನಪ್‌ನಿಂದ ಶತಕಗಳ ಕೊರತೆಯ ಕುರಿತು ಮಾತನಾಡಿದ ಗವಾಸ್ಕರ್, “ಯಶಸ್ವಿ ಜೈಸ್ವಾಲ್ ಮತ್ತು ನಿತಿಶ್ ಕುಮಾರ್ ರೆಡ್ಡಿ ಮಾತ್ರ ತಲಾ ಒಂದೊಂದು ಶತಕ ಬಾರಿಸಿದರು. ಇಲ್ಲಿ ತಂಡದ ಬದ್ಧತೆ, ಯೋಜನೆ, ಯೋಚನೆಗಳ ಅನ್ವಯಿಸುವಿಕೆ ಅತ್ಯಂತ ಕೆಳ ಮಟ್ಟದಲ್ಲಿರುವುದು ಕಾಣುತ್ತದೆ. ಎಷ್ಟು ಮಂದಿ ಭಾರತದ ಬ್ಯಾಟರ್‌ಗಳ ಶತಕ ಬಾರಿಸಿದರು?, ಮೊದಲ ಟೆಸ್ಟ್‌ನಲ್ಲಿ ಮೂಡಿಬಂದ ಎರಡು ಶತಕಗಳನ್ನು ಹೊರತುಪಡಿಸಿದರೆ ನಿತೀಶ್ ರೆಡ್ಡಿ ಮಾತ್ರ ಶತಕ ಬಾರಿಸಿದ್ದಾರೆ. ಎಷ್ಟು ಮಂದಿ ಆಟಗಾರರು ಅರ್ಧ ಶತಕ ಸಿಡಿಸಿದರು?, ಶತಕ ಸಿಡಿಸುವುದು ಸುಲಭವಲ್ಲ ಎಂದು ನೀವು ಹೇಳಬಹುದು. ಆದರೆ, ಎಷ್ಟು ಮಂದಿ ಆಟಗಾರರು ಕನಿಷ್ಠ ಅರ್ಧ ಶತಕ ಸಿಡಿಸಿ ಪಂದ್ಯ ಗತಿಯನ್ನು ಬದಲಿಸಲು ಪ್ರಯತ್ನಿಸಿದರು?, ಇದು ನಡೆಯಲೇ ಇಲ್ಲ, ಏಕೆಂದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನ್ವಯಿಸುವಿಕೆ ಬಹಳ ಮುಖ್ಯ. ಹಾಗಾಗಿ ಈ ಅನ್ವಯಿಸುವಿಕೆ ಮತ್ತು ಗಟ್ಟಿ ನಿರ್ಧಾರ ತೆಗೆದುಕೊಳ್ಳುವಲ್ಲಿನ ಬದ್ಧತೆಯ ಕೊರತೆ ಕಂಡುಬಂತು” ಎಂದರು.

ಕ್ರೀಡೆ

“That’s a silly question!”: ಆರ್‌ಸಿಬಿ ಸೋಲಿನ ಬಳಿಕ ಪತ್ರಕರ್ತರ ಮೇಲೆ ಫಿಲಿಪ್ಸ್ ಸಿಡಿತ

Published

on

ಧರ್ಮಶಾಲಾ: Gujarat Titans ತಂಡದ ಆಟಗಾರ Glenn Phillips, ಐಪಿಎಲ್ 2026ರ ಕ್ವಾಲಿಫೈಯರ್-1ರಲ್ಲಿ Royal Challengers Bengaluru ವಿರುದ್ಧ ಸೋತ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಂದ್ಯದಲ್ಲಿ ಆಡಿದ 11 ಸದಸ್ಯರ ಬಳಗದಲ್ಲಿ ಫಿಲಿಪ್ಸ್ ಸ್ಥಾನ ಪಡೆದಿರಲಿಲ್ಲ. ಆದರೂ ಗುಜರಾತ್ ಟೈಟಾನ್ಸ್ ತಂಡ ಅವರನ್ನು ಸುದ್ದಿಗೋಷ್ಠಿಗೆ ಕಳುಹಿಸಿತ್ತು. ಈ ವೇಳೆ ಪತ್ರಕರ್ತರೊಬ್ಬರು, 255 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ ಜಿಟಿ ತಂಡ ಮಾನಸಿಕವಾಗಿ ಮೊದಲೇ ಸೋಲನ್ನು ಒಪ್ಪಿಕೊಂಡಿತ್ತೇ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಗ್ಲೆನ್ ಫಿಲಿಪ್ಸ್, “That’s a silly question” ಎಂದು ಉತ್ತರಿಸಿದರು. ಯಾವುದೇ ತಂಡವೂ ಮೈದಾನಕ್ಕಿಳಿಯುವ ಮೊದಲು ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

250ಕ್ಕೂ ಅಧಿಕ ರನ್‌ಗಳ ಗುರಿ ಬೆನ್ನಟ್ಟುವಾಗ ಸ್ಕೋರ್‌ಬೋರ್ಡ್ ಒತ್ತಡ ಹೆಚ್ಚಾಗಿರುತ್ತದೆ. Punjab Kings ತಂಡದಂತಹ ಕೆಲವೇ ತಂಡಗಳು ಇಂತಹ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿವೆ. ಆದರೆ ಅದು ಸುಲಭದ ಕೆಲಸವಲ್ಲ ಎಂದು ಫಿಲಿಪ್ಸ್ ತಂಡದ ಪರವಾಗಿ ಮಾತನಾಡಿದರು.

ಪಂದ್ಯದಲ್ಲಿ ಆಡದಿದ್ದರೂ ತಂಡದ ಆಂತರಿಕ ತಂತ್ರಗಳು ಮತ್ತು ನಿರ್ಧಾರಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಫಿಲಿಪ್ಸ್ ಸ್ವಲ್ಪ ತಡಕಾಡಿದಂತೂ ಕಂಡುಬಂದಿತು. “ನಾವು ಈವರೆಗೆ ಉತ್ತಮ ಕ್ರಿಕೆಟ್ ಆಡಿದ್ದೇವೆ. ಮುಂದಿನ ಪಂದ್ಯಕ್ಕೆ ತಂಡ ಸಿದ್ಧವಾಗಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ” ಎಂದರು.

ಇದೇ ವೇಳೆ Rajat Patidar ಅವರ ಬ್ಯಾಟಿಂಗ್‌ನ್ನು ಫಿಲಿಪ್ಸ್ ಮುಕ್ತಕಂಠದಿಂದ ಶ್ಲಾಘಿಸಿದರು. “ಪಾಟೀದಾರ್ ಯಾವುದೇ ಭಯವಿಲ್ಲದೆ ಆಡುವ ಅದ್ಭುತ ಬ್ಯಾಟರ್. ಪಂದ್ಯದ ಪರಿಸ್ಥಿತಿ ಏನೇ ಇದ್ದರೂ ತಮ್ಮ ನೈಸರ್ಗಿಕ ಆಕ್ರಮಣಕಾರಿ ಶೈಲಿಗೆ ಬದ್ಧರಾಗಿರುತ್ತಾರೆ” ಎಂದು ಹೇಳಿದರು.

ಕ್ವಾಲಿಫೈಯರ್-1ರಲ್ಲಿ ಸೋತಿದ್ದರೂ ಗುಜರಾತ್ ಟೈಟಾನ್ಸ್‌ಗೆ ಇನ್ನೂ ಫೈನಲ್ ಪ್ರವೇಶಿಸುವ ಅವಕಾಶ ಉಳಿದಿದೆ. ಈಗ ಕ್ವಾಲಿಫೈಯರ್-2ರಲ್ಲಿ Sunrisers Hyderabad ಮತ್ತು Rajasthan Royals ನಡುವಿನ ಪಂದ್ಯದ ವಿಜೇತ ತಂಡವನ್ನು ಜಿಟಿ ಎದುರಿಸಲಿದೆ.

Continue Reading

ಕ್ರೀಡೆ

‘ಈ ಸಲ ಕಪ್ ನಮ್ದೇ’ ಘೋಷಣೆ ಜೋರಾಗಿದೆ: ಆರ್‌ಸಿಬಿ ಫೈನಲ್‌ಗೆ ಎಂಟ್ರಿ

Published

on

ಮುಂಬೈ: Royal Challengers Bengaluru ತಂಡವು ಐಪಿಎಲ್ 2026ರ ಕ್ವಾಲಿಫೈಯರ್-1 ಪಂದ್ಯದಲ್ಲಿ Gujarat Titans ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಧರ್ಮಶಾಲಾದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಐಪಿಎಲ್ ಇತಿಹಾಸದಲ್ಲೇ ಪವರ್‌ಪ್ಲೇ ಅವಧಿಯಲ್ಲಿ 254 ರನ್‌ಗಳ ಬೃಹತ್ ಮೊತ್ತ ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿತು. ತಂಡದ ಸ್ಟಾರ್ ಬ್ಯಾಟ್ಸ್‌ಮನ್ Virat Kohli 25 ಎಸೆತಗಳಲ್ಲಿ 43 ರನ್ ಗಳಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಅವರ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳು ಸೇರಿದ್ದವು.

ಈ ಮೂಲಕ ವಿರಾಟ್ ಕೊಹ್ಲಿ 2026ರ ಐಪಿಎಲ್ ಸೀಸನ್‌ನಲ್ಲಿ 600 ರನ್ ಗಡಿ ದಾಟಿದರು. ವಿಶೇಷವೆಂದರೆ, ಸತತ ನಾಲ್ಕು ಸೀಸನ್‌ಗಳಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಅಪರೂಪದ ದಾಖಲೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು KL Rahul ಹಾಗೂ Chris Gayle ತಲಾ ಮೂರು ಸತತ ಸೀಸನ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ಆರ್‌ಸಿಬಿಯ ಈ ಗೆಲುವಿನೊಂದಿಗೆ ಫೈನಲ್‌ಗೆ ನೇರ ಪ್ರವೇಶ ಸಿಕ್ಕಿದ್ದು, “ಈ ಸಲ ಕಪ್ ನಮ್ದೇ” ಎಂಬ ಘೋಷಣೆ ಅಭಿಮಾನಿಗಳಲ್ಲಿ ಮತ್ತಷ್ಟು ಜೋರಾಗಿದೆ. ಸತತ ಎರಡನೇ ಬಾರಿ ಫೈನಲ್ ತಲುಪಿರುವ ಬೆಂಗಳೂರು ತಂಡ ಈ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ ಕಣಕ್ಕಿಳಿಯಲಿದೆ.

Continue Reading

ಕ್ರೀಡೆ

ಕೊಹ್ಲಿಗೆ ಜೊತೆಯಾಗೋದು ಯಾರು? ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಗೊಂದಲ

Published

on

ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಧರ್ಮಶಾಲಾದ ಹೆಚ್‌ಪಿಸಿಎ ಮೈದಾನದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡದಲ್ಲಿ ಆರಂಭಿಕ ಬ್ಯಾಟರ್ ಆಯ್ಕೆಯೇ ದೊಡ್ಡ ಚರ್ಚೆಯ ವಿಷಯವಾಗಿದೆ.

ಗಾಯದ ಕಾರಣ ಕಳೆದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಇದೀಗ ತಂಡಕ್ಕೆ ಮರಳಿದ್ದಾರೆ. ಆದರೆ ಅವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವರೇ ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಈ ಬಗ್ಗೆ ಮಾತನಾಡಿರುವ ಆರ್ಸಿಬಿ ನಾಯಕ Rajat Patidar, “ಫಿಲ್ ಸಾಲ್ಟ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಅವರು ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ವೈದ್ಯಕೀಯ ತಂಡದ ನಿಗಾದಲ್ಲಿದ್ದು, ಪಿಚ್ ಪರಿಸ್ಥಿತಿ ನೋಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.

ಆರ್ಸಿಬಿ ಪರ ಆರಂಭಿಕನಾಗಿ Virat Kohli ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಅವರ ಜೊತೆಗೆ ಫಿಲ್ ಸಾಲ್ಟ್ ಅಥವಾ ವೆಂಕಟೇಶ್ ಅಯ್ಯರ್ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಜೇಕಬ್ ಬೆಥೆಲ್ ಗಾಯಗೊಂಡು ಹೊರಗುಳಿದ ಹಿನ್ನೆಲೆ, ಕಳೆದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ಒದಗಿಸಿದ್ದರು.

ಇದೀಗ ಸಾಲ್ಟ್‌ಗೆ ಅವಕಾಶ ನೀಡಬೇಕಾದರೆ ಇನ್‌ಫಾರ್ಮ್‌ನಲ್ಲಿರುವ ಅಯ್ಯರ್ ಅವರನ್ನು ಕೈಬಿಡಬೇಕಾಗಬಹುದು ಅಥವಾ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಗೆ ಸೇರಿಸಬೇಕಾಗಬಹುದು. ಹೀಗಾಗಿ ಆರಂಭಿಕರ ಆಯ್ಕೆಯೇ ಆರ್ಸಿಬಿ ಮ್ಯಾನೇಜ್ಮೆಂಟ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಧರ್ಮಶಾಲಾ ಪಿಚ್ ಪರಿಸ್ಥಿತಿಯನ್ನಾಧರಿಸಿ ಅಂತಿಮ ಪ್ಲೇಯಿಂಗ್ ಇಲೆವೆನ್ ಪ್ರಕಟವಾಗಲಿದ್ದು, ಆರ್ಸಿಬಿ ಪರ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸುವ ಆಟಗಾರ ಯಾರು ಎಂಬುದೇ ಈಗ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

Continue Reading

Trending