ದೇಶ
ಜೋ ಬೈಡನ್ ವಿದಾಯಭಾಷಣ-ಅಮೆರಿಕ ಪ್ರಜೆಗಳಿಗೆ ಟ್ರಂಪ್ ಬಗ್ಗೆ ಕಿವಿಮಾತು

ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದು, ಕೆಲವೇ ದಿನಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ, ಇದೀಗ ಜೋ ಬೈಡನ್ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ತಮ್ಮ ವಿದಾಯ ಭಾಷಣದಲ್ಲಿ ಟ್ರಂಪ್ ನಡೆಯ ವಿರುದ್ಧ ಟೀಕಿಸಿದ್ದಾರೆ,
ಈ ಬಗ್ಗೆ ಮಾತನಾಡಿದ ಅವುರ ಅಮೆರಿಕ ಅಧ್ಯಕ್ಷನಾಗಿ ನಾಲ್ಕು ವರ್ಷದ ಅಧಿಕಾರದ ಅವಧಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇನೆ, ಅಲ್ಲದೇ ಪ್ರಜಾಪ್ರಭುತ್ವದ ವ್ಯವಸ್ಧೆಗೆ ಯಾವುದೇ ರೀತಿಯಲ್ಲಿ ದಕ್ಕೆಯಾಗದಂತೆ ಆಡಳಿತ ನಡೆಸಿದ್ದೇವೆ ಎಂದರು ,
ಆದರೆ ಇದೀಗ ಕೆಲ ಶ್ರೀಮಂತರ ಕೈಯಲ್ಲಿ ಅಧಿಕಾರ ಕೇಂದ್ರೀಕೃತವಾಗುವ ಸಾಧ್ಯತೆ ಇದೆ, ಇದರಿಂದ ಮಾದ್ಯಮ ಸ್ವಾತಂತ್ರ್ಯ ಮೂಲಭೂತ ಹಕ್ಕುಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ, ಈ ಹಿನ್ನಲೆ ಅಮೆರಿಕದ ಜೊತೆ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಜೋ ಬೈಡನ್ ತಿಳಿಸಿದರು,
ಪ್ರಜಾಪ್ರಭುತ್ವ ವ್ಯವಸ್ಧೆಯಲ್ಲಿ ಮೂಲಭೂತ ಹಕ್ಕುಗಳಿಗೆ ಬೆದರಿಕೆ ಹಾಕುವವರ ಬಗ್ಗೆ ಎಚ್ಚರದಿಂದಿರಿ, ಮುಂದಿನ ನಾಲ್ಕು ವರ್ಷದಲ್ಲಿ ಏನೆಲ್ಲಾ ಆಗಬಹುದು ಎಂದು ಯೋಚನೆ ಕೂಡ ಮಾಡಲು ಸಾದ್ಯವಿಲ್ಲ ಎಂದು ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಹೇಳಿದರು,
ಶ್ರೀಮಂತರ ಕಪಿಮುಷ್ಠಿಯಲ್ಲಿ ದೇಶವನ್ನು ಹೊರತರಬೇಕಾಗುತ್ತದೆ, ಎಲ್ಲರಿಗೂ ನ್ಯಾಯಯುತ ಅವಕಾಶಗಳು ಸಿಗ್ತುತ್ತವೆ, ಅದರೆ ನೀವು ಕಷ್ಟಪಟ್ಟು ಕೆಲಸ ಮಾಡುವುದನ್ನು ನಿಲ್ಲಿಸಬಾರದು ಏಕೆಂದರೆ ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಪ್ರತಿಭೆ ಮಾತ್ರ ನಿಮ್ಮನ್ನು ಮುಂದೆ ಕೊಂಡೊಯ್ಯುತ್ತದೆ ಎಂದು ಹೇಳಿದರು,