ಅಪರಾಧ
ಸೈಫ್ ಬೆನ್ನಿನಲ್ಲಿ ಚಾಕು ಸಿಕ್ಕಿಕೊಂಡಿತ್ತು: ವೈದ್ಯರು ಕೊಟ್ರು ಶಾಕಿಂಗ್ ಮಾಹಿತಿ

ಮುಂಬೈ: ಸೈಫ್ ಅಲಿ ಖಾನ್ ದುಷ್ಕರ್ಮಿಯ ಕೃತ್ಯದಿಂದ ತೀವ್ರ ಪೆಟ್ಟು ತಿಂದಿದ್ದಾರೆ, ಮುಂಬೈನ ತಮ್ಮ ಮನೆಯಲ್ಲಿ ಕಳ್ಳನ ದಾಳಿಗೆ ಚಾಕು ಇರಿತಕ್ಕೆ ಗುರಿಯಾಗಿದ್ದಾರೆ, ಗಾಯಗೊಂಡ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೈಫ್ ಅಲಿ ಖಾನ್ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ,
ಲೀಲಾವತಿ ಆಸ್ಪತ್ರೆ ವೈದ್ಯ ಡಾ.ನಿತಿನ್ ಮಾಹಿತಿ ನೀಡಿದ್ದು, ಸೈಫ್ ಅಲಿ ಖಾನ್ ಆರೋಗ್ಯ ಸುಧಾರಿಸುತ್ತಿದೆ ಎಂದಿದ್ದಾರೆ, ಅವರ ಬೆನ್ನಲ್ಲಿ ಚಾಕು ಸಿಲುಕಿತ್ತು, ಅದನ್ನು ಹೊರತೆಗೆದು ಚಿಕಿತ್ಸೆ ನೀಡಲಾಗಿದೆ,ಸ್ಪೈನಲ್ ಕಾರ್ಡ್, ಕುತ್ತಿಗೆ ಹಾಗೂ ಎಡಗೈ ಭಾಗಕ್ಕೆ ಬಲವಾದ ಏಟು ಬಿದ್ದಿದ್ದು, ಆಪರೇಷನ್ ನಡೆಸಲಾಗಿದೆ, ಸದ್ಯ ಅವರ ಆರೋಗ್ಯ ಸ್ಧಿತಿ ಸ್ಧಿರವಾಗಿದೆ ಎಂದಿದ್ದಾರೆ.
ಇನ್ನು ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ಮತ್ತು ಟಾಲಿವುಡ್ ನಟರು ಸೈಫ್ ಅವರ ಬೇಗನೆ ಚೇತರಿಕೆಗೆ ಹಾರೈಸಿದ್ದಾರೆ, ಶಾರುಖ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ,
ಬಾಲಿವುಡ್ ಕಿಂಗ್ ಶಾರುಖ್ ಖಾನ್ ತಮ್ಮ ಬಹುಕೋಟಿ ವೆಚ್ಚದ ರೋಲ್ಸ್ ರಾಯ್ಸ್‍ನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಆಗಮಿಸಿದ್ದಾರೆ, ಸೈಫ್ ಶಸ್ತ್ರಚಿಕಿತ್ಸೆಯ ಅಪಡೇಟ್ ಪಡೆದಿದ್ದಾರೆ, ಅವರು ಕರೀನಾ ಹಾಗೂ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ,