ಅಪರಾಧ
ಕೈಯಲ್ಲಿ ಲಾಂಗ್ ಹಿಡಿದು ವೀಲ್ಹಿಂಗ್-ನಂಬರ್ ಪ್ಲೇಟ್ ಬಿಚ್ಚಿಟ್ಟು ಪುಂಡರ ಕುಕೃತ್ಯ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಕುಕೃತ್ಯಗಳು ದಿನೇದಿನೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಭಯದಿಂದ ಸಂಚರಿಸುವಂತಾಗಿದೆ, ಇದೀಗ ಈ ಪ್ರಕರಣಗಳ ಪಟ್ಟಿಗೆ ಇನ್ನೊಂದು ಘಟನೆ ಸೇರ್ಪಡೆಯಾಗದ್ದು, ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಕೆಲವರು ಆತಂಕ ಹುಟ್ಟಿಸಿದ್ದಾರೆ,
ಮಾನ್ಯತಾ ಟೆಕ್ ಪಾರ್ಕ್ ಬಳಿ ಕೆಲವು ಕಿಡಿಗೇಡಿಗಳು ಕೈಯಲ್ಲಿ ಮಾರತಾಸ್ತ್ರಗಳನ್ನು ಪ್ರದರ್ಶಿಸುತ್ತಾ, ವೀಲ್ಹಿಂಗ್ ಮಾಡಿ ಅಟ್ಟಹಾಸ ಮೆರೆದಿದ್ದಾರೆ, ತಮ್ಮ ಸುಳಿವು ಪೊಲೀಸರಿಗೆ ತಿಳಿಯಬಾರದೆಂದು ಬೈಕ್ ನ ಎರಡೂ ಬದಿಯು ನಂಬರ್ ಪ್ಲೇಟ್ ಗಳನ್ನು ಬಿಚ್ಚಿಟ್ಟು, ಈ ಕೃತ್ಯ ನಡೆಸಲಾಗಿದೆ,
ಬಾಣಸವಾಡಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,